Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 12:26 - ಕನ್ನಡ ಸತ್ಯವೇದವು C.L. Bible (BSI)

26 ಮುಂದಕ್ಕೆ ನಿಮ್ಮ ಮಕ್ಕಳು, ‘ನೀವು ನಡೆಸುವ ಈ ವಿಧಿಯ ಅರ್ಥವೇನು?’ ಎಂದು ಕೇಳಿದಾಗ ನೀವು ಅವರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಮುಂದೆ ನಿಮ್ಮ ಮಕ್ಕಳು, ‘ನೀವು ನಡೆಸುವ ಈ ಆಚರಣೆ ಏನು?’ ಎಂದು ನಿಮ್ಮನ್ನು ಕೇಳುವಾಗ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಮುಂದೆ ನಿಮ್ಮ ಮಕ್ಕಳು - ನೀವು ನಡಿಸುವ ಈ ಆಚಾರವೇನೆಂದು ನಿಮ್ಮನ್ನು ಕೇಳುವಾಗ ನೀವು ಅವರಿಗೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ‘ಈ ಹಬ್ಬವನ್ನು ಮಾಡುವುದೇಕೆ?’ ಎಂದು ನಿಮ್ಮ ಮಕ್ಕಳು ನಿಮ್ಮನ್ನು ಕೇಳುವಾಗ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ನಿಮ್ಮ ಮಕ್ಕಳು, ‘ಈ ಆಚರಣೆಯ ಅರ್ಥವೇನು?’ ಎಂದು ಕೇಳಿದಾಗ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 12:26
16 ತಿಳಿವುಗಳ ಹೋಲಿಕೆ  

ನೆನಪಿಗೆ ತಂದುಕೊಳ್ಳಿ ಆ ಪೂರ್ವಕಾಲವನು ಆಲೋಚಿಸಿ ನೋಡಿ ಪೂರ್ವಿಕರ ಚರಿತೆಯನು. ವಿಚಾರಿಸಿದರೆ ತಿಳಿಸುವರು ನಿಮ್ಮ ನಿಮ್ಮ ತಂದೆಗಳು ಕೇಳಿದರೆ ವಿವರಿಸುವರು ನಿಮ್ಮ ನಿಮ್ಮ ಹಿರಿಯರು.


ತಲೆಮಾರು ತಲೆಮಾರಿಗೆ ನುತಿಸುವುದು ನಿನ್ನ ಕಾರ್ಯಗಳನು I ತಿಳಸುವುದು ಪ್ರಭು, ನೀ ಮಾಡಿದೆಲ್ಲಾ ಮಹತ್ಕಾರ್ಯಗಳನು II


ತಂದೆತಾಯಿಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಕೆರಳಿಸಬೇಡಿ. ಪ್ರತಿಯಾಗಿ ಪ್ರಭುವಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಅವರಿಗೆ ಶಿಕ್ಷಣವನ್ನು ಕೊಟ್ಟು ಶಿಸ್ತಿನಿಂದ ಸಾಕಿಸಲಹಿರಿ.


ಜೀವಂತನು, ಜೀವಂತನು ಮಾತ್ರವೇ ನಿನ್ನ ಸ್ತುತಿಮಾಡುವಂತೆ ನಾನಿಂದು ನಿನ್ನನ್ನು ಜೀವಂತನಾಗಿ ಸ್ತುತಿಮಾಡುತ್ತಿರುವೆ ನಿನ್ನ ಸತ್ಯಸಂಧತೆಯನ್ನು ಮಕ್ಕಳಿಗೆ ಬೋಧಿಸುವನು ತಂದೆ.


ನೀವು ಮನೆಯಲ್ಲಿರುವಾಗಲೂ ಪ್ರಯಾಣದಲ್ಲಿರುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡುತ್ತಾ ನಿಮ್ಮ ಮಕ್ಕಳಿಗೆ ಇವುಗಳನ್ನು ಮನದಟ್ಟಾಗಿಸಬೇಕು.


ಇವುಗಳನ್ನು ನಿನ್ನ ಮಕ್ಕಳಿಗೆ ಮನದಟ್ಟಾಗಿಸು; ಮನೆಯಲ್ಲಿರುವಾಗಲು, ಪ್ರಯಾಣದಲ್ಲಿರುವಾಗಲು, ಮಲಗುವಾಗಲು, ಏಳುವಾಗಲು ಇವುಗಳನ್ನು ಕುರಿತು ಪಾಠಹೇಳು.


ಹಗಲಿನಲ್ಲಿ ಮೇಘಸ್ತಂಭ, ರಾತ್ರಿಯಲ್ಲಿ ಅಗ್ನಿಸ್ತಂಭ ತಪ್ಪದೆ ಕಾಣಿಸುತ್ತಿದ್ದವು.


ಇಸ್ರಯೇಲರು ತಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ಈ ಸೂಚಕಕಾರ್ಯಗಳನ್ನು ತಿಳಿಸಬೇಕು; ಅಲ್ಲದೆ ಸರ್ವೇಶ್ವರ ಆದ ನಾನು ಈಜಿಪ್ಟಿನವರನ್ನು ಇಷ್ಟಬಂದ ಹಾಗೆ ಆಡಿಸಿ ದಂಡಿಸಿದೆನೆಂದು ತಿಳಿಸಬೇಕು. ಹೀಗೆ ನಾನೇ ಸರ್ವೇಶ್ವರನೆಂದು ಈ ಸೂಚಕಕಾರ್ಯಗಳಿಂದ ನೀವು ತಿಳಿದುಕೊಳ್ಳುವಿರಿ,” ಎಂದರು.


ಸರ್ವೇಶ್ವರ ತಮ್ಮ ವಾಗ್ದಾನದ ಮೇರೆಗೆ ನಿಮಗೆ ಕೊಡುವ ನಾಡಿಗೆ ನೀವು ಸೇರಿದಾಗ ಈ ವಿಧಿಯನ್ನು ಅನುಸರಿಸಬೇಕು.


ಕೇಳಿದೆವು ಕಿವಿಯಾರೆ ದೇವಾ, ನೀ ಎಸಗಿದ ಘನಕಾರ್ಯಗಳನು I ವಿವರಿಸಿಹರು ನಮ್ಮ ಪೂರ್ವಜರು ನಿನ್ನಾ ಮಹತ್ಕಾರ್ಯಗಳನು II


“ಇನ್ನು ಮುಂದೆ ನಿಮ್ಮ ಮಕ್ಕಳು, ‘ಈ ಆಜ್ಞಾವಿಧಿನಿರ್ಣಯಗಳನ್ನು ನಮ್ಮ ದೇವರಾದ ಸರ್ವೇಶ್ವರ ಏಕೆ ನೇಮಿಸಿದರು?’ ಎಂದು ವಿಚಾರಿಸುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು