Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 11:6 - ಕನ್ನಡ ಸತ್ಯವೇದವು C.L. Bible (BSI)

6 ಆಗ ಈಜಿಪ್ಟ್ ದೇಶದಲ್ಲೆಲ್ಲಾ ದೊಡ್ಡ ಗೋಳಾಟ ಉಂಟಾಗುವುದು. ಅಂಥ ಗೋಳಾಟ ಈವರೆಗೂ ಇರಲಿಲ್ಲ. ಇನ್ನು ಮುಂದೆಯೂ ಇರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಆಗ ಐಗುಪ್ತ ದೇಶದಲ್ಲೆಲ್ಲಾ ದೊಡ್ಡ ಗೋಳಾಟವುಂಟಾಗುವುದು, ಅಂಥ ಗೋಳಾಟವು ಈವರೆಗೆ ದೇಶದಲ್ಲಿ ಎಂದೂ ಉಂಟಾಗಿರಲಿಲ್ಲ, ಮುಂದೆಯೂ ಉಂಟಾಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಆಗ ಐಗುಪ್ತ ದೇಶದಲ್ಲೆಲ್ಲಾ ದೊಡ್ಡ ಗೋಳಾಟವುಂಟಾಗುವದು; ಅಂಥ ಗೋಳಾಟ ಈವರೆಗೆ ಎಂದೂ ಆಗಿಲ್ಲ, ಮುಂದೆಯೂ ಆಗುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಈಜಿಪ್ಟಿನಲ್ಲೆಲ್ಲಾ ದೊಡ್ಡ ಗೋಳಾಟ ಉಂಟಾಗುವುದು, ಅಂಥ ಗೋಳಾಟ ಈವರೆಗೂ ಆಗಿಲ್ಲ; ಮುಂದೆಯೂ ಆಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಈಜಿಪ್ಟ್ ದೇಶದಲ್ಲೆಲ್ಲಾ ದೊಡ್ಡ ಗೋಳಾಟವಿರುವುದು. ಅಂಥಾ ಗೋಳಾಟವು ಹಿಂದೆಯೂ ಇರಲಿಲ್ಲ, ಇನ್ನು ಮುಂದೆಯೂ ಇರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 11:6
15 ತಿಳಿವುಗಳ ಹೋಲಿಕೆ  

ಆ ರಾತ್ರಿ ಫರೋಹನೂ ಅವನ ಪರಿವಾರದವರೂ ಈಜಿಪ್ಟಿನವರೆಲ್ಲರೂ ಎದ್ದು ನೋಡಿದಾಗ ಶವವಿಲ್ಲದ ಮನೆ ಒಂದೂ ಇರಲಿಲ್ಲ. ಆದ್ದರಿಂದ ಆ ದೇಶದಲ್ಲೆಲ್ಲಾ ದೊಡ್ಡ ಗೋಳಾಟ ಎದ್ದಿತು.


ಪ್ರತಿಯೊಂದು ದ್ರಾಕ್ಷಾತೋಟದಲ್ಲಿ ಜನರು ರೋದಿಸುವರು. ಏಕೆಂದರೆ ನಿಮ್ಮನ್ನು ದಂಡಿಸಲು ನಿಮ್ಮ ಮಧ್ಯೆ ಹಾದುಹೋಗಲಿದ್ದೇನೆ, ಇದು ಸರ್ವೇಶ್ವರಸ್ವಾಮಿಯ ನುಡಿ.”


ಅಬ್ರಹಾಮ, ಇಸಾಕ, ಯಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ಸಾಮ್ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ನೋಡುವಾಗ ನಿಮಗಾಗುವ ಗೋಳಾಟವೇನು! ಹಲ್ಲು ಕಡಿತವೇನು!!


“ಆ ದಿನದಲ್ಲಿ ಜೆರುಸಲೇಮಿನಲ್ಲಿರುವ ಮೀನುಬಾಗಿಲಿನ ಬಳಿ ಕೂಗಾಟವನ್ನು, ಪಟ್ಟಣದ ಹೊಸ ಬಡಾವಣೆಯಲ್ಲಿ ಗೋಳಾಟವನ್ನು, ಹಾಗೂ ಬೆಟ್ಟಗುಡ್ಡಗಳಲ್ಲಿ ಭೀಕರ ಗದ್ದಲವನ್ನು ಕೇಳುವಿರಿ. ಇದು ಸರ್ವೇಶ್ವರಸ್ವಾಮಿಯ ನುಡಿ.


ಎಷ್ಟೋ ಮೊರೆಯಿಟ್ಟು ಕೂಗಿಕೊಂಡೆ. ಕಿವಿಗೊಡಲಿಲ್ಲ ಆತ ನನ್ನ ಮೊರೆಗೆ.


ಸರ್ವೇಶ್ವರ ಹೀಗೆನ್ನುತ್ತಾರೆ: “ಕೇಳಿಬರುತ್ತಿದೆ ರಾಮಾ ಊರಿನೊಳು ರೋದನ ಗೋಳಾಟ, ಅಘೋರ ಆಕ್ರಂದನ. ಕಳೆದುಕೊಂಡ ಮಕ್ಕಳಿಗಾಗಿ ಗೋಳಾಡುತ್ತಿಹಳು ರಾಖೇಲಳು ಇನ್ನಿಲ್ಲದ ಅವುಗಳಿಗಾಗಿ ಉಪಶಮನ ಒಲ್ಲೆನೆನುತಿಹಳು.”


ಹಬ್ಬಿದೆ ಅದರ ಪ್ರಲಾಪ ಮೋವಾಬಿನ ಎಲ್ಲೆಗಳ ಪರಿಯಂತ, ವ್ಯಾಪಿಸಿದೆ ಅದರ ಆಕ್ರಂದ ಎಗ್ಲಯಿಮಿನ್, ಬೆಯೆರ್ ಏಲೀಮಿನ ತನಕ.


ಬಡವನ ಮೊರೆಗೆ ಕಿವಿ ಮುಚ್ಚಿಕೊಳ್ಳುವವನೇ, ನೀನೇ ಮೊರೆಯಿಡುವಾಗ ಉತ್ತರಕೊಡುವವರಾರು ನಿನಗೆ?


ಆಗ ಸರ್ವೇಶ್ವರ, “ಈಜಿಪ್ಟಿನಲ್ಲಿರುವ ನನ್ನ ಜನರ ದುರವಸ್ಥೆಯನ್ನು ನಾನು ಕಣ್ಣಾರೆ ನೋಡಿದ್ದೇನೆ. ಬಿಟ್ಟೀ ಕೆಲಸ ಮಾಡಿಸಿಕೊಳ್ಳುವವರ ಬಗ್ಗೆ ಅವರು ಇಟ್ಟ ಮೊರೆ ನನಗೆ ಕೇಳಿಸಿದೆ. ಅವರ ಕಷ್ಟದುಃಖವನ್ನೆಲ್ಲಾ ನಾನು ಬಲ್ಲೆ.


ಆದರೆ ಇಸ್ರಯೇಲರಲ್ಲಿರುವ ಮನುಷ್ಯನ ವಿರುದ್ಧವಾಗಲಿ, ಪ್ರಾಣಿಯ ವಿರುದ್ಧವಾಗಲಿ, ಒಂದು ನಾಯಿ ಕೂಡ ಬೊಗಳುವುದಿಲ್ಲ. ಇದರಿಂದ ಸರ್ವೇಶ್ವರ ಇಸ್ರಯೇಲರಿಗೂ ಈಜಿಪ್ಟಿನವರಿಗೂ ತಾರತಮ್ಯ ಮಾಡಿದ್ದಾರೆಂದು ನಿಮಗೆ ಗೊತ್ತಾಗುವುದು.


ಹಾಗಾದರೆ ನಾಳೆ ಇಷ್ಟು ಹೊತ್ತಿಗೆ ವಿಪರೀತವಾದ ಆನೆಕಲ್ಲಿನ ಮಳೆ ಬೀಳುವಂತೆ ಮಾಡುವೆನು. ಈಜಿಪ್ಟಿನ ರಾಜ್ಯ ಸ್ಥಾಪಿತವಾಗಿ ಇಂದಿನವರೆಗೂ ಬೀಳದಂಥ ಕಲ್ಲಿನ ಮಳೆ ಬೀಳುವುದು.


ಆ ದಿನದಂದು ಈಜಿಪ್ಟಿನವರು ಹೆಂಗಸರಂತೆ ಅಂಜುಬುರುಕರಾಗುವರು; ಸೇನಾಧೀಶ್ವರ ಸರ್ವೇಶ್ವರ ತಮ್ಮನ್ನು ದಂಡಿಸಲು ಕೈಯೆತ್ತುವಾಗ ಅವರು ಭಯಪಟ್ಟು ನಡುಗುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು