ಲೂಕ 2:36 - ಕನ್ನಡ ಸತ್ಯವೇದವು C.L. Bible (BSI)36 ಇದಲ್ಲದೆ ಅಲ್ಲಿ ಅಶೇರನ ವಂಶಕ್ಕೆ ಸೇರಿದ ಫನುವೇಲನ ಮಗಳಾದ ಅನ್ನಳೆಂಬ ಪ್ರವಾದಿನಿಯಿದ್ದಳು. ಅವಳು ಮುದಿಪ್ರಾಯದವಳು, ಮದುವೆಯಾಗಿ ಏಳು ವರ್ಷ ಮಾತ್ರ ಗಂಡನೊಡನೆ ಬಾಳಿ ವಿಧವೆಯಾದವಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201936 ಇದಲ್ಲದೆ ಅಸೇರನ ಕುಲದ ಫನುವೇಲನ ಮಗಳಾದ ಅನ್ನಳೆಂಬ ಒಬ್ಬ ಪ್ರವಾದಿನಿ ಇದ್ದಳು. ಆಕೆ ಬಹಳ ಮುಪ್ಪಿನವಳು. ಮದುವೆಯಾಗಿ ಏಳು ವರ್ಷ ಗಂಡನ ಕೂಡ ಸಂಸಾರ ಮಾಡಿ ವಿಧವೆಯಾಗಿದ್ದಳು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)36 ಇದಲ್ಲದೆ ಅಸೇರನ ಕುಲದ ಫನುವೇಲನ ಮಗಳಾದ ಅನ್ನಳೆಂಬ ಒಬ್ಬ ಪ್ರವಾದಿನಿ ಇದ್ದಳು. ಆಕೆ ಬಹಳ ಮುಪ್ಪಿನವಳು; ಆಕೆ ತನ್ನ ಕನ್ಯಾವಸ್ಥೆ ಕಳೆದ ತರುವಾಯ ಗಂಡನ ಕೂಡ ಏಳು ವರುಷ ಬಾಳುವೆಮಾಡಿ ಎಂಭತ್ತು ನಾಲ್ಕು ವರುಷ ವಿಧವೆಯಾಗಿದ್ದಳು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್36 ದೇವಾಲಯದಲ್ಲಿ ಅನ್ನಳೆಂಬ ಒಬ್ಬ ಪ್ರವಾದಿನಿ ಇದ್ದಳು. ಆಕೆಯು ಅಸೇರನ ವಂಶದ ಫನುವೇಲನ ಕುಟುಂಬದವಳಾಗಿದ್ದಳು. ಅನ್ನಳು ಬಹಳ ಮುಪ್ಪಿನವಳಾಗಿದ್ದಳು. ಆಕೆಯು ಮದುವೆಯಾದ ಏಳು ವರ್ಷಕ್ಕೆ ಗಂಡನನ್ನು ಕಳೆದುಕೊಂಡಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ36 ಅಲ್ಲಿ ಆಶೇರನ ಗೋತ್ರದ ಫನೂಯೇಲನ ಮಗಳಾದ ಅನ್ನಳೆಂಬ ಒಬ್ಬ ಬಹು ಮುಪ್ಪಿನ ಪ್ರವಾದಿನಿಯಿದ್ದಳು. ಅವಳು ಮದುವೆಯಾಗಿ ಗಂಡನೊಂದಿಗೆ ಏಳು ವರ್ಷ ಬಾಳಿದ್ದಳು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್36 ಅನ್ನಾ ಮನುನ್ ನಾವ್ ಹೊತ್ತಿ ಎಕ್ ಪ್ರವಾದಿನ್‍ಬಿ ಥೈ ಹೊತ್ತಿ. ತಿ ಫಾನುಯೆಲಾಚಿ ಲೆಕ್ ಅಶೆರ್ ಮನ್ತಲ್ಯಾ ಘರಾನ್ಯಾಚಿ. ತಿ ನಗಿನ್ ಹೊವ್ನ್ ಸಾತ್ ವರ್ಸಾ ಅಪ್ನಾಚ್ಯಾ ಘೊವಾಚ್ಯಾ ವಾಂಗ್ಡಾ ಹೊತ್ತಿ. ಅನಿ ತಿ ಲೈ ಮ್ಹಾತಾರಿ ಹೊಲ್ಲಿ. ಅಧ್ಯಾಯವನ್ನು ನೋಡಿ |