ಲೂಕ 12:5 - ಕನ್ನಡ ಸತ್ಯವೇದವು C.L. Bible (BSI)5 ನೀವು ಯಾರಿಗೆ ಭಯಪಡಬೇಕೆಂದು ಹೇಳುತ್ತೇನೆ, ಕೇಳಿ: ಸತ್ತಮೇಲೆ ನರಕದೊಳಕ್ಕೆ ದಬ್ಬಲು ಅಧಿಕಾರವುಳ್ಳಾತನಿಗೆ ಭಯಪಡಿ. ಹೌದು, ಆತನಿಗೆ ಭಯಪಡಿರೆಂದು ನಿಮಗೆ ಒತ್ತಿಹೇಳುತ್ತೇನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಆದರೆ ನೀವು ಯಾರಿಗೆ ಭಯಪಡಬೇಕೆಂದು ತೋರಿಸುತ್ತೇನೆ, ಕೇಳಿ. ಸತ್ತ ಮೇಲೆ ನರಕದೊಳಗೆ ಹಾಕುವ ಅಧಿಕಾರವುಳ್ಳಾತನಿಗೆ ಹೆದರಬೇಕು. ಹೌದು ಆತನಿಗೇ ಭಯಪಡಬೇಕೆಂದು ನಿಮಗೆ ಒತ್ತಿಹೇಳುತ್ತೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ನೀವು ಯಾರಿಗೆ ಹೆದರಬೇಕೋ ನಿಮಗೆ ತಿಳಿಸುತ್ತೇನೆ; ಕೊಂದ ಮೇಲೆ ನರಕದೊಳಗೆ ಹಾಕುವ ಅಧಿಕಾರವುಳ್ಳವನಿಗೆ ಹೆದರಬೇಕು; ಹೌದು, ಆತನಿಗೇ ಹೆದರಬೇಕೆಂದು ನಿಮಗೆ ಹೇಳುತ್ತೇನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ನೀವು ಯಾರಿಗೆ ಭಯಪಡಬೇಕೆಂದರೆ, ನಿಮ್ಮನ್ನು ಕೊಂದು ನರಕಕ್ಕೆ ಹಾಕಲು ಅಧಿಕಾರವುಳ್ಳಾತನಿಗಷ್ಟೇ (ದೇವರಿಗೆ). ಹೌದು, ಆತನೊಬ್ಬನಿಗೇ ನೀವು ಭಯಪಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಆದರೆ ಯಾರಿಗೆ ನೀವು ಭಯಪಡಬೇಕೆಂದು ನಾನು ನಿಮಗೆ ತೋರಿಸುತ್ತೇನೆ: ನಿಮ್ಮ ದೇಹವನ್ನು ಕೊಂದ ಮೇಲೆ, ನರಕದಲ್ಲಿ ಹಾಕುವುದಕ್ಕೆ ಅಧಿಕಾರವಿರುವ ದೇವರಿಗೆ ಭಯಪಡಿರಿ. ಹೌದು, ದೇವರಿಗೇ ಭಯಪಡಿರಿ, ಎಂದು ನಾನು ನಿಮಗೆ ಹೇಳುತ್ತೇನೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್5 ಖರೆ ಕೊನಾಕ್ ಭಿಂವ್ಚೆ ಮನುನ್ ಮಿಯಾ ತುಮ್ಕಾ ಸಾಂಗ್ತಾ ಆಯ್ಕಾ ತುಮಿ ದೆವಾಕ್ ಭಿಂವಾ, ಜಿವಾನಿ ಮಾರಲ್ಲ್ಯಾ ಮಾನಾ ನರ್‍ಕಾತ್ ನ್ಹೆವ್ನ್ ಘಾಲ್ತಲೊ ಅದಿಕಾರ್ ತೆಕಾ ಹಾಯ್. ಮಾಜೆರ್ ವಿಶ್ವಾಸ್ ಕರಾ, ತುಮಿ ಭಿಂವ್ಕ್ ಪಾಜೆ ಹೊತ್ತೆ ತೆಕಾ ಎವ್ಡೆಚ್! ಅಧ್ಯಾಯವನ್ನು ನೋಡಿ |