Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 10:31 - ಕನ್ನಡ ಸತ್ಯವೇದವು C.L. Bible (BSI)

31 ಅದೇ ಮಾರ್ಗವಾಗಿ ಒಬ್ಬ ಯಾಜಕನು ಹಾದುಹೋಗಬೇಕಾಗಿ ಬಂದಿತು. ಈತನು, ಅವನನ್ನು ಕಂಡದ್ದೇ ಆಚೆ ಬಳಸಿಕೊಂಡು ಹೋದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಆಗ ಒಬ್ಬ ಯಾಜಕನು ಆ ದಾರಿಯಲ್ಲಿ ಇಳಿದುಬರುತ್ತಾ ಅವನನ್ನು ಕಂಡು ಓರೆಯಾಗಿ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಆಗ ಹೇಗೋ ಒಬ್ಬ ಯಾಜಕನು ಆ ದಾರಿಯಲ್ಲಿ ಇಳಿದುಬರುತ್ತಾ ಅವನನ್ನು ಕಂಡು ವಾರೆಯಾಗಿ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 “ಅದೇ ಸಮಯದಲ್ಲಿ ಯೆಹೂದ್ಯ ಯಾಜಕನು ಆ ದಾರಿಯಲ್ಲಿ ಹೋಗುತ್ತಿದ್ದನು. ಯಾಜಕನು ಆ ಮನುಷ್ಯನನ್ನು ನೋಡಿದರೂ ಅವನಿಗೆ ಸಹಾಯಮಾಡದೆ, ತನ್ನ ಪ್ರಯಾಣವನ್ನು ಮುಂದುವರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಆಗ ಒಬ್ಬ ಯಾಜಕನು ಅದೇ ಮಾರ್ಗವಾಗಿ ಬಂದು ಅವನನ್ನು ಕಂಡು, ದಾರಿಯ ಬೇರೆ ಕಡೆಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

31 ಹೆ ಹೊಲ್ಲ್ಯಾ ಎಕ್ ಉಲ್ಲ್ಯಾ ಎಳಾನ್, ಎಕ್ ಯಾಜಕ್ ಥೈತ್ನಾ ಪಾರ್ ಹೊವ್ನ್ ಜಾವ್‍ಲಾಗಲ್ಲೊ, ತೆನಿ ತ್ಯಾ ಮಾನ್ಸಾಕ್ ಬಗಟ್ಲ್ಯಾನ್, ಅನಿ ಕಡೆಕ್ನಾಚ್ ತೆಚ್ಯಾ ವಾಟೆನ್ ದಾಟುನ್ ಗೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 10:31
18 ತಿಳಿವುಗಳ ಹೋಲಿಕೆ  

ನಿಂದೆಯಿಂದ ಮನನೊಂದು ಹತಾಶನಾಗಿರುವೆನಯ್ಯಾ I ಹಾತೊರೆದರೂ ದಯೆತೋರುವನಾರೂ ಸಿಗಲಿಲ್ಲ I ಅರಸಿದರೂ ಸಾಂತ್ವನನೀಡುವವನು ದೊರಕಲಿಲ್ಲ II


“ನನ್ನ ಬಲಿಪೀಠದ ಮೇಲೆ ಯಾರೂ ಜ್ಯೋತಿಯನ್ನು ವ್ಯರ್ಥವಾಗಿ ಬೆಳಗಿಸದಂತೆ ಮಹಾದೇವಾಲಯದ ಬಾಗಿಲನ್ನು ಮುಚ್ಚಿಬಿಟ್ಟರೆ ಎಷ್ಟೋ ಒಳ್ಳೆಯದು. ನಾನು ನಿಮ್ಮನ್ನು ಮೆಚ್ಚಿಕೊಂಡಿಲ್ಲ. ನಿಮ್ಮ ಕೈಯಿಂದ ಕಾಣಿಕೆಗಳನ್ನು ನಾನು ಸ್ವೀಕರಿಸುವುದಿಲ್ಲ.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.


ದರೋಡೆಗಾರರು ದಾರಿಹೋಕರಿಗಾಗಿ ಹೊಂಚುಹಾಕುವಂತೆ ಯಾಜಕರು ಗುಂಪುಗೂಡಿ ಹೊಂಚುಹಾಕುತ್ತಾ, ಶೆಖೆಮಿಗೆ ಯಾತ್ರೆಹೋಗುವವರನ್ನು ಕೊಂದುಹಾಕುತ್ತಾರೆ. ಅವರು ಮಾಡುವುದು ನಿಜಕ್ಕೂ ಘೋರಕೃತ್ಯ.


“ಯಾಜಕರೇ, ಕೇಳಿ: ಇಸ್ರಯೇಲ್ ಮನೆತನದವರೇ, ಗಮನಿಸಿ. ರಾಜವಂಶದವರೇ ಕಿವಿಗೊಡಿ.


ಪ್ರವಾದಿಗಳೇ ಸುಳ್ಳು ಪ್ರವಾದನೆಮಾಡುತ್ತಾರೆ. ಯಾಜಕರು ಅಂಥವರಿಂದ ಅಧಿಕಾರ ಪಡೆದು ದೊರೆತನಮಾಡುತ್ತಾರೆ. ನನ್ನ ಜನರಿಗೆ ಚೆನ್ನಾಗಿ ಹಿಡಿಸುವುದು ಇಂಥದ್ದೇ. ಆದರೆ ಅಂತ್ಯ ಬಂದಾಗ ಏನು ಮಾಡುವರು?”


ಲೋಕದಲ್ಲಿ ನಾನು ಇನ್ನೊಂದು ವಿಷಯವನ್ನು ಗಮನಿಸಿದೆ; ಓಟ ಪಂದ್ಯದಲ್ಲಿ ವೇಗವಾಗಿ ಓಡುವವನೇ ಯಾವಾಗಲೂ ಗೆಲ್ಲುವನು ಎನ್ನುವಂತಿಲ್ಲ; ಬಲಿಷ್ಠರಿಗೇ ಯುದ್ಧದಲ್ಲಿ ಜಯಗಿಟ್ಟುತ್ತದೆ ಎನ್ನುವಹಾಗಿಲ್ಲ. ಜ್ಞಾನಿಗೆ ಜೀವನಾಂಶ ದೊರಕುವುದು, ಜಾಣನಿಗೆ ಹಣ ಲಭಿಸುವುದು, ಪ್ರವೀಣನಿಗೆ ಪಟ್ಟಪದವಿ ಸಿಕ್ಕುವುದು ಎನ್ನುವಂತಿಲ್ಲ. ಇವರೆಲ್ಲರೂ ಸಮಯ ಸಂದರ್ಭಗಳಿಗೆ ಒಳಪಟ್ಟಿರುತ್ತಾರೆ.


ಬಡವನ ಮೊರೆಗೆ ಕಿವಿ ಮುಚ್ಚಿಕೊಳ್ಳುವವನೇ, ನೀನೇ ಮೊರೆಯಿಡುವಾಗ ಉತ್ತರಕೊಡುವವರಾರು ನಿನಗೆ?


ಅಕ್ಕಪಕ್ಕದಲಿ ಸಹಾಯಕರಾರೂ ಇಲ್ಲ I ಆಶ್ರಯರಹಿತ, ಹಿತಚಿಂತಕರಾರೂ ನನಗಿಲ್ಲ II


ರೂತಳು ಕೊಯ್ಯುವವರ ಹಿಂದೆ ಹೋಗುತ್ತಾ ಅಲ್ಲಲ್ಲಿ ಬಿದ್ದ ತೆನೆಗಳನ್ನು ಆಯ್ದುಕೊಳ್ಳುತ್ತಿದ್ದಳು. ಸುದೈವದಿಂದ ಅದು ಎಲಿಮೆಲೆಕನ ನೆಂಟನಾದ ಬೋವಜನ ಹೊಲವಾಗಿತ್ತು.


ಅವನು, “ನಾನು ಅಕಸ್ಮಾತ್ತಾಗಿ ಗಿಲ್ಬೋವ ಪರ್ವತಪ್ರದೇಶಕ್ಕೆ ಹೋದಾಗ ಸೌಲ ತಮ್ಮ ಭರ್ಜಿಯನ್ನೂರಿಕೊಂಡು ನಿಂತಿದ್ದರು. ರಥಿಕರೂ ರಾಹುತರೂ ಅವರನ್ನು ಹಿಂದಟ್ಟಿಬರುತ್ತಿರುವುದನ್ನೂ ಕಂಡೆ.


ಹಸಿದವರಿಗೆ ಅನ್ನ ಹಾಕುವುದು, ನೆಲೆಯಿಲ್ಲದೆ ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯಾದವರನ್ನು ಕಂಡಾಗ ಅವರಿಗೆ ಬಟ್ಟೆಹೊದಿಸುವುದು, ನಿನ್ನ ರಕ್ತಸಂಬಂಧಿಕರಿಂದ ಮುಖ ಮರೆಮಾಡಿಕೊಳ್ಳದಿರುವುದು, ಇದೇ ಅಲ್ಲವೆ ನನಗೆ ಇಷ್ಟಕರವಾದ ಉಪವಾಸವ್ರತ?


ಆಗ ಯೇಸು ಅವನಿಗೆ ಹೀಗೆಂದು ವಿವರಿಸಿದರು: “ಒಬ್ಬನು ಜೆರುಸಲೇಮಿನಿಂದ ಇಳಿದು ಜೆರಿಕೋವಿಗೆ ಪ್ರಯಾಣ ಮಾಡುತ್ತಿದ್ದಾಗ, ದರೋಡೆಗಾರರ ಕೈಗೆ ಸಿಕ್ಕಿಬಿದ್ದ. ದರೋಡೆಗಾರರು ಅವನನ್ನು ಸುಲಿಗೆಮಾಡಿ, ಹೊಡೆದು ಬಡಿದು, ಅರೆಜೀವ ಮಾಡಿ ಅಲ್ಲೇ ಬಿಟ್ಟುಹೋದರು.


ಹಾಗೆಯೇ ಲೇವಿಯೊಬ್ಬನು ಆ ಸ್ಥಳಕ್ಕೆ ಬಂದು ಅವನನ್ನು ನೋಡಿ, ಹಾಗೆಯೇ ಬಳಸಿಕೊಂಡು ಹೋದ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು