Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 9:15 - ಕನ್ನಡ ಸತ್ಯವೇದವು C.L. Bible (BSI)

15 ಏಕೆಂದರೆ ದೇವರೇ ಮೋಶೆಗೆ ಈ ರೀತಿ ಹೇಳಿದ್ದಾರೆ: “ಯಾರ ಮೇಲೆ ದಯೆತೋರಲು ನನಗೆ ಇಷ್ಟವಿದೆಯೋ ಅವರ ಮೇಲೆ ದಯೆತೋರುವೆನು ಯಾರ ಮೇಲೆ ಕನಿಕರತೋರಲು ನನಗೆ ಮನಸ್ಸಿದೆಯೋ ಅವರ ಮೇಲೆ ಕನಿಕರ ತೋರುವೆನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 “ಯಾವನ ಮೇಲೆ ನನಗೆ ಕರುಣೆ ಉಂಟೋ ಅವನನ್ನು ಕರುಣಿಸುವೆನು, ಯಾವನ ಮೇಲೆ ನನ್ನ ಕನಿಕರವಿದೆಯೋ ಅವನಿಗೆ ಕನಿಕರ ತೋರಿಸುವೆನು” ಎಂದು ದೇವರು ಮೋಶೆಗೆ ಹೇಳಿರುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಯಾವನ ಮೇಲೆ ನನ್ನ ಕರುಣೆ ಉಂಟೋ ಅವನನ್ನು ಕರುಣಿಸುವೆನು, ಯಾವನ ಮೇಲೆ ನನ್ನ ಕನಿಕರವದೆಯೋ ಅವನಿಗೆ ಕನಿಕರ ತೋರಿಸುವೆನು ಎಂದು ದೇವರು ಮೋಶೆಗೆ ಹೇಳಿರುತ್ತಾನಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ದೇವರು ಮೋಶೆಗೆ, “ನಾನು ಯಾರಿಗೆ ಕರುಣೆ ತೋರಬಯಸುತ್ತೇನೋ ಅವನಿಗೆ ಕರುಣೆ ತೋರುವೆನು. ನಾನು ಯಾರಿಗೆ ಕನಿಕರ ತೋರಬಯಸುತ್ತೇನೋ ಅವರಿಗೆ ಕನಿಕರ ತೋರುವೆನು” ಎಂದು ಹೇಳಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ದೇವರು ಮೋಶೆಗೆ ಹೇಳಿದ್ದೇನೆಂದರೆ, “ಯಾವನ ಮೇಲೆ ನನ್ನ ಕರುಣೆ ಉಂಟೋ, ಅವನನ್ನು ಕರುಣಿಸುವೆನು. ಯಾವನ ಮೇಲೆ ನನ್ನ ಕನಿಕರವಿದೆಯೋ ಅವನನ್ನು ಕನಿಕರಿಸುವೆನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

15 ಕಶ್ಯಾಕ್ ಮಟ್ಲ್ಯಾರ್, ದೆವಾನ್ ಮೊಯ್ಜೆಕ್, “ಮಾಕಾ ಮನ್ ಯೆತಾ ತೆಚೆ ವರ್‍ತಿ ಮಿಯಾ ದಯಾ ದಾಕ್ವುತಾ; ಮಾಕಾ ಮನ್ ಹಾಯ್ ತೆಚೆ ವರ್‍ತಿ ಮಿಯಾ ದಯಾ ದಾಕ್ವುತಾ.” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 9:15
6 ತಿಳಿವುಗಳ ಹೋಲಿಕೆ  

ಸರ್ವೇಶ್ವರ, “ನನ್ನ ಒಳ್ಳೆಯತನವೆಲ್ಲ ನಿನ್ನೆದುರಿಗೆ ಹಾದುಹೋಗುವಂತೆ ಮಾಡುವೆನು. ಸರ್ವೇಶ್ವರನಾದ ನನ್ನ ನಾಮದ ಮಹತ್ವವನ್ನು ನಿನ್ನೆದುರಿಗೆ ಪ್ರಕಟಿಸುವೆನು. ಯಾರ್ಯಾರ ಮೇಲೆ ದಯೆಯಿಡಲು ಆಶಿಸುತ್ತೇನೋ ಅವರ ಮೇಲೆ ದಯೆಯಿಡುತ್ತೇನೆ. ಯಾರ್ಯಾರನ್ನು ಕರುಣಿಸಲು ಆಶಿಸುತ್ತೇನೋ ಅವರನ್ನು ಕರುಣಿಸುತ್ತೇನೆ,” ಎಂದರು.


ದೇವರ ದಯೆ ದೊರಕುವುದು ಮಾನವನ ಇಚ್ಛೆಯಿಂದಲ್ಲ, ಅವನ ಪ್ರಯತ್ನದಿಂದಲೂ ಅಲ್ಲ. ಅದು ದೊರಕುವುದು ದೇವರ ಕರುಣೆಯಿಂದಲೇ.


ನಿಮ್ಮಂಥ ದೇವರು ಯಾರಿದ್ದಾರೆ? ತಮ್ಮ ಸ್ವಂತ ಜನರಲ್ಲಿ ಅಳಿದುಳಿದವರ ಅಪರಾಧಗಳನ್ನು ಲೆಕ್ಕಿಸದೆ, ಅವರ ದ್ರೋಹಗಳನ್ನು ಕ್ಷಮಿಸುವಂಥ ದೇವರು ಯಾರಿದ್ದಾರೆ? ನೀವು ನಿತ್ಯಕ್ಕೂ ಕೋಪಿಷ್ಠರಾಗಿರದೆ ಕರುಣೆ ತೋರಿಸುವುದರಲ್ಲೇ ಸಂತುಷ್ಟರಾಗುವಿರಿ.


ಮರಗಳ ರೆಂಬೆಕೊಂಬೆಗಳು ಒಣಗಿ ಮುರಿದುಹೋಗಿವೆ. ಹೆಂಗಸರ ಕೈಗೆ ಒಲೆಪಾಲಾಗುವ ಸೌದೆಯಾಗಿವೆ. ಈ ಪ್ರಜೆಗಳು ಮಂದಮತಿಗಳೇ ಸರಿ. ಈ ಕಾರಣ, ಸೃಷ್ಟಿಕರ್ತನು ಇವರನ್ನು ಕರುಣಿಸನು. ನಿರ್ಮಿಸಿದಾತನು ಇವರಿಗೆ ದಯೆ ತೋರಿಸನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು