ರೋಮಾಪುರದವರಿಗೆ 4:9 - ಕನ್ನಡ ಸತ್ಯವೇದವು C.L. Bible (BSI)9 ಈ ಆಶೀರ್ವಚನವು ಸುನ್ನತಿ ಮಾಡಿಸಿಕೊಂಡವರಿಗೆ ಮಾತ್ರ ಅನ್ವಯಿಸುತ್ತದೆಯೇ? ಇಲ್ಲ, ಸುನ್ನತಿ ಮಾಡಿಸಿಕೊಳ್ಳದವರಿಗೂ ಅನ್ವಯಿಸುತ್ತದೆ. ಪವಿತ್ರಗ್ರಂಥದಲ್ಲಿ ಹೇಳಿರುವಂತೆ: “ಅಬ್ರಹಾಮನು ದೇವರಲ್ಲಿ ವಿಶ್ವಾಸವಿಟ್ಟನು; ದೇವರು ಆತನನ್ನು ತಮ್ಮ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಈ ಶುಭವು ಸುನ್ನತಿಯಾದವರಿಗೆ ಮಾತ್ರವೋ? ಅಥವಾ ಸುನ್ನತಿಯಿಲ್ಲದವರಿಗೆ ಸಹ ಉಂಟೋ? “ಅಬ್ರಹಾಮನ ಲೆಕ್ಕಕ್ಕೆ ಅವನ ನಂಬಿಕೆಯೇ ನೀತಿಯೆಂದು ಎಣಿಸಲ್ಪಟ್ಟಿತು” ಎಂಬುದಾಗಿ ನಾವು ಹೇಳುತ್ತೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಈ ಶುಭವಚನವು ಸುನ್ನತಿಯಿದ್ದವರಿಗೆ ಮಾತ್ರವೋ? ಸುನ್ನತಿಯಿಲ್ಲದವರಿಗೆ ಸಹ ಆಗುತ್ತದೋ? ನೋಡೋಣ. ಅಬ್ರಹಾಮನ ಲೆಕ್ಕಕ್ಕೆ ಅವನ ನಂಬಿಕೆಯೇ ನೀತಿಯೆಂದು ಎಣಿಸಲ್ಪಟ್ಟಿತೆಂಬದಾಗಿ ಹೇಳುತ್ತೇವಲ್ಲಾ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಈ ಭಾಗ್ಯವಿರುವುದು ಸುನ್ನತಿ ಮಾಡಿಸಿಕೊಂಡವರಿಗೆ (ಯೆಹೂದ್ಯರಿಗೆ) ಮಾತ್ರವೋ? ಅಥವಾ ಸುನ್ನತಿ ಮಾಡಿಸಿಕೊಂಡಿಲ್ಲದವರಿಗೂ (ಯೆಹೂದ್ಯರಲ್ಲದವರಿಗೂ) ಸಹ ಈ ಭಾಗ್ಯವಿದೆಯೋ? ದೇವರು ಅಬ್ರಹಾಮನ ನಂಬಿಕೆಯನ್ನು ಸ್ವೀಕರಿಸಿಕೊಂಡನೆಂದು ನಾವು ಆಗಲೇ ಹೇಳಿದ್ದೇವೆ. ಆ ನಂಬಿಕೆಯೇ ಅವನನ್ನು ನೀತಿವಂತನನ್ನಾಗಿ ಮಾಡಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಈ ಧನ್ಯತೆಯು ಕೇವಲ ಸುನ್ನತಿಯಾದವರಿಗೆ ಮಾತ್ರವೋ? ಅಥವಾ ಸುನ್ನತಿಯಿಲ್ಲದವರಿಗೂ ಇರುತ್ತದೆಯೋ? ಅಬ್ರಹಾಮನ ಲೆಕ್ಕಕ್ಕೆ ಅವನ ನಂಬಿಕೆಯೇ ನೀತಿ ಎಂದು ಎಣಿಸಲಾಗಿತೆಂದು ಹೇಳುತ್ತೇವಲ್ಲಾ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್9 ದಾವಿದಾನ್ ಸಾಂಗಲ್ಲೊ ಹ್ಯೊ ಸುಖ್ ಖಾಲಿ ಸುನ್ನತ್ ಕರುನ್ ಘೆಟಲ್ಲ್ಯಾಕ್ನಿ ಎವ್ಡೊಚ್ ಕಾಯ್, ಬಿಲ್ಕುಲ್ ನಾ! ತೊ ಸುಖ್ ಸುನ್ನತ್ ಕರುನ್ ಘೆಯ್ನಸಲ್ಲ್ಯಾಕ್ನಿಬಿ ಸಮಂದ್ ಪಡಲ್ಲೊ ಹಾಯ್ ತ್ಯೆಚೆ ಸಾಟ್ನಿಚ್ ಅಮಿ, ಪವಿತ್ರ್ ಪುಸ್ತಕಾತ್, “ಅಬ್ರಾಹಾಮಾನ್ ದೆವಾ ವರ್‍ತಿ ವಿಶ್ವಾಸ್ ಕರ್‍ಲ್ಯಾನ್, ಅನಿ ತೆಚ್ಯಾ ವಿಶ್ವಾಸಾಕ್‍ಲಾಗುನ್ ದೆವಾನ್ ತೆಕಾ ಖರ್ಯ್ಯಾ ವಾಟೆನ್ ಚಲ್ತಲೊ ಮಾನುಸ್ ಮನುನ್ ಮಾನುನ್ ಘೆಟ್ಲಲ್ಯಾ” ಮನ್ತಾಂವ್. ಅಧ್ಯಾಯವನ್ನು ನೋಡಿ |