Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 3:31 - ಕನ್ನಡ ಸತ್ಯವೇದವು C.L. Bible (BSI)

31 ‘ವಿಶ್ವಾಸದ ಮೂಲಕ’ ಎಂದು ಒತ್ತಿ ಹೇಳುವಾಗ ಧರ್ಮಶಾಸ್ತ್ರವನ್ನು ನಾವು ಅಲ್ಲಗಳೆಯುತ್ತೇವೆಂದು ಅರ್ಥವೆ? ಎಂದಿಗೂ ಇಲ್ಲ. ಬದಲಿಗೆ ಧರ್ಮಶಾಸ್ತ್ರದ ನಿಲುವನ್ನು ಸಮರ್ಥಿಸುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಹಾಗಾದರೆ ನಂಬಿಕೆಯಿಂದ ಧರ್ಮಶಾಸ್ತ್ರವನ್ನು ತೆಗೆದು ಹಾಕುತ್ತೇವೋ? ಎಂದಿಗೂ ಇಲ್ಲ. ಧರ್ಮಶಾಸ್ತ್ರವನ್ನು ಸ್ಥಿರಪಡಿಸುತ್ತೇವಷ್ಟೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಹಾಗಾದರೆ ನಂಬಿಕೆಯಿಂದ ಧರ್ಮಪ್ರಮಾಣವನ್ನು ನಿರರ್ಥಕಮಾಡುತ್ತೇವೋ? ಎಂದಿಗೂ ಇಲ್ಲ. ಧರ್ಮಪ್ರಮಾಣವನ್ನು ಸ್ಥಿರಪಡಿಸುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಹೀಗಿರಲು, ನಂಬಿಕೆಯ ಮಾರ್ಗವನ್ನು ಅನುಸರಿಸುವುದರ ಮೂಲಕ ನಾವು ಧರ್ಮಶಾಸ್ತ್ರವನ್ನು ಅಲ್ಲಗಳೆಯುತ್ತೇವೋ? ಇಲ್ಲ! ನಾವು ಧರ್ಮಶಾಸ್ತ್ರವನ್ನು ಸಮರ್ಥಿಸುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಹಾಗಾದರೆ, ನಾವು ನಂಬಿಕೆಯ ಮೂಲಕ ನೀತಿವಂತರೆಂದು ನಿರ್ಣಯಿಸುವುದಕ್ಕೆ ಒಬ್ಬರೇ ದೇವರಿದ್ದಾರೆ. ಹಾಗಾದರೆ, ನಾವು ನಂಬಿಕೆಯ ಮೂಲಕ ನಿಯಮವನ್ನು ನಿರರ್ಥಕಗೊಳಿಸುತ್ತೇವೋ? ಎಂದಿಗೂ ಇಲ್ಲ. ನಾವು ನಿಯಮವನ್ನು ಸ್ಥಿರಪಡಿಸುತ್ತೇವಷ್ಟೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

31 ಅಶೆ ಮಟ್ಲ್ಯಾರ್, ವಿಶ್ವಾಸಾ ವೈನಾ ಅಮಿ ಖಾಯ್ದೆ ಧುರ್ ಕರುನ್ ಸೊಡ್ತಾಂವ್ ಮನುನ್ ಹೊಲೆ ಕಾಯ್? ನಾ, ಕನ್ನಾಚ್‍ ನಾ; ಹೆಚ್ಯಾ ಬದ್ಲಾಕ್ ಅಮಿ ಖಾಯ್ದೆ ಘಟ್ಟ್ ಕರುನ್ಗೆತ್ ಜಾವ್ಕ್ ಲಾಗ್ಲಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 3:31
27 ತಿಳಿವುಗಳ ಹೋಲಿಕೆ  

ದೇವರ ಅನುಗ್ರಹವನ್ನು ನಿರಾಕರಿಸುವಂಥವನು ನಾನಲ್ಲ. ಧರ್ಮಶಾಸ್ತ್ರದ ಮೂಲಕ ದೇವರೊಡನೆ ಸತ್ಸಂಬಂಧವು ದೊರಕುವುದಾದರೆ ಕ್ರಿಸ್ತಯೇಸು ಮರಣಕ್ಕೀಡಾದುದು ನಿರರ್ಥಕವೇ ಸರಿ.


“ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದುಮಾಡಲು ನಾನು ಬಂದೆನೆಂದು ತಿಳಿಯಬೇಡಿ. ರದ್ದುಮಾಡಲು ಅಲ್ಲ, ಅವುಗಳನ್ನು ಸಿದ್ಧಿಗೆ ತರಲು ಬಂದಿದ್ದೇನೆ.


ಧರ್ಮಶಾಸ್ತ್ರಕ್ಕೆ ಬಾಹಿರರಾದವರನ್ನು ಗಳಿಸಿಕೊಳ್ಳಲು ನಾನು ಧರ್ಮಶಾಸ್ತ್ರಕ್ಕೆ ಬಾಹಿರನಂತೆ ಆದೆ. ಯೇಸುಕ್ರಿಸ್ತರ ನಿಯಮಕ್ಕೆ ನಾನು ವಿಧೇಯನಾದುದರಿಂದ ದೇವರ ನಿಯಮಕ್ಕೆ ನಾನು ಬಾಹಿರನೇನೂ ಅಲ್ಲ.


ದೇವರಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನಿಗೂ ಆ ಸತ್ಸಂಬಂಧ ದೊರಕುವಂತೆ ಕ್ರಿಸ್ತಯೇಸು ಧರ್ಮಶಾಸ್ತ್ರವನ್ನು ಇತಿಗೊಳಿಸಿದರು.


ಶರೀರ ಸ್ವಭಾವಕ್ಕೆ ಅನುಸಾರವಾಗಿ ನಡೆಯದೆ ಪವಿತ್ರಾತ್ಮ ಅವರ ಚಿತ್ತಕ್ಕನುಸಾರವಾಗಿ ನಡೆಯುವ ನಮ್ಮಲ್ಲಿ ಧರ್ಮಶಾಸ್ತ್ರದ ನೀತಿನಿಯಮಗಳು ನೆರವೇರುವಂತೆ ದೇವರು ಹೀಗೆ ಮಾಡಿದರು.


ನಾನಾದರೋ ದೇವರಿಗಾಗಿ ಜೀವಿಸುವುದಕ್ಕೋಸ್ಕರ, ಧರ್ಮಶಾಸ್ತ್ರದ ಮೂಲಕ, ಧರ್ಮಶಾಸ್ತ್ರದ ಪಾಲಿಗೆ ಸತ್ತವನಾಗಿದ್ದೇನೆ.


ದೇವರೇ; ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ಅವರಿಗೆ ಕೃತಜ್ಞತೆ ಸಲ್ಲಲಿ! ನನ್ನಷ್ಟಕ್ಕೆ ನಾನೇ ದೇವರ ನಿಯಮವನ್ನು ಮನಃಪೂರ್ವಕವಾಗಿ ಪಾಲಿಸಲು ಬಯಸುತ್ತೇನೆ. ನನ್ನ ಈ ದೇಹದಲ್ಲಾದರೋ ಪಾಪದ ನಿಯಮಕ್ಕೆ ಬದ್ಧನಾಗಿದ್ದೇನೆ.


ನನ್ನ ಅಂತರಂಗದಲ್ಲಿ ದೈವನಿಯಮವನ್ನು ಕುರಿತು ಆನಂದಿಸುತ್ತೇನೆ.


ಧರ್ಮಶಾಸ್ತ್ರವನ್ನು ಪಾಲಿಸುವುದರಿಂದ ಮಾತ್ರ ದೇವರ ವಾಗ್ದಾನಕ್ಕೆ ಬಾಧ್ಯತೆ ದೊರಕುವುದಾದರೆ, ಮಾನವನ ವಿಶ್ವಾಸವೂ ವ್ಯರ್ಥ; ದೇವರ ವಾಗ್ದಾನವೂ ನಿರರ್ಥಕ.


ಎಂದಿಗೂ ಇಲ್ಲ. ಮಾನವರೆಲ್ಲರು ಸುಳ್ಳುಗಾರರಾದರೂ ದೇವರು ಮಾತ್ರ ಸತ್ಯವಂತರೇ ಸರಿ. ಪವಿತ್ರಗ್ರಂಥದಲ್ಲಿ ಹೀಗೆಂದು ಬರೆದಿದೆ: “ನಿನ್ನ ಮಾತಿನಲ್ಲೇ ನೀನು ನೀತಿವಂತನೆಂದು ವ್ಯಕ್ತವಾಗಬೇಕು, ವ್ಯಾಜ್ಯವೆದ್ದಾಗ ನೀನು ವಿಜಯಶಾಲಿ ಆಗಬೇಕು.”


ಇನ್ನು ಅವನು ತನ್ನ ತಂದೆ ತಾಯಿಗಳನ್ನು ಗೌರವಿಸಬೇಕಾಗಿಲ್ಲ, ಎಂದು ಬೋಧಿಸುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ಸಲುವಾಗಿ ದೇವರ ವಾಕ್ಯವನ್ನೇ ನಿರರ್ಥಕಮಾಡಿಬಿಟ್ಟಿದ್ದೀರಿ.


ಧರ್ಮಶಾಸ್ತ್ರಿಗಳ ಹಾಗೂ ಫರಿಸಾಯರ ಧರ್ಮನಿಷ್ಠೆಗಿಂತ ನಿಮ್ಮ ಧರ್ಮನಿಷ್ಠೆ ಉತ್ತಮವಾಗದ ಹೊರತು ನೀವು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸಲಾರಿರಿ ಎಂಬುದು ನಿಶ್ಚಯ.”


ಆದರೆ ಯೇಸು, “ಸದ್ಯಕ್ಕೆ ತಡೆಯದಿರು; ನಾವು ದೈವನಿಯಮಕ್ಕೆ ತಲೆಬಾಗುವುದು ಒಳಿತು,” ಎಂದರು. ಯೊವಾನ್ನನು ಅದಕ್ಕೆ ಸಮ್ಮತಿಸಿದನು.


ಸರ್ವೇಶ್ವರ ಮುಕ್ತಿದಾತನಾದುದರಿಂದ ಧರ್ಮಶಾಸ್ತ್ರಕ್ಕೆ ಮಹಿಮೆಯಿತ್ತು ಅದನ್ನು ಮಹತ್ತಾಗಿಸಿದ.


ಉಲ್ಲಂಘನೆಯಾಗಿದೆ ಪ್ರಭು, ನಿನ್ನ ಧರ್ಮಶಾಸ್ತ್ರ I ಸಮಯ ಬಂದೊದಗಿದೆ, ಆಗು ನೀನು ಕಾರ್ಯತತ್ಪರ II


ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ I ನನ್ನಂತರಂಗದಲಿದೆ ದೇವಾ, ನಿನ್ನ ಧರ್ಮೋಪದೇಶ” II


“ಹೀಗಿರುವಲ್ಲಿ, ತೋಟದ ಯಜಮಾನ ಇವರಿಗೆ ಏನು ಮಾಡುತ್ತಾನೆ?” ಎಂದು ಕೇಳಿದ ಯೇಸು, ತಾವೇ ಉತ್ತರಿಸುತ್ತಾ, “ಅವನು ಬಂದು ಗೇಣಿದಾರರನ್ನು ಸಂಹರಿಸಿ ತೋಟವನ್ನು ಬೇರೆ ಗೇಣಿದಾರರಿಗೆ ಒಪ್ಪಿಸುತ್ತಾನೆ,” ಎಂದು ಹೇಳಿದರು.


ಮಕ್ಕಳಿಗೆ ಶಿಕ್ಷಕನೂ ಆಗಿರುವುದಾಗಿ ದೃಢವಾಗಿ ನಂಬಿಕೊಂಡಿದ್ದೀಯೆ; ಧರ್ಮಶಾಸ್ತ್ರದಲ್ಲಿ ಜ್ಞಾನ ಮತ್ತು ಸತ್ಯ ಮೇಳೈಸಿರುವುದಾಗಿ ಭಾವಿಸುತ್ತೀಯೆ.


ಎಂದಿಗೂ ಇಲ್ಲ! ದೇವರು ನ್ಯಾಯವಂತರಲ್ಲದಿದ್ದರೆ ಲೋಕಕ್ಕೆ ನ್ಯಾಯತೀರ್ಪು ಕೊಡಲು ಹೇಗೆ ತಾನೆ ಸಾಧ್ಯ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು