ರೋಮಾಪುರದವರಿಗೆ 15:14 - ಕನ್ನಡ ಸತ್ಯವೇದವು C.L. Bible (BSI)14 ಸಹೋದರರೇ, ನೀವು ಗುಣಸಂಪನ್ನರೂ ಜ್ಞಾನಸಂಪನ್ನರೂ ಒಬ್ಬರಿಗೊಬ್ಬರು ಬುದ್ಧಿಹೇಳಿಕೊಳ್ಳಲು ಸಮರ್ಥರೂ ಆಗಿದ್ದೀರಿ ಎಂದು ನಾನು ಚೆನ್ನಾಗಿ ಬಲ್ಲೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ನನ್ನ ಸಹೋದರರೇ, ನೀವಂತೂ ಒಳ್ಳೆತನದಿಂದ ತುಂಬಿದವರಾಗಿದ್ದು, ಸಕಲ ಜ್ಞಾನದಿಂದ ತುಂಬಿದವರಾಗಿಯೂ ಒಬ್ಬರಿಗೊಬ್ಬರು ಬುದ್ಧಿಹೇಳುವುದಕ್ಕೆ ಶಕ್ತರಾಗಿಯೂ ಇದ್ದೀರೆಂದು ನಿಮ್ಮ ವಿಷಯದಲ್ಲಿ ದೃಢವಾಗಿ ನಂಬಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ನನ್ನ ಸಹೋದರರೇ, ನೀವಂತೂ ಒಳ್ಳೇತನದಿಂದ ಭರಿತರಾಗಿಯೂ ಸಕಲ ಜ್ಞಾನದಿಂದ ತುಂಬಿದವರಾಗಿಯೂ ಒಬ್ಬರಿಗೊಬ್ಬರು ಬುದ್ಧಿ ಹೇಳುವದಕ್ಕೆ ಶಕ್ತರಾಗಿಯೂ ಇದ್ದೀರೆಂದು ನಿಮ್ಮ ವಿಷಯದಲ್ಲಿ ನನಗೂ ಗೊತ್ತಿದೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಳ್ಳೆಯತನವು ತುಂಬಿದೆಯೆಂದು ನನಗೆ ನಿಶ್ಚಯವಾಗಿ ಗೊತ್ತಿದೆ. ಅಗತ್ಯವಾದ ಸಕಲ ಜ್ಞಾನವು ನಿಮಗಿದೆಯೆಂದು ಮತ್ತು ಒಬ್ಬರಿಗೊಬ್ಬರು ಸಲಹೆ ನೀಡಬಲ್ಲಿರೆಂದು ನನಗೆ ಗೊತ್ತಿದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ನನ್ನ ಪ್ರಿಯರೇ, ನೀವು ಒಳ್ಳೆಯತನದಿಂದ ಪೂರ್ಣವಾದವರೂ ಸಕಲ ತಿಳುವಳಿಕೆಯಿಂದ ತುಂಬಿದವರೂ ಆಗಿದ್ದು, ಒಬ್ಬರಿಗೊಬ್ಬರು ಬುದ್ಧಿ ಹೇಳುವುದಕ್ಕೆ ಶಕ್ತರಾಗಿದ್ದೀರೆಂದು ನಿಮ್ಮ ಬಗ್ಗೆ ನನಗೆ ಭರವಸೆ ಇದೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್14 ಮಾಜ್ಯಾ ಭಾವಾನು ಅನಿ ಭೆನಿಯಾನು, ತುಮಿ ಬರ್‍ಯಾ ಮನಾಚಿ ಲೊಕಾ ಅನಿ ಸಗ್ಳ್ಯಾ ರಿತಿಚ್ಯಾ ಶಾನೆಪಾನಾನಿ ಅನಿ ಭರಲ್ಲಿ ಲೊಕಾ ತಸೆಮನುನ್ ಎಕಾಮೆಕಾಕ್ನಿ ಬುದ್‍ಬಾಳ್ ಸಾಂಗುಕ್ ತುಮ್ಚ್ಯಾನ್ ಹೊತಾ ಮನುನ್ ಮಾಕಾ ಖರೆಚ್ ಗೊತ್ತ್ ಹಾಯ್. ಅಧ್ಯಾಯವನ್ನು ನೋಡಿ |