Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 11:9 - ಕನ್ನಡ ಸತ್ಯವೇದವು C.L. Bible (BSI)

9 “ಅವರ ಭೋಜನವೇ ಅವರಿಗೆ ಬಲೆಯೂ ಜಾಲವೂ ಆಗಲಿ ಯಾತನೆಯೂ ಪತನವೂ ಆಗಿ ಪರಿಣಮಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಇದಲ್ಲದೆ “ಅವರ ಭೋಜನವೇ ಅವರಿಗೆ ಬಲೆಯೂ, ಜಾಲವೂ, ಅಡೆತಡೆಯೂ, ಪ್ರತಿಕಾರವೂ ಆಗಲಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಇದಲ್ಲದೆ - ಅವರ ಊಟವೇ ಅವರಿಗೆ ಉರ್ಲೂ ಬೋನೂ ಎಡತಡೆಯೂ ಶಿಕ್ಷೆಯೂ ಆಗಲಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ದಾವೀದನು ಹೀಗೆನ್ನುತ್ತಾನೆ: “ಅವರು ತಮ್ಮ ಔತಣಗಳಲ್ಲಿ ಸಿಕ್ಕಿಕೊಂಡು ಬಂಧಿತರಾಗಲಿ; ಎಡವಿಬಿದ್ದು ದಂಡನೆ ಹೊಂದಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ದಾವೀದನು, “ಅವರ ಊಟವೇ ಅವರಿಗೆ ಉರುಲೂ ಬೋನೂ ಆಗಲಿ. ಅದು ಅಡೆತಡೆಯೂ ಪ್ರತಿಕಾರವೂ ಆಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

9 ಅನಿ ದಾವಿದ್ ಮನ್ತಾ, “ತೆಂಚಿ ಸನಾಚ್ ತೆಂಕಾ ಗೊಂದ್ಳುನ್ ಘಾಲುಂದಿ, ಅನಿ ಶಿಗಾ ಪಾಡ್ವುಂದಿತ್; ತೆನಿ ಪಡುಂದಿತ್, ತೆಂಕಾ ಶಿಕ್ಷಾ ಗಾವುಂದಿತ್!

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 11:9
18 ತಿಳಿವುಗಳ ಹೋಲಿಕೆ  

ಕೇಡಿಗರು ಪರರಿಗೆ ಮಾಡಿದುದ ತಾವೇ ಉಣ್ಣಮಾಡು I ಅವರ ದುಷ್ಟಕಾರ್ಯಗಳಿಗೆ ತಕ್ಕುದಾದ ಶಿಕ್ಷೆ ನೀಡು II


ಏಕೆಂದರೆ, ದೇವದೂತರ ಮುಖಾಂತರ ನಮ್ಮ ಪೂರ್ವಜರಿಗೆ ಕೊಡಲಾದ ಸಂದೇಶವು ಅಕ್ಷಯವಾಗಿದ್ದು ಅದನ್ನು ಮೀರಿ ಮಾಡಿದ ಪ್ರತಿಯೊಂದು ತಪ್ಪು ಮತ್ತು ಅವಿಧೇಯತೆಯು ಶಿಕ್ಷಾರ್ಹವಾಗಿದ್ದರೆ,


ಆಗ ದೇವರು, ‘ಎಲವೋ ಮೂರ್ಖ, ಇದೇ ರಾತ್ರಿ ನೀನು ಸಾಯಬೇಕಾಗಿದೆ, ನಿನಗಾಗಿ ಸಿದ್ಧಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?’ ಎಂದರು.


ಪ್ರಸವಕ್ಕೆ ತಂದ ನಾನು ಹೆರಲಿಕ್ಕೆ ಬಿಡದಿರುವೆನೊ?’ - ಎನ್ನುತ್ತಾರೆ ನಿಮ್ಮ ದೇವರು. ‘ಹೆರುವಂತೆ ಮಾಡುವವನಾದ ನಾನು ಗರ್ಭ ಮುಚ್ಚಿಬಿಡುವೆನೊ?’ ಎನ್ನುತ್ತಾರೆ ಸ್ವಾಮಿ ಸರ್ವೇಶ್ವರ.


ಅವರವರ ಕೃತ್ಯಗಳಿಗೆ ತಕ್ಕಂತೆ ದೂರದ ನಾಡುಗಳವರೆಗೂ ಮುಯ್ಯಿ ತೀರಿಸುವರು. ವಿರೋಧಿಗಳಿಗೆ ಪ್ರತೀಕಾರ ಎಸಗುವರು; ಶತ್ರುಗಳಿಗೆ ಸೇಡನ್ನು ತೀರಿಸುವರು.


ಮೂಢರು ತಮ್ಮ ಉದಾಸೀನತೆಯಿಂದಲೆ ಹತರಾಗುವರು. ಜ್ಞಾನಹೀನರು ತಮ್ಮ ನಿಶ್ಚಿಂತೆಯಿಂದಲೆ ನಾಶವಾಗುವರು.


ಅವನ ಶತ್ರುಗಳಿಗೆ ಮುಯ್ಯಿತೀರಿಸುವುದು ನನ್ನ ಕೆಲಸ; ಸಮೀಪಿಸಿತವರಿಗೆ ಜಾರಿಬೀಳುವ ಸಮಯ, ವಿಪತ್ಕಾಲ; ಬೇಗಬರುವುದು ಅವರಿಗೆ ಸಿದ್ಧವಾದ ದುರ್ಗತಿಕಾಲ!


ಆದರೆ ಯೇಸು ಪೇತ್ರನತ್ತ ತಿರುಗಿ, “ಸೈತಾನನೇ, ತೊಲಗಿಲ್ಲಿಂದ; ನೀನು ನನಗೆ ಅಡೆತಡೆ; ನಿನ್ನ ಈ ಆಲೋಚನೆ ಮನುಷ್ಯರದ್ದೇ ಹೊರತು, ದೇವರದಲ್ಲ,” ಎಂದರು.


ಆದಕಾರಣ ಒಬ್ಬರ ವಿಷಯದಲ್ಲಿ ಒಬ್ಬರು ತೀರ್ಪುಮಾಡದೆ ಇರೋಣ. ಬದಲಾಗಿ ಸಹೋದರನಿಗೆ ಯಾವ ರೀತಿಯ ಅಡ್ಡಿಯನ್ನಾಗಲೀ ಅಡಚಣೆಗಳನ್ನಾಗಲೀ ಉಂಟುಮಾಡುವುದಿಲ್ಲವೆಂದು ತೀರ್ಮಾನಿಸಿಕೊಳ್ಳಿ.


ಅವನಿಗಾಗಿ ಜಾಲವನ್ನು ಅವಿತಿಡಲಾಗಿದೆ ದಾರಿಯಲಿ ಅವನಿಗಾಗಿ ಪಾಶವನ್ನು ಹೂತಿಡಲಾಗಿದೆ ನೆಲದಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು