Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 11:12 - ಕನ್ನಡ ಸತ್ಯವೇದವು C.L. Bible (BSI)

12 ಅವರ ಅಪರಾಧ ಜಗತ್ತಿಗೆಲ್ಲ ಸೌಭಾಗ್ಯವನ್ನೂ ಅವರ ಅಪಜಯವು ಇತರರಿಗೆಲ್ಲಾ ಆಶೀರ್ವಾದವನ್ನೂ ತರಲು ಕಾರಣವಾದರೆ, ಅವರ ಸಂಪೂರ್ಣ ಪರಿವರ್ತನೆ ಮತ್ತೆಷ್ಟೋ ಕಲ್ಯಾಣವನ್ನು ಉಂಟುಮಾಡಬೇಕಲ್ಲವೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಅವರು ಬಿದ್ದುಹೋದದ್ದು ಸರ್ವಲೋಕದ ಸೌಭಾಗ್ಯಕ್ಕೂ, ಅವರು ಸೋತುಹೋದದ್ದು ಅನ್ಯಜನಗಳ ಸಂಪತ್ತಿಗೂ ಮಾರ್ಗವಾಗಿರಲಾಗಿ ಅವರ ಪೂರ್ಣ ಪುನಃಸ್ಥಾಪನೆಯು ಪ್ರಪಂಚಕ್ಕೆ ಎಷ್ಟೋ ಹೆಚ್ಚಾದ ಭಾಗ್ಯಕ್ಕೆ ಕಾರಣವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಅವರು ಬಿದ್ದುಹೋದದ್ದು ಸರ್ವಲೋಕದ ಭಾಗ್ಯಕ್ಕೂ ಅವರು ಸೋತು ಹೋದದ್ದು ಅನ್ಯಜನಗಳ ಭಾಗ್ಯಕ್ಕೂ ಮಾರ್ಗವಾಗಿರಲಾಗಿ ಅವರ ಪೂರ್ಣ ಪುನಃಸ್ಥಾಪನೆಯು ಎಷ್ಟೋ ಹೆಚ್ಚಾಗಿ ಭಾಗ್ಯಕ್ಕೆ ಕಾರಣವಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಯೆಹೂದ್ಯರ ಅಪರಾಧವು ಜಗತ್ತಿಗೆ ಅಧಿಕವಾದ ಆಶೀರ್ವಾದಗಳನ್ನೂ ಅವರ ಅಪಜಯವು ಯೆಹೂದ್ಯರಲ್ಲದ ಜನರಿಗೆ ಅಧಿಕವಾದ ಆಶೀರ್ವಾದಗಳನ್ನೂ ತರಲು ಕಾರಣವಾದರೆ, ದೇವರ ಇಚ್ಛೆಗನುಸಾರವಾಗಿ ಯೆಹೂದ್ಯರೆಲ್ಲರು ಪರಿವರ್ತನೆ ಹೊಂದಿದಾಗ ಜಗತ್ತು ಮತ್ತಷ್ಟು ಅಗಾಧವಾದ ಆಶೀರ್ವಾದಗಳನ್ನು ಹೊಂದುವುದು ನಿಶ್ಚಯವಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆದರೆ ಅವರ ಅಪರಾಧವು ಜಗತ್ತಿಗೆ ಐಶ್ವರ್ಯವನ್ನು ಉಂಟುಮಾಡಿತು. ಅವರ ನಷ್ಟವೇ ಯೆಹೂದ್ಯರಲ್ಲದವರಿಗೆ ಐಶ್ವರ್ಯವನ್ನು ಉಂಟುಮಾಡುವುದಾದರೆ, ಅವರ ಪರಿಪೂರ್ಣತೆಯು ಇನ್ನೂ ಎಷ್ಟೋ ಹೆಚ್ಚಾದ ಐಶ್ವರ್ಯವನ್ನು ಉಂಟುಮಾಡಬಹುದಲ್ಲವೇ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

12 ಜುದೆವ್ ಲೊಕಾಂಚ್ಯಾ ಪಾಪಾನ್ ಜಗಾ ವರ್ತಿ ಮೊಟಿ ಆರ್ಶಿವಾದಾ ಘೆವ್ನ್ ಯೆಲ್ಯಾನ್, ಅನಿ ತೆಂಚ್ಯಾ ಆತ್ಮಿಕ್ ಗರಿಬ್ಕಿನ್ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ವರ್‍ತಿ ಮೊಟೊ ಆಶಿರ್ವಾದ್ ಹಾನ್ಲಿನ್. ತಸೆಜಾಲ್ಯಾರ್ ಸಗ್ಳ್ಯಾ ಜುದೆವ್ ಲೊಕಾಕ್ನಿ ಧರ್ಲ್ಯಾರ್ ತಿ ಆಶಿರ್ವಾದಾ ಕವ್ಡಿ ಮೊಟಿ ರ್‍ಹಾತಿಲ್!

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 11:12
15 ತಿಳಿವುಗಳ ಹೋಲಿಕೆ  

ಪ್ರಿಯ ಸಹೋದರರೇ, ನೀವೇ ಬುದ್ಧಿವಂತರೆಂದು ಉಬ್ಬಿಹೋಗಬೇಡಿ. ನಿಮಗೊಂದು ನಿಗೂಢ ರಹಸ್ಯವನ್ನು ತಿಳಿಸಬಯಸುತ್ತೇನೆ. ಅದೇನೆಂದರೆ, ಇಸ್ರಯೇಲರ ಮೊಂಡುತನವು ತಾತ್ಕಾಲಿಕವಾದುದು. ಇಸ್ರಯೇಲರಲ್ಲದವರು ಪೂರ್ಣಸಂಖ್ಯೆಯಲ್ಲಿ ದೇವರ ಬಳಿಗೆ ಬರುವ ತನಕ ಮಾತ್ರ ಅದು ಇರುತ್ತದೆ.


ಈ ರಹಸ್ಯ ಎಷ್ಟು ಶ್ರೀಮಂತವಾದುದು, ಎಷ್ಟು ಮಹಿಮಾನ್ವಿತವಾದುದು ಎಂಬುದನ್ನು ಎಲ್ಲಾ ಜನಾಂಗಗಳಿಗೂ ತಿಳಿಸಲು ದೇವರು ಇಚ್ಛಿಸಿದರು. ಕ್ರಿಸ್ತಯೇಸು ನಿಮ್ಮಲ್ಲಿದ್ದು ಮುಂದಿನ ಮಹಿಮೆಯ ನಿರೀಕ್ಷೆಗೆ ಆಧಾರವಾಗಿದ್ದಾರೆ ಎಂಬುದೇ ಈ ರಹಸ್ಯ.


ಇಸ್ರಯೇಲರು ತಿರಸ್ಕೃತರಾದ್ದರಿಂದ ಜಗತ್ತು ದೇವರೊಡನೆ ಸಂಧಾನವಾಗಲು ಸಾಧ್ಯವಾಯಿತಾದರೆ ಅವರು ಸ್ವೀಕೃತರಾಗುವಾಗ ಇನ್ನೇನು ತಾನೆ ಸಂಭವಿಸದು! ಸತ್ತವರು ಜೀವಕ್ಕೆ ಎದ್ದುಬಂದಂತಾಗುವುದಲ್ಲವೆ?


ದೇವಜನರಲ್ಲೆಲ್ಲ ನಾನು ಅತ್ಯಲ್ಪನು. ಆದರೂ ಯೇಸುಕ್ರಿಸ್ತರ ಅಪರಿಮಿತ ಆಧ್ಯಾತ್ಮಿಕ ಸಿರಿಸಂಪತ್ತಿನ ಬಗ್ಗೆ ಅನ್ಯಜನರಿಗೆ ಪ್ರಬೋಧಿಸುವ ಸೌಭಾಗ್ಯ ನನ್ನದಾಯಿತು.


ಈ ಮೂಲಕ ತಮ್ಮ ಕರುಣೆಯನ್ನು ಹೊಂದಲು ಅವರು ಮೊದಲೇ ತಯಾರಿಸಿದ್ದ ಕುಡಿಕೆಯನ್ನು ಹೋಲುವವರಿಗೆ ದೇವರು ತಮ್ಮ ಮಹಿಮಾತಿಶಯವನ್ನು ತೋರ್ಪಡಿಸಲು ಇಚ್ಛಿಸಿದರು.


ಸರ್ವೇಶ್ವರಸ್ವಾಮಿಯ ಕೃಪೆಯಿಂದ ಇಬ್ಬನಿಯೂ ತುಂತುರುಮಳೆಯೂ ಮಾನವನ ನೆರವನ್ನು ನಿರೀಕ್ಷಿಸದೆ, ಹುಲ್ಲನ್ನು ಸಮೃದ್ಧಿಗೊಳಿಸುತ್ತವೆ. ಅಂತೆಯೇ ಯಕೋಬನ ಅಳಿದುಳಿದ ವಂಶದವರು ಹಲವಾರು ಜನಾಂಗಗಳ ಮಧ್ಯೆ ನೆಲಸಿ, ಅವರ ಅಭ್ಯುದಯಕ್ಕೆ ಕಾರಣರಾಗುವರು.


ಆ ದಿನದಂದು ಅಸ್ಸೀರಿಯ, ಈಜಿಪ್ಟ್, ಪತ್ರೋಸ್, ಸುಡಾನ್, ಏಲಾಮ್, ಬಾಬಿಲೋನಿಯ, ಹಮಾಥ್ ಹಾಗೂ ಸಮುದ್ರದ ಕರಾವಳಿ - ಈ ಸ್ಥಳಗಳಿಂದ ಸರ್ವೇಶ್ವರ ತಮ್ಮ ಅಳಿದುಳಿದ ಜನರನ್ನು ಬಿಡಿಸಿ ಬರಮಾಡಿಕೊಳ್ಳಲು ಮತ್ತೆ ಕೈನೀಡುವರು.


ಆ ದಿನದಂದು ಹಲವಾರು ರಾಷ್ಟ್ರಗಳು ಸರ್ವೇಶ್ವರಸ್ವಾಮಿಯನ್ನು ಆಶ್ರಯಿಸಿಕೊಳ್ಳುವರು. ಅವರು ಆ ಸ್ವಾಮಿಯ ಜನರಾಗುವರು. ಸ್ವಾಮಿ ಅವರ ಮಧ್ಯೆ ವಾಸಿಸುವರು. ಸೇನಾಧೀಶ್ವರರಾದ ಆ ಸ್ವಾಮಿಯೇ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ ಎಂಬುದು ಆಗ ನಿಮಗೆ ಗೊತ್ತಾಗುವುದು.


ದೇವರ ಸಿರಿಸಂಪತ್ತು, ಜ್ಞಾನವಿಜ್ಞಾನ ಎಷ್ಟು ಅಗಾಧ! ಪರಿಶೋಧನೆಗೂ ನಿಲುಕದ ಅವರ ನಿರ್ಣಯ ಎಷ್ಟು ಅಗಮ್ಯ! ಅವರ ನಿಯೋಜನೆಗಳು ಗ್ರಹಿಕೆಗೂ ಎಷ್ಟು ಅಸಾಧ್ಯ!


ಸಮಸ್ತವನ್ನೂ ಪುನರ್‍ಸ್ಥಾಪನೆಗೊಳಿಸುವವರೆಗೆ ಕ್ರಿಸ್ತಯೇಸು ಸ್ವರ್ಗದಲ್ಲಿಯೇ ಇರಬೇಕಾಗಿದೆ. ಇದನ್ನು ದೇವರು ಪವಿತ್ರ ಪ್ರವಾದಿಗಳ ಮುಖಾಂತರ ಬಹುಕಾಲಕ್ಕೆ ಹಿಂದೆಯೇ ಪ್ರಕಟಿಸಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು