Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 10:21 - ಕನ್ನಡ ಸತ್ಯವೇದವು C.L. Bible (BSI)

21 ಆದರೆ ಇಸ್ರಯೇಲರನ್ನು ಕುರಿತು: “ಅವಿಧೇಯರೂ ಪ್ರತಿಭಟಿಸುವವರೂ ಆದ ಈ ಜನಾಂಗವನ್ನು ದಿನವೆಲ್ಲಾ ನಾನು ಕೈಚಾಚಿ ಕರೆದೆ,” ಎಂದು ಪ್ರವಾದಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಆದರೆ ಅವನು ಇಸ್ರಾಯೇಲ್ಯರನ್ನು ಕುರಿತು, “ನನ್ನ ಮಾತಿಗೆ ಅವಿಧೇಯರಾಗಿ ಎದುರುಮಾತನಾಡುವ ಜನರನ್ನು ನಾನು ದಿನವೆಲ್ಲಾ ಎಡೆಬಿಡದೆ ಕೈ ಚಾಚಿ ಕರೆದೆನೆಂದು” ಆತನು ಹೇಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಆದರೆ ಅವನು ಇಸ್ರಾಯೇಲ್ಯರನ್ನು ಕುರಿತು - ನನ್ನ ಮಾತಿಗೆ ಅವಿಧೇಯರಾಗಿ ಎದುರುಮಾತಾಡುವ ಜನರನ್ನು ನಾನು ದಿನವೆಲ್ಲಾ ಕೈಚಾಚಿ ಕರೆದೆನೆಂದು ಹೇಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಆದರೆ ಇಸ್ರೇಲಿನ ಜನರ ಬಗ್ಗೆ ದೇವರು: “ನಾನು ಆ ಜನರಿಗಾಗಿ ದಿನವೆಲ್ಲಾ ಕಾದುಕೊಂಡಿದ್ದೆನು, ಆದರೆ ಅವರು ವಿಧೇಯರಾಗಲಿಲ್ಲ; ನನ್ನನ್ನು ಹಿಂಬಾಲಿಸಲಿಲ್ಲ” ಎನ್ನುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಆದರೆ ಇಸ್ರಾಯೇಲರ ಕುರಿತಾಗಿ, “ನನಗೆ ಅವಿಧೇಯರೂ ಎದುರುಮಾತಾಡುವವರೂ ಆಗಿರುವ ಜನರಿಗೆ, ದಿನವೆಲ್ಲಾ ನಾನು ಕೈಚಾಚಿ ಕರೆದೆನು,” ಎಂದು ಹೇಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

21 ಖರೆ ಇಸ್ರಾಯೆಲಾಚ್ಯಾ ವಿಶಯಾತ್ ತೊ ಮನ್ತಾ, “ಮಾಕಾ ಖಾಲ್ತಿ ಹೊವ್ನ್ ಚಲಿನಸಲ್ಲ್ಯಾ ಅನಿ ಕಿಚ್ಚಾನಿ ಹೊತ್ತ್ಯಾ ಲೊಕಾಕ್ನಿ ಯಾಂಗ್ ಮಾರುನ್ ಧರುಕ್ ಮನುನ್ ಮಿಯಾ ಮಾಜಿ ಹಾತಾ, ದಿಸ್ ಬರ್ ತೆಂಚ್ಯಾ ಭೊತ್ಯಾನಿ ಧರುನ್ ಘೆವ್ನ್ ಹೊತ್ತೊ”.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 10:21
19 ತಿಳಿವುಗಳ ಹೋಲಿಕೆ  

ಇದಲ್ಲದೆ, ನಾನು ನನ್ನ ದಾಸರಾದ ಪ್ರವಾದಿಗಳನ್ನೆಲ್ಲ ನಿಮ್ಮ ಬಳಿಗೆ ನಿರಂತರವಾಗಿ ಕಳಿಸುತ್ತಾ ಬಂದೆ. ನೀವೆಲ್ಲರು ನಿಮ್ಮ ನಿಮ್ಮ ದುರ್ಮಾರ್ಗಗಳಿಂದ ಹಿಂದಿರುಗಿ ನಿಮ್ಮ ನಡತೆಗಳನ್ನು ಸರಿಪಡಿಸಿಕೊಳ್ಳಿರಿ. ಅನ್ಯದೇವತೆಗಳನ್ನು ಹಿಂಬಾಲಿಸಿ ಪೂಜಿಸದಿರಿ. ಹಾಗೆ ಮಾಡಿದರೆ ನಾನು ನಿಮಗೂ ನಿಮ್ಮ ಪೂರ್ವಜರಿಗೂ ಅನುಗ್ರಹಿಸಿದ ನಾಡಿನಲ್ಲಿ ಸುಖವಾಸಿಗಳಾಗಿರುವಿರಿ ಎಂದು ಅವರ ಮುಖಾಂತರ ಎಚ್ಚರಿಸಿದೆ. ಆದರೆ ನೀವು ಕೇಳಲಿಲ್ಲ, ಕಿವಿಗೊಡಲೂ ಇಲ್ಲ.


ನಾನು ನಿಮ್ಮನ್ನು ಕರೆದಾಗ ತಿರಸ್ಕರಿಸಿದಿರಿ. ನಾನು ನಿಮಗೆ ಕೈ ನೀಡಿದಾಗ ಗಮನಿಸದೆ ಹೋದಿರಿ.


ಬಳಿಕ ಅವಿಧೇಯರಾದರು, ನಿಮಗೆ ವಿರುದ್ಧ ದಂಗೆ ಎದ್ದರು; ನಿಮ್ಮ ಉಪದೇಶವನು ಉಲ್ಲಂಘಿಸಿದರು, ನಿಮ್ಮ ಪ್ರವಾದಿಗಳನು ಕೊಂದರು; ಹೌದು, ನಿಮಗೆ ಅಭಿಮುಖರಾಗಲು ಎಚ್ಚರಿಸಿದವರನೆ ಕೊಂದರು. ಕಡೆಗೆ ನಿಮ್ಮನ್ನೇ ಅಸಡ್ಡೆಮಾಡಿ, ಘೋರ ಅಪರಾಧಿಗಳಾದರು.


“ಜನರು ಎಡವಿಬೀಳುವ ಕಲ್ಲಿದು; ಅವರು ಮುಗ್ಗರಿಸಿ ಬೀಳುವ ಬಂಡೆಯಿದು.” ವಿಶ್ವಾಸವಿಡದವರಿಗಾದರೋ ಮೇಲಿನ ವಾಕ್ಯಗಳು ಅನ್ವಯಿಸುತ್ತವೆ. ಜನರು ದೇವರ ವಾಕ್ಯದಲ್ಲಿ ವಿಶ್ವಾಸವಿಡದಿರುವುದರಿಂದಲೇ ಎಡವಿಬೀಳುತ್ತಾರೆ. ಅವರ ಬಗ್ಗೆ ದೈವಸಂಕಲ್ಪವೂ ಇದೇ ಆಗಿತ್ತು.


ಯೆಹೂದ್ಯರಲ್ಲದ ಜನರಿಗೆ ಜೀವೋದ್ಧಾರವನ್ನು ತರುವ ಶುಭಸಂದೇಶವನ್ನು ನಾವು ಸಾರದಂತೆ ಅವರು ನಮ್ಮನ್ನು ತಡೆಗಟ್ಟುತ್ತಾರೆ. ಹೀಗೆ, ಅವರು ತಮ್ಮ ಪಾಪಕೃತ್ಯಗಳ ಪಟ್ಟಿಯನ್ನು ಸದಾ ಭರ್ತಿಮಾಡುತ್ತಾರೆ. ಕಡೆಗೆ, ದೇವರ ಕೋಪಾಗ್ನಿಯು ಅವರ ಮೇಲೆ ಬರುತ್ತದೆ.


ಸರ್ವೇಶ್ವರ ತಮ್ಮ ದಾಸರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ನಿರಂತರವಾಗಿ ಕಳಿಸುತ್ತಿದ್ದರು. ಆದರೂ ನೀವು ಗಮನಿಸಲಿಲ್ಲ; ಕಿವಿಗೊಡಲೂ ಇಲ್ಲ.


ಏಕೆಂದರೆ ನೀವು ಹಟಮಾರಿಗಳು, ಆಜ್ಞೆಗೆ ಒಳಗಾಗದವರೆಂಬುದು ನನಗೆ ತಿಳಿದೇ ಇದೆ. ನಾನು ಇನ್ನೂ ಜೀವದಿಂದಿರುವಾಗಲೇ ನೀವು ಸರ್ವೇಶ್ವರನಿಗೆ ವಿರುದ್ಧ ಪ್ರತಿಭಟಿಸಿದ್ದೀರಿ; ನಾನು ಹೋದ ತರುವಾಯ ನೀವು ಪ್ರತಿಭಟಿಸುವುದು ಮತ್ತಷ್ಟು ನಿಶ್ಚಯ.


“ಅದಲ್ಲದೆ ಅವರು ನನಗೆ, ‘ಈ ಜನರ ಸ್ವಭಾವವನ್ನು ನಾನು ನೋಡುತ್ತಾ ಬಂದಿದ್ದೇನೆ;


ಅಲ್ಲದೆ ಜನರು ಪಾಪಪರಿಹಾರ ಪಡೆಯಬೇಕಾದರೆ, ಪಶ್ಚಾತ್ತಾಪಪಟ್ಟು, ಪಾಪಕ್ಕೆ ವಿಮುಖರಾಗಿ, ದೈವಾಭಿಮುಖಿಗಳಾಗಬೇಕೆಂತಲೂ ಈ ಸಂದೇಶವನ್ನು ಜೆರುಸಲೇಮಿನಿಂದ ಮೊದಲ್ಗೊಂಡು ಎಲ್ಲಾ ಜನಾಂಗಗಳಿಗೂ ಆತನ ಹೆಸರಿನಲ್ಲೇ ಪ್ರಕಟಿಸಬೇಕೆಂತಲೂ ಮೊದಲೇ ಲಿಖಿತವಾಗಿತ್ತು.


ಆದ್ದರಿಂದ ಸೇನಾಧೀಶ್ವರ ಸರ್ವೇಶ್ವರನೂ ಇಸ್ರಯೇಲಿನ ದೇವರೂ ಆದ ನಾನು ಹೇಳುವುದನ್ನು ಗಮನಿಸು: ಯೆಹೂದ್ಯರಿಗೂ ಜೆರುಸಲೇಮಿನವರೆಲ್ಲರಿಗೂ ನಾನು ಕೊಟ್ಟ ಶಾಪದ ಕೇಡುಗಳನ್ನೆಲ್ಲಾ ಅವರ ಮೇಲೆ ಬರಮಾಡುವೆನು. ನಾನು ಹೇಳಿದರೂ ಅವರು ಕೇಳಲಿಲ್ಲ, ಕೂಗಿದರೂ ಉತ್ತರಕೊಡಲಿಲ್ಲ’.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು