ರೋಮಾಪುರದವರಿಗೆ 1:9 - ಕನ್ನಡ ಸತ್ಯವೇದವು C.L. Bible (BSI)9-10 ನಾನು ಪ್ರಾರ್ಥನೆ ಮಾಡುವಾಗಲೆಲ್ಲ ತಪ್ಪದೆ, ನಿಮ್ಮ ಪರವಾಗಿ ವಿಜ್ಞಾಪನೆ ಮಾಡುತ್ತೇನೆ. ದೈವಚಿತ್ತದಿಂದ ನಾನು ನಿಮ್ಮಲ್ಲಿಗೆ ಬರಲು ಈಗಲಾದರೂ ಅನುಕೂಲವಾಗಲೆಂದು ಬೇಡಿಕೊಳ್ಳುತ್ತೇನೆ. ಇದಕ್ಕೆ ದೇವರೇ ಸಾಕ್ಷಿ. ಅವರ ಪುತ್ರನನ್ನೇ ಕುರಿತಾದ ಶುಭಸಂದೇಶವನ್ನು ಸಾರುತ್ತಾ ದೈವಸೇವೆಯನ್ನು ಮನಃಪೂರ್ವಕವಾಗಿ ಮಾಡಿಕೊಂಡು ಬರುತ್ತಿದ್ದೇನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ನಾನು ಪ್ರಾರ್ಥನೆ ಮಾಡುವಾಗೆಲ್ಲಾ ಎಡೆಬಿಡದೆ ನಿಮಗೋಸ್ಕರ ವಿಜ್ಞಾಪನೆ ಮಾಡುತ್ತೇನೆ. ದೇವರ ಮಗನ ಸುವಾರ್ತೆಯನ್ನು ಸಾರುತ್ತಾ ದೈವಸೇವೆಯನ್ನು ಮನಃಪೂರ್ವಕವಾಗಿ ಮಾಡಿಕೊಂಡು ಬರುತ್ತಿರುವ ದೇವರೇ ನನಗೆ ಸಾಕ್ಷಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9-10 ನಾನು ಪ್ರಾರ್ಥನೆ ಮಾಡುವಾಗೆಲ್ಲಾ ತಪ್ಪದೆ ನಿಮಗೋಸ್ಕರ ವಿಜ್ಞಾಪನೆಮಾಡಿ ಇನ್ನು ಮೇಲೆಯಾದರೂ ನಿಮ್ಮ ಬಳಿಗೆ ಬರುವದಕ್ಕೆ ದೇವರ ಚಿತ್ತದಿಂದ ನನಗೆ ಹೇಗೂ ಅನುಕೂಲವಾಗಬೇಕೆಂದು ಬೇಡಿಕೊಳ್ಳುತ್ತೇನೆ; ಇದಕ್ಕೆ ದೇವರೇ ನನ್ನ ಸಾಕ್ಷಿ; ಆತನ ಮಗನ ಸುವಾರ್ತೆಯನ್ನು ಸಾರುತ್ತಾ ಆತನನ್ನೇ ನನ್ನ ಆತ್ಮದಲ್ಲಿ ಆರಾಧಿಸುವವನಾಗಿದ್ದೇನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9-10 ನಾನು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಖಂಡಿತವಾಗಿ ಜ್ಞಾಪಿಸಿಕೊಳ್ಳುತ್ತೇನೆ. ಇದು ಸತ್ಯವೆಂದು ದೇವರಿಗೆ ಗೊತ್ತಿದೆ. ದೇವರ ಮಗನ ವಿಷಯವಾದ ಸುವಾರ್ತೆಯನ್ನು ಜನರಿಗೆ ಸಾರುವುದರ ಮೂಲಕ ನಾನು ದೇವರನ್ನು ನನ್ನ ಆತ್ಮದಲ್ಲಿ ಆರಾಧಿಸುವವನಾಗಿದ್ದೇನೆ. ದೇವರ ಚಿತ್ತದಿಂದ, ನಿಮ್ಮ ಬಳಿಗೆ ಬರಲು ಅವಕಾಶವಾಗಬೇಕೆಂದು ಪ್ರಾರ್ಥಿಸುತ್ತೇನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ದೇವಪುತ್ರನ ಸುವಾರ್ತೆಯನ್ನು ಸಾರುವುದರಿಂದ ದೇವರನ್ನೇ ನನ್ನ ಆತ್ಮದಲ್ಲಿ ಸೇವೆ ಮಾಡುವವನಾಗಿದ್ದೇನೆ. ಇದಕ್ಕೆ ದೇವರೇ ನನ್ನ ಸಾಕ್ಷಿ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್9 ತೆಚ್ಯಾ ಲೆಕಾಚಿ ಬರಿ ಖಬರ್ ಸಾಂಗ್ತಲ್ಯಾ ವಿಶಯಾತ್ಲಿ ದೆವಾಚಿ ಸೆವಾ ಮಿಯಾ ಮಾಜ್ಯಾ ಸಗ್ಳ್ಯಾ ಮನಾನ್ ಕರುಕ್ ಲಾಗ್ಲಾ ಮನುನ್ ಮಿಯಾ ಖರೆಚ್ ಸಾಂಗ್ತಾ, ದೆವುಚ್ ಹೆಕಾ ಸಾಕ್ಷಿ, ಮಿಯಾ ಹರಿಎಗ್ದಾ ಮಾಗ್ನಿ ಕರ್‍ತಾನಾ ತುಮ್ಚಿ ಯಾದ್ ಕಾಡ್ತಾ ಮನುನ್ ದೆವಾಕ್ ಗೊತ್ತ್ ಹಾಯ್. ಅಧ್ಯಾಯವನ್ನು ನೋಡಿ |