Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 1:28 - ಕನ್ನಡ ಸತ್ಯವೇದವು C.L. Bible (BSI)

28 ಅವರು ತಮಗಿದ್ದ ದೇವರ ಜ್ಞಾನವನ್ನು ತಿರಸ್ಕರಿಸಿದ್ದರಿಂದ, ದೇವರು ಅವರನ್ನು ಅಶ್ಲೀಲ ನಡವಳಿಕೆಗೆ ಬಿಟ್ಟುಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಇದಲ್ಲದೆ ಅವರು ತಮಗಿದ್ದ ದೇವರ ಜ್ಞಾನವನ್ನು ತಿರಸ್ಕರಿಸಿದ್ದರಿಂದ, ಮಾಡಬಾರದ ಕೃತ್ಯಗಳನ್ನು ನಡಿಸುವವರಾಗುವಂತೆ ದೇವರು ಅವರನ್ನು ಅಶ್ಲೀಲ ನಡವಳಿಕೆಗೆ ಬಿಟ್ಟುಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಇದಲ್ಲದೆ ದೇವರ ಜ್ಞಾನವು ಅವರಿಗೆ ಇಷ್ಟವಿಲ್ಲದ್ದರಿಂದ ಅಲ್ಲದ ಕೃತ್ಯಗಳನ್ನು ನಡಿಸುವವರಾಗುವಂತೆ ದೇವರು ಅವರನ್ನು ಅನಿಷ್ಟಭಾವಕ್ಕೆ ಒಪ್ಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ದೇವರ ನಿಜ ಜ್ಞಾನವನ್ನು ಹೊಂದಿಕೊಳ್ಳಲು ಅವರಿಗೆ ಇಷ್ಟವಿಲ್ಲದ್ದರಿಂದ ದೇವರು ಅವರನ್ನು ಅವರ ಅಯೋಗ್ಯ ಭಾವಕ್ಕೆ ಒಪ್ಪಿಸಿಕೊಟ್ಟನು. ಆದ್ದರಿಂದ ಅವರು ತಾವು ಮಾಡಬಾರದ ಕೆಲಸಗಳನ್ನು ಮಾಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಇದಲ್ಲದೆ, ದೇವರನ್ನು ಒಪ್ಪಿಕೊಳ್ಳಲು ಅವರಿಗೆ ಇಷ್ಟವಿಲ್ಲದ್ದರಿಂದ ಅಲ್ಲದ ಕೃತ್ಯಗಳನ್ನು ನಡೆಸುವವರಾಗುವಂತೆ ದೇವರು ಅನಾಚಾರದ ಮನಸ್ಸಿಗೆ ಅವರನ್ನು ಒಪ್ಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

28 ಕಶ್ಯಾಕ್ ಮಟ್ಲ್ಯಾರ್, ತ್ಯಾ ಲೊಕಾನಿ ದೆವಾಚ್ಯಾ ವಿಶಯಾತ್ ಹೊತ್ತಿ ಖರಿ ಬುದ್ದ್ ಅಪ್ನಾಂಚ್ಯಾ ಮನಾತ್ನಿ ಥವ್ನ್ ಘೆವ್ಕ್ ಇನ್ಕಾರ್ ಕರ್‍ಲ್ಯಾನಾತ್, ದೆವಾನ್ ತೆಂಕಾ ತೆಂಚ್ಯಾ ಪೊಜ್ಡ್ಯಾ ಚಾಲಿಚ್ಯಾ ತಾಬೆತ್ ಸೊಡುನ್ ಸೊಡ್ಲ್ಯಾನಾಯ್. ತಸೆಮನುನ್ ತೆನಿ ನಕ್ಕೊ ಹೊಲ್ಲಿ ಬುರ್ಶಿ ಕಾಮಾ ಕರ್‍ತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 1:28
33 ತಿಳಿವುಗಳ ಹೋಲಿಕೆ  

ದೇವರನ್ನು ಅವರು ಅರಿತಿದ್ದರೂ ದೇವರೆಂದು ಗೌರವಿಸಲಿಲ್ಲ; ದೇವರಿಗೆ ಉಪಕಾರ ಸ್ಮರಣೆಯನ್ನು ಮಾಡಲಿಲ್ಲ. ಬದಲಾಗಿ ಅವರು ವ್ಯರ್ಥ ಆಲೋಚನೆಗಳಲ್ಲಿ ಮಗ್ನರಾದರು. ಅವರ ವಿವೇಕರಹಿತ ಮನಸ್ಸು ಅಂಧಕಾರಮಯ ಆಯಿತು.


ತಾವು ದೇವರನ್ನು ಬಲ್ಲವರೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ನಡತೆ ತದ್ವಿರುದ್ಧವಾಗಿರುತ್ತದೆ. ಇಂಥವರು ಅವಿಧೇಯರೂ ಅಸಹ್ಯರೂ ಆಗಿರುವುದರಿಂದ ಯಾವುದೇ ಸತ್ಕಾರ್ಯವನ್ನು ಮಾಡಲು ಅಯೋಗ್ಯರಾಗಿದ್ದಾರೆ.


‘ನೀನು (ಯೆರೆಮೀಯ) ವಾಸವಾಗಿರುವುದು ಮೋಸಗಾರರ ಮಧ್ಯೆ ಮೋಸಗಾರರಾಗಿರುವುದರಿಂದಲೆ ಅವರು ನನ್ನನ್ನು ಅರಿಯಲೊಲ್ಲರು’ ಎನ್ನುತ್ತಾರೆ ಸರ್ವೇಶ್ವರ.


ಆದುದರಿಂದ, ಮಾನವರು ಮನಸ್ಸಿನ ಆಶಾಪಾಶಗಳಿಗೆ ಬಲಿಯಾಗಿ ತಮ್ಮ ದೇಹಗಳಿಂದ ತಮ್ಮತಮ್ಮಲ್ಲೇ ಅಶ್ಲೀಲಕೃತ್ಯಗಳೆಸಗಲೆಂದು ದೇವರು ಅವರನ್ನು ಅಶುದ್ಧ ನಡತೆಗೆ ಬಿಟ್ಟುಬಿಟ್ಟರು.


ಯನ್ನ ಮತ್ತು ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆ, ಇವರು ಸತ್ಯವನ್ನು ಪ್ರತಿಭಟಿಸುತ್ತಾರೆ.


ಸರ್ವೇಶ್ವರ ಆದ ನಾನು ಅವರನ್ನು ತಳ್ಳಿಬಿಟ್ಟಿರುವುದರಿಂದ ಅವರು ಕಂದುಬೆಳ್ಳಿ ಎನಿಸಿಕೊಳ್ಳುವರು.”


ಜನರು ಜ್ಞಾನಹೀನರಾಗಿ ಅಳಿದುಹೋಗುತ್ತಿದ್ದಾರೆ. “ನೀವು ದೈವಜ್ಞಾನವನ್ನು ತಿರಸ್ಕರಿಸಿದ್ದೀರಿ; ನಾನು ಸಹ ಯಾಜಕವರ್ಗದಿಂದ ನಿಮ್ಮನ್ನು ವರ್ಜಿಸಿಬಿಡುತ್ತೇನೆ. ನೀವು ದೇವರ ಧರ್ಮೋಪದೇಶವನ್ನು ಮರೆತುಬಿಟ್ಟಿದ್ದೀರಿ; ನಾನು ನಿಮ್ಮ ಮಕ್ಕಳನ್ನು ಮರೆತುಬಿಡುತ್ತೇನೆ.


ಏಕೆಂದರೆ ಸುಜ್ಞಾನವನ್ನೇ ಅವರು ದ್ವೇಷಿಸಿದರು, ಸರ್ವೇಶ್ವರನಲ್ಲಿ ಭಯಭಕ್ತಿಯಿರಿಸದೆ ಹೋದರು.


“ಮೂಢರೇ, ಎಂದಿನ ತನಕ ಮೂಢರಾಗಿರಲಾಶಿಸುವಿರಿ? ಕುಚೋದ್ಯಗಾರರೇ, ಎಷ್ಟುಕಾಲ ಕುಚೋದ್ಯಗಾರರಾಗಿರಲಿಚ್ಚಿಸುವಿರಿ? ಮೂರ್ಖರೇ, ಎಷ್ಟರವರೆಗೆ ತಿಳುವಳಿಕೆಯನ್ನು ಹಗೆಮಾಡುವಿರಿ?


ಸರ್ವೇಶ್ವರನಲ್ಲಿ ಭಯಭಕ್ತಿಯೇ ಜ್ಞಾನಕ್ಕೆ ಮೂಲ; ಮೂರ್ಖರಿಗಾದರೋ ಜ್ಞಾನ, ಶಿಸ್ತು ಎಂದರೆ ತಾತ್ಸಾರ.


ಜಾಗೃತರಾಗಿರಿ, ದುರ್ಮಾರ್ಗವನ್ನು ಬಿಟ್ಟುಬಿಡಿ, ಸನ್ಮತಿಯುಳ್ಳವರಾಗಿರಿ. ದೇವರನ್ನು ಅರಿಯದ ಮೂಢರು ನಿಮ್ಮಲ್ಲಿ ಕೆಲವರು ಇದ್ದಾರೆ. ನಿಮಗೆ ನಾಚಿಕೆ ಆಗಲೆಂದೇ ಇದನ್ನು ಹೇಳುತ್ತಿದ್ದೇನೆ.


ಮಾನವರ ಎಲ್ಲಾ ಪಾಪಾಕ್ರಮಗಳ ಮೇಲೆ ದೇವರ ಕೋಪಾಗ್ನಿ ಸ್ವರ್ಗದಿಂದ ಎರಗುವುದೆಂದು ಪ್ರಕಟವಾಗುತ್ತಿದೆ. ಏಕೆಂದರೆ, ಅವರ ಅಕ್ರಮ ನಡತೆ ಸತ್ಯವನ್ನು ಅಡಗಿಸುತ್ತಿದೆ.


ಸರ್ವೇಶ್ವರ ಹೀಗೆನ್ನುತ್ತಾರೆ: ನನ್ನ ಜನರು ಮೂರ್ಖರು, ನನ್ನನ್ನು ತಿಳಿಯರು. ಪೆದ್ದ ಮಕ್ಕಳು, ಬುದ್ಧಿಯಿಲ್ಲದವರು ಕೇಡುಮಾಡುವುದರಲ್ಲಿ ಪ್ರವೀಣರು ಒಳಿತನ್ನು ಮಾಡಲು ಅರಿಯರು


ಹೊಲಸು ಮಾತುಗಳು, ಬರಡು ನುಡಿಗಳು, ಕುಚೋದ್ಯ ಪದಗಳು ಯಾವುವೂ ನಿಮಗೆ ತರವಲ್ಲ. ಪ್ರತಿಯಾಗಿ, ದೇವರಿಗೆ ನೀವು ಕೃತಜ್ಞತಾಸ್ತುತಿಮಾಡಿರಿ.


ಮಾನವರು ಈ ರೀತಿ ವರ್ತಿಸಿದ್ದರಿಂದಲೇ ದೇವರು ಅವರನ್ನು ತುಚ್ಛವಾದ ಕಾಮಾಭಿಲಾಷೆಗಳಿಗೆ ಬಿಟ್ಟುಬಿಟ್ಟರು. ಅವರ ಸ್ತ್ರೀಯರು, ಸ್ವಾಭಾವಿಕವಾದ ಭೋಗವನ್ನು ತೊರೆದು ಸ್ವಭಾವಕ್ಕೆ ವಿರುದ್ಧವಾದ ಕಾಮಕೃತ್ಯಗಳನ್ನು ಮಾಡಿದರು.


ಜ್ಞಾನವನ್ನು ಕೊಳ್ಳಲು ಮೂಢನ ಕೈಯಲ್ಲಿ ಹಣವೇಕೆ? ಇದನ್ನು ಕೊಳ್ಳಲು ಬೇಕಾದ ಬುದ್ಧಿಯೇ ಅವನಿಗಿಲ್ಲವಲ್ಲಾ!


ಆದರೆ, ಅವರು ಒಂದು ವಿಷಯವನ್ನು ಉದ್ದೇಶಪೂರ್ವಕವಾಗಿ ಮರೆತುಬಿಡುತ್ತಾರೆ. ಅದೇನೆಂದರೆ, ಪ್ರಾರಂಭದಲ್ಲಿದ್ದ ಭೂಮ್ಯಾಕಾಶಗಳು ದೇವರ ವಾಕ್ಯದಿಂದಲೇ ಉಂಟಾದವು. ಜಲದಿಂದ, ಜಲದ ಮೂಲಕ ಭೂಮಿ ಉಂಟಾಯಿತು.


ಆದಕಾರಣ, ನೀನು ಮಾಡಬೇಕಾದುದನ್ನು ಮಾಡು ಎಂದು ಆಜ್ಞಾಪಿಸಲು ಕ್ರಿಸ್ತಯೇಸುವಿನಲ್ಲಿ ನನಗೆ ಧೈರ್ಯ ಮತ್ತು ಅಧಿಕಾರಗಳಿವೆ.


ದೈವಜ್ಞಾನಕ್ಕೆ ವಿರುದ್ಧ ತಲೆ ಎತ್ತುವ ದುರ್ಗಗಳನ್ನು ಧ್ವಂಸಮಾಡಬಲ್ಲೆವು. ಮಾನವನ ಪ್ರತಿಯೊಂದು ಆಲೋಚನೆಗಳನ್ನೂ ಬಂಧಿಸಬಲ್ಲೆವು.


ಸತ್ತವರ ಪುನರುತ್ಥಾನದ ಬಗ್ಗೆ ಪೌಲನು ಮಾತಾಡಿದಾಗ ಕೆಲವರು ಪರಿಹಾಸ್ಯಮಾಡಿದರು. ಉಳಿದವರು, “ಈ ವಿಷಯದ ಬಗ್ಗೆ ನೀನು ಇನ್ನೊಮ್ಮೆ ಹೇಳಬಹುದು, ಆಗ ಕೇಳುತ್ತೇವೆ,” ಎಂದರು.


ನಿಮ್ಮ ಪಟ್ಟಣದಲ್ಲಿ ನಾನು ತಿರುಗಾಡುತ್ತಾ, ನೀವು ಪೂಜಿಸುವ ವಿಗ್ರಹಗಳನ್ನು ಗಮನಿಸುತ್ತಾ ಇದ್ದಾಗ ಒಂದು ಬಲಿಪೀಠವು ಕಣ್ಣಿಗೆ ಬಿದ್ದಿತು. ಅದರ ಮೇಲೆ ‘ಅಜ್ಞಾತ ದೇವರಿಗೆ’ ಎಂಬ ಲಿಖಿತವಿತ್ತು. ನೀವು ಅರಿಯದೆ ಆರಾಧಿಸುವ ಆ ದೇವರನ್ನೇ ಅರುಹಿಸಲು ನಾನು ಬಂದಿರುತ್ತೇನೆ.


ಜಗತ್ತಿನಲ್ಲಿ ಮನುಜರ ಕೆಟ್ಟತನವು ಹೆಚ್ಚುತ್ತಲೇ ಇತ್ತು. ಅವರ ಮನದಾಲೋಚನೆಗಳು ಸದಾ ಕೆಟ್ಟದಾಗಿದ್ದವು.


ಶುದ್ಧನಿಗಾತ ಪರಿಶುದ್ಧನು ಮೂರ್ಖನಿಗಾತ ಮಹಾವಕ್ರನು.


ದಂಡನೆ ಮೇಲೆ ದಂಡನೆಯನು ಅವರಿಗೆ ವಿಧಿಸು I ಅವರು ನಿರಪರಾಧಿಗಳೆಂಬುದನು ತಪ್ಪಿಸು II


“ಇದಲ್ಲದೆ, ‘ನಾನೇ ಸರ್ವೇಶ್ವರ’ ಎಂದು ಅವರು ತಿಳಿದುಕೊಳ್ಳುವಂತೆ ನಾನು ಅವರಿಗೆ ಅಹಿತವಾದ ಆಜ್ಞೆಗಳನ್ನೂ ಜೀವಾಧಾರವಲ್ಲದ ವಿಧಿಗಳನ್ನೂ ನೇಮಿಸಿದೆ.


ಇಸ್ರಯೇಲ್ ವಂಶದವರೆಲ್ಲರೂ ತಮ್ಮ ವಿಗ್ರಹಗಳ ನಿಮಿತ್ತ ನನ್ನನ್ನು ತೊರೆದುದ್ದರಿಂದ ನಾನು ಅವರನ್ನೆಲ್ಲಾ ಅವರ ಆಶಾಪಾಶದಲ್ಲೇ ಸಿಕ್ಕಿಸಿ ಹಿಡಿಯುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು