Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 1:23 - ಕನ್ನಡ ಸತ್ಯವೇದವು C.L. Bible (BSI)

23 ಅಮರದೇವರನ್ನು ಆರಾಧಿಸುವುದನ್ನು ಬಿಟ್ಟು ಅಳಿದುಹೋಗುವಂಥ ನರಮಾನವರ, ಪ್ರಾಣಿಪಕ್ಷಿಗಳ, ಸರ್ಪಾದಿಗಳ ವಿಗ್ರಹಗಳನ್ನು ಮಾಡಿ ಆರಾಧಿಸತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಲಯವಿಲ್ಲದ ದೇವರ ಮಹಿಮೆಯನ್ನು ಅವರು ನಾಶವಾಗುವ ಮನುಷ್ಯ, ಪಶು, ಪಕ್ಷಿ, ಸರಿಸೃಪಗಳು ಇತ್ಯಾದಿಗಳ ರೂಪಗಳೊಂದಿಗೆ ಬದಲಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಲಯವಿಲ್ಲದ ದೇವರ ಮಹಿಮೆಯನ್ನು ಬಿಟ್ಟು ಅದಕ್ಕೆ ಬದಲಾಗಿ ಲಯವಾಗುವ ಮನುಷ್ಯ ಪಶು ಪಕ್ಷಿ ಸರ್ಪಾದಿಗಳ ಮೂರ್ತಿಯನ್ನು ಮಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಸದಾಕಾಲ ಜೀವಿಸುವ ದೇವರ ಮಹಿಮೆಯನ್ನು ಅವರು ಬಿಟ್ಟುಕೊಟ್ಟು ಮನುಷ್ಯರಂತಿರುವ, ಪಕ್ಷಿಗಳಂತಿರುವ, ಪ್ರಾಣಿಗಳಂತಿರುವ ಮತ್ತು ಹಾವುಗಳಂತಿರುವ ವಿಗ್ರಹಗಳನ್ನು ಮಾಡಿಕೊಂಡು ಅವುಗಳನ್ನು ಆರಾಧಿಸತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಲಯವಿಲ್ಲದ ದೇವರ ಮಹಿಮೆಯನ್ನು ಲಯವಾಗುವ ಮನುಷ್ಯ, ಪಶು, ಪಕ್ಷಿ, ಸರ್ಪಾದಿಗಳ ಮೂರ್ತಿಗಳೊಂದಿಗೆ ಬದಲಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

23 ಸದಾ ಸರ್ವತಾಕ್ ರ್‍ಹಾತಲ್ಯಾ ದೆವಾಚೆ ಆರಾದನ್ ಕರ್‍ತಲೆ ಸೊಡುನ್, ನಾಸ್ ಹೊವ್ನ್ ಜಾತಲ್ಯಾ ಮಾನ್ಸಾಂಚ್ಯಾ, ಜನಾವರಾಂಚ್ಯಾ, ಫಾಂಕ್ರಾಂಚ್ಯಾ, ಸಾಪಾಂಚ್ಯಾ ಅನಿ ಪೊಟಾನಿ ಜಾತಲ್ಯಾ ಜನಾವರಾಂಚ್ಯಾ ಮುರ್ತಿಯಾಕ್ನಿ ತೆನಿ ಆರಾದನ್ ಕರ್‍ತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 1:23
16 ತಿಳಿವುಗಳ ಹೋಲಿಕೆ  

ಈಪರಿ ತೊರೆದುಬಿಟ್ಟರು ತಮ್ಮ ಮಹಿಮಾ ದೇವರನು I ಆರಿಸಕೊಂಡರು ಹುಲ್ಲು ತಿನ್ನುವ ಬಸವನ ವಿಗ್ರಹವನು II


ತನ್ನ ದೇವತೆಗಳು ದೇವರಲ್ಲದೆ ಇದ್ದರೂ ಅವುಗಳನ್ನು ಯಾವ ಜನಾಂಗವಾದರು ಬದಲಾಯಿಸಿಕೊಂಡಿತೋ? ಆದರೆ ನನ್ನ ಜನ, ತಮ್ಮ ಮಹಿಮೆಯಾದ ನನ್ನನ್ನು ತೊರೆದು ನಿರರ್ಥಕವಾದುವುಗಳನ್ನು ಆರಿಸಿಕೊಂಡಿದ್ದಾರೆ!


“ನಾವು ದೇವರ ಮಕ್ಕಳಾಗಿರುವುದರಿಂದ ಜನರು ಕಲಾಕುಶಲತೆಯಿಂದಲೂ ಕಲ್ಪನೆಯಿಂದಲೂ ರೂಪಿಸಿದ ಚಿನ್ನ, ಬೆಳ್ಳಿ, ಶಿಲೆಗಳ ಪ್ರತಿಮೆಗೆ ದೇವರು ಸಮಾನರೆಂದು ಭಾವಿಸಲಾಗದು.


ಅವರು ದೇವರ ಸತ್ಯವನ್ನು ಬಿಟ್ಟು ಅಸತ್ಯವಾದುದನ್ನು ಅಂಗೀಕರಿಸಿದರು; ಸೃಷ್ಟಿಕರ್ತನನ್ನು ಆರಾಧಿಸದೆ, ಸೃಷ್ಟಿಯಾದ ವಸ್ತುಗಳನ್ನೇ ಆರಾಧಿಸಿ, ಸೇವೆಸಲ್ಲಿಸಿದರು. ಸರ್ವಕಾಲಕ್ಕೂ ಸೃಷ್ಟಿಕರ್ತರೊಬ್ಬರಿಗೇ ಸ್ತುತಿಸ್ತೋತ್ರ ಸಲ್ಲತಕ್ಕದ್ದು. ಆಮೆನ್.


ಕ್ರೈಸ್ತರಲ್ಲದವರು ಮಾಡಲು ಇಚ್ಛಿಸುವುದನ್ನೆಲ್ಲಾ ನೀವು ಗತಕಾಲದಲ್ಲಿ ಮಾಡಿದ್ದು ಸಾಕು. ಆಗ ನೀವು ಅಶ್ಲೀಲತೆ, ಕಾಮ, ಕುಡುಕುತನ, ಅಮಲೇರುವಿಕೆ, ದುಂದೌತಣ ಮತ್ತು ಯೋಗ್ಯವಲ್ಲದ ವಿಗ್ರಹಾರಾಧನೆ - ಈ ಮುಂತಾದವುಗಳಿಗೆ ಒಳಗಾಗಿದ್ದಿರಿ.


ಅಕಟಾ, ಎಲ್ಲಾ ಜಾತಿಯ ಕ್ರಿಮಿಕೀಟಗಳು, ಅಸಹ್ಯ ಮೃಗಗಳು ಹಾಗು ಇಸ್ರಯೇಲ್ ವಂಶದವರು ಪೂಜಿಸುವ ಸಕಲ ಮೂರ್ತಿಗಳು ಆ ಗೋಡೆಯ ಸುತ್ತಲೂ ಚಿತ್ರಿತವಾಗಿದ್ದವು.


‘ಆಕಾಶದಲ್ಲಾಗಲಿ, ಭೂಮಿಯಲ್ಲಾಗಲಿ, ಭೂಮಿಯ ಕೆಳಗಿನ ನೀರಿನಲ್ಲಾಗಲಿ ಇರುವ ಯಾವುದರ ರೂಪವನ್ನೂ ಅಥವಾ ವಿಗ್ರಹವನ್ನೂ ಮಾಡಿಕೊಳ್ಳಬೇಡ.


ಬಡಗಿಯು ಮರಕ್ಕೆ ನೂಲು ಹಿಡಿದು, ಮೊಳೆಯಿಂದ ಗೆರೆ ಎಳೆಯುತ್ತಾನೆ; ಕೈವಾರದಿಂದ ಗುರುತಿಸುತ್ತಾನೆ, ಉಳಿ ಬಾಚಿಗಳಿಂದ ಕೆತ್ತುತ್ತಾನೆ; ಸುಂದರವಾದ ನರನಂತೆ ರೂಪಿಸಿ ಮಂದಿರದಲ್ಲಿ ಇಡಲು ಯೋಗ್ಯವಾಗುವಂತೆ ಮಾಡುತ್ತಾನೆ.


ಇಂತಿರಲು ಯಾರಿಗೆ ಹೋಲಿಸಬಲ್ಲಿರಿ ದೇವರನು? ಕೊಡಬಲ್ಲಿರಾ ಆತನಿಗೆ ಯಾವುದಾದರೊಂದು ಉಪಮಾನವನು?


ನೀವು ಅನ್ಯಮತಸ್ಥರಾಗಿದ್ದಾಗ, ನಿಮಗೆ ಮನಸ್ಸು ಬಂದಂತೆಲ್ಲಾ ಮೂಕ ವಿಗ್ರಹಗಳ ಬಳಿ ಹೋಗಿ ಬರುತ್ತಿದ್ದಿರಿ; ಇದನ್ನು ನೀವೇ ಬಲ್ಲಿರಿ.


ಕಣ್ಣೆತ್ತಿ, ದಿಟ್ಟಿಸಿನೋಡಿ ಆಕಾಶದತ್ತ ಯಾರು ಆ ತಾರೆಗಳನ್ನು ರಚಿಸಿದಾತ? ಆ ತಾರಾ ಸಮೂಹವನ್ನು ಕ್ರಮಾನುಸಾರ ನಡೆಸುವಾತ, ಒಂದೊಂದನ್ನೂ ಹೆಸರಿಟ್ಟು ಕರೆಯುವಾತ, ಅವುಗಳಲ್ಲಿ ಒಂದನ್ನೂ ಕಾಣೆಯಾಗಲು ಬಿಡದಾತ, ಅಷ್ಟು ಬಲಾಢ್ಯನು, ಶಕ್ತಿವಂತನು ಆತ


ಆ ವಿಪತ್ತುಗಳಿಂದ ಸಾಯದೆ ಬದುಕಿದ್ದ ಜನರು ತಮ್ಮ ದುಷ್ಕೃತ್ಯಗಳನ್ನು ಬಿಟ್ಟು ದೇವರಿಗೆ ಅಭಿಮುಖರಾಗಲೇ ಇಲ್ಲ; ದೆವ್ವಾರಾಧನೆಯನ್ನು ತ್ಯಜಿಸಲಿಲ್ಲ; ನೋಡಲಾರದ, ಕೇಳಿಸಿಕೊಳ್ಳಲಾರದ ಮತ್ತು ನಡೆಯಲಾರದ ವಿಗ್ರಹಗಳನ್ನು ಚಿನ್ನ, ಬೆಳ್ಳಿ, ತಾಮ್ರ, ಕಲ್ಲು ಮತ್ತು ಮರಗಳಲ್ಲಿ ಮಾಡಿ ಪೂಜಿಸುವುದನ್ನು ಕೈಬಿಡಲಿಲ್ಲ.


ಅದರಲ್ಲಿ, ಹರಿದಾಡುವ ಕ್ರಿಮಿಕೀಟಗಳು, ಹಾರಾಡುವ ಪಕ್ಷಿಗಳು ಮತ್ತು ಎಲ್ಲಾ ತರಹದ ಪ್ರಾಣಿಗಳು ಇದ್ದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು