ರೋಮಾಪುರದವರಿಗೆ 1:21 - ಕನ್ನಡ ಸತ್ಯವೇದವು C.L. Bible (BSI)21 ದೇವರನ್ನು ಅವರು ಅರಿತಿದ್ದರೂ ದೇವರೆಂದು ಗೌರವಿಸಲಿಲ್ಲ; ದೇವರಿಗೆ ಉಪಕಾರ ಸ್ಮರಣೆಯನ್ನು ಮಾಡಲಿಲ್ಲ. ಬದಲಾಗಿ ಅವರು ವ್ಯರ್ಥ ಆಲೋಚನೆಗಳಲ್ಲಿ ಮಗ್ನರಾದರು. ಅವರ ವಿವೇಕರಹಿತ ಮನಸ್ಸು ಅಂಧಕಾರಮಯ ಆಯಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ಯಾಕೆಂದರೆ ದೇವರ ವಿಷಯವಾಗಿ ಅವರಿಗೆ ತಿಳಿವಳಿಕೆಯಿದ್ದರೂ ಅವರು ಆತನನ್ನು ದೇವರೆಂದು ಮಹಿಮೆಪಡಿಸಲಿಲ್ಲ. ಆತನ ಉಪಕಾರಗಳನ್ನು ನೆನಸಿ ಆತನನ್ನು ಸ್ತುತಿಸಲಿಲ್ಲ. ಅವರು ಎಷ್ಟೇ ವಿಚಾರ ಮಾಡಿದರೂ ಫಲ ಕಾಣಲಿಲ್ಲ. ವಿವೇಕವಿಲ್ಲದ ಅವರ ಮನಸ್ಸು ಕತ್ತಲಾಗಿಬಿಟ್ಟಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ಯಾಕಂದರೆ ದೇವರ ವಿಷಯವಾಗಿ ಅವರಿಗೆ ತಿಳುವಳಿಕೆಯಿದ್ದರೂ ಅವರು ಆತನನ್ನು ದೇವರೆಂದು ಘನಪಡಿಸಲಿಲ್ಲ; ಆತನ ಉಪಕಾರಗಳನ್ನು ನೆನಸಿ ಆತನನ್ನು ಸ್ತುತಿಸಲಿಲ್ಲ. ಅವರು ವಿಚಾರ ಮಾಡಿಮಾಡಿ ಫಲ ಕಾಣಲಿಲ್ಲ; ವಿವೇಕವಿಲ್ಲದ ಅವರ ಮನಸ್ಸು ಕತ್ತಲಾಯಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್21 ಜನರು ದೇವರನ್ನು ತಿಳಿದಿದ್ದರೂ ದೇವರನ್ನು ಮಹಿಮೆಪಡಿಸಲಿಲ್ಲ, ಆತನಿಗೆ ಕೃತಜ್ಞತೆಯನ್ನು ಸಲ್ಲಿಸಲಿಲ್ಲ. ಜನರ ಆಲೋಚನೆಯು ನಿಷ್ಪ್ರಯೋಜಕವಾಯಿತು. ಅವರ ಮೂಢಮನಸ್ಸುಗಳು ಕತ್ತಲೆಯಿಂದ ತುಂಬಿಹೋದವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 ಏಕೆಂದರೆ ದೇವರನ್ನು ಅವರು ತಿಳಿದಿದ್ದರೂ ದೇವರೆಂದು ಮಹಿಮೆ ಪಡಿಸಲಿಲ್ಲ, ದೇವರ ಉಪಕಾರ ಸ್ಮರಿಸಲಿಲ್ಲ. ಆದರೆ ಅವರು ತಮ್ಮ ವಿಚಾರಗಳಲ್ಲಿ ವ್ಯರ್ಥರಾದರು. ವಿವೇಕವಿಲ್ಲದ ಅವರ ಹೃದಯವು ಕತ್ತಲಾಯಿತು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್21 ಕಶ್ಯಾಕ್ ಮಟ್ಲ್ಯಾರ್, ದೆವಾಕ್ ತೆನಿ ವಳಕ್ತ್ಯಾತ್ ಹೊಯ್, ಖರೆ ತೆಕಾ ಸಮಂದ್‍ಪಡಲ್ಲೊ ಅನಿ ದಿವ್ಕ್ ಪಾಜೆ ಹೊಲ್ಲೊ ಮಾನ್ ತೆನಿ ದಿನ್ಯಾತ್, ನಾಹೊಲ್ಯಾರ್ ತೆಕಾ ಧನ್ಯವಾದ್ ಸೈತ್ ದಿನ್ಯಾತ್, ಹೆಚ್ಯಾ ಬದ್ಲಾಕ್, ತೆಂಚ್ಯಾ ಯವ್ಜನ್ಯಾ ಸಗ್ಳ್ಯಾ ರಿತಿನ್ ಅರ್ತ್ ನಸಲ್ಲ್ಯಾ ಹೊವ್ನ್ ಗೆಲ್ಯಾತ್, ಅನಿ ತೆಂಚ್ಯಾ ಖಾಲಿ ಅಸಲ್ಲ್ಯಾ ಮನಾತ್ನಿ ಕಾಳೊಕ್ ಭರುನ್ ಪಡ್ಲಾ. ಅಧ್ಯಾಯವನ್ನು ನೋಡಿ |