Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 1:12 - ಕನ್ನಡ ಸತ್ಯವೇದವು C.L. Bible (BSI)

12 ಅಂದರೆ, ನನ್ನ ವಿಶ್ವಾಸದಿಂದ ನೀವೂ ನಿಮ್ಮ ವಿಶ್ವಾಸದಿಂದ ನಾನೂ - ಪರಸ್ಪರ ಪ್ರಯೋಜನವನ್ನು ಪಡೆಯಬೇಕೆಂಬುದೇ ನನ್ನ ಆಶಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಅಂದರೆ ನಾವು ಹೊಂದಿರುವ ನಂಬಿಕೆಯಿಂದ ನಾವು ಒಬ್ಬರಿಗೊಬ್ಬರು ಸಹಾಯ ಮಾಡಬೇಕೆಂಬುದು ನನ್ನ ಅಪೇಕ್ಷೆ. ನಿಮ್ಮ ನಂಬಿಕೆ ನನಗೆ ಸಹಾಯ ಮಾಡುತ್ತದೆ ಮತ್ತು ನನ್ನ ನಂಬಿಕೆ ನಿಮಗೆ ಸಹಾಯ ಮಾಡುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಹೀಗೆ ನಾವು ಒಬ್ಬರಿಂದೊಬ್ಬರ ನಂಬಿಕೆಯಿಂದ ಪರಸ್ಪರ ಪ್ರೋತ್ಸಾಹಗೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

12 ಮಿಯಾ ಸಾಂಗಲ್ಲೆ ಕಾಯ್ ಮಟ್ಲ್ಯಾರ್, ಮಾಜ್ಯಾ ವಿಶ್ವಾಸಾ ವೈನಾ ತುಮ್ಕಾ ಅನಿ ತುಮ್ಚ್ಯಾ ವಿಶ್ವಾಸಾ ವೈನಾ ಮಾಕಾ ಮಜತ್ ಹೊತಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 1:12
17 ತಿಳಿವುಗಳ ಹೋಲಿಕೆ  

ನಮ್ಮ ದೇವರ ಮತ್ತು ಉದ್ಧಾರಕ ಯೇಸುಕ್ರಿಸ್ತರ ಸತ್ಸಂಬಂಧದ ಮೂಲಕ ನಮ್ಮಂತೆಯೇ ಅಮೂಲ್ಯವಾದ ವಿಶ್ವಾಸವನ್ನು ಹೊಂದಿರುವ ಭಕ್ತಾದಿಗಳಿಗೆ - ಯೇಸುಕ್ರಿಸ್ತರ ದಾಸನೂ ಪ್ರೇಷಿತನೂ ಆದ ಸಿಮೋನ ಪೇತ್ರನು ಬರೆಯುವ ಪತ್ರ:


ಅಷ್ಟೇ ಅಲ್ಲ, ನೀವೆಲ್ಲರೂ ತೀತನ ಮನಸ್ಸನ್ನು ತಣಿಸಿದ್ದರಿಂದ ಆತನ ಸಂತೋಷವನ್ನು ಕಂಡು ನಾವು ಮತ್ತಷ್ಟು ತೃಪ್ತರಾಗಿದ್ದೇವೆ.


ಅನಂತರ ದೇವರ ಚಿತ್ತವಾದಲ್ಲಿ ನಾನು ಸಂತೋಷದಿಂದ ನಿಮ್ಮಲ್ಲಿ ಬರುತ್ತೇನೆ. ನಿಮ್ಮ ಸಂಗಡವಿದ್ದು ವಿಶ್ರಾಂತಿಪಡೆಯುತ್ತೇನೆ.


ಬಾರ್ನಬನು ಅಲ್ಲಿಗೆ ಬಂದು ದೇವರ ಕೃಪಾಕಾರ್ಯವನ್ನು ಕಂಡು ಸಂತೋಷಪಟ್ಟನು. ಪ್ರಭುವಿಗೆ ದೃಢಮನಸ್ಸಿನಿಂದ ಪ್ರಾಮಾಣಿಕರಾಗಿರುವಂತೆ ಪ್ರೋತ್ಸಾಹಿಸಿದನು.


ಪ್ರಿಯ ಸಹೋದರರೇ, ನಮ್ಮೆಲ್ಲರಿಗೂ ಲಭಿಸಿರುವ ಜೀವೋದ್ಧಾರವನ್ನು ಕುರಿತು ಬರೆಯಲು ಅತ್ಯಾಸಕ್ತನಾಗಿದ್ದೆನು. ಆದರೆ, ದೇವಜನರಿಗೆ ಒಮ್ಮೆಗೇ ಶಾಶ್ವತವಾಗಿ ಕೊಡಲಾಗಿರುವ ವಿಶ್ವಾಸವನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೋರಾಡಬೇಕೆಂದು ನಿಮ್ಮನ್ನು ಪ್ರೋತ್ಸಾಹಿಸಿ ಬರೆಯುವುದು ಅವಶ್ಯವೆಂದು ತೋರಿತು.


ನಿನ್ನ ಮಕ್ಕಳಲ್ಲಿ ಕೆಲವರು ಪಿತನು ವಿಧಿಸಿದಂತೆ ಸತ್ಯಸಂಧರಾಗಿ ನಡೆಯುವುದನ್ನು ಕಂಡು ನನಗಾದ ಆನಂದ ಅಷ್ಟಿಷ್ಟಲ್ಲ.


ನಮ್ಮೆಲ್ಲರಿಗೂ ಪ್ರಭು ಒಬ್ಬರೇ; ವಿಶ್ವಾಸವೂ ಒಂದೇ; ದೀಕ್ಷಾಸ್ನಾನವೂ ಒಂದೇ.


ನಾನು ಸ್ಪೇಯಿನ್ ದೇಶಕ್ಕೆ ಹೋಗುವ ಮಾರ್ಗದಲ್ಲಿ ಮೊದಲು ನಿಮ್ಮನ್ನು ಕಾಣಬೇಕೆಂದಿದ್ದೇನೆ. ಸ್ವಲ್ಪಕಾಲ ನಿಮ್ಮೊಡನೆ ಸಂತೋಷವಾಗಿ ತಂಗಿದ್ದು ಬಳಿಕ ನಿಮ್ಮ ಸಹಾಯದಿಂದ ಆ ದೇಶಕ್ಕೆ ಪ್ರಯಾಣವನ್ನು ಮುಂದುವರಿಸುತ್ತೇನೆ.


ನಾನು ನಿಮ್ಮನ್ನು ಕಂಡು, ನಿಮ್ಮೊಡನೆ ಅಧ್ಯಾತ್ಮಿಕ ವರಗಳನ್ನು ಹಂಚಿಕೊಂಡು, ನಿಮ್ಮನ್ನು ದೃಢಪಡಿಸಲು ಅತ್ಯಾಸಕ್ತಿಯಿಂದಿದ್ದೇನೆ.


ಸಹೋದರರೇ, ಈ ವಿಷಯ ನಿಮಗೆ ತಿಳಿದಿರಲಿ; ನನ್ನ ಸೇವೆ ಇತರ ಜನರಲ್ಲಿ ಫಲಪ್ರದವಾದಂತೆ ನಿಮ್ಮಲ್ಲೂ ಫಲಪ್ರದವಾಗಬೇಕೆಂಬ ಉದ್ದೇಶದಿಂದ ನಿಮ್ಮ ಬಳಿಗೆ ಬರಲು ನಾನು ಅನೇಕ ಸಾರಿ ಪ್ರಯತ್ನಿಸಿದೆನು. ಆದರೆ, ಕಾರಣಾಂತರಗಳಿಂದ ಇದುವರೆಗೂ ಬರಲು ಸಾಧ್ಯವಾಗಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು