8-9 ಅದಕ್ಕೆ ರೂತಳು: “ಒಡೆಯಾ, ನಾನು ನಿಮ್ಮ ದಾಸಿ ರೂತಳು. ನೀವು ನನ್ನ ಹತ್ತಿರದ ನೆಂಟರಾಗಿ ಇರುವುದರಿಂದ ದಯವಿಟ್ಟು ನಿಮ್ಮ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕಿ,” ಎಂದು ಕೇಳಿಕೊಂಡಳು.
ಇತ್ತ ಬೋವಜನು ಅನ್ನಪಾನ ಮಾಡಿ ಸಂತುಷ್ಟನಾಗಿದ್ದನು. ಅನಂತರ ಜವೆಗೋದಿಯ ರಾಶಿಯ ಬಳಿ ಹೋಗಿ ಮಲಗಿಕೊಂಡನು. ರೂತಳು ನಿಶ್ಯಬ್ಧವಾಗಿ ಅವನ ಬಳಿಗೆ ಹೋದಳು. ಅವನ ಪಾದಗಳ ಮೇಲಿದ್ದ ಹೊದಿಕೆಯನ್ನು ಮೆತ್ತಗೆ ಸರಿಸಿ, ಅಲ್ಲೇ ಮಲಗಿಕೊಂಡಳು. ಸುಮಾರು ನಡುರಾತ್ರಿಯಲ್ಲಿ ಅವನಿಗೆ ತಟ್ಟನೆ ಎಚ್ಚರವಾಯಿತು. ಬಗ್ಗಿ ನೋಡಿದಾಗ ಸ್ತ್ರೀಯೊಬ್ಬಳು ಪಾದಗಳ ಬಳಿ ಮಲಗಿರುವುದನ್ನು ಕಂಡು ಚಕಿತಗೊಂಡು, “ನೀನು ಯಾರು?” ಎಂದು ಕೇಳಿದನು.