ರೂತಳು 2:19 - ಕನ್ನಡ ಸತ್ಯವೇದವು C.L. Bible (BSI)19 ಅದನ್ನು ನೋಡಿ ನವೊಮಿ, “ನೀನು ಈ ದಿನ ಎಲ್ಲಿ ಹಕ್ಕಲಾಯ್ದೆ? ಯಾರ ಹೊಲದಲ್ಲಿ ಕೆಲಸಮಾಡಿದೆ? ನಿನಗೆ ದಯೆ ತೋರಿಸಿದವನಿಗೆ ಶುಭವಾಗಲಿ!” ಎಂದಳು. ಅದಕ್ಕೆ ರೂತಳು, “ನಾನು ತೆನೆ ಆಯ್ದುಕೊಂಡ ಹೊಲವು ಬೋವಜನದು,” ಎಂದು ಹೇಳಿದಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಅತ್ತೆಯು “ನೀನು ಈ ಹೊತ್ತು ಯಾರ ಹೊಲದಲ್ಲಿ ಹಕ್ಕಲಾಯ್ದಿ? ಎಲ್ಲಿ ಕೆಲಸಮಾಡಿದಿ? ನಿನ್ನನ್ನು ಕಟಾಕ್ಷಿಸಿದವನಿಗೆ ಶುಭವಾಗಲಿ” ಎನ್ನಲು ರೂತಳು ನಾನು ಹಕ್ಕಲಾಯ್ದ ಹೊಲದ ಯಜಮಾನನ ಹೆಸರು, ಬೋವಜನೆಂದು ತಿಳಿಸಿದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಅತ್ತೆಯು - ನೀನು ಈ ಹೊತ್ತು ಯಾರ ಹೊಲದಲ್ಲಿ ಹಕ್ಕಲಾಯ್ದಿ? ಎಲ್ಲಿ ಕೆಲಸ ಮಾಡಿದಿ? ನಿನ್ನನ್ನು ಕಟಾಕ್ಷಿಸಿದವನಿಗೆ ಶುಭವಾಗಲಿ ಎನ್ನಲು ರೂತಳು - ನಾನು ಯಾವನ ಹೊಲದಲ್ಲಿ ಹಕ್ಕಲಾಯ್ದೆನೋ ಅವನ ಹೆಸರು ಬೋವಜನೆಂದು ತಿಳಿಸಿದಳು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ಅವಳ ಅತ್ತೆಯು ಅವಳಿಗೆ, “ಈ ಧಾನ್ಯವನ್ನೆಲ್ಲಾ ನೀನು ಎಲ್ಲಿಂದ ಶೇಖರಿಸಿದೆ? ನೀನು ಎಲ್ಲಿ ಕೆಲಸ ಮಾಡಿದೆ? ನಿನಗೆ ಸಹಾಯ ಮಾಡಿದ ಮನುಷ್ಯನಿಗೆ ಶುಭವಾಗಲಿ” ಎಂದಳು. ಅದಕ್ಕೆ ರೂತಳು, “ನಾನು ಇಂದು ಯಾರ ಹತ್ತಿರ ಕೆಲಸ ಮಾಡಿದೆನೋ ಆ ಮನುಷ್ಯನ ಹೆಸರು ಬೋವಜ” ಎಂದು ಹೇಳಿದಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಆಗ ರೂತಳ ಅತ್ತೆಯು ಆಕೆಗೆ, “ನೀನು ಈ ಹೊತ್ತು ಎಲ್ಲಿ ಹಕ್ಕಲಾದುಕೊಂಡೆ? ಎಲ್ಲಿ ಕೆಲಸಮಾಡಿದೆ? ನಿನ್ನನ್ನು ಪರಾಮರಿಸಿದವನಿಗೆ ಆಶೀರ್ವಾದವಾಗಲಿ,” ಎಂದಳು. ಅದಕ್ಕವಳು ತಾನು ಯಾರ ಹತ್ತಿರ ಕೆಲಸಮಾಡಿದಳೋ ಅದನ್ನು ತನ್ನ ಅತ್ತೆಗೆ ತಿಳಿಸಿ, “ನಾನು ಈ ಹೊತ್ತು ಕೆಲಸ ಮಾಡಿದವನ ಹೆಸರು ಬೋವಜ,” ಎಂದು ಹೇಳಿದಳು. ಅಧ್ಯಾಯವನ್ನು ನೋಡಿ |