ಯೋಹಾನ 8:52 - ಕನ್ನಡ ಸತ್ಯವೇದವು C.L. Bible (BSI)52 “ನೀನು ದೆವ್ವಹಿಡಿದವನೆಂದು ಈಗ ನಮಗೆ ಸ್ಪಷ್ಟವಾಯಿತು. ಅಬ್ರಹಾಮನು ಸತ್ತುಹೋದನು; ಪ್ರವಾದಿಗಳೂ ಸತ್ತುಹೋದರು. ಆದರೂ ನೀನು, ‘ನನ್ನ ಮಾತಿಗೆ ಶರಣಾಗಿ ನಡೆಯುವವನು ಎಂದೆಂದಿಗೂ ಸಾವಿಗೆ ತುತ್ತಾಗನು,’ ಎಂದು ಹೇಳುತ್ತಿರುವೆ; ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201952 ಅದಕ್ಕೆ ಯೆಹೂದ್ಯರು “ನೀನು ದೆವ್ವಹಿಡಿದವನೆಂದು ಈಗ ನಮಗೆ ತಿಳಿಯಿತು. ಅಬ್ರಹಾಮನು ಸತ್ತನು ಮತ್ತು ಪ್ರವಾದಿಗಳೂ ಸತ್ತರು, ಆದರೆ ನೀನು ‘ನನ್ನ ವಾಕ್ಯಕ್ಕೆ ವಿಧೇಯನಾದರೆ ಅವನು ನಿತ್ಯಮರಣವನ್ನು ಅನುಭವಿಸುವುದಿಲ್ಲ’ ಎಂದು ಹೇಳುತ್ತೀಯಲ್ಲಾ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)52 ಅದಕ್ಕೆ ಯೆಹೂದ್ಯರು - ನೀನು ದೆವ್ವಹಿಡಿದವನೆಂದು ಈಗ ನಮಗೆ ತಿಳಿಯಿತು; ಅಬ್ರಹಾಮನು ಸತ್ತನು. ಪ್ರವಾದಿಗಳೂ ಸತ್ತರು; ಆದರೆ ನೀನು - ನನ್ನ ವಾಕ್ಯವನ್ನು ಕೈಕೊಂಡು ನಡೆಯುವವನು ಎಂದಿಗೂ ಸಾವನ್ನು ಅನುಭವಿಸುವದಿಲ್ಲವೆಂದು ಹೇಳುತ್ತೀ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್52 ಯೆಹೂದ್ಯರು ಆತನಿಗೆ, “ನಿನ್ನೊಳಗೆ ದೆವ್ವವಿದೆ ಎಂದು ಈಗ ನಮಗೆ ತಿಳಿಯಿತು! ಅಬ್ರಹಾಮನು ಮತ್ತು ಪ್ರವಾದಿಗಳು ಸಹ ಸತ್ತುಹೋದರು. ಆದರೆ ‘ನನ್ನ ಉಪದೇಶಕ್ಕೆ ವಿಧೇಯನಾಗುವವನು ಎಂದಿಗೂ ಸಾಯುವುದಿಲ್ಲ’ ಎಂದು ನೀನು ಹೇಳುತ್ತಿರುವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ52 ಆಗ ಯೆಹೂದಿ ನಾಯಕರು ಯೇಸುವಿಗೆ, “ನಿನಗೆ ದೆವ್ವ ಹಿಡಿದಿದೆ ಎಂದು ನಮಗೆ ಈಗ ತಿಳಿಯಿತು. ಅಬ್ರಹಾಮನು ಮತ್ತು ಪ್ರವಾದಿಗಳು ಸತ್ತರು. ಆದರೆ, ‘ಯಾರಾದರೂ ನನ್ನ ಮಾತನ್ನು ಪಾಲಿಸಿದರೆ ಅವರು ಎಂದೆಂದಿಗೂ ಮರಣ ಹೊಂದುವುದಿಲ್ಲ,’ ಎಂದು ನೀನು ಹೇಳುತ್ತೀಯಲ್ಲಾ? ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್52 ಜುದೆವಾನಿ ತೆಕಾ ಖರೆ ಸಾಂಗಲ್ಲ್ಯಾನಿ , “ಅತ್ತಾ ತುಕಾ ಗಿರೊ ಲಾಗಲ್ಲೆ ಖರೆಚ್!” ಮನುನ್ ಅಮ್ಕಾ ಖಾತ್ರಿ ಹೊಲಿ! ಅಬ್ರಾಹಾಮ್ ಮರ್‍ಲೊ, ಪ್ರವಾದಿಬಿ ಮರುನ್ ಗೆಲೆ, ಖರೆ ತಿಯಾ ಮನ್ತೆಯ್ ಜೊ ಕೊನ್ ಮಾಜೆ ಶಿಕ್ವುತಲ್ಯಾನಿ ಖಾಲ್ತಿ ಹೊವ್ನ್ ಚಲ್ತಾತ್ ತೆನಿ ಕನ್ನಾಚ್ ಮರಿನ್ಯಾತ್ ಮನುನ್ ಮನ್ತೆಯ್. ಅಧ್ಯಾಯವನ್ನು ನೋಡಿ |