ಯೋಹಾನ 4:27 - ಕನ್ನಡ ಸತ್ಯವೇದವು C.L. Bible (BSI)27 ಅಷ್ಟರಲ್ಲಿ ಹಿಂದಿರುಗಿ ಬಂದ ಶಿಷ್ಯರು ಯೇಸು ಆ ಮಹಿಳೆಯೊಡನೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟರು. ಆದರೆ, “ಏನು ಬೇಕು?” ಎಂದು ಆಕೆಯನ್ನಾಗಲಿ. “ಆಕೆಯೊಡನೆ ಏಕೆ ಮಾತನಾಡುತ್ತಿದ್ದೀರಿ?” ಎಂದು ಯೇಸುವನ್ನಾಗಲಿ ಅವರು ಕೇಳಲಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ಅಷ್ಟರೊಳಗೆ ಆತನ ಶಿಷ್ಯರು ಬಂದು ಆತನು ಆ ಸ್ತ್ರೀಯೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟರು. ಆದರೂ, “ನಿನಗೆ ಏನು ಬೇಕು? ಆಕೆಯ ಸಂಗಡ ಯಾಕೆ ಮಾತನಾಡುತ್ತಿರುವೆ?” ಎಂದು ಒಬ್ಬರೂ ಆತನನ್ನು ಕೇಳಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)27 ಅಷ್ಟರೊಳಗೆ ಆತನ ಶಿಷ್ಯರು ಬಂದು ಆತನು ಒಬ್ಬ ಹೆಂಗಸಿನ ಸಂಗಡ ಮಾತಾಡುತ್ತಿರುವದನ್ನು ಕಂಡು ಆಶ್ಚರ್ಯಪಟ್ಟರು. ಆದರೂ - ನಿನಗೆ ಏನು ಬೇಕು? ಆಕೆಯ ಸಂಗಡ ಯಾಕೆ ಮಾತಾಡುತ್ತೀ? ಎಂದು ಒಬ್ಬರೂ ಕೇಳಲಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್27 ಆ ಸಮಯದಲ್ಲಿ ಆತನ ಶಿಷ್ಯರು ಹಿಂತಿರುಗಿ ಬಂದರು. ಯೇಸು ಒಬ್ಬ ಸ್ತ್ರೀಯೊಂದಿಗೆ ಮಾತಾಡುತ್ತಿರುವುದನ್ನು ನೋಡಿ ಅವರು ಆಶ್ಚರ್ಯಗೊಂಡರು. ಆದರೆ, “ನಿನಗೇನು ಬೇಕು?” ಎಂದಾಗಲಿ “ನೀನು ಆಕೆಯೊಂದಿಗೆ ಏಕೆ ಮಾತಾಡುತ್ತಿರುವೆ?” ಎಂದಾಗಲಿ ಅವರಲ್ಲಿ ಒಬ್ಬರೂ ಕೇಳಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ27 ಅಷ್ಟರೊಳಗೆ ಅವರ ಶಿಷ್ಯರು ಬಂದು ಯೇಸು ಆ ಸ್ತ್ರೀಯೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟರು. ಆದರೂ, “ನಿಮಗೆ ಏನು ಬೇಕು? ಆಕೆಯೊಂದಿಗೆ ಏಕೆ ಮಾತನಾಡುತ್ತಿರುವಿರಿ?” ಎಂದು ಒಬ್ಬನಾದರೂ ಕೇಳಲಿಲ್ಲ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್27 ತನ್ನಾ ಜೆಜುಚಿ ಶಿಸಾ ಫಾಟಿ ಪರ್ತುನ್ ಯೆಲಿ ಅನಿ ತೊ ಎಕ್ ಬಾಯ್ಕೊಮನ್ಸಿಚ್ಯಾ ವಾಂಗ್ಡಾ ಬೊಲ್ತಲೆ ಬಗುನ್ ತೆಂಕಾ ಅಜಿಬ್ ದಿಸ್ಲೆ, ಖರೆ ಕೊನ್ಬಿ ತ್ಯಾ ಬಾಯ್ಕೊಮನ್ಸಿಕ್ “ತುಕಾ ಕಾಯ್ ಪಾಜೆ? ಮನುನ್ ನಾಹೊಲ್ಯಾರ್ ತಿಯಾ ಕಶ್ಯಾಕ್ ತ್ಯಾ ಬಾಯ್ಕೊಮನ್ಸಿಕ್ಡೆ ಬೊಲುಲೆಯ್?” ಮನುನ್ ಜೆಜುಕ್ ಹೊಂವ್ದಿತ್ ಇಚಾರುಕ್‍ನ್ಯಾತ್. ಅಧ್ಯಾಯವನ್ನು ನೋಡಿ |