ಯೋಯೇಲ 3:9 - ಕನ್ನಡ ಸತ್ಯವೇದವು C.L. Bible (BSI)9 “ರಾಷ್ಟ್ರಗಳಿಗೆ ಹೀಗೆ ಪ್ರಕಟಿಸಿರಿ: ರಾಷ್ಟ್ರಗಳೇ, ಯುದ್ಧಸನ್ನದ್ಧರಾಗಿರಿ. ಶೂರರನ್ನು ಎಚ್ಚರಗೊಳಿಸಿರಿ; ಯೋಧರೆಲ್ಲರೂ ಒಟ್ಟುಗೂಡಲಿ; ಯುದ್ಧಕ್ಕೆ ಹೊರಡಲಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಎಲ್ಲಾ ಜನರಿಗೆ ಹೀಗೆ ಪ್ರಕಟಿಸಿರಿ: ಜನಾಂಗಗಳೇ ಯುದ್ಧಸನ್ನದ್ಧರಾಗಿರಿ, ಶೂರರನ್ನು ಎಚ್ಚರಪಡಿಸಿರಿ, ಶೂರರು ಒಟ್ಟುಗೂಡಲಿ, ಶೂರರೆಲ್ಲರೂ ಯುದ್ಧಕ್ಕೆ ಹೊರಡಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಜನಾಂಗಗಳಲ್ಲಿ ಹೀಗೆ ಪ್ರಕಟಿಸಿರಿ - [ಜನಾಂಗಗಳೇ,] ಸನ್ನದ್ಧರಾಗಿರಿ, ಶೂರರನ್ನು ಎಚ್ಚರಪಡಿಸಿರಿ, ಯೋಧರೆಲ್ಲರೂ ಕೂಡಲಿ, ಯುದ್ಧಕ್ಕೆ ಹೊರಡಲಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಜನಾಂಗದವರಿಗೆ ಇದನ್ನು ಪ್ರಕಟಿಸು: ಯುದ್ಧಕ್ಕೆ ತಯಾರಾಗಿರಿ! ಶೂರರನ್ನು ಎಚ್ಚರಿಸಿರಿ! ಯುದ್ಧ ವೀರರು ಹತ್ತಿರಕ್ಕೆ ಬರಲಿ; ಅವರು ಬರಲಿ! ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಜನಾಂಗಗಳಲ್ಲಿ ಇದನ್ನು ಘೋಷಿಸಿರಿ; ಯುದ್ಧಕ್ಕೆ ಇದನ್ನು ಸಿದ್ಧಮಾಡಿರಿ; ಶೂರರನ್ನು ಎಬ್ಬಿಸಿರಿ; ಯುದ್ಧಭಟರೆಲ್ಲರು ಸಮೀಪಿಸಿ ಬರಲಿ. ಅಧ್ಯಾಯವನ್ನು ನೋಡಿ |