Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಯೇಲ 3:8 - ಕನ್ನಡ ಸತ್ಯವೇದವು C.L. Bible (BSI)

8 ನಿಮ್ಮ ಪುತ್ರಪುತ್ರಿಯರನ್ನು ಯೆಹೂದ್ಯರಿಗೆ ಮಾರುವೆನು, ಅವರು ಆ ಮಕ್ಕಳನ್ನು ದೂರದಲ್ಲಿರುವ ಶೆಬದವರಿಗೆ ಮಾರಿಬಿಡುವರು. ಸರ್ವೇಶ್ವರನಾದ ನನ್ನ ನುಡಿಯಿದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ನಿಮ್ಮ ಗಂಡು ಮತ್ತು ಹೆಣ್ಣು ಮಕ್ಕಳನ್ನು, ಯೆಹೂದ್ಯರಿಗೆ ಮಾರುವೆನು. ಅವರು ಆ ಮಕ್ಕಳನ್ನು ದೂರದ ಜನಾಂಗವಾದ, ಶೆಬದವರಿಗೆ ಮಾರಿಬಿಡುವರು. ಯೆಹೋವನೇ ಇದನ್ನು ನುಡಿದಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ನಿಮ್ಮ ಗಂಡುಹೆಣ್ಣು ಮಕ್ಕಳನ್ನು ಯೆಹೂದ್ಯರಿಗೆ ಮಾರುವೆನು; ಅವರು ಅವರನ್ನು ದೂರದ ಜನಾಂಗವಾದ ಶೆಬದವರಿಗೆ ಮಾರಿಬಿಡುವರು; ಯೆಹೋವನೇ ಇದನ್ನು ನುಡಿದಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನಿಮ್ಮ ಗಂಡು ಹೆಣ್ಣುಮಕ್ಕಳನ್ನು ನಾನು ಯೆಹೂದದ ಜನರಿಗೆ ಮಾರುವೆನು. ಅವರು ಅವರನ್ನು ಬಹುದೂರದಲ್ಲಿ ಶೆಬದ ಜನರಿಗೆ ಮಾರಿಬಿಡುವರು.” ಇದು ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ನಿಮ್ಮ ಪುತ್ರರನ್ನೂ ನಿಮ್ಮ ಪುತ್ರಿಯರನ್ನೂ ಯೆಹೂದದ ಜನರಿಗೆ ಮಾರುವೆನು. ಇವರು ಅವರನ್ನು ದೂರ ಜನವಾದ ಶೆಬದವರಿಗೆ ಮಾರುವರು.” ಯೆಹೋವ ದೇವರು ಇದನ್ನು ಹೇಳಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಯೇಲ 3:8
12 ತಿಳಿವುಗಳ ಹೋಲಿಕೆ  

ನಿನ್ನ ತುಳಿದವರ ಸಂತಾನ ಬರುವುದು ನಿನ್ನ ಬಳಿಗೆ ತಲೆಬಾಗಿ ನಿನ್ನ ಬೇಡವೆಂದವರು ಬೀಳುವರು ಕಾಲಿಗೆ ಸಾಷ್ಟಾಂಗವಾಗಿ. ಹೊಗಳುವರು ‘ನೀನೇ ಸರ್ವೇಶ್ವರನ ನಗರವೆಂದು, ಇಸ್ರಯೇಲಿನ ಪರಮಪಾವನ ಸಿಯೋನ್’ ಎಂದು.


ಅಷ್ಟರಲ್ಲಿ, ಶೆಬದವರು ಬಂದು, ಮೇಲೆ ಬಿದ್ದು, ಅವುಗಳನ್ನು ಹೊಡೆದುಕೊಂಡು ಹೋದರು. ಕೂಲಿ ಆಳುಗಳನ್ನು ಕತ್ತಿಯಿಂದ ಕೊಂದುಹಾಕಿದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯನ್ನು ನಿಮಗೆ ಮುಟ್ಟಿಸಲು ಓಡಿಬಂದೆ,” ಎಂದನು.


ಆದ್ದರಿಂದ ಸರ್ವೇಶ್ವರನ ಕೋಪ ಅವರ ಮೇಲೆ ಉರಿಯಹತ್ತಿತು; ಅವರನ್ನು ಕೊಳ್ಳೆಹೊಡೆಯುವವರ ಕೈಗೆ ಒಪ್ಪಿಸಿದರು. ಶತ್ರುಗಳು ಅವರನ್ನು ಸುಲಿಗೆ ಮಾಡಿದರು. ಸರ್ವೇಶ್ವರ ಅವರನ್ನು ಅಕ್ಕಪಕ್ಕದ ವೈರಿಗಳಿಗೆ ಮಾರಿಬಿಟ್ಟರು. ಆ ಶತ್ರುಗಳ ಮುಂದೆ ಇಸ್ರಯೇಲರು ನಿಲ್ಲಲಾರದೆ ಹೋದರು.


ಅಲ್ಲಿ ವಿನೋದ ಪ್ರಿಯರ ದೊಡ್ಡ ಗುಂಪಿನವರ ಕಳಕಳವಾಯಿತು; ಅರಣ್ಯದಿಂದ ಕರೆಯಿಸಿಕೊಂಡ ಕುಡುಕರು ನಾಡಾಡಿಗರೊಂದಿಗೆ ಸೇರಿ ಅಸ್ಸೀರಿಯರಿಬ್ಬರ ಕೈಗೆ ಕಡಗವನ್ನು ತೊಡಿಸಿ, ಅವರ ತಲೆಗೆ ಸುಂದರ ಕಿರೀಟವನ್ನಿಟ್ಟರು.


ಅವರು ಶೆಬದ ಧೂಪವನ್ನಾಗಲಿ, ದೂರದೇಶದ ಒಳ್ಳೆಯ ಸುಗಂಧವನ್ನಾಗಲಿ ತಂದು ನನಗೆ ಅರ್ಪಿಸುವುದರಿಂದ ನನಗೆ ಏನೂ ಪ್ರಯೋಜನವಿಲ್ಲ. ಅವರು ಒಪ್ಪಿಸುವ ದಹನಬಲಿಗಳನ್ನು ನಾನು ಮೆಚ್ಚುವುದಿಲ್ಲ. ಅವರ ಯಜ್ಞಬಲಿಗಳೂ ನನಗೆ ಇಷ್ಟವಿಲ್ಲ.


ಆಕೆ, “ನಾನು ಹೇಗೂ ನಿನ್ನ ಸಂಗಡ ಬರುವೆನು; ಆದರೆ ಈ ಯುದ್ಧದಿಂದ ನಿನಗೆ ಗೌರವಗಿಟ್ಟದು; ಏಕೆಂದರೆ ಸರ್ವೇಶ್ವರ ಸೀಸೆರನನ್ನು ಒಬ್ಬ ಮಹಿಳೆಗೆ ಒಪ್ಪಿಸಿಕೊಡುವರು,” ಎಂದು ಹೇಳಿ ಬಾರಾಕನೊಡನೆ ಕೆದೆಷಿಗೆ ಹೋದಳು.


ಈ ಕಾರಣ ಸರ್ವೇಶ್ವರ ಅವರನ್ನು ಹಾಚೋರಿನಲ್ಲಿ ಆಳುತ್ತಿದ್ದ ಕಾನಾನ್ಯ ರಾಜನಾದ ಯಾಬೀನನಿಗೆ ವಶಪಡಿಸಿದರು. ಮ್ಲೇಚ್ಛರ ಹರೋಷೆತ್ ಎಂಬ ಪಟ್ಟಣದಲ್ಲಿ ವಾಸವಾಗಿದ್ದ ಸೀಸೆರನು ಅವನ ಸೇನಾಪತಿ ಆಗಿದ್ದನು.


ಒಬ್ಬನಿಂದ ಸಾವಿರ ಮಂದಿ ಸೋತುಹೋದುದು’ ಒಬ್ಬರಿಗಂಜಿ ಹತ್ತುಸಾವಿರ ಓಡಿಹೋದುದು, ಅವರ ಪೊರೆಬಂಡೆಯಾತ ಅವರನು ವೈರಿಗೊಪ್ಪಿಸಿದ್ದರಿಂದಲ್ಲವೆ? ಅವರ ಸರ್ವೇಶ್ವರನು ಅವರನು ಕೈಬಿಟ್ಟುದರಿಂದಲ್ಲವೆ?


ಕಪ್ಪಗಳನರ್ಪಿಸಲಿ ತಾರ್ಷಿಷ್ ಹಾಗೂ ದ್ವೀಪದ್ವೀಪದ ರಾಜರುಗಳು I ಕಾಣಿಕೆಗಳ ತಂದೊಪ್ಪಿಸಲಿ ಶೆಬಾ ಹಾಗೂ ಸೆಬಾದ ರಾಜರುಗಳು II


ಆದರೂ ನಿನ್ನನ್ನು ಕಬಳಿಸುವವರನ್ನು ಕಬಳಿಸಲಾಗುವುದು ನಿನ್ನ ಶತ್ರುಗಳೆಲ್ಲ ತಪ್ಪದೆ ಸೆರೆಹೋಗುವರು ನಿನ್ನನ್ನು ಸೂರೆಮಾಡುವವರು ಸೂರೆಯಾಗುವರು ನಿನ್ನನ್ನು ಕೊಳ್ಳೆಹೊಡೆಯುವವರು ಕೊಳ್ಳೆಗೆ ಈಡಾಗುವರು.


ಶೆಬದವರು, ದೆದಾನಿನವರು, ತಾರ್ಷೀಷಿನ ವರ್ತಕರು ಹಾಗು ಅದರ ಸಿಂಹಪ್ರಾಯರೆಲ್ಲರು ನಿನ್ನನ್ನು ನೋಡಿ, ‘ನೀನು ಸೂರೆಮಾಡಲಿಕ್ಕೆ ಬಂದಿಯೋ? ಕೊಳ್ಳೆಹೊಡೆದು ಬೆಳ್ಳಿಬಂಗಾರವನ್ನು ದೋಚಿಕೊಂಡು, ದನ ಮುಂತಾದ ಸೊತ್ತನ್ನು ಅಪಹರಿಸಿ, ಅಪಾರವಾದ ಆಸ್ತಿಯನ್ನು ಸುಲಿದುಕೊಂಡು ಹೋಗಲು ನಿನ್ನ ತಂಡವನ್ನು ಕೂಡಿಸಿಕೊಂಡು ಬಂದಿಯೋ?’ ಎಂದು ಕೇಳುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು