Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಯೇಲ 2:2 - ಕನ್ನಡ ಸತ್ಯವೇದವು C.L. Bible (BSI)

2 ಅದು ಕಾರಿರುಳಿನ ಕರಾಳ ದಿನ, ಕಾರ್ಮುಗಿಲ ಕಾರ್ಗತ್ತಲ ದಿನ. ಮುಂಬೆಳಕು ಗುಡ್ಡದಿಂದ ಗುಡ್ಡಕ್ಕೆ ಹರಡುವಂತೆ ಪ್ರಬಲವಾದ ದೊಡ್ಡಸೈನ್ಯವೊಂದು ಬರುತ್ತಿದೆ; ಇಂಥ ಸೈನ್ಯ ಹಿಂದೆಂದೂ ಬಂದಿಲ್ಲ, ತಲತಲಾಂತರಕ್ಕೂ ಬರುವಂತಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅದು ಕತ್ತಲೆಯ ಮತ್ತು ಮೊಬ್ಬಿನ ದಿನವೂ, ಕಾರ್ಮುಗಿಲಿನ ಕಗ್ಗತ್ತಲ ದಿನವೂ ಆಗಿದೆ. ಉದಯವು ಬೆಟ್ಟಗಳ ಮೇಲೆ ಹರಡಿಕೊಳ್ಳುವ ಹಾಗೆ, ಪ್ರಬಲವಾದ ದೊಡ್ಡ ಸೈನ್ಯವು ಬರುತ್ತದೆ. ಅದರ ಹಾಗೆ ಹಿಂದೆಂದೂ ಬಂದಿಲ್ಲ, ಇನ್ನು ಮುಂದೆಯೂ ಬರುವುದಿಲ್ಲ, ತಲತಲಾಂತರಗಳ ವರ್ಷಗಳವರೆಗೂ ಬರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಅದು ಕತ್ತಲಿನ ಮೊಬ್ಬಿನ ದಿನ, ಕಾರ್ಮುಗಿಲ ಕಗ್ಗತ್ತಲ ದಿನ. ಉದಯವು ಬೆಟ್ಟಗಳ ಮೇಲೆ ಹರಡಿಕೊಳ್ಳುವ ಹಾಗೆ ಇಗೋ, ಪ್ರಬಲವಾದ ದೊಡ್ಡ ದಂಡು! ಇಂಥದು ಹಿಂದೆಂದೂ ಬಂದಿಲ್ಲ, ಇನ್ನು ಮುಂದೆ ತಲತಲಾಂತರಗಳ ಬಹು ವರುಷಗಳಲ್ಲಿಯೂ ಬರುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಆ ದಿನವು ಕರಾಳ ದಿನ. ಮೋಡದಿಂದ ತುಂಬಿದ ದಿನವಾಗಿದೆ. ಅಂದು ಸೂರ್ಯೋದಯದ ಸಮಯದಲ್ಲಿ ಪರ್ವತದಲ್ಲಿ ಹರಡಿದ ಸೈನ್ಯವನ್ನು ನೀವು ನೋಡುವಿರಿ. ಅದು ಬಲಿಷ್ಠವಾದ ಮಹಾಸೈನ್ಯ. ಅಂಥ ಸೈನ್ಯವು ಹಿಂದೆಂದೂ ಇರಲಿಲ್ಲ. ಇನ್ನು ಮುಂದೆಯೂ ಇರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಅದು ಕತ್ತಲೆಯೂ ಮಬ್ಬೂ ಉಳ್ಳ ದಿವಸವೂ, ಮೇಘವೂ ಕಾರ್ಗತ್ತಲು ಉಳ್ಳ ದಿವಸವೂ ಆಗಿದೆ. ಬೆಟ್ಟಗಳ ಮೇಲೆ ಹರಡುವ ಉದಯದ ಹಾಗೆ ದೊಡ್ಡ ಬಲವಾದ ಸ್ಯೆನ್ಯವು ಬರುತ್ತದೆ. ಅದು ಪ್ರಾಚೀನ ಕಾಲದಲ್ಲಿ ಮತ್ತು ಮುಂದಿನ ಯುಗಗಳಲ್ಲಿ ಎಂದಿಗೂ ಇರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಯೇಲ 2:2
34 ತಿಳಿವುಗಳ ಹೋಲಿಕೆ  

ಶತ್ರುರಾಷ್ಟ್ರ ನನ್ನ ನಾಡನ್ನು ಆಕ್ರಮಿಸಿದೆ. ಆ ರಾಷ್ಟ್ರ ಪ್ರಬಲವಾದುದು; ಅದರ ಸೈನ್ಯ ಅಸಂಖ್ಯಾತವಾದುದು; ಅದರ ಹಲ್ಲುಗಳು ಸಿಂಹದ ಹಲ್ಲುಗಳು; ಅದರ ಕೋರೆಗಳು ಮೃಗರಾಜನ ಕೋರೆಗಳು.


ಬೆಟ್ಟಗಳ ತುತ್ತತುದಿಯಲ್ಲಿ ಹಾರಾಡುತ್ತವೆ; ರಥಗಳಂತೆ ಚೀತ್ಕಾರಮಾಡುತ್ತವೆ; ಕೂಳೆಸುಡುವ ಬೆಂಕಿಯಂತೆ ಚಟಪಟ ಮಾಡುತ್ತವೆ; ಸಮರಕ್ಕೆ ಸಿದ್ಧವಾದ ಶೂರರ ಸೈನ್ಯದಂತಿವೆ.


ಗುಂಪುಮಿಡತೆ, ಕಂಬಳಿಮಿಡತೆ, ಚೂರಿಮಿಡತೆ, ನಾನು ಕಳುಹಿಸಿದ ಈ ಮಿಡತೆಗಳ ಸೈನ್ಯಗಳು ತಿಂದು ನಷ್ಟಮಾಡಿದ ವರ್ಷಗಳನ್ನು ನಿಮಗೆ ಭರಿಸಿಕೊಡುವೆನು.


ಸರ್ವೇಶ್ವರಸ್ವಾಮಿಯ ಭಯಂಕರ ಮಹಾದಿನದ ಮುಂಚೆ ಸೂರ್ಯನು ಅಂಧಕಾರಮಯನಾಗುವನು; ಚಂದ್ರನು ರಕ್ತಗೆಂಪಾಗುವನು.


“ಆ ಕಾಲದಲ್ಲಿ ನಿನ್ನ ಜನರ ಪಕ್ಷ ವಹಿಸುವ ಮಹಾದೂತನಾದ ಮಿಕಾಯೇಲನು ಕಾಣಿಸಿಕೊಳ್ಳುವನು. ಮೊತ್ತಮೊದಲು, ಮಾನವ ಜನಾಂಗ ಉಂಟಾದಂದಿನಿಂದ ಅಂದಿನವರೆಗೆ ಸಂಭವಿಸದ ಘೋರ ಸಂಕಟ ಉಂಟಾಗುವುದು. ಆಗ ನಿನ್ನ ಜನರಲ್ಲಿ ಯಾರ ಯಾರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಇರುವುದೋ ಅವರೆಲ್ಲರು ಜೀವೋದ್ಧಾರವನ್ನು ಪಡೆಯುವರು.


ಆಕಾಶವನ್ನು ದಿಟ್ಟಿಸಿ ನೋಡಿದರೂ ಭೂಮಿಯನ್ನು ದುರುಗುಟ್ಟಿ ನೋಡಿದರೂ ಅವರಿಗೆ ಕಾಣುವುದು ಕಷ್ಟಸಂಕಟಗಳ ಕತ್ತಲೆ, ಭಯಂಕರವಾದ ಕಾಳಗತ್ತಲೆಯಲ್ಲದೆ ಮತ್ತೇನೂ ಅಲ್ಲ. ಅಂಥ ಕರಾಳ ಕತ್ತಲೆಯೊಳಗೆ ಅವರನ್ನು ದೂಡಲಾಗುವುದು.


ಗುರುಗುಟ್ಟುತಿಹರು ಯೆಹೂದ್ಯರ ಮೇಲೆ ಭೋರ್ಗರೆಯುವ ಸಮುದ್ರದಂತೆ; ನಾಡಿನೆಲ್ಲೆಡೆ ಕವಿದಿಹುದು ಗಾಡಾಂಧಕಾರ; ತಾಂಡವವಾಡುತಿಹುದು ನೋಡಿದೆಡೆ ದುಃಖದುಗುಡ; ಮೋಡ ಕವಿದು ಇರುಳಾಗಿಹುದು ಹಗಲೊಳು ಕೂಡ !


ತಮ್ಮ ನಾಚಿಕೆಗೇಡಿತನದ ನೊರೆಯನ್ನು ಕಾರುವ ಸಾಗರದ ಹುಚ್ಚು ತೆರೆಗಳು; ದಿಕ್ಕುಗೆಟ್ಟ ತಾರೆಗಳಿವರು. ಇವರಿಗಾಗಿ ಕಾದಿದೆ ನಿರಂತರ ಕಾರ್ಗತ್ತಲಿನ ಕಂದಕ.


ನೀವು ಇಸ್ರಯೇಲರಂತೆ ಮುಟ್ಟಬಹುದಾದ ಸೀನಾಯ್ ಬೆಟ್ಟಕ್ಕೆ ಬಂದಿಲ್ಲ. ಅಲ್ಲಿ ಬೆಂಕಿ ಧಗಧಗಿಸುತ್ತಿತ್ತು. ಕಾರ್ಗತ್ತಲು ಕವಿದಿತ್ತು; ಮೋಡದ ಮಬ್ಬು ಮುಸುಕಿತ್ತು; ಬಿರುಗಾಳಿ ಬೀಸುತ್ತಿತ್ತು;


ಆಗ ಬರಲಿರುವ ಸಂಕಷ್ಟಗಳು ದೈವಸೃಷ್ಟಿಯ ಆದಿಯಿಂದ ಇರಲಿಲ್ಲ. ಇನ್ನು ಮುಂದಕ್ಕೂ ಇರುವುದಿಲ್ಲ.


ಬೆಟ್ಟಗುಡ್ಡಗಳನ್ನು ರೂಪಿಸಿದಾತ ದೇವನೇ ಗಾಳಿಬಿರುಗಾಳಿಯನು ಸೃಜಿಸಿದಾತ ಆತನೇ ತನ್ನಾಲೋಚನೆಯನ್ನು ನರರಿಗರುಹಿಸಿದವ ದೇವನೇ ಹಗಲನ್ನು ಇರುಳನ್ನಾಗಿಸುವವನು ಆತನೇ ಪೊಡವಿಯ ಉನ್ನತ ಸ್ಥಾನದಲ್ಲಿ ನಡೆದಾಡುವವನಾತನೇ ಆತನ ನಾಮಧೇಯ - ಸೇನಾಧೀಶ್ವರ ದೇವರಾದ ಸರ್ವೇಶ್ವರನೇ.


ನಮ್ಮ ದೇವರು ನಮ್ಮ ಮೇಲೆ ದೊಡ್ಡ ಕೇಡನ್ನು ಬರಮಾಡಿದ್ದಾರೆ. ನಮ್ಮನ್ನೂ ನಮ್ಮನ್ನಾಳುವ ಅಧಿಪತಿಗಳನ್ನೂ ಖಂಡಿಸಿ ಹೇಳಿದ ಮಾತುಗಳನ್ನು ನೆರವೇರಿಸಿದ್ದಾರೆ. ಜೆರುಸಲೇಮಿಗೆ ಆದಂಥ ಕೇಡು ವಿಶ್ವದಲ್ಲಿ ಎಂದೂ ಆಗಲಿಲ್ಲ.


ನಿಮ್ಮ ದೇವರಾದ ಸರ್ವೇಶ್ವರನಿಗೆ ಸಲ್ಲಿಸಿ ಗೌರವವನ್ನು ಇಲ್ಲವಾದರೆ ಆತ ಬರಮಾಡುವನು ಸ್ವಲ್ಪಕಾಲದಲ್ಲೇ ಕತ್ತಲನ್ನು. ನಿಮ್ಮ ಕಾಲುಗಳು ಮುಗ್ಗರಿಸುವುವು ಮಬ್ಬಿನ ಗುಡ್ಡಗಳ ನಡುವೆ.


ಇವೇ ಮುಗಿಲೂ ಕಾರ್ಮುಗಿಲೂ ಆತನ ಸುತ್ತಲು I ನ್ಯಾಯ-ನೀತಿ ಆತನ ಗದ್ದುಗೆಯಸ್ತಿವಾರಗಳು II


ನೆನೆವನು ಮನದೊಳು ದುರುಳನಿಂತು: I “ಯಾರಿಗೂ ನನ್ನ ಕದಲಿಸಲಾಗದು I ಬಾರದು ನನಗೆಂದಿಗು ಆಪತ್ತು” II


ನೆನಪಿಗೆ ತಂದುಕೊಳ್ಳಿ ಆ ಪೂರ್ವಕಾಲವನು ಆಲೋಚಿಸಿ ನೋಡಿ ಪೂರ್ವಿಕರ ಚರಿತೆಯನು. ವಿಚಾರಿಸಿದರೆ ತಿಳಿಸುವರು ನಿಮ್ಮ ನಿಮ್ಮ ತಂದೆಗಳು ಕೇಳಿದರೆ ವಿವರಿಸುವರು ನಿಮ್ಮ ನಿಮ್ಮ ಹಿರಿಯರು.


ಮೋಶೆಯೊಬ್ಬನೇ ದೇವರಿದ್ದ ಕಾರ್ಮುಗಿಲನ್ನು ಸಮೀಪಿಸಿದ್ದನು. ಜನರು ದೂರದಲ್ಲೇ ನಿಂತಿದ್ದರು.


ಅಪರಿಮಿತ ಸಂಖ್ಯೆಯಲ್ಲಿ ಅವು ಇಡೀ ಈಜಿಪ್ಟ್ ದೇಶದಲ್ಲಿ ಬಂದಿಳಿದು ಅದರ ಎಲ್ಲಾ ಕಡೆಗಳಲ್ಲಿ ಹರಡಿಕೊಂಡವು. ಅಂಥ ಮಿಡಿತೆಯ ದಂಡು ಹಿಂದೆಂದೂ ಬಂದಿರಲಿಲ್ಲ, ಮುಂದೆಯೂ ಬರುವಂತಿಲ್ಲ.


ನಿನ್ನ ಮನೆಗಳಲ್ಲೂ ನಿನ್ನ ಪರಿವಾರದವರ ಮನೆಗಳಲ್ಲೂ ಈಜಿಪ್ಟಿನವರ ಮನೆಗಳಲ್ಲೂ ಅವು ತುಂಬಿಕೊಳ್ಳುವುವು. ನಿಮ್ಮ ತಂದೆ ತಾತಂದಿರ ಕಾಲದಿಂದ ಇಂದಿನವರೆಗೂ ಅಂಥ ಮಿಡಿತೆದಂಡನ್ನು ಯಾರೂ ನೋಡಿಲ್ಲ.” ಹೀಗೆಂದು ಹೇಳಿ ಮೋಶೆ ಫರೋಹನ ಬಳಿಯಿಂದ ಹೊರಟುಹೋದನು.


ಏಕೆಂದರೆ ಆಗ ಬರಲಿರುವ ಸಂಕಷ್ಟಗಳು ಸೃಷ್ಟಿಯ ಆದಿಯಿಂದ ಇಂದಿನವರೆಗೂ ಇರಲಿಲ್ಲ; ಇನ್ನು ಮುಂದಕ್ಕೂ ಇರುವುದಿಲ್ಲ.


ಅವನು ಆ ಕೂಪದ ಮುಚ್ಚಳವನ್ನು ತೆರೆದನು. ಅದರೊಳಗಿಂದ ದಟ್ಟಹೊಗೆ ದೊಡ್ಡ ಕುಲುಮೆ ಒಂದರಿಂದ ಬರುತ್ತಿರುವಂತೆ ಮೇಲೇರಿತು. ಇದರಿಂದಾಗಿ ಸೂರ್ಯನೂ ವಾಯುಮಂಡಲವೂ ಕಪ್ಪಾದವು.


ಹಾದುಹೋಗುವವರೇ, ನಿಮಗಿಲ್ಲವೆ ನನ್ನ ಚಿಂತೆ? ಸರ್ವೇಶ್ವರ ಸಿಟ್ಟುಗೊಂಡು ನನಗಿತ್ತಿರುವನು ಈ ವ್ಯಥೆ ! ಈ ಪರಿ ಸಂಕಟವನ್ನು ನೀವೆಲ್ಲಾದರು ನೋಡಿದ್ದುಂಟೆ?”


ನಿನ್ನ ಬೆಳಕನು ನಾ ನಂದಿಸಿ ಕತ್ತಲಾಗಿಸುವಾಗ, ಮುಚ್ಚುವೆನು ಸೂರ್ಯಚಂದ್ರ ನಕ್ಷತ್ರಗಳನು ಮೋಡಮುಸುಕಿನಿಂದ.


ಮಂದೆಯ ಕುರುಬನು ಸುತ್ತಮುತ್ತಲು ಚದರಿಹೋದ ತನ್ನ ಕುರಿಗಳನ್ನು ಹುಡುಕುವ ಹಾಗೆ ನಾನು ನನ್ನ ಕುರಿಗಳನ್ನು ಹುಡುಕುವೆನು;


ನೀನೂ ನಿನ್ನ ಎಲ್ಲ ಪಡೆಗಳೂ ನಿನ್ನೊಂದಿಗಿರುವ ಬಹು ಜನಾಂಗಗಳೂ ಬಿರುಗಾಳಿಯಂತೆ ಹೊರಟುಬರುವಿರಿ; ಕಾರ್ಮುಗಿಲಿನಂತೆ ದೇಶವನ್ನು ಮುಚ್ಚಿಬಿಡುವಿರಿ.’


ಬಹು ದಿನಗಳ ಮೇಲೆ ಸರ್ವೇಶ್ವರ ನನಗೆ, “ಹೊರಡು, ಯೂಫ್ರೆಟಿಸ್ ನದಿಗೆ ಹೋಗಿ ಅಲ್ಲಿ ಬಚ್ಚಿಡಬೇಕೆಂದು ನಾನು ಅಪ್ಪಣೆಕೊಟ್ಟ ನಡುಕಟ್ಟನ್ನು ಅಲ್ಲಿಂದ ತೆಗೆ,” ಎಂದು ಹೇಳಿದರು.


“ಟೈರ್, ಸಿದೋನ್ ಮತ್ತು ಫಿಲಿಷ್ಟಿಯ ಪ್ರಾಂತ್ಯಗಳೇ, ನನ್ನ ಮೇಲೆ ನಿಮಗಿರುವ ದೂರು ಯಾವುದು? ನನಗೆ ಪ್ರತೀಕಾರ ಮಾಡಬೇಕೆಂದಿರುವಿರೋ? ಹಾಗೇನಾದರೂ ಮಾಡಿದ್ದೇ ಆದರೆ, ನೀವು ಮಾಡಿದ ಕೇಡನ್ನು ತಡಮಾಡದೆ ನಿಮ್ಮ ತಲೆಗೇ ತರುವೆನು.


“ಸ್ವಾಮಿ ಸರ್ವೇಶ್ವರ ನ್ಯಾಯತೀರ್ಪು ನೀಡುವ ದಿನ ಸಮೀಪಿಸಿದೆ; ಆದುದರಿಂದ ಅವರ ಸನ್ನಿಧಿಯಲ್ಲಿ ಮೌನ ತಾಳಿರಿ. ಸರ್ವೇಶ್ವರ, ಯಜ್ಞದ ಔತಣವನ್ನು ಸಿದ್ಧಗೊಳಿಸಿದ್ದಾರೆ. ಅತಿಥಿಗಳನ್ನು ಪವಿತ್ರೀಕರಿಸಿದ್ದಾರೆ.


ಆ ದಿನ ಬಂದಾಗ ಚಳಿಯಾಗಲೀ ಮಂಜಾಗಲೀ ಇರದು. ಕತ್ತಲು ಕವಿಯದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು