Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಯೇಲ 2:16 - ಕನ್ನಡ ಸತ್ಯವೇದವು C.L. Bible (BSI)

16 ಜನರನ್ನು ಒಟ್ಟುಗೂಡಿಸಿರಿ; ಸಭೆಯನ್ನು ಏರ್ಪಡಿಸಿರಿ; ವೃದ್ಧರನ್ನು, ಮಕ್ಕಳನ್ನು, ಮೊಲೆಗೂಸುಗಳನ್ನು ಕರೆತನ್ನಿರಿ. ವಧೂವರರು ತಮ್ಮ ಕಲ್ಯಾಣಗೃಹದಿಂದ ಹೊರಟುಬರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಜನರನ್ನು ಒಟ್ಟುಗೂಡಿಸಿರಿ, ಪವಿತ್ರ ಸಭೆಯನ್ನು ಏರ್ಪಡಿಸಿರಿ. ಹಿರಿಯರನ್ನು ಕೂಡಿಸಿರಿ, ಮಕ್ಕಳನ್ನು ಸೇರಿಸಿರಿ, ಮೊಲೆಕೂಸುಗಳನ್ನು ಸೇರಿಸಿರಿ. ಮದುಮಗನು ತನ್ನ ಕೊಠಡಿಯಿಂದ ಹೊರಟುಬರಲಿ, ವಧುವು ತನ್ನ ಕಲ್ಯಾಣಗೃಹದಿಂದ ಹೊರಟುಬರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಜನರನ್ನು ಒಟ್ಟಿಗೆ ಬರಮಾಡಿರಿ, ಕೂಟವನ್ನು ಏರ್ಪಡಿಸಿರಿ, ವೃದ್ಧರನ್ನು ಕೂಡಿಸಿರಿ, ಮಕ್ಕಳನ್ನೂ ಮೊಲೆಕೂಸುಗಳನ್ನೂ ಸೇರಿಸಿರಿ; ವಧೂವರರೂ ತಮ್ಮ ಕಲ್ಯಾಣಗೃಹದಿಂದ ಹೊರಟುಬರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ವಿಶೇಷ ಕೂಟಕ್ಕಾಗಿ ಜನರನ್ನು ಒಟ್ಟಾಗಿ ಕೂಡಿಸಿರಿ. ಪ್ರಾಯಸ್ಥರನ್ನು ಕೂಡಿಸಿರಿ. ಮಕ್ಕಳನ್ನೂ ಕೂಡಿಸಿರಿ. ಮೊಲೆಹಾಲು ಕುಡಿಯುವ ಶಿಶುಗಳನ್ನೂ ಒಟ್ಟಾಗಿ ಸೇರಿಸಿರಿ. ವಧುವರರು ತಮ್ಮ ಶೋಭನದ ಕೋಣೆಯಿಂದ ಹೊರಬರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಜನರನ್ನು ಕೂಡಿಸಿರಿ; ಸಭೆಯನ್ನು ಪವಿತ್ರಗೊಳಿಸಿರಿ; ಹಿರಿಯರನ್ನು ಒಟ್ಟುಗೂಡಿಸಿರಿ, ಮಕ್ಕಳನ್ನೂ ಹಸುಗೂಸುಗಳನ್ನೂ ಕೂಡಿಸಿರಿ; ಮದುಮಗನು ತನ್ನ ಕೊಠಡಿಯೊಳಗಿಂದಲೂ ಮದುಮಗಳು ತನ್ನ ಕೊಠಡಿಯೊಳಗಿಂದಲೂ ಹೊರಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಯೇಲ 2:16
21 ತಿಳಿವುಗಳ ಹೋಲಿಕೆ  

“ಲೇವಿಯರೇ, ನನ್ನ ಮಾತನ್ನು ಕೇಳಿರಿ; ಈಗ ನಿಮ್ಮನ್ನೇ ಶುದ್ಧಪಡಿಸಿಕೊಂಡು, ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರನ ಪವಿತ್ರಾಲಯದಿಂದ ಹೊಲಸನ್ನೆಲ್ಲಾ ಹೊರಗೆ ಹಾಕಿ, ಆಲಯವನ್ನು ಶುದ್ಧೀಕರಿಸಿರಿ.


ಎಲ್ಲ ಯೆಹೂದ್ಯರೂ ಅವರ ಮಡದಿಮಕ್ಕಳೂ ಸರ್ವೇಶ್ವರನ ಸನ್ನಿಧಿಯಲ್ಲಿ ನಿಂತಿದ್ದರು.


ಆದುದರಿಂದ ಸತಿಪತಿಯರು ಒಬ್ಬರಿಗೊಬ್ಬರು ದಾಂಪತ್ಯಕರ್ತವ್ಯಗಳನ್ನು ನೆರವೇರಿಸಲು ನಿರಾಕರಿಸಬಾರದು. ಧ್ಯಾನ, ಪ್ರಾರ್ಥನೆಗಳಲ್ಲಿ ನಿರತರಾಗಿರಲು, ಸ್ವಲ್ಪಕಾಲ ಒಬ್ಬರನ್ನೊಬ್ಬರು ಅಗಲಿರಬಹುದು. ಆದರೆ ಅದಕ್ಕೆ ಪರಸ್ಪರ ಸಮ್ಮತಿ ಇರಬೇಕು. ಅನಂತರ ಒಂದುಗೂಡಬೇಕು. ಇಲ್ಲದೆ ಹೋದರೆ, ನಿಮ್ಮಲ್ಲಿ ಸಂಯಮ ಇಲ್ಲದಿರುವುದನ್ನು ಕಂಡು ಸೈತಾನನು ಪಾಪಕ್ಕೆ ಪ್ರಚೋದಿಸಬಹುದು.


ಉಪವಾಸ ವ್ರತವನ್ನು ಕೈಗೊಂಡು ಮಹಾಸಭೆಯನ್ನು ಕರೆಯಿರಿ; ಹಿರಿಯರನ್ನೂ ನಾಡಿನ ಜನಸಾಮಾನ್ಯರನ್ನೂ ಸೇರಿಸಿರಿ; ದೇವರಾದ ಸರ್ವೇಶ್ವರಸ್ವಾಮಿಯ ಆಲಯಕ್ಕೆ ಬರಮಾಡಿರಿ; ಆ ಸ್ವಾಮಿಗೆ ಪ್ರಾರ್ಥನೆಮಾಡಿರಿ.


ಹೌದು, ಶುಭಕರವಾಗಿದೆ; ಸರ್ವೇಶ್ವರನಿಗೆ ಬಲಿಯನ್ನರ್ಪಿಸುವುದಕ್ಕೆ ಬಂದಿದ್ದೇನೆ. ನೀವು ಶುದ್ಧರಾಗಿ ನನ್ನ ಜೊತೆಯಲ್ಲಿ ಬಲಿಯರ್ಪಣೆಗೆ ಬನ್ನಿ,” ಎಂದು ಹೇಳಿ ಜೆಸ್ಸೆಯನನ್ನೂ ಅವನ ಮಕ್ಕಳನ್ನೂ ಶುದ್ಧೀಕರಿಸಿ ಅವರನ್ನೂ ಬಲಿಯರ್ಪಣೆಗೆ ಆಮಂತ್ರಿಸಿದನು. ಅವರು ಬಂದರು.


ನನ್ನ ಸನ್ನಿಧಿಗೆ ಬರುವ ಯಾಜಕರು ಕೂಡ ತಮ್ಮನ್ನೇ ಶುದ್ಧಪಡಿಸಿಕೊಳ್ಳಬೇಕು. ಇಲ್ಲವಾದರೆ ಅವರನ್ನೂ ನಾನು ತಟ್ಟನೆ ನಾಶಮಾಡುವೆನು,” ಎಂದು ಹೇಳಿದರು.


ಮೋಶೆ ಜನರ ಮಾತುಗಳನ್ನು ಸರ್ವೇಶ್ವರನಿಗೆ ಅರಿಕೆಮಾಡಲು ಸರ್ವೇಶ್ವರ ಹೀಗೆಂದರು: “ನೀನು ಜನರ ಬಳಿಗೆ ಹೋಗಿ ಇಂದು ಮತ್ತು ನಾಳೆ ಅವರನ್ನು ಪರಿಶುದ್ಧಗೊಳಿಸು. ಅವರು ತಮ್ಮ ಬಟ್ಟೆಗಳನ್ನು ಮಡಿಮಾಡಿಕೊಳ್ಳಲಿ.


ಅದಕ್ಕೆ ಯೇಸು, “ಮದುವಣಿಗನು ಜೊತೆಯಲ್ಲಿ ಇರುವಷ್ಟು ಕಾಲ ಅವನ ಆಪ್ತರು ದುಃಖಪಡುವುದುಂಟೇ? ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲವು ಬರುವುದು; ಆಗ ಅವರು ಉಪವಾಸ ಮಾಡುವರು.


ನಿರ್ಮಿಸಿಹನಲ್ಲಿ ದೇವನು ಗುಡಾರವೊಂದನು ಸೂರ್ಯನಿಗೆ I ಬರುತಿಹನಾ ರವಿ ವರನಂತೆ ಧಾರಾಗೃಹದಿಂದ ಹೊರಗೆ I ಶೂರನಂತೆ, ಓಟದ ಪಥದಲ್ಲೋಡಲು ಹರುಷದೊಂದಿಗೆ II


ಔತಣದ ಸರದಿ ತೀರಿದ ಬಳಿಕ, ಯೋಬನು ತನ್ನ ಮಕ್ಕಳು ಒಂದು ವೇಳೆ ಪಾಪಮಾಡಿ ಮನದಲ್ಲೇ ದೇವರನ್ನು ದೂಷಿಸಿರಬಹುದೆಂದುಕೊಂಡು, ಅವರನ್ನು ಕರೆಸಿ ಶುದ್ಧೀಕರಣ ಮಾಡಿಸುತ್ತಿದ್ದನು. ಬೆಳಿಗ್ಗೆ ಎದ್ದು ಅವರೊಬ್ಬೊಬ್ಬರಿಗಾಗಿ ದಹನಬಲಿಗಳನ್ನು ಅರ್ಪಿಸುತ್ತಿದ್ದನು; ಇದು ಯೋಬನ ದೈನಂದಿನ ವಾಡಿಕೆಯಾಗಿತ್ತು.


ಮೋಶೆಯಿಂದ ಪ್ರಕಟವಾದ ಸರ್ವೇಶ್ವರನ ವಿಧಿಗನುಸಾರ ನಿಮ್ಮ ಸಹೋದರರು ಪಾಸ್ಕಭೋಜನ ಮಾಡುವಂತೆ ನೀವು ನಿಮ್ಮನ್ನು ಶುದ್ಧಿಪಡಿಸಿಕೊಂಡು ಅವರಿಗಾಗಿ ಎಲ್ಲವನ್ನೂ ಸಿದ್ಧಮಾಡಿರಿ,” ಎಂದು ಆಜ್ಞಾಪಿಸಿದನು.


ಆದರೂ ಪಿತೃಗಳ ದೇವರಾದ ನಿಮ್ಮನ್ನು ಅರಸುವ ಮನಸ್ಸಿನಿಂದ ಬಂದಿರುವವರಿಗೆಲ್ಲಾ ಕ್ಷಮೆಯನ್ನು ಅನುಗ್ರಹಿಸಿರಿ,” ಎಂದು ವಿಜ್ಞಾಪನೆ ಮಾಡಿದನು.


ಜನಸಮೂಹದಲ್ಲಿ ಅನೇಕರು ತಮ್ಮನ್ನು ಶುದ್ಧಪಡಿಸಿಕೊಳ್ಳದೆ ಇದ್ದುದರಿಂದ, ಅಶುದ್ಧರಾಗಿದ್ದವರೆಲ್ಲರ ಬಲಿಪಶುಗಳು ಸರ್ವೇಶ್ವರನಿಗೆ ಮೀಸಲಾಗುವಂತೆ ಅವುಗಳನ್ನು ಲೇವಿಯರೇ ವಧಿಸಿದರು.


ನೀನೆದ್ದು ಜನರನ್ನು ಶುದ್ಧೀಕರಿಸು. ನೀನು ಅವರಿಗೆ, ‘ಇಸ್ರಯೇಲರೇ, ನಾಳೆ ನಿಮ್ಮನ್ನೇ ಶುದ್ಧೀಕರಿಸಿಕೊಳ್ಳಿ. ನಿಮ್ಮ ಮಧ್ಯೆ ಶಾಪಕ್ಕೆ ಕಾರಣವಾದದ್ದು ಉಂಟು. ಅದನ್ನು ನೀವು ತೆಗೆದು ಹಾಕುವ ತನಕ ಶತ್ರುಗಳ ಮುಂದೆ ನಿಲ್ಲಲಾರಿರಿ ಎಂದು ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯೇ ಹೇಳಿದ್ದಾರೆ.


ಆಗ ಮೋಶೆ ಜನರಿಗೆ, “ಮೂರನೆಯ ದಿನಕ್ಕಾಗಿ ಸಿದ್ಧರಾಗಿರಿ; ಯಾವ ಪುರುಷನು ಸ್ತ್ರೀಸಂಗ ಮಾಡಬಾರದು,” ಎಂದು ಹೇಳಿದನು.


“ಮಕ್ಕಳು ಹೇಳುವುದು ನಿನಗೆ ಕೇಳಿಸುತ್ತಿದೆಯೋ?” ಎಂದು ಕೋಪಾವೇಶದಿಂದ ಯೇಸುವನ್ನು ಪ್ರಶ್ನಿಸಿದರು. “ಹೌದು, ಕೇಳಿಸುತ್ತದೆ; ‘ಬಾಲಬಾಲೆಯರ ಬಾಯಿಂದಲೂ ಮೊಲೆಗೂಸುಗಳ ನಾಲಿಗೆಯಿಂದಲೂ ನಿಮಗೆ ಸರ್ವಸ್ತುತಿ ಸಲ್ಲುವಂತೆ ಮಾಡಿದ್ದೀರಿ’ ಎಂಬ ವಾಕ್ಯವನ್ನು ನೀವು ಪವಿತ್ರಗ್ರಂಥದಲ್ಲಿ ಎಂದೂ ಓದಿಲ್ಲವೆ?” ಎಂದು ಉತ್ತರಿಸಿದರು.


ಮೋಶೆ ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಬಿಡದೆ ಮಹಿಳೆಯರಿಗೂ ಮಕ್ಕಳಿಗೂ ಅನ್ಯದೇಶೀಯರಿಗೂ ಕೇಳಿಸುವಂತೆ ಸರ್ವಸಮೂಹದ ಮುಂದೆ ಓದಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು