Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಯೇಲ 2:11 - ಕನ್ನಡ ಸತ್ಯವೇದವು C.L. Bible (BSI)

11 ಸರ್ವೇಶ್ವರ ಗರ್ಜಿಸಿ ತಮ್ಮ ಸೈನ್ಯಕ್ಕೆ ಆಜ್ಞಾಪಿಸುತ್ತಾರೆ. ಅವರ ಸೈನ್ಯ ದೊಡ್ಡದು. ಅವರ ಆಜ್ಞೆಯನ್ನು ಪಾಲಿಸುವವನು ಬಲಾಢ್ಯನು. ಸರ್ವೇಶ್ವರಸ್ವಾಮಿಯ ದಿನ ಮಹತ್ತರ; ಅತಿ ಭಯಂಕರ; ಅದರೆದುರಿಗೆ ನಿಲ್ಲಲು ಯಾರಿಗಿದೆ ಧೈರ್ಯ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಯೆಹೋವನು ತನ್ನ ಸೈನ್ಯದ ಮುಂದೆ ಗುಡುಗಿನಂತೆ ಧ್ವನಿಗೈಯುತ್ತಾನೆ, ಆತನ ಸೈನ್ಯ ಬಹಳ ದೊಡ್ಡದಾಗಿದೆ; ಆತನ ಆಜ್ಞೆಯನ್ನು ಪಾಲಿಸುವವನು ಬಲಿಷ್ಠನಾಗಿದ್ದಾನೆ. ಯೆಹೋವನ ದಿನವು ಮಹತ್ತರವೂ ಮತ್ತು ಅತಿಭಯಂಕರವೂ ಆಗಿದೆ. ಅದನ್ನು ಸಹಿಸಿಕೊಳ್ಳುವವರು ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಯೆಹೋವನು ತನ್ನ ಸೈನ್ಯದ ಮುಂದೆ ದನಿಗೈಯುತ್ತಾನೆ; ಆತನ ದಂಡು ಬಹು ದೊಡ್ಡದು; ತನ್ನ ಮಾತನ್ನು ನೆರವೇರಿಸಿಕೊಳ್ಳುವಾತನು ಬಲಿಷ್ಟನಾಗಿದ್ದಾನೆ; ಯೆಹೋವನ ದಿನವು ಮಹತ್ತರವೂ ಅತಿ ಭಯಂಕರವೂ ಆಗಿದೆ; ಅದನ್ನು ತಾಳಿಕೊಳ್ಳುವವರು ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಯೆಹೋವನು ತನ್ನ ಸೈನ್ಯವನ್ನು ಮಹಾಧ್ವನಿಯಿಂದ ಕರೆಯುತ್ತಾನೆ. ಆತನ ಶಿಬಿರವು ದೊಡ್ಡದಾಗಿದೆ. ಆ ಸೈನ್ಯವು ಆತನ ಆಜ್ಞೆಯನ್ನು ಪಾಲಿಸುತ್ತದೆ; ಆ ಸೈನ್ಯವು ಮಹಾ ಬಲಿಷ್ಠವಾಗಿದೆ. ಯೆಹೋವನ ಮಹಾದಿನವು ಮಹಾ ಭಯಂಕರವಾದ ದಿನವಾಗಿದೆ. ಅದನ್ನು ಸಹಿಸಲು ಯಾರಿಗೂ ಸಾಧ್ಯವಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಯೆಹೋವ ದೇವರು ತಮ್ಮ ಸೈನ್ಯಕ್ಕೆ ಗುಡುಗಿನಂತೆ ಆಜ್ಞಾಪಿಸುತ್ತಾರೆ. ಅವರ ಸೈನ್ಯ ಬಹು ದೊಡ್ಡದಾಗಿದೆ. ಅವರ ಆಜ್ಞೆಯನ್ನು ಪಾಲಿಸುವವನು ಪರಾಕ್ರಮಿಯು. ಯೆಹೋವ ದೇವರ ದಿವಸವು ದೊಡ್ಡದು, ಮಹಾ ಭಯಂಕರವಾದದ್ದು. ಅದನ್ನು ಸಹಿಸಿಕೊಳ್ಳುವವರು ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಯೇಲ 2:11
30 ತಿಳಿವುಗಳ ಹೋಲಿಕೆ  

“ಆದರೆ ಆತನು ಬರುವಾಗ ಆತನನ್ನು ಎದುರುಗೊಳ್ಳಬಲ್ಲವನು ಯಾರು? ಆತನ ದರ್ಶನವನ್ನು ಪಡೆದು ಬದುಕಬಲ್ಲವನು ಯಾರು?


ಯಾರು ತಡೆದಾರು ಆತನ ಸಿಟ್ಟಿಗೆ? ಯಾರು ನಿಂತಾರು ಆತನ ರೋಷಾಗ್ನಿಗೆ? ಆತನ ರೌದ್ರ ಜ್ವಾಲಾಪ್ರವಾಹದಂತೆ ಬಂಡೆಗಳು ಪುಡಿಪುಡಿ ಆತನ ಮುಂದೆ.


ಈ ಕಾರಣ, ಒಂದೇ ದಿನದಲಿ ಬಂದೆರಗುವುವು ಸಾವು ನೋವು ಕ್ಷಾಮಡಾಮರಗಳು ಬೆಂಕಿಯಲ್ಲವಳು ಭಸ್ಮವಾಗುವಳು ಅವಳ ದಂಡಿಪ ಪ್ರಭುವು ಬಲಾಢ್ಯ ದೇವನು.”


ಏಕೆಂದರೆ, ಅವರ ಕೋಪಾಗ್ನಿಯ ಘೋರ ದಿನವು ಬಂದಿದೆ. ಅದರ ಮುಂದೆ ನಿಲ್ಲುವುದಕ್ಕೆ ಯಾರು ತಾನೇ ಶಕ್ತರು?” ಎಂದು ಹಲುಬಿದರು.


ಸ್ವಾಮಿ ಸಿಯೋನಿನಿಂದ ಗರ್ಜಿಸುತ್ತಾರೆ, ಜೆರುಸಲೇಮಿನಿಂದ ಅವರ ಧ್ವನಿ ಮೊಳಗುತ್ತದೆ. ಭೂಮ್ಯಾಕಾಶಗಳು ನಡುಗುತ್ತವೆ. ಆದರೂ ಸರ್ವೇಶ್ವರ ತಮ್ಮ ಜನರಿಗೆ ಆಶ್ರಯ; ಇಸ್ರಯೇಲರಿಗೆ ರಕ್ಷಣಾ ದುರ್ಗ.


ಹೌದು, ಭಯಂಕರವಾದ ದಿನ ಬರಲಿದೆ, ಅದಕ್ಕಿರದು ಎಣೆ! ಅದು ಇಕ್ಕಟ್ಟಿನ ದಿನ, ಆದರೂ ಅದರಿಂದ ಯಕೋಬ್ಯರಿಗಿದೆ ಬಿಡುಗಡೆ.”


ನಡುಗಿದವು ರಾಷ್ಟ್ರಗಳು, ಉಡುಗಿದವು ರಾಜ್ಯಗಳು I ದೇವರ ಗರ್ಜನೆಗೆ ಕರಗಿತು ಧರೆಯೆಲ್ಲವು II


ಖಂಡಿತವಾಗಿ ಸ್ವಾಮಿಯ ದಿನ ಬೆಳಕಾಗಿರದು, ಕತ್ತಲೆಯಾಗಿರುತ್ತದೆ, ಒಂದು ಚುಕ್ಕೆಯೂ ಇಲ್ಲದ ಕಾರಿರುಳಂತಿರುತ್ತದೆ.


ಸರ್ವೇಶ್ವರಸ್ವಾಮಿಯ ದಿನ ಸಮೀಪಿಸಿದೆ. ಆ ದಿನ ಸರ್ವಶಕ್ತನಿಂದ ವಿನಾಶವನ್ನು ತರಲಿದೆ; ಎಂಥಾ ಭಯಂಕರ ದಿನವದು!


ಅವರನ್ನು ಬಿಡಿಸಬಲ್ಲವನು ಬಲಿಷ್ಠನು. ‘ಸೇನಾಧೀಶ್ವರ ಸರ್ವೇಶ್ವರ’ ಎಂಬುದೇ ಆತನ ನಾಮಧೇಯ. ಆತನೇ ಅವರ ವ್ಯಾಜ್ಯವನ್ನು ಜಯಿಸಿ, ನಾಡಿಗೆ ಶಾಂತಿಯನ್ನು ತಂದು, ಬಾಬಿಲೋನಿಯದವರಿಗೆ ಕಳವಳವನ್ನುಂಟುಮಾಡುವನು.”


ಸರ್ವೇಶ್ವರ ಹೊರಟಿರುವನು ಶೂರನಂತೆ ರೌದ್ರದಿಂದಿರುವನು ಯುದ್ಧವೀರನಂತೆ ಆರ್ಭಟಿಸಿ ಗರ್ಜಿಸುವನು ರಣಕಹಳೆಯಂತೆ ಶತ್ರುಗಳ ಮೇಲೆ ಬೀಳುವನು ಪರಾಕ್ರಮಿಯಂತೆ.


ಇಗೋ, ಬೆಟ್ಟಗುಡ್ಡಗಳಿಂದ ಕೇಳಿಬರುತ್ತಿದೆ ಜನಜಂಗುಳಿಯಂಥ ಗದ್ದಲ; ಒಟ್ಟಿಗೆ ಕೂಡಿಕೊಂಡ ದೇಶವಿದೇಶಗಳ ಆರ್ಭಟ; ಸಜ್ಜಾಗಿ ನಿಂತಿದೆ ಸೇನಾಧೀಶ್ವರ ಸರ್ವೇಶ್ವರನ ಸೈನ್ಯ.


ಬಿಳಾಮನು ಮುಂದುವರೆದು ನುಡಿದದ್ದು ಏನೆಂದರೆ: ಅಯ್ಯೋ, ದೇವರೇ ಹೀಗೆ ಮಾಡುವಾಗ ಉಳಿಯುವವರಾರು?


ಸರ್ವೇಶ್ವರಸ್ವಾಮಿಯ ಭಯಂಕರ ಮಹಾದಿನದ ಮುಂಚೆ ಸೂರ್ಯನು ಅಂಧಕಾರಮಯನಾಗುವನು; ಚಂದ್ರನು ರಕ್ತಗೆಂಪಾಗುವನು.


“(ಯೆರೆಮೀಯನೇ), ನೀನು ಪ್ರವಾದಿಸುತ್ತಾ ಅವರಿಗೆ ಈ ಮಾತುಗಳನ್ನು ಹೇಳು: ‘ಸರ್ವೇಶ್ವರ ಗರ್ಜಿಸುವನು ಮೇಲಣಲೋಕದಿಂದ ದನಿಗೈವನು ತನ್ನ ಘನ ನಿವಾಸದಿಂದ ಗಟ್ಟಿಯಾಗಿ ಕೂಗುವನು ತನ್ನ ಹುಲ್ಲುಗಾವಲಿನ ಮಂದೆಯ ವಿರುದ್ಧ ಕೂಗಾಡುವನು ದ್ರಾಕ್ಷೆಯ ಹಣ್ಣನ್ನು ತುಳಿಯುವವರಂತೆ ಭೂನಿವಾಸಿಗಳೆಲ್ಲರು ಭಯಭ್ರಾಂತರಾಗುವಂತೆ.


ಸ್ವಾಮಿಯ ಆ ದಿನಕ್ಕಾಗಿ ಕಾತುರದಿಂದ ಕಾದಿರುವರೇ, ಅಯ್ಯೋ ನಿಮಗೆ ಕೇಡು; ಆ ದಿನ ಏನಾಗುತ್ತದೆಂದು ನಿಮಗೆ ಗೊತ್ತೆ? ಸ್ವಾಮಿಯ ಆ ದಿನ ನಿಮಗೆ ಬೆಳಕಾಗಿರದು, ಕತ್ತಲೆಯ ದಿನವಾಗಿರುವುದು.


ಆಮೋಸನ ಪ್ರಕಟನೆ: ಗರ್ಜಿಸುತಿಹನು ಸರ್ವೇಶ್ವರ ಸಿಯೋನಿನಿಂದ ಧ್ವನಿಗೈಯುತಿಹನು ಜೆರುಸಲೇಮಿನಿಂದ; ಬಾಡಿಹೋಗುತ್ತಿವೆ ಕುರುಬರಾ ಹುಲ್ಲುಗಾವಲುಗಳು ಒಣಗಿಹೋಗುತ್ತಿವೆ ಕಾರ್ಮೆಲ್ ಗುಡ್ಡದ ನೆತ್ತಿಯ ಗಿಡಗಳು.


ಗುಂಪುಮಿಡತೆ, ಕಂಬಳಿಮಿಡತೆ, ಚೂರಿಮಿಡತೆ, ನಾನು ಕಳುಹಿಸಿದ ಈ ಮಿಡತೆಗಳ ಸೈನ್ಯಗಳು ತಿಂದು ನಷ್ಟಮಾಡಿದ ವರ್ಷಗಳನ್ನು ನಿಮಗೆ ಭರಿಸಿಕೊಡುವೆನು.


ನಾನು ನಿನ್ನನ್ನು ದಂಡಿಸುವ ಕಾಲದಲ್ಲಿ ಮನಸ್ಸನ್ನು ಗಟ್ಟಿಮಾಡಿಕೊಂಡಿರುವೆಯಾ? ಕೈಗಳನ್ನು ಬಲಪಡಿಸಿಕೊಂಡಿರುವೆಯಾ? ಸರ್ವೇಶ್ವರನಾದ ನಾನೇ ಇದನ್ನು ನುಡಿದಿದ್ದೇನೆ. ಅಂತೆಯೇ ನಡೆಸುತ್ತೇನೆ.


ಆ ದಿನ ಬಂದಾಗ ಈಜಿಪ್ಟಿನಿಂದ ನೊಣಗಳನ್ನೋ ಎಂಬಂತೆ, ಅಸ್ಸೀರಿಯ ನಾಡಿನಿಂದ ದುಂಬಿಗಳನ್ನೋ ಎಂಬಂತೆ, ಸ್ವಾಮಿ ಸಿಳ್ಳುಹಾಕಿ ಶತ್ರುಗಳನ್ನು ಬರಮಾಡುವರು.


ಆಜ್ಞಾಘೋಷವಾದಾಗ, ಪ್ರಧಾನ ದೂತನ ಧ್ವನಿಯು ಕೇಳಿಬಂದಾಗ, ದೇವರ ತುತೂರಿ ನಾದಗೈದಾಗ, ಪ್ರಭುವೇ ಸ್ವರ್ಗದಿಂದ ಇಳಿದುಬರುತ್ತಾರೆ. ಆಗ, ಕ್ರಿಸ್ತಸ್ಥರಾಗಿ ಮೃತರಾದವರು ಮೊದಲು ಎದ್ದುಬರುತ್ತಾರೆ.


ಶತ್ರುರಾಷ್ಟ್ರ ನನ್ನ ನಾಡನ್ನು ಆಕ್ರಮಿಸಿದೆ. ಆ ರಾಷ್ಟ್ರ ಪ್ರಬಲವಾದುದು; ಅದರ ಸೈನ್ಯ ಅಸಂಖ್ಯಾತವಾದುದು; ಅದರ ಹಲ್ಲುಗಳು ಸಿಂಹದ ಹಲ್ಲುಗಳು; ಅದರ ಕೋರೆಗಳು ಮೃಗರಾಜನ ಕೋರೆಗಳು.


ಸಿಯೋನಿನಲ್ಲಿ ಕೊಂಬೂದಿರಿ; ನನ್ನ ಪರಿಶುದ್ಧಪರ್ವತದಲ್ಲಿ ಎಚ್ಚರಿಕೆಯ ವಾಣಿ ಮೊಳಗಲಿ; ಸಮಸ್ತ ದೇಶನಿವಾಸಿಗಳು ಹೆದರಿ ನಡುಗಲಿ; ಸರ್ವೇಶ್ವರಸ್ವಾಮಿಯ ದಿನ ಬರಲಿದೆ. ಸನ್ನಿಹಿತವಾಗಿದೆ.


ಅದು ಕಾರಿರುಳಿನ ಕರಾಳ ದಿನ, ಕಾರ್ಮುಗಿಲ ಕಾರ್ಗತ್ತಲ ದಿನ. ಮುಂಬೆಳಕು ಗುಡ್ಡದಿಂದ ಗುಡ್ಡಕ್ಕೆ ಹರಡುವಂತೆ ಪ್ರಬಲವಾದ ದೊಡ್ಡಸೈನ್ಯವೊಂದು ಬರುತ್ತಿದೆ; ಇಂಥ ಸೈನ್ಯ ಹಿಂದೆಂದೂ ಬಂದಿಲ್ಲ, ತಲತಲಾಂತರಕ್ಕೂ ಬರುವಂತಿಲ್ಲ.


“ಇಗೋ, ನ್ಯಾಯತೀರ್ಪಿನ ಕಣಿವೆಯಲ್ಲಿ ತಂಡೋಪತಂಡವಾದ ಜನಸ್ತೋಮ! ತೀರ್ಪಿನ ಕಣಿವೆಯಲ್ಲಿರುವವರಿಗೆ ಸರ್ವೇಶ್ವರನ ದಿನ ಸನ್ನಿಹಿತ!


“ಸಮಸ್ತ ರಾಷ್ಟ್ರಗಳಿಗೂ ಸರ್ವೇಶ್ವರನ ದಿನ ಸಮೀಪಿಸಿದೆ. ನೀನು ಮಾಡಿದ್ದನ್ನೆ ನಿನಗೂ ಮಾಡಲಾಗುವುದು. ನಿನ್ನ ದುಷ್ಕೃತ್ಯವು ನಿನ್ನ ತಲೆಗೇ ಬರುವುದು.


ಚದರಿಸಿದನು ಶತ್ರುಗಳನು ಬಾಣಗಳನ್ನೆಸೆದು I ತಳಮಳಗೊಳಿಸಿದನವರನು ಸಿಡಿಲನು ಹೊಡೆದು II


ಹೇ ದೇವಾ, ಹೇ ಪ್ರಭು, ನೀನೇರಿದೆ ಉನ್ನತ ಶಿಖರಕೆ I ಕರೆದೊಯ್ದೆ ಖೈದಿಗಳನೇಕರನು ನಿನ್ನ ನಿವಾಸಕೆ I ಸರಳರಿಂದಲೂ ದುರುಳರಿಂದಲೂ ಪಡೆದೆ ಕಪ್ಪಕಾಣಿಕೆ I ದೇವರಾದ ಪ್ರಭುವೇ, ಅಲ್ಲೇ ನೀ ವಾಸಿಸುವೆ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು