Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 9:4 - ಕನ್ನಡ ಸತ್ಯವೇದವು C.L. Bible (BSI)

4 ದೇವರ ಹೃದಯ ಧೀಮಂತ, ಅವರ ಶಕ್ತಿ ಅತುಳ ಆತನನ್ನು ಪ್ರತಿಭಟಿಸಿ ಜಯಗಳಿಸಿದವನಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ದೇವರ ಹೃದಯವು ವಿವೇಕವುಳ್ಳದ್ದು, ಆತನ ಶಕ್ತಿಯು ಪ್ರಬಲವಾದದ್ದು. ಆತನ ವಿರುದ್ಧವಾಗಿ ಮನಸ್ಸು ಕಠಿಣಮಾಡಿಕೊಂಡವನು ಸಾರ್ಥಕನಾದದ್ದುಂಟೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ದೇವರ ಹೃದಯವು ವಿವೇಕವುಳ್ಳದ್ದು, ಆತನ ಶಕ್ತಿಯು ಪ್ರಬಲವಾದದ್ದು; ಆತನಿಗೆ ವಿರುದ್ಧವಾಗಿ ಮನಸ್ಸು ಕಠಿಣಮಾಡಿಕೊಂಡವನು ಸಾರ್ಥಕನಾದದ್ದುಂಟೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ದೇವರ ಜ್ಞಾನವು ಅಗಾಧವಾದದ್ದು; ಆತನ ಶಕ್ತಿಯು ಮಹತ್ವವಾದದ್ದು; ಯಾವನೂ ದೇವರಿಗೆ ವಿರೋಧವಾಗಿ ಜಯಗಳಿಸಲಾರನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ದೇವರ ಜ್ಞಾನವು ಆಳವಾದದ್ದು, ಶಕ್ತಿಯಲ್ಲಿ ದೇವರು ಪ್ರಬಲರೂ ಆಗಿದ್ದಾರೆ; ದೇವರ ವಿರೋಧವಾಗಿ ತನ್ನನ್ನು ಕಠಿಣಪಡಿಸಿಕೊಂಡು ವೃದ್ಧಿಯಾಗುವವನು ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 9:4
39 ತಿಳಿವುಗಳ ಹೋಲಿಕೆ  

ದೇವರು ಸರ್ವಶಕ್ತನು, ಯಾರನ್ನೂ ತುಚ್ಛೀಕರಿಸನು ಆತನ ಬುದ್ಧಿಸಾಮರ್ಥ್ಯ ಅಪಾರವಾದುದು.


ನಮ್ಮಲ್ಲಿ ಕಾರ್ಯಸಾಧಿಸುವ ಹಾಗೂ ನಮ್ಮ ಆಶೆ-ಆಕಾಂಕ್ಷೆಗಿಂತಲೂ ಬೇಡಿಕೆ-ಕೋರಿಕೆಗಿಂತಲೂ ಅಧಿಕವಾದುದನ್ನು ಮಾಡಲು ದೇವರು ಶಕ್ತರು. ಅವರಿಗೆ ಧರ್ಮಸಭೆಯಲ್ಲೂ ಕ್ರಿಸ್ತಯೇಸುವಿನಲ್ಲೂ ಯುಗಯುಗಾಂತರಕ್ಕೂ ತಲತಲಾಂತರಕ್ಕೂ ಮಹಿಮೆ ಸಲ್ಲಲಿ! ಆಮೆನ್.


ಹೀಗೆ ಧರ್ಮಸಭೆಯ ಮೂಲಕ ದೇವರ ಬಹುರೂಪದ ಜ್ಞಾನವು ಅಶರೀರ ಶಕ್ತಿಗಳ ಅಧಿಕಾರಿಗಳಿಗೂ ಅಧಿಪತಿಗಳಿಗೂ ಈಗಿನ ಕಾಲದಲ್ಲಿ ತಿಳಿಯಬೇಕೆಂಬುದೇ ಅವರ ಉದ್ದೇಶವಾಗಿತ್ತು.


ಎಷ್ಟು ಗದರಿಸಿದರೂ ತಗ್ಗದ ಹಟಮಾರಿ ಫಕ್ಕನೆ ಬೀಳುವನು, ಮತ್ತೆ ಏಳನು.


ಶಕ್ತಿಪ್ರಯೋಗದ ಮಾತೆತ್ತಿದರೆ, ‘ಇಗೋ, ನಾನೇ ಶಕ್ತಿಸ್ವರೂಪ’ ಎನ್ನುತ್ತಾನೆ. ನ್ಯಾಯವಿಚಾರಣೆ ಆಗಲಿಯೆಂದರೆ, ‘ನನ್ನನ್ನು ಕರೆಯಿಸುವವನಾರು?’ ಎನ್ನುತ್ತಾನೆ.


ಕ್ರೈಸ್ತವಿಶ್ವಾಸಿಗಳಾದ ನಮ್ಮಲ್ಲಿ ದೇವರು ಸಾಧಿಸಿರುವ ಮಹತ್ಕಾರ್ಯಗಳು ಎಷ್ಟು ಶಕ್ತಿಯುತವಾದುವು ಎಂಬುದು ನಿಮಗೆ ಮನದಟ್ಟಾಗಬೇಕು.


ನಾವು ಪ್ರಭುವನ್ನು ಅಸೂಯೆಗೆಬ್ಬಿಸಬಹುದೇ? ಅವರಿಗಿಂತ ನಾವು ಬಲಾಢ್ಯರೇ?


ದೇವರ ಸಿರಿಸಂಪತ್ತು, ಜ್ಞಾನವಿಜ್ಞಾನ ಎಷ್ಟು ಅಗಾಧ! ಪರಿಶೋಧನೆಗೂ ನಿಲುಕದ ಅವರ ನಿರ್ಣಯ ಎಷ್ಟು ಅಗಮ್ಯ! ಅವರ ನಿಯೋಜನೆಗಳು ಗ್ರಹಿಕೆಗೂ ಎಷ್ಟು ಅಸಾಧ್ಯ!


ಯುಗಯುಗಾಂತರಕ್ಕೂ ದೇವರ ನಾಮಕ್ಕೆ ಸ್ತುತಿಸ್ತೋತ್ರ! ಏಕೆಂದರೆ ಜ್ಞಾನವೂ ಶಕ್ತಿಯೂ ಆತನಿಗೆ ಸ್ವಂತ.


ಭಯದಿಂದ ನಡೆದುಕೊಳ್ಳುವವನು ಭಾಗ್ಯವಂತನು; ಕಠಿಣ ಹೃದಯನು ಕೇಡಿಗೆ ತುತ್ತಾಗುವನು.


ಜ್ಞಾನದಿಂದ ಜಗವನು ನಿರ್ಮಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.


ಸೃಜಿಸಿರುವೆ ಎಲ್ಲವನು ಸುಜ್ಞಾನದಿಂದ I ಜಗವೆಲ್ಲ ತುಂಬಿದೆ ನಿನ್ನ ಸೃಷ್ಟಿಯಿಂದ II


ದೇವರಾದ ನನಗಿರುವಂಥ ಭುಜಬಲ ನಿನಗಿದೆಯೋ? ನನ್ನ ಧ್ವನಿಗೆ ಸಮನಾಗಿ ನೀನು ಗುಡುಗಬಲ್ಲೆಯೋ?


ಆದರೆ ದೇವರಲ್ಲಿದೆ ಜ್ಞಾನದೊಡನೆ ಶಕ್ತಿಕೂಡ ಆತನಲ್ಲಿದೆ ವಿವೇಕ ಮತ್ತು ಸನ್ಮತಿ ಸಹ.


ಜ್ಞಾನದ ರಹಸ್ಯಗಳನು ದೇವರೇ ನಿನಗೆ ತಿಳಿಸಲಿ ಸುಜ್ಞಾನ ಬಹುಮುಖವಾದುದೆಂದು ಆತನೇ ತೋರಿಸಲಿ ನಿನ್ನ ದೋಷಗಳನ್ನೆಲ್ಲ ಆತ ಲಕ್ಷಿಸಿಲ್ಲ ಎಂಬುದು ನಿನಗೆ ತಿಳಿದಿರಲಿ.


ಆಗ ನಾನು ಸಾಂತ್ವನ ಪಡೆಯುತ್ತಿದ್ದೆ ಮಿತಿಯಿಲ್ಲದ ಯಾತನೆಯಲ್ಲೂ ಆದರ ಹೊಂದುತ್ತಿದ್ದೆ. ಪರಮಪಾವನನ ಮಾತನು ಬಿಡದೆ ಅನುಸರಿಸಿದೆನಲ್ಲವೆ?


ಇಗೋ, ದೇವರೇ ನಾಯಕರಾಗಿ ನಮ್ಮೊಂದಿಗಿರುತ್ತಾರೆ; ನಿಮಗೆ ವಿರುದ್ಧ ಯುದ್ಧ ಕಹಳೆಗಳನ್ನು ಮೊಳಗಿಸುವ ಯಾಜಕರೂ ನಮ್ಮೊಂದಿಗೆ ಇರುತ್ತಾರೆ. ಇಸ್ರಯೇಲರೇ, ನಿಮ್ಮ ಪೂರ್ವಜರ ದೇವರಾದ ಸರ್ವೇಶ್ವರನೊಡನೆ ಯುದ್ಧಮಾಡಬೇಡಿ; ನೀವು ಜಯಿಸಲಾರಿರಿ,” ಎಂದು ಕೂಗಿ ಹೇಳಿದನು.


ಆತ ನನ್ನೊಡನೆ ವ್ಯಾಜ್ಯವಾಡುವನೋ ಶಕ್ತಿಸಾಮರ್ಥ್ಯದಿಂದ? ಇಲ್ಲ, ಆಲಿಸುವನು ನನ್ನ ವಿಜ್ಞಾಪನೆಯನು ಗಮನದಿಂದ.


ದೇವರಂತು ತನ್ನ ಶಕ್ತಿಯಿಂದ ಬಲಿಷ್ಠರನ್ನು ಉಳಿಸುತ್ತಾನೆ ತಮ್ಮ ಜೀವ ಇನ್ನುಳಿಯದು ಎಂದಿದ್ದರೂ ಅವರು ಉದ್ಧಾರವಾಗುತ್ತಾರೆ.


“ದೇವರು ಮಹೋನ್ನತ ಪ್ರಭು; ಭಯಭಕ್ತಿಗೆ ಪಾತ್ರನು ಉನ್ನತಲೋಕದಲ್ಲಿ ಶಾಂತಿಸಮಾಧಾನವನು ಸ್ಥಾಪಿಸಿಹನು.


ಸುಜ್ಞಾನದ ಮಾರ್ಗ ಬಲ್ಲವನು ದೇವರೇ ಅದರ ಸ್ಥಳಗೊತ್ತಿದೆ ಆತನೊಬ್ಬನಿಗೆ.


ಕಂಡುಹಿಡಿಯಲಾಗದು ಇಂಥ ಸರ್ವಶಕ್ತನನು ನಮ್ಮಿಂದ ಶಕ್ತಿಯಲೂ ಸತ್ಯದಲೂ ಪರಮ ಪರಾಕ್ರಮಿ ಆತ ನ್ಯಾಯಪೂರ್ಣನಾದ ಆತ ದಬ್ಬಾಳಿಕೆ ನಡೆಸುವವನಲ್ಲ ನ್ಯಾಯಕ್ಕಾಗಲೀ ಧರ್ಮಕ್ಕಾಗಲೀ ಆತ ಧಕ್ಕೆ ತರುವವನಲ್ಲ.


ಜ್ಞಾನವನು ದಯಪಾಲಿಸಿದವನಾರು ಇಬಿಸ್ ಪಕ್ಷಿಗೆ? ವಿವೇಕವನು ಅನುಗ್ರಹಿಸಿದವನಾರು ಕೋಳಿಹುಂಜಕ್ಕೆ


ಯಾರಿಗಿದೆ ಮೋಡಗಳನು ಲೆಕ್ಕಿಸುವ ಶಕ್ತಿ? ಆಕಾಶದಲ್ಲಿನ ಬುದ್ದಲಿಗಳನು ಮೊಗಚಿಹಾಕುವ ಬುದ್ಧಿಶಕ್ತಿ?


ಬಾಬಿಲೋನೇ, ನಿನಗೆ ನಾನು ಉರುಲೊಡ್ಡಿದ್ದೆ. ನೀನು ತಿಳಿಯದೆ ಅದರಲ್ಲಿ ಸಿಕ್ಕಿಕೊಂಡೆ. ನೀನು ಸರ್ವೇಶ್ವರನೊಂದಿಗೆ ಹೋರಾಡಿದ್ದರಿಂದ ಬೋನಿನ ವಶವಾದೆ.


ಫರೋಹನು ಆಳುಗಳನ್ನು ಕಳುಹಿಸಿ ವಿಚಾರಿಸಿದನು. ಇಸ್ರಯೇಲರ ಪಶುಪ್ರಾಣಿಗಳಲ್ಲಿ ಒಂದೂ ಸಾಯಲಿಲ್ಲವೆಂದು ತಿಳಿದುಬಂದಿತು. ಆದರೂ ಕೂಡ ಫರೋಹನ ಹೃದಯ ಕಠಿಣವಾಯಿತು. ಆ ಜನರಿಗೆ ಹೊರಡಲಿಕ್ಕೆ ಅವನು ಅಪ್ಪಣೆ ಕೊಡದೆಹೋದನು.


ನಿನ್ನೆದುರಾಳಿಗಳನು ಕೆಡವಿಬಿಡುತಿ ಮಹಾ ತೇಜಸ್ವಿಯಾಗಿ ಒಣಹುಲ್ಲಂತೆ ಭಸ್ಮಮಾಡುತಿ ಅವರನು ಕೋಪಾಗ್ನಿಯಾಗಿ.


“ಸರ್ವೇಶ್ವರಾ, ನಮ್ಮ ಪಿತೃಗಳ ದೇವರೇ, ಪರಲೋಕದಲ್ಲಿ ದೇವರಾಗಿ ಇರುವವರು ನೀವಲ್ಲವೇ? ನೀವು ಜನಾಂಗಗಳ ಎಲ್ಲ ರಾಜ್ಯಗಳನ್ನೂ ಆಳುತ್ತಿದ್ದೀರಿ. ನಿಮ್ಮ ಹಸ್ತದಲ್ಲಿ ಬಲಪರಾಕ್ರಮಗಳಿವೆ; ನಿಮ್ಮೆದುರಿನಲ್ಲಿ ಯಾರೂ ನಿಲ್ಲಲಾರರು.


ದೇವರಿಗೆ ವಿರುದ್ಧ ಕುದಿಯುತ್ತಿರುವೆ ಏಕೆ? ಬಾಯಿಂದ ಮಾತು ಹರಿಯುತ್ತಿವೆ ಏಕೆ?


ಅದರ ಮೂಗಿಗೆ ಆಪನು ಪೋಣಿಸಬಲ್ಲೆಯಾ? ಅದರ ದವಡೆಗೆ ಮುಳ್ಳನು ಚುಚ್ಚಬಲ್ಲೆಯಾ?


ಧಿಕ್ಕಾರ ! ತನ್ನನು ರೂಪಿಸಿದವನೊಡನೇ ವ್ಯಾಜ್ಯ ಮಾಡುವವನಿಗೆ; ಅವನು ಕೂಡ ಮಣ್ಣುಮಡಕೆಗಳಲ್ಲಿ ಒಂದು ಮಡಕೆ ಅಲ್ಲವೇ? “ಏನು ಮಾಡುತ್ತಿ” ಎಂದು ಮಣ್ಣು ಕುಂಬಾರನನು ಕೇಳುವುದುಂಟೆ? ‘ನಾನು ನಿನ್ನ ಕೈಯ ಕೃತಿ ಅಲ್ಲ’ ಎಂದು ಆ ಮಡಕೆ ಹೇಳುವುದುಂಟೆ?


ಸರ್ವೇಶ್ವರ ಶಾಂತಿಸ್ವರೂಪಿ; ಆದರೆ ಆತನ ಶಕ್ತಿ ಅಪಾರ, ಅಪರಾಧಿಗಳನ್ನು ಆತ ಶಿಕ್ಷಿಸದೆ ಬಿಡ; ಗಾಳಿಬಿರುಗಾಳಿಗಳ ನಡುವೆ ಆತನ ಹಾದಿ; ಮೋಡಗಳು ಆತನ ನಡೆಯಿಂದೇಳುವ ಧೂಳಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು