Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 9:15 - ಕನ್ನಡ ಸತ್ಯವೇದವು C.L. Bible (BSI)

15 ನಾನು ಸತ್ಯವಂತನಾಗಿದ್ದರೂ ವಾದಿಸಲಾರೆನು ನನ್ನ ನ್ಯಾಯಾಧೀಶನಲ್ಲಿ ದಯೆಯನು ಕೋರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ನಾನು ನೀತಿವಂತನಾಗಿದ್ದರೂ ಉತ್ತರಕೊಡೆನು; ಆದರೆ ನನ್ನ ನ್ಯಾಯಾಧಿಪತಿಗೆ ಮೊರೆಯಿಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ನನಗೆ ನ್ಯಾಯವಿದ್ದರೂ ಪ್ರತಿವಾದ ಮಾಡಲಾರದೆ ನನ್ನ ವಿರೋಧಿಗೆ ಶರಣಾಗತನಾಗುತ್ತಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಯೋಬನಾದ ನಾನು ನಿರಪರಾಧಿಯಾಗಿದ್ದರೂ ಆತನಿಗೆ ಉತ್ತರವನ್ನು ಕೊಡಲಾರೆ. ನನಗೆ ಕರುಣೆ ತೋರುವಂತೆ ನ್ಯಾಯಾಧಿಪತಿಯಾದ ದೇವರನ್ನು ಬೇಡಿಕೊಳ್ಳುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ನಾನು ನೀತಿವಂತನಾಗಿದ್ದರೂ ಉತ್ತರ ಕೊಡೆನು; ಆದರೆ ನನ್ನ ನ್ಯಾಯಾಧಿಪತಿಗೆ ಕರುಣೆಗೋಸ್ಕರ ಮೊರೆಯಿಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 9:15
18 ತಿಳಿವುಗಳ ಹೋಲಿಕೆ  

ನಾನು ದುರ್ಮಾರ್ಗಿಯಾದರಂತೂ ನನಗಿಲ್ಲ ಗತಿ ಸನ್ಮಾರ್ಗಿಯಾದರೂ ಕೂಡ ನಡೆವಂತಿಲ್ಲ ತಲೆಯೆತ್ತಿ ಏಕೆಂದರೆ ನಾಚಿ ನಿಂತಿರುವೆ, ಯಾತನೆಯ ಹೊರೆಹೊತ್ತಿ.


ಶುದ್ಧನೂ ಸತ್ಯವಂತನೂ ನೀನಾಗಿದ್ದರೆ ದೇವರ ಪ್ರಸನ್ನತೆಯನು ಅರಸಿದೆಯಾದರೆ ಆ ಸರ್ವಶಕ್ತನನು ವಿಜ್ಞಾಪಿಸಿದೆಯಾದರೆ,


ಅವರು, ಅವಮಾನಪಡಿಸಿದವರನ್ನು ಪ್ರತಿಯಾಗಿ ಅವಮಾನಪಡಿಸಲಿಲ್ಲ. ಅವರು ಯಾತನೆಯನ್ನು ಅನುಭವಿಸುವಾಗಲೂ ಯಾರಿಗೂ ಬೆದರಿಕೆ ಹಾಕಲಿಲ್ಲ. ಬದಲಿಗೆ, ಸತ್ಯಸ್ವರೂಪರೂ ನ್ಯಾಯಾಧಿಪತಿಯೂ ಆದ ದೇವರಿಗೆ ತಮ್ಮನ್ನೇ ಒಪ್ಪಿಸಿಕೊಂಡರು.


ಆತನನು ಪ್ರಾರ್ಥಿಸುವೆ, ಆತ ಆಲಿಸುವನು ತೀರಿಸುವೆ ಆತನಿಗೆ ನೀ ಹೊತ್ತ ಹರಕೆಗಳನು.


ನಾನು ದೇವರಿಗೆ ಇಂತೆನ್ನುವೆ: ‘ನನ್ನನ್ನು ನಿರ್ಣಯಿಸಬೇಡ ಅಪರಾಧಿಯೆಂದು ನನ್ನ ಮೇಲೆ ನಿನಗಿರುವ ಆಪಾದನೆಯನು ತಿಳಿಸಿಬಿಡು.


ನಾನು ನೀನಾಗಿದ್ದರೆ ದೇವರಿಗೆ ಮೊರೆಯಿಡುತ್ತಿದ್ದೆ ನನ್ನ ವಿಷಯವನು ಆತನ ಕೈಗೆ ಬಿಡುತ್ತಿದ್ದೆ.


ನನ್ನಲ್ಲಿ ದೋಷವಿದೆಯೆಂದು ನನ್ನ ಮನಸ್ಸಾಕ್ಷಿಗೆ ತೋರುವುದಿಲ್ಲ. ಆದರೂ ನಾನು ನಿರ್ದೋಷಿಯೆಂದು ಹೇಳುವಂತಿಲ್ಲ. ನನ್ನ ನ್ಯಾಯನಿರ್ಣಯ ಮಾಡುವವರು ಪ್ರಭುವೇ.


ನನ್ನ ದೇವರೇ, ಕಿವಿಗೊಟ್ಟು ಕೇಳಿ, ಕಣ್ಣು ತೆರೆದು ನಮ್ಮ ಹಾಳು ಪ್ರದೇಶಗಳನ್ನೂ ನಿಮ್ಮ ಹೆಸರುಗೊಂಡಿರುವ ನಗರವನ್ನೂ ನೋಡಿ. ನಾವು ಸದ್ಧರ್ಮಿಗಳೇನೂ ಅಲ್ಲ. ನಿಮ್ಮ ಮಹಾಕೃಪೆಯನ್ನೇ ನಂಬಿಕೊಂಡು ಈ ಬಿನ್ನಹಗಳನ್ನು ನಿಮ್ಮ ಮುಂದೆ ಅರಿಕೆಮಾಡುತ್ತಿದ್ದೇವೆ.


ಉಪವಾಸವಿದ್ದು, ಗೋಣಿತಟ್ಟು ಸುತ್ತಿಕೊಂಡು, ಬೂದಿ ಬಳಿದುಕೊಂಡು, ಸರ್ವೇಶ್ವರನಾದ ದೇವರ ಕಡೆಗೆ ಮುಖವೆತ್ತಿ, ಪ್ರಾರ್ಥನೆ-ವಿಜ್ಞಾಪನೆಗಳಲ್ಲಿ ನಿತರನಾದೆ.


ಕಣ್ಣೀರಿಡುತ್ತಾ ಹೋದವರು ಹಿಂದಿರುಗಿ ಬರುವರು. ಪ್ರಾರ್ಥಿಸುತ್ತಾ ಅವರು ಮುನ್ನಡೆಯುವಂತೆ ಮಾಡುವೆನು ಎಡವಲಾಗದ ಸಮಮಾರ್ಗದಲ್ಲಿ ಅವರನ್ನು ನಡೆಸುವೆನು ತುಂಬಿದ ತೊರೆಯ ಬಳಿಗೆ ಬರಮಾಡುವೆನು.


ಅಲ್ಲಿ ಸಜ್ಜನನಿಗೆ ಮಾತ್ರ ವಾದಿಸಲು ಸಾಧ್ಯ. ನಿತ್ಯವಾದ ಬಿಡುಗಡೆ ಆ ನ್ಯಾಯಾಧೀಶನಿಂದ ನನಗೆ ಲಭ್ಯ.


ಅವರು ಆಲಿಸಿ, ಅವನಿಗೆ ಸದುತ್ತರವನ್ನು ದಯಪಾಲಿಸಿದರು. ಅವನನ್ನು ಮರಳಿ ಜೆರುಸಲೇಮಿಗೆ ಬರಮಾಡಿ ಅರಸುತನವನ್ನು ಕೊಟ್ಟರು. ಆಗ ಸರ್ವೇಶ್ವರಸ್ವಾಮಿಯೇ ದೇವರು ಎಂಬುದು ಅವನಿಗೆ ಮನದಟ್ಟಾಯಿತು.


ನಾನು ಕರೆದಾಗ ಓಗೊಟ್ಟಿದ್ದರೂ ನನ್ನ ವಿಜ್ಞಾಪನೆಯನ್ನು ಆಲಿಸುವನೆಂದು ನಂಬುತ್ತಿರಲಿಲ್ಲ.


ನಾನು ಸತ್ಯವಂತನಾಗಿದ್ದರೂ ಬಾಯೇ ನಾನು ಅಪರಾಧಿಯೆಂದು ಒಪ್ಪಿಕೊಳ್ಳುತ್ತದೆ. ನಾನು ನಿರ್ದೋಷಿಯಾಗಿದ್ದರೂ ‘ನಿನ್ನದು ವಕ್ರಬುದ್ಧಿ’ ಎನ್ನುತ್ತದೆ.


ನಾನು ನಿರ್ದೋಷಿಯೇ ಹೌದು; ಅದರ ಬಗ್ಗೆ ನನಗಿಲ್ಲ ಚಿಂತೆ. ನನ್ನ ಪ್ರಾಣ ಕೂಡ ನನಗೆ ತೃಣವಾಗಿಬಿಟ್ಟಿದೆ.


ಒಮ್ಮೆ ಮಾತಾಡಿದೆ, ಮತ್ತೆ ಮಾತಾಡೆನು ಹೌದು, ಇನ್ನೊಮ್ಮೆ ಮಾತಾಡಿದೆ, ಹೆಚ್ಚು ಮಾತಾಡೆನು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು