Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 8:22 - ಕನ್ನಡ ಸತ್ಯವೇದವು C.L. Bible (BSI)

22 ಅವಮಾನ ಮುಸುಕುವುದು ನಿನ್ನ ಹಗೆಗಳನ್ನು ದುರುಳರಾ ನಿವಾಸವಾದರೋ ನಿರ್ಮೂಲವಾಗುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ನಿನ್ನ ಶತ್ರುಗಳನ್ನು ಅವಮಾನವು ಮುಸುಕುವುದು; ದುಷ್ಟರ ನಿವಾಸವು ನಿರ್ಮೂಲವಾಗುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ನಿನ್ನ ಹಗೆಗಳನ್ನು ಅವಮಾನವು ಮುಸುಕುವದು; ದುಷ್ಟರ ನಿವಾಸವು ನಿರ್ಮೂಲವಾಗುವದು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಆದರೆ ನಿನ್ನನ್ನು ದ್ವೇಷಿಸುವವರಿಗೆ ದೇವರು ಅವಮಾನ ಮಾಡುವನು; ದುಷ್ಟರ ಮನೆಗಳನ್ನು ನಾಶಮಾಡುವನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ನಿನ್ನ ಶತ್ರುಗಳಿಗೆ ನಾಚಿಕೆಯಾಗುವುದು; ದುಷ್ಟರ ವಾಸಸ್ಥಳವು ಇಲ್ಲದೆ ಹೋಗುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 8:22
17 ತಿಳಿವುಗಳ ಹೋಲಿಕೆ  

ತೊಡಿಸುವೆನು ಅವನ ವೈರಿಗಳಿಗೆ ಲಜ್ಜಾಕವಚವನು I ಮುಡಿಸುವೆನು ಅವನಿಗಾದರೋ ಪ್ರಜ್ವಲ ಕಿರೀಟವನು” II


ಮಾನಭಂಗವಾಗಲಿ ನನ್ನಾ ನಿಂದಕರಿಗೆ I ಬಟ್ಟೆಯಂತೆ ಅವರಿಗಂಟಿಕೊಳ್ಳಲಿ ಹೇಸಿಗೆ II


ನನಗಾದ ಕೇಡನು ನೋಡಿ ಹಿಗ್ಗುವವರಿಗಾಗಲಿ ಸಿಗ್ಗು I ನನ್ನನು ಕುಗ್ಗಿಸಿ ಮೆರೆವವರನು ಮುಚ್ಚಲಿ ಲಜ್ಜೆಯ ಮುಸುಕು II


ನೆಮ್ಮದಿಯ ಗುಡಾರದಿಂದ ಅವನನ್ನು ಎಳೆದು ಹಾಕುವುದು ಹೊರಗೆ ಸಾಗಿಸಿಕೊಂಡು ಹೋಗುವುದವನನ್ನು ಅತಿಭಯಂಕರ ರಾಜನೆಡೆಗೆ.


ಅಲ್ಲಿಂದ ಅವನನ್ನು ಕಿತ್ತುಹಾಕಿದ್ದೇ ಆದರೆ ಅವನನ್ನು ಕಂಡದ್ದೇ ಇಲ್ಲ ಎಂದು ಬೊಂಕುವುದು ಆ ಸ್ಥಳ.


ನನ್ನ ಅಪರಾದವನ್ನು ನೀನು ಕ್ಷಮಿಸಬಾರದೆ? ನನ್ನ ದೋಷವನ್ನು ನೀನು ಪರಿಹರಿಸಬಾರದೆ? ಮಣ್ಣಿನೊಳಗೆ ಬಿದ್ದಿರುವೆ ನಾನು ಈಗ ನಾನು ಇಲ್ಲವಾಗಿರುವೆ ನೀ ಹುಡುಕುವಾಗ.


ಅಂತೆಯೇ ಯುವಜನರೇ, ನೀವು ಹಿರಿಯರಿಗೆ ವಿಧೇಯರಾಗಿ ನಡೆದುಕೊಳ್ಳಿ. ನೀವೆಲ್ಲರೂ ದೀನಮನೋಭಾವನೆಯನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿ. “ಗರ್ವಿಷ್ಠರನ್ನು ದೇವರು ವಿರೋಧಿಸುತ್ತಾರೆ. ನಮ್ರರಿಗಾದರೋ ಅವರು ದಯೆತೋರುತ್ತಾರೆ,” ಎಂದು ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ.


ಅವರ ಗುಡಾರದ ಗೂಟವನ್ನು ಕೀಳಲಾಗುವುದು ಬುದ್ಧಿಹೀನರಾಗಿಯೆ ಅವರು ಸತ್ತುಹೋಗುವರು.


ಒರಗಿಕೊಂಡರೆ ಆ ಮನೆ ನಿಲ್ಲದು ಹಿಡಿದುಕೊಂಡರೆ ಅದು ಬಿಗಿಯಿರದು.


ಅದಕ್ಕೆ ಯೋಬನು ಉತ್ತರಿಸುತ್ತಾ ಹೀಗೆಂದನು:


ದುರುಳರ ಸಂಘವದು ಬರಡಾದುದು ಸುಡುವುದು ಬೆಂಕಿ ಲಂಚಕೋರರ ಗುಡಾರವನು.


ನಿಮ್ಮ ಪ್ರಶ್ನೆ ಇದು: “ಆ ಖದೀಮನ ಮನೆ ಏನಾಯಿತು? ಆ ದುರುಳರು ನಿವಾಸಿಸುತ್ತಿದ್ದ ಗುಡಾರ ಏನಾಯಿತು?”


ದುರುಳರ ಪ್ರಾಣವನ್ನು ಆತ ಉಳಿಸನು ನಿರ್ಗತಿಕರ ನ್ಯಾಯವನು ಸ್ಥಾಪಿಸುವನು.


ರಾಜನು ದುಃಖಿಸುವನು, ದಿಗಿಲು ಒಡೆಯನನ್ನು ಮುಸುಕುವುದು, ಜನಸಾಮಾನ್ಯರ ಕೈಗಳು ತತ್ತರಿಸುವುವು; ನಾನು ಅವರ ದುರ್ನಡತೆಗೆ ತಕ್ಕ ಪ್ರತೀಕಾರವನ್ನು ಮಾಡಿ ಅವರ ದುಷ್ಕರ್ಮಗಳಿಗೆ ಸರಿಯಾದ ದಂಡನೆಯನ್ನು ವಿಧಿಸುವೆನು; ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗುವುದು.”


ಆಗ ಸಮುದ್ರದ ಸುತ್ತುಮುತ್ತಲಿನ ಎಲ್ಲ ಒಡೆಯರು ತಮ್ಮ ಸಿಂಹಾಸನಗಳಿಂದಿಳಿದು, ನಿಲುವಂಗಿಗಳನ್ನು ತೆಗೆದುಹಾಕಿ, ಕಸೂತಿ ವಸ್ತ್ರಗಳನ್ನು ಕಿತ್ತೆಸೆದು, ತತ್ತರವನ್ನೇ ಹೊದ್ದುಕೊಂಡು, ನೆಲದ ಮೇಲೆ ಕುಕ್ಕರಿಸಿ, ಕ್ಷಣಕ್ಷಣವೂ ನಡುಗುತ್ತಾ ನಿನಗೆ ಬೆಚ್ಚಿಬೆರಗಾಗುವರು.


ದುಷ್ಟರ ಮನೆಮಠ ನಿರ್ಮೂಲವಾಗುವುದು; ಸಜ್ಜನರ ಗುಡಾರ ಉದ್ಧಾರವಾಗುವುದು.


ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ: “ನಾನು ಶಾಪವನ್ನು ಕಳುಹಿಸುತ್ತೇನೆ. ಅದು ಕಳ್ಳನ ಮನೆಯನ್ನೂ ನನ್ನ ಹೆಸರೆತ್ತಿ ಸುಳ್ಳಾಣೆಯಿಡುವವನ ಮನೆಯನ್ನೂ ಹೊಕ್ಕು, ಅಲ್ಲಿ ತಂಗಿದ್ದು ಅದನ್ನು ಕಲ್ಲುಮರ ಸಹಿತ ಸಂಪೂರ್ಣವಾಗಿ ಭಸ್ಮಮಾಡುವುದು,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು