Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 8:17 - ಕನ್ನಡ ಸತ್ಯವೇದವು C.L. Bible (BSI)

17 ಕಲ್ಲುಕುಪ್ಪೆಯ ಮೇಲೂ ಬೇರುಗಳನ್ನು ಹೆಣೆದುಕೊಳ್ವನು ಕಲ್ಲಿನ ಸಂದಿಗೊಂದಿಗಳ ನಡುವೆ ನುಗ್ಗಬಲ್ಲನು ಅವನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 (ಕಲ್ಲು) ಕುಪ್ಪೆಯ ಮೇಲೆ ತನ್ನ ಬೇರುಗಳನ್ನು ಹೆಣೆದುಕೊಂಡು, ಕಲ್ಲುಬಿರುಕಿನಲ್ಲಿಯೂ ನುಗ್ಗಬಲ್ಲನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 [ಕಲ್ಲು] ಕುಪ್ಪೆಯ ಮೇಲೆ ತನ್ನ ಬೇರುಗಳನ್ನು ಹೆಣೆದುಕೊಂಡು ಕಲ್ಲು ಸಂದಿನಲ್ಲಿಯೂ ನುಗ್ಗಬಲ್ಲನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಅದು ಕಲ್ಲುಕುಪ್ಪೆಯ ಸುತ್ತಲೂ ತನ್ನ ಬೇರುಗಳನ್ನು ಹೆಣೆದುಕೊಂಡು ಕಲ್ಲುಗಳಲ್ಲಿ ಬೆಳೆಯಲು ಒಂದು ಸ್ಥಳಕ್ಕಾಗಿ ನೋಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಅವರ ಬೇರುಗಳು ಬಂಡೆಗಳ ರಾಶಿಯ ಮೇಲೆ ಸುತ್ತಿ, ಕಲ್ಲುಗಳ ನಡುವೆ ನುಗ್ಗುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 8:17
9 ತಿಳಿವುಗಳ ಹೋಲಿಕೆ  

ತಮ್ಮ ಮಿತಿಮೀರಿದ ಮದ್ಯಪಾನಾಸಕ್ತಿಯಿಂದ ನಿಮ್ಮ ಪ್ರೇಮಭೋಜನ ಕೂಟಗಳಲ್ಲಿ ಇವರು ಕಳಂಕಪ್ರಾಯರಾಗಿದ್ದಾರೆ. ತಮ್ಮ ಕುರಿಗಳನ್ನು ತೊರೆದು ಹೊಟ್ಟೆಹೊರೆದುಕೊಳ್ಳುವ ಕುರುಬರಂತಿದ್ದಾರೆ. ಇವರು ಬಿರುಗಾಳಿಗೆ ಚದುರಿಹೋಗುವ ನೀರಿಲ್ಲದ ಮೋಡಗಳು; ಎಲೆಗಳು ಉದುರಿ, ಫಲಬಿಡದೆ, ಬಾಡಿಹೋಗಿ, ಬೇರುಸಹಿತ ಕಿತ್ತುಬೀಳುವ ಶರತ್ಕಾಲದ ಮರಗಳು;


ಬೆಳಿಗ್ಗೆ ಅವರೆಲ್ಲರೂ ಅದೇ ಮಾರ್ಗವಾಗಿ ಹಿಂದಿರುಗುವಾಗ ಅಂಜೂರದ ಮರವು ಬೇರುಸಹಿತ ಒಣಗಿಹೋಗಿರುವುದನ್ನು ಕಂಡರು.


ನೆಟ್ಟಕೂಡಲೇ, ಬಿತ್ತಿದಾಕ್ಷಣವೇ, ಭೂಮಿಯಲ್ಲಿ ಬೇರೂರುವಾಗಲೆ ಬಾಡುವುದು ಇವರ ಸಂತಾನ ಆತನ ಶ್ವಾಸದಿಂದಲೆ; ಬಡಿದು ಹೊಯ್ಯಲ್ಪಡುವುದು ಒಣಹುಲ್ಲಿನಂತೆ ಬಿರುಗಾಳಿಯಿಂದಲೆ.


ಹೀಗಿರಲು, ಒಣಗಿದ ಕಳೆಯನ್ನು ಅಗ್ನಿಜ್ವಾಲೆ ಕಬಳಿಸುವಂತೆ, ಒಣಹುಲ್ಲು ಬೆಂಕಿಯಲ್ಲಿ ಬೂದಿಯಾಗುವಂತೆ, ಅವರ ಬೇರು ಕೊಳೆತುಹೋಗುವುದು. ಅವರ ಹೂ ಧೂಳಿನಂತೆ ತೂರಿಹೋಗುವುದು. ಏಕೆಂದರೆ, ಅವರು ಸೇನಾಧೀಶ್ವರಸ್ವಾಮಿಯ ಉಪದೇಶವನ್ನು ನಿರಾಕರಿಸಿದ್ದಾರೆ. ಇಸ್ರಯೇಲಿನ ಪರಮಪಾವನ ಸ್ವಾಮಿಯ ವಾಕ್ಯವನ್ನು ಅಸಡ್ಡೆಮಾಡಿದ್ದಾರೆ.


ನನ್ನ ಬೇರುಗಳು ನೀರಿನವರೆಗೆ ವ್ಯಾಪಿಸಿಕೊಂಡಿವೆ ನನ್ನ ರೆಂಬೆಗಳ ಮೇಲೆ ರಾತ್ರಿಯೆಲ್ಲ ಇಬ್ಬನಿ ಬಿದ್ದಿರುತ್ತದೆ.


ಒಣಗುವುದು ಅವನ ಬುಡ ಕೆಳಗಡೆ ಬಾಡುವುದು ಅವನ ರೆಂಬೆ ಮೇಲ್ಗಡೆ.


ಅಂಥವನು ಬಿಸಿಲಿನಲ್ಲೂ ಹಸಿರಾಗಿರುವ ಬಳ್ಳಿಯಂತೆ ಹರಡಿಕೊಳ್ಳುವನು ತೋಟದೊಳಗೆ ಕವಲೊಡೆದು;


ಅಲ್ಲಿಂದ ಅವನನ್ನು ಕಿತ್ತುಹಾಕಿದ್ದೇ ಆದರೆ ಅವನನ್ನು ಕಂಡದ್ದೇ ಇಲ್ಲ ಎಂದು ಬೊಂಕುವುದು ಆ ಸ್ಥಳ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು