Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 6:4 - ಕನ್ನಡ ಸತ್ಯವೇದವು C.L. Bible (BSI)

4 ನನ್ನ ಮನದೊಳು ಸರ್ವಶಕ್ತನ ಬಾಣಗಳು ನಾಟಿವೆ ನನ್ನ ಅಂತರಂಗದೊಳು ಅವುಗಳ ವಿಷ ಹೀರಲಾಗುತ್ತಿದೆ ದೇವರಿಂದ ಬಂದ ಆತಂಕಗಳು ನನ್ನನು ಸುತ್ತುವರೆದಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಸರ್ವಶಕ್ತನಾದ ದೇವರ ಬಾಣಗಳು ನನ್ನಲ್ಲಿ ನಾಟಿರುತ್ತವೆ, ನನ್ನ ಆತ್ಮವು ಅವುಗಳ ವಿಷವನ್ನು ಹೀರಿಕೊಳ್ಳುತ್ತದೆ; ದೇವರು ಕಳುಹಿಸಿದ ಅಪಾಯಗಳು ನನಗೆ ವಿರುದ್ಧವಾಗಿ ವ್ಯೂಹಕಟ್ಟಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಸರ್ವಶಕ್ತನ ಬಾಣಗಳು ನನ್ನಲ್ಲಿ ನಾಟಿರುತ್ತವೆ; ನನ್ನ ಆತ್ಮವು ಅವುಗಳ ವಿಷವನ್ನು ಹೀರಿಕೊಳ್ಳುತ್ತದೆ; ದೇವರು ಕಳುಹಿಸಿದ ಅಪಾಯಗಳು ನನಗೆ ವಿರೋಧವಾಗಿ ವ್ಯೂಹಕಟ್ಟಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಸರ್ವಶಕ್ತನಾದ ದೇವರ ಬಾಣಗಳು ನನಗೆ ನಾಟಿಕೊಂಡಿವೆ. ನನ್ನ ಪ್ರಾಣವು ಅವುಗಳ ವಿಷವನ್ನು ಕುಡಿಯುತ್ತಿದೆ. ದೇವರು ಕಳುಹಿಸಿದ ಅಪಾಯಗಳು ನನಗೆ ವಿರೋಧವಾಗಿ ವ್ಯೂಹಕಟ್ಟಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಸರ್ವಶಕ್ತರ ಬಾಣಗಳು ನನ್ನಲ್ಲಿ ನಾಟಿವೆ; ಅವುಗಳ ವಿಷವನ್ನು ನನ್ನ ಆತ್ಮವು ಹೀರುತ್ತಿದೆ; ದೇವರ ವಿಷಯವಾದ ಹೆದರಿಕೆಗಳು ನನ್ನನ್ನು ಸುತ್ತುವರೆದಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 6:4
30 ತಿಳಿವುಗಳ ಹೋಲಿಕೆ  

ನಿನ್ನ ಬಾಣಗಳು ನಾಟಿವೆ ನನ್ನೊಳಗೆ I ನಿನ್ನ ಹಸ್ತವು ಎರಗಿದೆ ನನ್ನ ಮೇಲೆ II


ಅಡ್ಡಿ ಆತಂಕಗಳು ನನ್ನನು ಸುತ್ತುವರೆದಿವೆ ನನ್ನ ಮಾನಮರ್ಯಾದೆ ತೂರಿಹೋಗುತ್ತಿದೆ ಗಾಳಿಯಂತೆ ನನ್ನ ಯೋಗಕ್ಷೇಮ ತೇಲಿಹೋಗುತ್ತಿದೆ ಮೋಡದಂತೆ.


ಆತ್ಮವು ವ್ಯಾಧಿಯನ್ನು ಸಹಿಸಬಲ್ಲದು; ಆತ್ಮವೇ ನೊಂದರೆ ಸಹಿಸುವವರಾರು?


ಸದುತ್ತರ ಪಾಲಿಸು ಪ್ರಭೂ, ಸೊರಗಿದೆ ಎನ್ನ ಚೇತನ I ನೀ ವಿಮುಖನಾದರೆ ನಾ ನರಕಹೊಕ್ಕವರಿಗೆ ಸಮಾನ II


ಮೂರನೆಯ ಗಂಟೆಯ ಸಮಯದಲ್ಲಿ, ಯೇಸುಸ್ವಾಮಿ: “ಎಲೋಹಿ, ಎಲೋಹಿ, ಲಮಾ ಸಬಕ್ತಾನಿ?” ಎಂದರೆ, “ನನ್ನ ದೇವರೇ, ನನ್ನ ದೇವರೇ, ನನ್ನನ್ನೇಕೆ ಕೈಬಿಟ್ಟಿದ್ದೀರಿ?” ಎಂದು ಗಟ್ಟಿಯಾಗಿ ಕೂಗಿಕೊಂಡರು.


ನನ್ನನ್ನು ಬಿರುಗಾಳಿಯಿಂದ ಬಡಿಯುತ್ತಾನೆ ಕಾರಣವಿಲ್ಲದೆ ಗಾಯದ ಮೇಲೆ ಗಾಯ ಮಾಡುತ್ತಾನೆ.


ಪ್ರಭುವಿನ ಭಯಭಕ್ತಿ ನಮಗಿರುವುದರಿಂದ ನಾವು ಮಾನವರ ಮನವೊಲಿಸಲು ಪ್ರಯತ್ನಿಸುತ್ತೇವೆ. ನಾವು ಎಂಥವರೆಂದು ದೇವರು ಚೆನ್ನಾಗಿ ಬಲ್ಲರು. ಅದು ನಿಮ್ಮ ಮನಸ್ಸಾಕ್ಷಿಗೂ ಅರಿವಾಗಿದೆಯೆಂದು ನಂಬುತ್ತೇವೆ.


ನಿನ್ನಂಬು ಬಾಣಗಳು ಹರಿತವಾದುವು I ರಾಜದ್ರೋಹಿಗಳನು ಅವು ಇರಿಯುವುವು I ಜನಾಂಗಗಳು ನಿನ್ನ ಪಾದಕ್ಕೆರಗುವುವು II


ಬಾಣ ಹೂಡಿ ಅವರ ಹಣೆಗೆ ನೀ ಬಿಡುವೆ I ಬೆನ್ನುಮಾಡಿ ಅವರೋಡುವಂತೆ ಮಾಡುವೆ II


ಚದರಿಸಿದನು ಶತ್ರುಗಳನು ಬಾಣಗಳನ್ನೆಸೆದು I ತಳಮಳಗೊಳಿಸಿದನವರನು ಸಿಡಿಲನು ಹೊಡೆದು II


ಸೇರಿಸಿಟ್ಟಿರುವನಾತ ಮಾರಕಾಸ್ತ್ರಗಳನು I ಗುರಿಯಿಟ್ಟು ನಿಂತಿರುವನು ಅಗ್ನಿಬಾಣಗಳನು II


ದೇವರಿಂದ ಬರುವ ವಿಪತ್ತಿನ ಬಗ್ಗೆ ನನಗಿದೆ ಭಯ ಆತನ ಪ್ರಭಾವದ ನಿಮಿತ್ತ ಇಂಥ ಕೃತ್ಯ ನನಗೆ ದುಸ್ಸಾಧ್ಯ.


ಅವನೇ ತನ್ನ ವಿನಾಶವನು ಕಣ್ಣಾರೆ ಕಾಣಲಿ ಅವನೇ ಸರ್ವಶಕ್ತನಾ ರೌದ್ರರಸವನು ಸವಿಯಲಿ.


ಮತ್ತವಾಗುವುವು ನನ್ನ ಬಾಣಗಳು ರಕ್ತಕುಡಿದು; ನನ್ನ ಕತ್ತಿಯು ತಿನ್ನುವುದು ಸತ್ತವರ, ಖೈದಿಗಳ ರಕ್ತಮಾಂಸವನು; ಚೆಂಡಾಡುವುವು ಶತ್ರುವೀರರ ತಲೆಬುರುಡೆಗಳು.


ಅದಕ್ಕೆ ಅವಳು, “ನನ್ನನ್ನು ‘ನವೊಮಿ’ ಎಂದು ಕರೆಯಬೇಡಿ; ‘ಮಾರಾ’ ಎಂದು ಕರೆಯಿರಿ. ಏಕೆಂದರೆ ಸರ್ವಶಕ್ತ ದೇವರು ನನ್ನನ್ನು ಬಹಳ ದುಃಖಪಡಿಸಿದ್ದಾರೆ.


ಅವನು ಹೀರುವುದು ನಾಗರವಿಷವನು ಸರ್ಪದ ನಾಲಿಗೆ ಕೊಲ್ಲುವುದು ಅವನನು.


ನನ್ನಲ್ಲಿ ನ್ಯಾಯವಿದ್ದರೂ ಸುಳ್ಳುಗಾರನೆನಿಸಿಕೊಂಡಿದ್ದೇನೆ ನಿರ್ದೋಷಿಯಾಗಿದ್ದರೂ ನನಗೆ ದೇವರ ಪೆಟ್ಟು ಬಾಣಬಿಟ್ಟಂತಿದೆ.’


ಅದು ಹಾದುಹೋಗುವಾಗಲೆಲ್ಲಾ ನಿಮ್ಮನ್ನು ಹಿಡಿದುಬಿಡುವುದು. ಪ್ರತಿದಿನವೂ ಹಗಲೂ ರಾತ್ರಿ ಅದು ಹಾದುಹೋಗುವುದು. ಸರ್ವೇಶ್ವರ ಸ್ವಾಮಿಯ ಈ ಸಂದೇಶವನ್ನು ಅರ್ಥಮಾಡಿಕೊಳ್ಳುವವರಿಗೆ ಭಯಭ್ರಾಂತಿ ಉಂಟಾಗುವುದು.


ಬಿಲ್ಲುಹಿಡಿದು ಬಂದ ಆತ ವೈರಿಯಂತೆ ಬಲಗೈಯೆತ್ತಿ ನಿಂತ ವಿರೋಧಿಯಂತೆ, ಸಂಹರಿಸಿಬಿಟ್ಟ ಸುಂದರ ಪ್ರಜೆಯೆಲ್ಲರನ್ನು ರೋಷಾಗ್ನಿ ಸುರಿಸಿ ಭಸ್ಮಮಾಡಿದ ಸಿಯೋನ್ ಗುಡಾರವನ್ನು.


ನರಮಾನವರ ಮೇಲೆ ಬೆಂಗಾವಲಿರುವವನೇ, ಭಾರವಾಗಿರುವೆನು ನನಗೆ ನಾನೇ. ನಾನು ಪಾಪಮಾಡಿದ್ದಾದರೂ ನಿನಗೇನು ಮಾಡಿದೆ? ನನ್ನನ್ನೇಕೆ ನಿನ್ನ ಹೊಡೆತಕ್ಕೆ ಗುರಿಪಡಿಸಿದೆ?


ದೇವರ ಸಿಟ್ಟು ಸೀಳಿ ಹಾಳುಮಾಡುತ್ತಿದೆ ಆತ ನನ್ನನ್ನು ನೋಡಿ ಹಲ್ಲುಕಡಿದಿದ್ದಾನೆ ನನ್ನ ವೈರಿ ನನ್ನನ್ನು ದುರುಗುಟ್ಟಿ ನೋಡುತ್ತಿದ್ದಾನೆ.


ಮುನ್ನುಗ್ಗಿ ಬಂದಿದೆ ಆತನ ಸೇನೆ ಒಟ್ಟಿಗೆ ದಿಬ್ಬಹಾಕಿಕೊಂಡಿದೆ ಅದು ನನ್ನೆದುರಿಗೆ ನನ್ನ ಗುಡಾರದ ಎಲ್ಲಾ ಕಡೆಗೆ ದಂಡು ಇಳಿದಿದೆ.


ನನ್ನ ದೇಹದಲ್ಲಿಲ್ಲ ಸೌಖ್ಯ ನಿನ್ನ ಕೋಪದ ನಿಮಿತ್ತ I ನನ್ನೆಲುಬಿನಲ್ಲಿಲ್ಲ ಕ್ಷೇಮ ನನ್ನ ಪಾಪದ ಪ್ರಯುಕ್ತ II


ಆಯಾಯ ಹೃದಯಕ್ಕೆ ಗೊತ್ತು ಅದರ ಗೋಳು; ಅದರ ಸಂತೋಷದಲ್ಲೂ ಪಾಲುಗೊಳ್ಳಲಾಗದು ಬೇರೆಯವರು.


ಹೌದು ದಿನವಿಡೀ, ಪದೇ ಪದೇ ಕೈಮಾಡುತ್ತಾ ಬಂದಿಹನು ನನ್ನ ಮೇಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು