Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 5:20 - ಕನ್ನಡ ಸತ್ಯವೇದವು C.L. Bible (BSI)

20 ಬರಗಾಲದಲ್ಲಿ ಮರಣದಿಂದ ಕಾಪಾಡುವನು ಯುದ್ಧಕಾಲದಲ್ಲಿ ಕತ್ತಿಯಿಂದ ರಕ್ಷಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಬರಗಾಲದಲ್ಲಿ ಮರಣದಿಂದಲೂ, ಯುದ್ಧದಲ್ಲಿ ಕತ್ತಿಯಿಂದಲೂ ನಿನ್ನನ್ನು ಬಿಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಬರಗಾಲದಲ್ಲಿ ಮರಣದಿಂದಲೂ ಯುದ್ಧದಲ್ಲಿ ಕತ್ತಿಯಿಂದಲೂ ನಿನ್ನನ್ನು ಬಿಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಬರಗಾಲದಲ್ಲಿ ಮರಣದಿಂದಲೂ ಯುದ್ಧದಲ್ಲಿ ಕತ್ತಿಯಿಂದಲೂ ಆತನು ನಿನ್ನನ್ನು ಸಂರಕ್ಷಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಬರದಲ್ಲಿ ನಿನ್ನನ್ನು ಮರಣದೊಳಗಿಂದಲೂ, ಯುದ್ಧದಲ್ಲಿ ಖಡ್ಗದ ಬಲದಿಂದಲೂ ದೇವರು ವಿಮೋಚಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 5:20
15 ತಿಳಿವುಗಳ ಹೋಲಿಕೆ  

ತಪ್ಪಿಸುವನವನು ಪ್ರಾಣವನು ಮರಣದಿಂದ I ಉಳಿಸುವನು ಜೀವವನು ಕ್ಷಾಮಡಾಮರದಿಂದ II


ಅದನ್ನು ಪಾತಾಳದ ಹಿಡಿತದಿಂದ ನಾನು ಬಿಡಿಸಲಾರೆ. ಮರಣದ ಬಾಧೆಯಿಂದ ಅವರನ್ನು ರಕ್ಷಿಸಲಾರೆ. ‘ಮರಣವೇ, ನಿನ್ನ ಮಾರಕ ವ್ಯಾಧಿಗಳಿಂದ ಅವರನ್ನು ಬಾಧಿಸು. ಪಾತಾಳವೇ, ಅವರನ್ನು ಕಬಳಿಸಿ ನಾಶಗೊಳಿಸು. ಕರುಣೆ ನನ್ನಿಂದ ದೂರವಾಗಿದೆ.


ಸತ್ಪುರುಷನನ್ನು ಸರ್ವೇಶ್ವರ ಹಸಿವೆಗೊಳಿಸನು; ದುಷ್ಟನ ಆಶೆಯನ್ನಾತ ಭಂಗಪಡಿಸುವನು.


ಮಾನನಷ್ಟವಿರದು ಕಷ್ಟಕಾಲದಲಿ I ಕುಂದುಕೊರತೆಯಿರದು ಬರಗಾಲದಲಿ II


ಕಾಗೆಗಳು ಅವನಿಗೆ ಬೆಳಿಗ್ಗೆ ಹಾಗು ಸಂಜೆ ರೊಟ್ಟಿ, ಮಾಂಸ, ಇವುಗಳನ್ನು ತಿನ್ನಲು ತಂದುಕೊಡುತ್ತಿದ್ದವು. ಹಳ್ಳದ ನೀರು ಅವನಿಗೆ ಪಾನವಾಗಿತ್ತು.


ನಿಮ್ಮ ಜನ ಧರೆಯಲ್ಲಿ ಉಳಿಯುವಂತೆಯೂ ನೀವು ಈ ವಿಪತ್ತಿಗೆ ಸಿಕ್ಕದೆ ಅಭಿವೃದ್ಧಿಯಾಗುವಂತೆಯೂ ದೇವರು ನನ್ನನ್ನು ನಿಮಗೆ ಮುಂಚಿತವಾಗಿ ಕಳಿಸಿದರು.


ಅಂಜೂರದ ಮರ ಚಿಗುರದೆಹೋದರೂ ದ್ರಾಕ್ಷಾಲತೆಗಳಲ್ಲಿ ಹಣ್ಣು ಕಾಣದೆಹೋದರೂ ಎಣ್ಣೆಮರಗಳ ಉತ್ಪತ್ತಿಯು ಶೂನ್ಯವಾದರೂ ಹೊಲಗದ್ದೆಗಳು ಆಹಾರ ಕೊಡದೆಹೋದರೂ ಕುರಿಹಟ್ಟಿಗಳು ಬರಿದಾಗಿಹೋದರೂ ಕೊಟ್ಟಿಗೆಗಳಲ್ಲಿ ದನಕರುಗಳು ಇಲ್ಲವಾದರೂ,


ನೀನೇ ಅರಸುಗಳಿಗೆ ಜಯಪ್ರದನು I ದಾಸ ದಾವೀದನನು ಬಿಡಿಸಿದವನು II


ಸೇನೆ ಸಮೇತ ಶತ್ರು ಬಂದರೂ ಎದೆಗುಂದೆನು I ಸಮರಕ್ಕೆರಗಿದರೂ ನಾ ಭರವಸೆಯಿಂದಿರುವೆನು II


ಇದೂ ಅಲ್ಲದೆ, ನೀವು ರಣಕಹಳೆಗಳನ್ನೂ ಸಮರಗಳ ಸುದ್ದಿಯನ್ನೂ ಕೇಳುವಿರಿ. ಆಗ ಕಳವಳಪಡದಂತೆ ಎಚ್ಚರಿಕೆಯಿಂದಿರಿ. ಇವೆಲ್ಲವು ಸಂಭವಿಸಲೇಬೇಕು. ಆದರೆ ಇದಿನ್ನೂ ಕಾಲಾಂತ್ಯವಲ್ಲ.


ಅಂಥವನಿಗೆ ಗಿರಿದುರ್ಗವೇ ಆಶ್ರಯ, ಅನ್ನ ಆಹಾರ ಉಚಿತ, ನೀರುನಿಡಿ ನಿಸ್ಸಂದೇಹ.


ತನ್ನನು ತಾನೇ ಮುಕ್ತಗೊಳಿಸಿಕೊಳ್ಳುವ ಜೀವಾತ್ಮನಿಲ್ಲ I ದೇವರಿಗೆ ಈಡುಕೊಟ್ಟು ಪ್ರಾಣ ಉಳಿಸಿಕೊಳ್ಳಬಲ್ಲ ನರನಿಲ್ಲ II


ಆಗ ಅರಸ ಚಿದ್ಕೀಯನು ಅಂತೆಯೆ ಅಪ್ಪಣೆಕೊಡಲು, ಯೆರೆಮೀಯನನ್ನು ರಾಜ್ಯದ ಕಾರಾಗೃಹದ ಅಂಗಳಕ್ಕೆ ಸ್ಥಳಾಂತರಿಸಲಾಯಿತು. ರೊಟ್ಟಿ ಮಾರುಕಟ್ಟೆಯಿಂದ ಪ್ರತಿದಿನ ಒಂದೊಂದು ರೊಟ್ಟಿಯನ್ನು ಅವನಿಗೆ ತಂದುಕೊಡುತ್ತಿದ್ದರು. ನಗರದ ರೊಟ್ಟಿಯೆಲ್ಲ ತೀರುವ ತನಕ ಹಾಗೆ ಮಾಡುತ್ತಿದ್ದರು. ಯೆರೆಮೀಯನು ರಾಜ್ಯದ ಕಾರಾಗೃಹದ ಅಂಗಳದಲ್ಲೇ ವಾಸಿಸುತ್ತಿದ್ದನು.


ಗುರಿಪಡಿಸಿಹನು ಎನ್ನನು ಪ್ರಭು ಕಠಿಣ ಶಿಕ್ಷೆಗೆ I ಆದರೂ ಗುರಿಮಾಡಲಿಲ್ಲ ಎನ್ನನು ಮರಣಕೆ II


ನೀನು ನನ್ನಲ್ಲಿ ಭರವಸೆಯಿಟ್ಟ ಕಾರಣ ನಿನ್ನನ್ನು ರಕ್ಷಿಸಿಯೇ ರಕ್ಷಿಸುವೆನು. ನೀನು ಕತ್ತಿಗೆ ತುತ್ತಾಗಲಾರೆ. ಅದರ ಬಾಯಿಂದ ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವೆ. ಇದು ಸರ್ವೇಶ್ವರನಾದ ನನ್ನ ವಾಣಿ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು