Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 40:13 - ಕನ್ನಡ ಸತ್ಯವೇದವು C.L. Bible (BSI)

13 ಅವರೆಲ್ಲರನು ಧೂಳಿನಲ್ಲಿ ಒಟ್ಟಿಗೆ ಅಡಗಿಸಿಬಿಡು ಅವರ ಮುಖಕ್ಕೆ ಅಧೋಲೋಕದಲಿ ಮುಸುಕುಹಾಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಅವರನ್ನು ಒಟ್ಟಿಗೆ ಧೂಳಿನಲ್ಲಿ ಅಡಗಿಸಿ, ಅಂಧಕಾರ ಲೋಕದಲ್ಲಿ ಅವರ ಮುಖಕ್ಕೆ ಮುಸುಕು ಹಾಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಅವರನ್ನು ಒಟ್ಟಿಗೆ ದೂಳಿನಲ್ಲಡಗಿಸಿ ಅಂಧಕಾರಲೋಕದಲ್ಲಿ ಅವರ ಮುಖಕ್ಕೆ ಮುಸುಕು ಹಾಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಗರ್ವಿಷ್ಠರನ್ನೆಲ್ಲಾ ಧೂಳಿನಲ್ಲಿ ಸಮಾಧಿಮಾಡು; ಅವರ ದೇಹಗಳನ್ನು ಸುತ್ತಿ ಅವರ ಸಮಾಧಿಗಳೊಳಗೆ ಹಾಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಅವರೆಲ್ಲರನ್ನು ಒಟ್ಟಾಗಿ ಧೂಳಿನಲ್ಲಿ ಅಡಗಿಸಿಬಿಡು; ಅಂಧಕಾರ ಲೋಕದಲ್ಲಿ ಅವರ ಮುಖಕ್ಕೆ ಮುಸುಕುಹಾಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 40:13
8 ತಿಳಿವುಗಳ ಹೋಲಿಕೆ  

ಸ್ವಾಮಿಯ ಭಯಂಕರ ಕೋಪಕ್ಕೆ ಅಂಜಿ, ಆ ಮಹೋನ್ನತನ ವೈಭವಕ್ಕೆ ಹೆದರಿ ಬಂಡೆಯ ಗುಹೆಗಳೊಳಗೆ ನುಗ್ಗಿರಿ, ನೆಲದ ಬಿಲಗಳಲ್ಲಿ ಅವಿತುಕೊಳ್ಳಿರಿ.


ಸತ್ತಿದ್ದವನು ಕೂಡಲೇ ಹೊರಗೆ ಬಂದನು. ಅವನ ಕೈಕಾಲುಗಳು ಶವವಸ್ತ್ರದಿಂದ ಸುತ್ತಿದ್ದವು; ಮುಖವು ಬಟ್ಟೆಯಿಂದ ಮುಚ್ಚಿತ್ತು. ಆಗ ಯೇಸು, “ಕಟ್ಟುಗಳನ್ನು ಬಿಚ್ಚಿ ಅವನನ್ನು ಹೋಗಲು ಬಿಡಿ,” ಎಂದು ಅಲ್ಲಿದ್ದವರಿಗೆ ಹೇಳಿದರು.


ದೂಡುವನು ಅವರನು ಕುರಿಹಿಂಡಿನಂತೆ ಪಾತಾಳಕೆ I ಮರಣವೇ ಕುರಿಗಾಹಿ ಆ ನಿಧನ ನಿವಾಸಿಗಳಿಗೆ I ವಿನಾಶಗೊಳ್ವುದು ಆ ತಳದಲ್ಲಿ ಅವರ ರೂಪರೇಖೆ I ಆಳುವರು ಸಜ್ಜನರು ಅವರೆಲ್ಲರನು ಉದಯಕಾಲಕೆ II


ಕಪಟ ಹೃದಯಿಗಳು ಕೋಪಿಷ್ಠರಾಗುವರು ತಮ್ಮನ್ನು ಬಂಧಿಸುವಾಗಲು ಮೊರೆಯಿಡಲು.


ಆಹಾ! ಬಚ್ಚಿಡಲಾರೆಯಾ ನನ್ನನ್ನು ಪಾತಾಳದೊಳಗೆ? ಅಲ್ಲಿ ಮರೆಮಾಚಿಡಲಾರೆಯಾ ನಿನ್ನ ಕೋಪ ಇಳಿಯುವವರೆಗೆ? ಕಾಲವನ್ನು ಗೊತ್ತುಮಾಡಲಾರೆಯಾ ನನ್ನನು ನೆನೆಯುವುದಕೆ?


ಅರಸನು ಅರಮನೆಯ ತೋಟದಿಂದ, ತಾನು ದ್ರಾಕ್ಷಾರಸ ಸೇವಿಸುತ್ತಿದ್ದ ಕೊಠಡಿಗೆ ಹಿಂದಿರುಗಿಬಂದಾಗ ಎಸ್ತೇರಳು ಒರಗಿಕೊಂಡಿದ್ದ ಸುಖಾಸನದತ್ತ ಹಾಮಾನನು ಬಾಗಿರುವುದನ್ನು ಕಂಡು, “ಇದೇನು? ಇವನು ನನ್ನ ಮುಂದೆಯೇ ನನ್ನ ಅರಮನೆಯಲ್ಲಿಯೇ ರಾಣಿಯ ಮೇಲೆ ಬಲಾತ್ಕಾರ ಮಾಡಲು ಹೊರಟಿರುವನೆ?” ಎಂದನು. ಅರಸನ ಬಾಯಿಂದ ಈ ಮಾತುಗಳು ಹೊರಬಿದ್ದದ್ದೇ ತಡ ಸೇವಕರು ಹಾಮಾನನ ಮುಖದ ಮೇಲೆ ಮುಸುಕನ್ನು ಎಳೆದರು.


ಆಗ ನಿನ್ನ ಬಲ ನಿನ್ನನು ರಕ್ಷಿಸಬಲ್ಲದೆಂದು ನಾನೇ ಒಪ್ಪಿಕೊಳ್ಳುವೆನು.


ಕಾಯುವನಾತ ತನ್ನ ಭಕ್ತರನು ಹೆಜ್ಜೆ ಹೆಜ್ಜೆಗು ದುರುಳರಾದರೋ ಮುಳುಗಿ ಮೌನ ತಾಳುವರು ಅಂಧಕಾರದೊಳು. ಕೇವಲ ಭುಜಬಲದಿಂದ ಜಯಹೊಂದಲಾರನು ನರಮಾನವನು!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು