Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 4:6 - ಕನ್ನಡ ಸತ್ಯವೇದವು C.L. Bible (BSI)

6 ನಿನ್ನ ನಂಬಿಕೆಗೆ ಆಧಾರ ನಿನ್ನ ಭಯಭಕ್ತಿಯಲ್ಲವೆ? ನಿನ್ನ ನಿರೀಕ್ಷೆಗೆ ಅಸ್ತಿವಾರ ನಿನ್ನ ಆದರ್ಶವಲ್ಲವೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ನಿನ್ನ ನಂಬಿಕೆಗೆ ನಿನ್ನ ಭಯಭಕ್ತಿಯೂ, ನಿನ್ನ ನಿರೀಕ್ಷೆಗೆ ನಿನ್ನ ಸನ್ಮಾರ್ಗವೂ ಆಧಾರವಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ನಿನ್ನ ನಂಬಿಕೆಗೆ ನಿನ್ನ ಭಯಭಕ್ತಿಯೂ ನಿನ್ನ ನಿರೀಕ್ಷೆಗೆ ನಿನ್ನ ಸನ್ಮಾರ್ಗವೂ ಆಧಾರವಲ್ಲವೋ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ನೀನು ದೇವರಲ್ಲಿ ಭಯಭಕ್ತಿಯಿಂದಿರುವುದರಿಂದ ಆತನಲ್ಲಿ ಭರವಸವಿಡು. ನೀನು ನೀತಿವಂತನಾಗಿರುವುದರಿಂದ ಅದೇ ನಿನ್ನ ನಿರೀಕ್ಷೆಯಾಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ನಿನ್ನ ಭಯಭಕ್ತಿಯೇ ನಿನಗೆ ಭರವಸೆಯೂ ನಿನ್ನ ಸನ್ಮಾಮಾರ್ಗಗಳು ನಿನ್ನ ನಿರೀಕ್ಷೆಯೂ ಆಗಿರಬೇಕಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 4:6
17 ತಿಳಿವುಗಳ ಹೋಲಿಕೆ  

ಸರ್ವೇಶ್ವರನೇ ನಿನಗೆ ಆಧಾರವಾಗಿರುವನು, ನಿನ್ನ ಕಾಲು ಉರುಲಿಗೆ ಸಿಕ್ಕದಂತೆ ಕಾಪಾಡುವನು.


ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವನಿಗೆ ಇದೆ ದೃಢಭರವಸೆ; ಆತನ ಮಕ್ಕಳಿಗೆ ಆಶ್ರಯ ಇದ್ದೇ ಇರುತ್ತದೆ.


‘ಊಚ್’ ಎಂಬ ನಾಡಿನಲ್ಲಿ ‘ಯೋಬ’ ಎಂಬ ಒಬ್ಬ ವ್ಯಕ್ತಿಯಿದ್ದ. ಆತನು ದೋಷರಹಿತ, ಸತ್ಯವಂತ, ದೇವರಲ್ಲಿ ಭಯಭಕ್ತಿ ಉಳ್ಳವನು, ಕೆಟ್ಟದ್ದನ್ನು ತೊರೆದು ಬಾಳಿದವನು.


ನನ್ನ ನಂಬಿಕೆ-ನಿರೀಕ್ಷೆ ಎಲ್ಲಿಯದು? ನನ್ನ ಭಾಗ್ಯವನ್ನು ಯಾರು ನೋಡಿಯಾರು?


ಆದರೂ ನಾನು ಹಿಂಸಾಚಾರಕ್ಕೆ ಕೈಹಾಕಲಿಲ್ಲ ನಾನು ಮಾಡುವ ಪ್ರಾರ್ಥನೆ ನಿರ್ಮಲ.


ಆದ್ದರಿಂದ ನೀವು ಸ್ವಸ್ಥಚಿತ್ತರಾಗಿರಿ. ನಿಮ್ಮ ಮನಸ್ಸು ಕಾರ್ಯೋನ್ಮುಖವಾಗಿರಲಿ. ಯೇಸುಕ್ರಿಸ್ತರು ಪ್ರತ್ಯಕ್ಷವಾಗುವಾಗ ನಿಮಗೆ ಲಭಿಸಲಿರುವ ಸೌಭಾಗ್ಯದಲ್ಲಿ ಪೂರ್ಣ ನಿರೀಕ್ಷೆ ಉಳ್ಳವರಾಗಿರಿ.


ಇಗೋ, ದೇವರು ಕೊಲ್ಲುವನೆನ್ನನು ಅದಕ್ಕಾಗಿ ನಾನು ಕಾದಿರುವೆನು. ಆದರೂ ನನ್ನ ನಡತೆ ಸರಿಯೆಂಬುದನು ಆತನ ಮುಂದೆಯೆ ರುಜುವಾತುಪಡಿಸುವೆನು.


“ಸರ್ವೇಶ್ವರಾ, ನಾನು ಶ್ರದ್ಧೆಯಿಂದಲೂ ಪ್ರಾಮಾಣಿಕತೆಯಿಂದಲೂ ನಡೆದುಕೊಂಡಿದ್ದೇನೆ. ನಿಮ್ಮ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದುದನ್ನು ನೆನಪಿಗೆ ತಂದುಕೊಳ್ಳಿ,” ಎಂದು ಬಹಳವಾಗಿ ಕಣ್ಣೀರಿಡುತ್ತಾ ಪ್ರಾರ್ಥಿಸಿದನು.


ನೀವು ದೇವರಿಗೆ ಪ್ರಾರ್ಥನೆಮಾಡುವಾಗ, ಅವರನ್ನು “ತಂದೆಯೇ” ಎಂದು ಸಂಬೋಧಿಸುತ್ತೀರಿ. ಅವರು ಪಕ್ಷಪಾತಿ ಅಲ್ಲ. ಎಲ್ಲರಿಗೂ ಅವರವರ ಕೃತ್ಯಗಳಿಗೆ ತಕ್ಕಂತೆ ನ್ಯಾಯತೀರ್ಪು ನೀಡುವವರು. ಆದ್ದರಿಂದ ನಿಮ್ಮ ಇಹಲೋಕದ ಯಾತ್ರೆಯನ್ನು ಭಯಭಕ್ತಿಯಿಂದ ಸಾಗಿಸಿರಿ.


ಸೇನೆ ಸಮೇತ ಶತ್ರು ಬಂದರೂ ಎದೆಗುಂದೆನು I ಸಮರಕ್ಕೆರಗಿದರೂ ನಾ ಭರವಸೆಯಿಂದಿರುವೆನು II


ಸಾಚವಾದುದೆನ್ನ ನಡತೆ, ಅಚಲವಾದುದೆನ್ನ ನಂಬುಗೆ I ನೀಚ ನಾನಲ್ಲವೆಂದು ಪ್ರಭು, ನ್ಯಾಯ ತೀರಿಸೆನಗೆ II


ನಿಮ್ಮ ಕಾಲಕ್ಕೆ ಬೇಕಾದ ಸ್ಥಿರತೆಯನ್ನು ನೀಡುವರು. ರಕ್ಷಣೆಗೆ ಬೇಕಾದ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಡುವರು. ಸರ್ವೇಶ್ವರ ಸ್ವಾಮಿಯಲ್ಲಿ ನಿಮಗಿರುವ ಭಯಭಕ್ತಿಯೇ ನಿಮ್ಮ ನಿಧಿಯಾಗಿರುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು