Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 4:17 - ಕನ್ನಡ ಸತ್ಯವೇದವು C.L. Bible (BSI)

17 “ದೇವರ ದೃಷ್ಟಿಯಲ್ಲಿ ಸತ್ಯವಂತನಾಗಿರಲು ಮಾನವನಿಗೆ ಸಾಧ್ಯವೆ? ಸೃಷ್ಟಿಕರ್ತನ ಸನ್ನಿಧಿಯಲ್ಲಿ ಪರಿಶುದ್ಧನಾಗಿರಲು ಅವನಿಂದ ಸಾಧ್ಯವೆ?”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಅದೇನೆಂದರೆ, “ಮನುಷ್ಯನು ದೇವರ ದೃಷ್ಟಿಯಲ್ಲಿ ನೀತಿವಂತನಾದಾನೇ? ಮಾನವನು ಸೃಷ್ಟಿಕರ್ತನ ಸನ್ನಿಧಿಯಲ್ಲಿ ಪರಿಶುದ್ಧನಾಗಿರಬಹುದೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಅದೇನಂದರೆ - ಮನುಷ್ಯನು ದೇವರ ದೃಷ್ಟಿಯಲ್ಲಿ ನೀತಿವಂತನಾದಾನೇ? ಮಾನವನು ಸೃಷ್ಟಿಕರ್ತನ ಸನ್ನಿಧಿಯಲ್ಲಿ ಪರಿಶುದ್ಧನಾಗಿರಬಹುದೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಅದೇನೆಂದರೆ: ‘ದೇವರಿಗಿಂತಲೂ ನೀತಿವಂತನಾದ ಮನುಷ್ಯನಿರುವನೇ? ಮನುಷ್ಯನು ತನ್ನ ಸೃಷ್ಟಿಕರ್ತನಿಗಿಂತಲೂ ಶುದ್ಧನಾಗಿರುವನೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ‘ಮನುಷ್ಯನು ದೇವರಿಗಿಂತ ಹೆಚ್ಚು ನೀತಿವಂತನಾಗಿರಲು ಸಾಧ್ಯವೇ? ಮಾನವನು ಸೃಷ್ಟಿಕರ್ತ ದೇವರಿಗಿಂತಲೂ ಶುದ್ಧನಾಗಿರಲು ಸಾಧ್ಯವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 4:17
25 ತಿಳಿವುಗಳ ಹೋಲಿಕೆ  

“ಹೌದು, ನೀನು ಹೇಳುವುದು ಸರಿಯೆಂದು ನನಗೆ ಗೊತ್ತು: ನರಮಾನವ ದೇವರ ಮುಂದೆ ಸತ್ಯವಂತನಾಗಿರುವುದೆಂತು?


ನರನು ದೇವರ ದೃಷ್ಟಿಯಲ್ಲಿ ಸಜ್ಜನನಾಗಿರಲು ಸಾಧ್ಯವೆ? ಸ್ತ್ರೀಯರಲ್ಲಿ‌ ಹುಟ್ಟಿದವನು ಪರಿಶುದ್ಧನಾಗಿರುವುದು ಶಕ್ಯವೆ?


ಪಾಪಮಾಡದೆ ಧರ್ಮವನ್ನೇ ಆಚರಿಸುವ ಸತ್ಪುರುಷ ಜಗದಲ್ಲಿ ಇಲ್ಲವೇ ಇಲ್ಲ.


ದೇವರ ಸಿರಿಸಂಪತ್ತು, ಜ್ಞಾನವಿಜ್ಞಾನ ಎಷ್ಟು ಅಗಾಧ! ಪರಿಶೋಧನೆಗೂ ನಿಲುಕದ ಅವರ ನಿರ್ಣಯ ಎಷ್ಟು ಅಗಮ್ಯ! ಅವರ ನಿಯೋಜನೆಗಳು ಗ್ರಹಿಕೆಗೂ ಎಷ್ಟು ಅಸಾಧ್ಯ!


ಗುರಿಮಾಡಬೇಡ ನಿನ್ನ ದಾಸನನು ನ್ಯಾಯ ವಿಚಾರಣೆಗೆ I ಯಾವ ಜೀವಾತ್ಮನೂ ನಿರ್ದೋಷಿಯಲ್ಲ ನಿನ್ನ ಲೆಕ್ಕಕೆ II


ಆ ನಾಲ್ಕು ಜೀವಿಗಳಲ್ಲಿ ಪ್ರತಿಯೊಂದಕ್ಕೂ ಆರು ರೆಕ್ಕೆಗಳಿದ್ದವು. ಅವುಗಳ ಸುತ್ತಲು ಮತ್ತು ಒಳಗು ಅನೇಕ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳೂ : “ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು! ಸರ್ವಶಕ್ತರಾದ ಪ್ರಭು ದೇವರು ವರ್ತಮಾನಕಾಲದಲ್ಲಿ ಇರುವವರೂ ಭೂತಕಾಲದಲ್ಲಿ ಇದ್ದವರೂ ಭವಿಷ್ಯತ್‍ಕಾಲದಲ್ಲಿ ಬರುವವರೂ ಆಗಿದ್ದಾರೆ,” ಎಂದು ಹಾಡುತ್ತಿದ್ದವು.


ಹುಲುಮಾನವಾ, ದೇವರೊಡನೆ ವಾದಿಸಲು ನೀನಾರು? ಮಡಿಕೆಯು ತನ್ನನ್ನು ಮಾಡಿದವನನ್ನು ನೋಡಿ, “ನನ್ನನ್ನು ಹೀಗೇಕೆ ಮಾಡಿದೆ” ಎಂದು ಕೇಳುವುದುಂಟೇ?


ಆದರೆ ನಿನ್ನದು ಕಠಿಣ ಹೃದಯ, ಮೊಂಡುಸ್ವಭಾವ. ಆದ್ದರಿಂದ ದೇವರ ಕೋಪ ಹಾಗು ನ್ಯಾಯವಾದ ತೀರ್ಪು ವ್ಯಕ್ತವಾಗುವ ದಿನದಂದು ನಿನಗೆ ವಿಧಿಸಲಾಗುವ ಶಿಕ್ಷೆಯನ್ನು ನೀನಾಗಿಯೇ ಸಂಗ್ರಹಿಸಿಕೊಳ್ಳುತ್ತಿದ್ದೀಯೆ.


ಮಾನವ ಹೃದಯ ಎಲ್ಲಕ್ಕಿಂತ ವಂಚಕ ಅದಕ್ಕೆ ಅಂಟಿದೆ ಗುಣವಾಗದ ರೋಗ ಅದರ ಗುಟ್ಟನ್ನು ಅರಿತುಕೊಳ್ಳಬಲ್ಲವರೂ ಇಲ್ಲ.


ಸರ್ವೇಶ್ವರಾ, ನೀವು ಸತ್ಯಸ್ವರೂಪಿ. ನಿಮ್ಮೊಡನೆ ವ್ಯಾಜ್ಯ ನನಗೆ ಅಸಾಧ್ಯ. ಆದರೂ ನಿಮ್ಮೊಡನೆ ಚರ್ಚಿಸಬೇಕೆಂದಿರುವೆ ಈ ನ್ಯಾಯ : ದುರುಳರ ಬಾಳು ಬೆಳಗುತ್ತಿರುವುದು ಏಕೆ? ದ್ರೋಹಿಗಳೆಲ್ಲರು ನೆಮ್ಮದಿಯಾಗಿರುವುದು ಏಕೆ?


ಎಲ್ಲ ಜೀವಿಗಳಿಗೆ ನೀ ಕೈ ನೀಡುವವನು I ಎಲ್ಲರ ಕೋರಿಕೆಗಳನು ಈಡೇರಿಸುವವನು II


ಏನು, ನನ್ನ ನಿರ್ಣಯವನ್ನು ನೀನು ಖಂಡಿಸುತ್ತೀಯೋ? ನೀನು ನಿರ್ದೋಷಿಯೆನಿಸಿಕೊಳ್ಳಲು ನನ್ನನ್ನು ದೋಷಿಯನ್ನಾಗಿಸುತ್ತೀಯೋ?


ಆದರೆ ‘ನಮ್ಮನ್ನು ಸೃಷ್ಟಿಸಿದ ಕರ್ತನೆಲ್ಲಿ? ಕತ್ತಲಲ್ಲೂ ಕೀರ್ತನೆ ಹಾಡಬಲ್ಲವನೆಲ್ಲಿ?


“’ಸಜ್ಜನನಾಗಿ ಬಾಳಿ ನನಗಾದ ಪ್ರಯೋಜನವೇನು? ಪಾಪರಹಿತನಾಗಿ ಜೀವಿಸಿ ನನಗೆ ಬಂದ ಲಾಭವೇನು’


ನರನು ಎಷ್ಟರವನು? ಅವನು ಪರಿಶುದ್ಧನಿರಲು ಸಾಧ್ಯವೆ? ಸ್ತ್ರೀಯರಲ್ಲಿ ಹುಟ್ಟಿದವನು ನೀತಿವಂತನಾಗಿರಬಹುದೆ?


ಅಶುದ್ಧತೆಯಿಂದ ಬಂದೀತೆ ಶುದ್ಧತೆ? ಇಲ್ಲ, ಎಂದಿಗೂ ಅದು ಅಸಾಧ್ಯವೆ.


ಅನ್ಯಾಯವಾದ ತೀರ್ಪನು ಕೊಡುತ್ತಾನೆಯೆ ದೇವರು? ಸತ್ಯವನ್ನು ಡೊಂಕುಮಾಡುತ್ತಾನೆಯೆ ಸರ್ವಶಕ್ತನು?


ಹೀಗೆ ದುಷ್ಟರಿಗೂ ಶಿಷ್ಟರಿಗೂ ಭೇದಮಾಡದೆ ದುಷ್ಟರ ಸಂಗಡ ಸಜ್ಜನರನ್ನೂ ಸಂಹರಿಸುವುದು ನಿಮ್ಮಿಂದ ಎಂದಿಗೂ ಆಗಬಾರದು. ಇಡೀ ಜಗತ್ತಿನ ನ್ಯಾಯಾಧಿಪತಿ ಸರಿಯಾಗಿ ನ್ಯಾಯತೀರಿಸಬೇಕಲ್ಲವೇ?" ಎಂದನು.


ರೂಪವೊಂದು ನನ್ನ ಕಣ್ಮುಂದೆ ನಿಂತಿತ್ತು ಆದರೂ ಅದೇನೆಂಬುದು ನನಗೆ ತಿಳಿಯದೆಹೋಯಿತು ಸೂಕ್ಷ್ಮವಾಣಿಯೊಂದು ನನಗೆ ಕೇಳಿಬಂತು:


ತಾಯಗರ್ಭದಲ್ಲಿ ನನ್ನ ನಿರ್ಮಿಸಿದಾತನೆ ಅವರನೂ ನಿರ್ಮಿಸಲಿಲ್ಲವೆ? ತಾಯಗರ್ಭದಲ್ಲಿ ನಮ್ಮನು ರೂಪಿಸಿದಾತ ಅದೇ ದೇವರಲ್ಲವೆ?


ಮುಖಸ್ತುತಿ ಮಾಡಲು ನನ್ನಿಂದಾಗುವುದಿಲ್ಲ. ಮಾಡಿದರೆ ಸೃಷ್ಟಿಕರ್ತ ನನ್ನನು ಬೇಗ ನಿರ್ಮೂಲಮಾಡಬಲ್ಲ.”


ನನ್ನ ಸೃಷ್ಟಿಕರ್ತನು ಸತ್ಯಸ್ವರೂಪನೆಂದು ತೋರಲು ನನ್ನ ವಾದಗಳನ್ನು ಸವಿಸ್ತಾರಗೊಳಿಸುವೆನು:


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು