Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 38:4 - ಕನ್ನಡ ಸತ್ಯವೇದವು C.L. Bible (BSI)

4 ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನೆಲ್ಲಿದ್ದೆ? ಉತ್ತರಕೊಡು, ನೀನು ಅಷ್ಟು ಜ್ಞಾನಿಯಾಗಿದ್ದರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನಾನು ಲೋಕಕ್ಕೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿದ್ದಿ? ನೀನು ಜ್ಞಾನಿಯಾಗಿದ್ದರೆ ಹೇಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಾನು ಲೋಕಕ್ಕೆ ಅಸ್ತಿವಾರಹಾಕಿದಾಗ ನೀನು ಎಲ್ಲಿದ್ದಿ? ನೀನು ಜ್ಞಾನಿಯಾಗಿದ್ದರೆ ಹೇಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 “ಯೋಬನೇ, ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿದ್ದೆ? ನೀನು ಬಹು ಜಾಣನಾಗಿದ್ದರೆ ನನಗೆ ಉತ್ತರಕೊಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 “ನಾನು ಭೂಮಿಗೆ ಅಸ್ತಿವಾರ ಹಾಕಿದಾಗ, ನೀನು ಎಲ್ಲಿ ಇದ್ದೀ? ನಿನಗೆ ತಿಳುವಳಿಕೆ ಇದ್ದರೆ ನನಗೆ ಹೇಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 38:4
18 ತಿಳಿವುಗಳ ಹೋಲಿಕೆ  

ಬುವಿಯನು ತಳಹದಿಯ ಮೇಲೆ ಸ್ಥಾಪಿಸಿರುವೆ I ಅದೆಂದಿಗೂ ಕದಲದಂತೆ ಮಾಡಿರುವೆ II


ಇದಲ್ಲದೆ, “ಸರ್ವೇಶ್ವರಾ, ಆದಿಯಲ್ಲಿ ನೀ ಭೂಮಿಯನು ಸೃಜಿಸಿದೆ ನಭಮಂಡಲದಲ್ಲಿ ನಿನ್ನ ಕೈಚಳಕವ ತೋರಿದೆ.


ಆಕಾಶಕ್ಕೆ ಏರಿ ಮರಳಿದವನು ಯಾರು? ಮುಷ್ಟಿಯಲ್ಲಿ ಗಾಳಿಯನ್ನು ಹಿಡಿದಿಟ್ಟವನು ಯಾರು? ಬಟ್ಟೆಯಲ್ಲಿ ನೀರನ್ನು ಮೂಟೆಕಟ್ಟಿದವನು ಯಾರು? ಭೂಮಿಗೆ ಎಲ್ಲೆಮೇರೆಗಳನ್ನು ನಿಗದಿಮಾಡಿದವನು ಯಾರು? ಆತನ ಹೆಸರೇನು? ಆತನ ಮಗನ ಹೆಸರೇನು? ಬಲ್ಲೆಯಾ?


ಆದರೆ, ಇತ್ತೀಚಿನ ಅಂತಿಮ ದಿನಗಳಲ್ಲಿ ಅವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆ. ದೇವರು ಇಡೀ ವಿಶ್ವವನ್ನು ಉಂಟುಮಾಡಿದ್ದು ಇವರ ಮುಖಾಂತರವೇ; ಸಮಸ್ತಕ್ಕೂ ಬಾಧ್ಯನನ್ನಾಗಿ ನೇಮಿಸಿರುವುದು ಇವರನ್ನೇ.


ಆದಿಯಲೆ ನೀ ಭುವಿಗೆ ಅಸ್ತಿವಾರ ಹಾಕಿದೆ I ಗಗನಮಂಡಲವು ಸಹ ನಿನ್ನ ಸೃಷ್ಟಿಯಾಗಿದೆ II


ಆದಿಯಲ್ಲಿ ದೇವರು ಪರಲೋಕ - ಭೂಲೋಕವನ್ನು ಸೃಷ್ಟಿಮಾಡಿದರು.


ತನ್ನ ಸೃಷ್ಟಿಕ್ರಮದಲ್ಲಿ ಸರ್ವೇಶ್ವರ ನಿರ್ಮಿಸಿದ ನನ್ನನ್ನು ಮೊತ್ತಮೊದಲು ಆತನ ಪುರಾತನ ಕಾರ್ಯಕ್ರಮಗಳಲ್ಲಿ ನಾನೇ ಪ್ರಥಮಳು.


ಇತಿ, ಪರಲೋಕ - ಭೂಲೋಕಗಳ ನಿರ್ಮಾಣ ಚರಿತ್ರೆ.


ಎತ್ತುವನಾತ ದೀನರನು ಧೂಳಿಂದ, ದರಿದ್ರರನು ತಿಪ್ಪೆಯಿಂದ. ಕುಳ್ಳರಿಸುವನವರನು ಅಧಿಪತಿಗಳ ಸಮೇತ ಅನುಗ್ರಹಿಸುವನು ಹಕ್ಕಾಗಿ ಆ ಮಹಿಮಾಸನ. ಕಾರಣ-ಭೂಮಿಯ ಆಧಾರಸ್ತಂಭಗಳು ಸರ್ವೇಶ್ವರನವೇ ಭೂಮಂಡಲವನು ಅವುಗಳ ಮೇಲೆ ಸ್ಥಾಪಿಸಿದವನು ಆತನೇ.


ನೀನು ಮನುಜರಿಗೆಲ್ಲ ಆದಿಪುರುಷನೋ? ಬೆಟ್ಟಗಳಿಗಿಂತ ಮುಂಚಿತವಾಗಿ ಹುಟ್ಟಿದವನೋ?


ಭೂಲೋಕವನು ಆತನ ವಶಕ್ಕೆ ಕೊಟ್ಟವನುಂಟೆ? ಆತನಲ್ಲದೆ ಭೂಮಂಡಲವನು ಕ್ರಮಪಡಿಸಿದವನುಂಟೆ?


ಜ್ಞಾನೋದಯ ನೀಡಿದವನಾರು ಆತನಿಗೆ? ನ್ಯಾಯಮಾರ್ಗ ತೋರಿಸಿದವನಾರು ಆತನಿಗೆ? ಬುದ್ಧಿ ಕಲಿಸಿದವನಾರು ಆತನಿಗೆ? ಏನೇ ಮಾರ್ಗವನ್ನು ಸೂಚಿಸಿದವನಾರು ಆತನಿಗೆ?


ಸರ್ವೇಶ್ವರ ಭೂಮಿಯನ್ನು ನಿರ್ಮಿಸಿದ್ದಾರೆ ಶಕ್ತಿಯಿಂದ ಲೋಕವನ್ನು ಸ್ಥಾಪಿಸಿದ್ದಾರೆ ಜ್ಞಾನದಿಂದ ಆಕಾಶಮಂಡಲವನ್ನು ಹರಡಿದ್ದಾರೆ ವಿವೇಕದಿಂದ.


ಬೆಟ್ಟಗುಡ್ಡಗಳನ್ನು ರೂಪಿಸಿದಾತ ದೇವನೇ ಗಾಳಿಬಿರುಗಾಳಿಯನು ಸೃಜಿಸಿದಾತ ಆತನೇ ತನ್ನಾಲೋಚನೆಯನ್ನು ನರರಿಗರುಹಿಸಿದವ ದೇವನೇ ಹಗಲನ್ನು ಇರುಳನ್ನಾಗಿಸುವವನು ಆತನೇ ಪೊಡವಿಯ ಉನ್ನತ ಸ್ಥಾನದಲ್ಲಿ ನಡೆದಾಡುವವನಾತನೇ ಆತನ ನಾಮಧೇಯ - ಸೇನಾಧೀಶ್ವರ ದೇವರಾದ ಸರ್ವೇಶ್ವರನೇ.


ಗಾಳಿಗೆ ತಕ್ಕ ವೇಗವನು ನೇಮಿಸಿದಾಗ ಜಲಕ್ಕೆ ತಕ್ಕ ಜಾಗವನು ನಿರ್ಣಯಿಸಿದಾಗ,


ನೀನಾದರೋ ಉಳಿದಿರುವೆ, ಅವೋ ಅಳಿದುಹೋಗುವುವು I ಹಳೆಯದಾಗುತ್ತವೆ ಬಟ್ಟೆಯಂತೆ ಅವೆಲ್ಲವು I ಉಡುಪಿನಂತೆ ಬದಲಿಸುತ್ತ, ಮಾರ್ಪಡುತ್ತವೆ ಅವು II


ಸರ್ವೇಶ್ವರಸ್ವಾಮಿ ಜ್ಞಾನದ ಮೂಲಕ ಜಗವನ್ನು ಸ್ಥಾಪಿಸಿದ ವಿವೇಕದ ಮುಖಾಂತರ ಗಗನವನ್ನು ಸ್ಥಿರಗೊಳಿಸಿದ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು