ಯೋಬ 34:33 - ಕನ್ನಡ ಸತ್ಯವೇದವು C.L. Bible (BSI)33 ದೇವರು ಅಂಥವರನ್ನು ದಂಡಿಸಬೇಕೆನ್ನುತ್ತೀಯೋ? ಆತನ ತೀರ್ಪನ್ನು ನೀನೇ ಅಲ್ಲಗಳೆದಿರುವೆಯಲ್ಲವೆ? ಈಗ ನಾನು ಹೇಳಲಾರೆ, ನೀನೇ ಹೇಳು, ನಿನ್ನ ಅಭಿಪ್ರಾಯವನು ನಮಗೆ ತಿಳಿಸು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201933 ಆತನು ಕೊಡುವ ಪ್ರತಿಫಲವನ್ನು ಬೇಡವೆನ್ನುವುದೇಕೆ? ಅದು ನಿನ್ನ ಮನಸ್ಸಿಗೆ ಒಪ್ಪಿತವಾಗಿರಬೇಕೋ? ನೀನೇ ಆರಿಸಿಕೋ, ನಾನು ಆರಿಸಿಕೊಳ್ಳಲಾರೆನು. ನಿನಗೆ ತಿಳಿದದ್ದನ್ನು ತಿಳಿಸು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)33 ಆತನು ಕೊಡುವ ಪ್ರತಿಫಲವನ್ನು ಬೇಡವೆನ್ನುವದೇಕೆ? ಅದು ನಿನ್ನ ಮನಸ್ಸಿಗೆ ಒಪ್ಪಿತವಾಗಿರಬೇಕೋ? ನೀನೇ ಆರಿಸಿಕೋ, ನಾನು ಆರಿಸಿಕೊಳ್ಳಲಾರೆನು. ನಿನಗೆ ತಿಳಿದದ್ದನ್ನು ತಿಳಿಸು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್33 ಯೋಬನೇ, ನೀನು ಮಾರ್ಪಾಟಾಗದೆ ದೇವರಿಂದ ಪ್ರತಿಫಲವನ್ನು ಅಪೇಕ್ಷಿಸುವುದೇಕೆ? ಯೋಬನೇ, ಇದು ನಿನ್ನ ನಿರ್ಧಾರ, ನನ್ನದಲ್ಲ. ನಿನ್ನ ಆಲೋಚನೆಯನ್ನು ನನಗೆ ತಿಳಿಸು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ33 ಆದರೆ ನೀನು ಪಶ್ಚಾತ್ತಾಪಪಡಲು ನಿರಾಕರಿಸಿದಾಗ, ದೇವರು ನಿನಗೆ ತಕ್ಕ ದಂಡನೆಯನ್ನು ಕೊಡಬಾರದೆ? ಇದನ್ನು ನೀನೇ ತೀರ್ಮಾನಿಸು, ನಾನು ತೀರ್ಮಾನಿಸುವುದಿಲ್ಲ; ಆದ್ದರಿಂದ ನಿನಗೆ ತಿಳಿದದ್ದನ್ನು ನನಗೆ ತಿಳಿಸು.” ಅಧ್ಯಾಯವನ್ನು ನೋಡಿ |