Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 34:28 - ಕನ್ನಡ ಸತ್ಯವೇದವು C.L. Bible (BSI)

28 ಬಡವರ ಗೋಳಾಟ ದೇವರಿಗೆ ಮುಟ್ಟುವಂತೆ ಮಾಡಿದ್ದರು ದಿಕ್ಕಿಲ್ಲದವರ ಗೋಗರೆತ ಆತನ ಕಿವಿಗೆ ಬೀಳುವಂತೆ ಮಾಡಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಹೀಗೆ ಬಡವರ ಗೋಳಾಟವು ದೇವರಿಗೆ ಮುಟ್ಟುವಂತೆ ಮಾಡಿದ್ದರು, ಆತನು ದಿಕ್ಕಿಲ್ಲದವರ ಮೊರೆಯನ್ನು ಆಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಹೀಗೆ ಬಡವರ ಗೋಳಾಟವು ದೇವರಿಗೆ ಮುಟ್ಟುವಂತೆ ಮಾಡಿದ್ದರು, ಆತನು ದಿಕ್ಕಿಲ್ಲದವರ ಮೊರೆಯನ್ನು ಆಲೈಸಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಹೀಗೆ ಬಡವರ ಗೋಳಾಟವು ದೇವರಿಗೆ ಮುಟ್ಟುವಂತೆ ದುಷ್ಟರು ಮಾಡಿದರು. ಆತನು ದಿಕ್ಕಿಲ್ಲದವರ ಕೂಗನ್ನು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಹೀಗೆ ದುಷ್ಟರು ಬಡವರ ಕೂಗನ್ನು ದೇವರ ಬಳಿಗೆ ಬರುವಂತೆ ಮಾಡಿದ್ದರು ದೇವರು ದಿಕ್ಕಿಲ್ಲದವರ ಕೂಗನ್ನು ಆಲೈಸಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 34:28
21 ತಿಳಿವುಗಳ ಹೋಲಿಕೆ  

ನಿಮ್ಮ ಹೊಲಗಳಲ್ಲಿ ದುಡಿದ ಆಳುಗಳ ಕೂಲಿಯನ್ನು ಮೋಸದಿಂದ ಹಿಡಿದಿಟ್ಟುಕೊಂಡಿದ್ದೀರಿ. ನೀವು ಕೊಡದ ಕೂಲಿಯೇ ನಿಮಗೆ ವಿರುದ್ಧವಾಗಿ ಕೂಗಿಕೊಳ್ಳುತ್ತಿದೆ. ಕೂಲಿಯಾಳುಗಳ ಗೋಳಾಟ ಸ್ವರ್ಗಸೇನಾಧೀಶ್ವರನಾದ ಪ್ರಭುವಿನ ಕಿವಿಗೂ ಬಿದ್ದಿದೆ.


ಅಪಾರ ಹಿಂಸೆಗಳಿಗೆ ಒಳಪಟ್ಟವರು ಮೊರೆಯಿಡುತ್ತಾರೆ. ಬಲಿಷ್ಠರ ಭುಜಬಲದಿಂದ ಪೀಡಿತರು ಕಿರಿಚಿಕೊಳ್ಳುತ್ತಾರೆ.


ಆಗ ಸರ್ವೇಶ್ವರ, “ಈಜಿಪ್ಟಿನಲ್ಲಿರುವ ನನ್ನ ಜನರ ದುರವಸ್ಥೆಯನ್ನು ನಾನು ಕಣ್ಣಾರೆ ನೋಡಿದ್ದೇನೆ. ಬಿಟ್ಟೀ ಕೆಲಸ ಮಾಡಿಸಿಕೊಳ್ಳುವವರ ಬಗ್ಗೆ ಅವರು ಇಟ್ಟ ಮೊರೆ ನನಗೆ ಕೇಳಿಸಿದೆ. ಅವರ ಕಷ್ಟದುಃಖವನ್ನೆಲ್ಲಾ ನಾನು ಬಲ್ಲೆ.


ಬಡವರ ಬವಣೆ ತಿಳಿಯಿತೆನಗೆ; ದಲಿತರ ನರಳಾಟ ಕೇಳಿಸಿತೆನಗೆ I ಎದ್ದು ಬರುವೆ, ಹಗೆಗಳಿಂದವರನು ಉದ್ಧರಿಸುವೆ” ಇದು ಪ್ರಭುವಿನ ಹೇಳಿಕೆ II


ಈಗ ಕೇಳು; “ಇಸ್ರಯೇಲರ ಮೊರೆ ನನಗೆ ಮುಟ್ಟಿದೆ. ಈಜಿಪ್ಟಿನವರು ಅವರಿಗೆ ಕೊಡುತ್ತಿರುವ ಉಪದ್ರವವನ್ನು ನಾನು ನೋಡಿದ್ದೇನೆ.


ಇಸ್ರಯೇಲ್ ಮನೆತನವೇ ಸೇನಾಧೀಶ್ವರ ಸರ್ವೇಶ್ವರ ನೆಟ್ಟ ಆ ದ್ರಾಕ್ಷಿಯ ತೋಟ. ಜುದೇಯದ ಜನರೇ ಆತ ನಾಟಿಮಾಡಿದಾ ಸುಂದರ ಸಸಿತೋಟ. ನ್ಯಾಯನೀತಿಯನು ನಿರೀಕ್ಷಿಸಿದನಾತ ಆದರೆ ಸಿಕ್ಕಿತವನಿಗೆ ರಕ್ತಪಾತ ! ಸತ್ಸಂಬಂಧವನು ಎದುರುನೋಡಿದನಾತ ಇಗೋ, ದಕ್ಕಿತವನಿಗೆ ದುಃಖಿತರ ಆರ್ತನಾದ !


ನಗರಗಳಲ್ಲಿ ನರಳುವವರಿದ್ದಾರೆ ಗಾಯಗೊಂಡವರು ಮೊರೆಯಿಡುತ್ತಾರೆ ಆದರೆ ದೇವರು ಕಿವಿಗೊಡದಿದ್ದಾನೆ.


ಬಿಡುಗಡೆಯಾಗುವ ಏಳನೆಯ ವರ್ಷ ಸಮೀಪಿಸಿಬಿಟ್ಟಿತು ಎಂದು ನೀಚವಾದ ಆಲೋಚನೆಮಾಡಿ, ಬಡ ಸಹೋದರನ ಬಗ್ಗೆ ಮೋರೆ ಕರ್ರಗೆಮಾಡಿಕೊಂಡು, ಅವನಿಗೆ ಏನೂ ಕೊಡದೆ ಇರಬಾರದು, ಎಚ್ಚರಿಕೆ! ಹಾಗೆ ಸಹಾಯವನ್ನು ನಿರಾಕರಿಸಿದರೆ, ಅವನು ನಿಮ್ಮ ಬಗ್ಗೆ ಸರ್ವೇಶ್ವರನಿಗೆ ಮೊರೆ ಇಡುವನು; ಆಗ ನೀವು ದೋಷಿಗಳಾಗುತ್ತೀರಿ.


ದಿಕ್ಕಿಲ್ಲದವರನು ರಕ್ಷಿಸುತ್ತಾನೆ ದೇವರು ಅಂಥವರ ಬಾಯಿಗತ್ತಿಯಿಂದ ಬಿಡಿಸುತ್ತಾನೆ ಅವರನ್ನು ಬಲಾಢ್ಯರ ಕೈಯಿಂದ.


ನಿಶ್ಚಯವಾಗಿ ನಿನಗೋಸ್ಕರ ಎಚ್ಚೆತ್ತು ಬರುವನು ಸತ್ಯವಂತನ ಮನೆಮಾರನು ಸಮೃದ್ಧಿಗೊಳಿಸುವನು.


ಆತನನು ಪ್ರಾರ್ಥಿಸುವೆ, ಆತ ಆಲಿಸುವನು ತೀರಿಸುವೆ ಆತನಿಗೆ ನೀ ಹೊತ್ತ ಹರಕೆಗಳನು.


ಆಗ ಅವನು ದೇವರಿಗೆ ಪ್ರಾರ್ಥನೆ ಮಾಡುವನು ಆತನ ಒಲುಮೆಗೆ ಪಾತ್ರನಾಗುವನು. ಹರ್ಷೋದ್ಗಾರದಿಂದ ಆತನ ಸನ್ನಿಧಿಗೆ ಬರುವನು ಮತ್ತೆ ಆತನಿಂದ ಸತ್ಯವಂತ ಎನಿಸಿಕೊಳ್ಳುವನು.


ವ್ಯಕ್ತಿಯಾಗಿರಲಿ, ರಾಷ್ಟ್ರವಾಗಿರಲಿ, ಯಾರಾಗಿದ್ದರೇನು? ದೇವರು ಸುಮ್ಮನಿದ್ದರೆ ತಪ್ಪುಹೊರಿಸುವವರಾರು? ವಿಮುಖನಾದರೆ ಆತನ ದರ್ಶನ ಪಡೆಯಬಲ್ಲವರಾರು?


ನನ್ನ ನಿಟ್ಟುಸಿರಿಗೂ ಮೊರೆಗೂ ಕಿವಿಮುಚ್ಚಿಕೊಳ್ಳಬೇಡ ಎಂದೆ ಆಗ ನೀನು ನನ್ನ ಧ್ವನಿಯನ್ನು ಕೇಳಿದೆ.


ವಿಧವೆಯರನ್ನಾಗಲಿ ದಿಕ್ಕಿಲ್ಲದ ಮಕ್ಕಳನ್ನಾಗಲಿ ಬಾಧಿಸಬಾರದು.


ಉದಯಕಾಲದಲ್ಲಿ ಪ್ರಭು, ನಿನಗೆ ಕೇಳಿಬರುವುದು ನನ್ನ ಸ್ವರ I ಉದಯಾರಾಧನೆ ಮಾಡಿ ಎದುರು ನೋಡುತ್ತಿರುವೆ ನಾ ಸದುತ್ತರ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು