Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 32:9 - ಕನ್ನಡ ಸತ್ಯವೇದವು C.L. Bible (BSI)

9 ವಯೋವೃದ್ಧರು ಮಾತ್ರ ಜ್ಞಾನಿಗಳಲ್ಲ ಮುದುಕರು ಮಾತ್ರ ನ್ಯಾಯಬಲ್ಲವರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ವೃದ್ಧರೇ ಜ್ಞಾನಿಗಳಲ್ಲ, ಮುದುಕರು ಮಾತ್ರ ನ್ಯಾಯ ಬಲ್ಲವರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ವೃದ್ಧರೇ ಜ್ಞಾನಿಗಳಲ್ಲ, ಮುದುಕರು ಮಾತ್ರ ನ್ಯಾಯಬಲ್ಲವರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ವೃದ್ದರು ಮಾತ್ರ ಜ್ಞಾನಿಗಳಲ್ಲ, ಕೇವಲ ವಯಸ್ಸಾದವರು ಮಾತ್ರ ಯಾವುದು ಸರಿ ಎಂಬುದನ್ನು ಅರ್ಥಮಾಡಿಕೊಳ್ಳುವವರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ದೊಡ್ಡ ಮನುಷ್ಯರೇ ಬುದ್ಧಿವಂತರಲ್ಲ; ಮುದುಕರೇ ನ್ಯಾಯವನ್ನು ಬಲ್ಲವರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 32:9
14 ತಿಳಿವುಗಳ ಹೋಲಿಕೆ  

ಮೂಕರನ್ನಾಗಿಸುತ್ತಾನೆ ವಾಕ್ ಚತುರರನ್ನು ಹಿರಿಯರ ಧೀಮಂತಿಕೆಯನ್ನು ತೆಗೆದುಬಿಡುತ್ತಾನೆ.


ಆ ಸಮಯದಲ್ಲಿ ಯೇಸುಸ್ವಾಮಿ, “ಪಿತನೇ, ಪರಲೋಕ ಭೂಲೋಕಗಳ ಒಡೆಯನೇ, ಜ್ಞಾನಿಗಳಿಗೂ ಮೇಧಾವಿಗಳಿಗೂ ಈ ವಿಷಯಗಳನ್ನು ಮರೆಮಾಡಿ ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ.


ಬುದ್ಧಿಮಾತಿಗೆ ಕಿವಿಗೊಡದ ಮೂರ್ಖನಾದ ಮುದಿಯರಸನಿಗಿಂತ ಜ್ಞಾನಿಯಾದ ಬಡ ಯುವಕನೇ ಮೇಲು.


ನಮ್ಮ ಮುಖಂಡರಲ್ಲಾಗಲಿ, ಫರಿಸಾಯರಲ್ಲಾಗಲಿ, ಯಾರಾದರೂ ಅವನನ್ನು ನಂಬಿದ್ದುಂಟೆ?


ಆದುದರಿಂದ ಗಣ್ಯವ್ಯಕ್ತಿಗಳ ಬಳಿಗೆ ಹೋಗಿ ಮಾತಾಡುವೆನು ಅವರು ಸರ್ವೇಶ್ವರನ ಮಾರ್ಗ ಹಾಗೂ ಅವರ ದೇವರ ನ್ಯಾಯವಿಧಿಗಳನ್ನು ಬಲ್ಲವರು,” ಎಂದುಕೊಂಡೆನು. ಆದರೆ ಆ ವ್ಯಕ್ತಿಗಳು ಕೂಡ ನೊಗವನ್ನು ಮುರಿದವರು, ಕಣ್ಣಿಗಳನ್ನು ಕಿತ್ತುಬಿಟ್ಟವರು.


ದೊಡ್ಡವರು ಮಾತಾಡಲಿ ಎಂದುಕೊಂಡೆನು ವಯೋವೃದ್ಧರು ಸುಜ್ಞಾನವನು ಬೋಧಿಸಲಿ ಎಂದೆನು.


ಆದಕಾರಣ ನನ್ನ ಕಡೆಗೂ ಕಿವಿಗೊಡಿ ನನ್ನ ಅಭಿಪ್ರಾಯ ತಿಳಿಸುತ್ತೇನೆ, ಕೇಳಿ:


ಅರಸನು ತನ್ನ ಸೇವಕರಿಗೆ, “ಈ ದಿನ ಇಸ್ರಯೇಲರಲ್ಲಿ ಹತನಾದವನು ಒಬ್ಬ ಶ್ರೇಷ್ಠನಾಯಕ ಹಾಗು ಮಹಾಪುರುಷ ಆಗಿದ್ದನೆಂಬುದು ನಿಮಗೆ ಗೊತ್ತಿದೆ.


ಅವರ ಗುಡಾರದ ಗೂಟವನ್ನು ಕೀಳಲಾಗುವುದು ಬುದ್ಧಿಹೀನರಾಗಿಯೆ ಅವರು ಸತ್ತುಹೋಗುವರು.


ನಿನ್ನ ನಿಯಮಗಳನು ಕೈಗೊಂಡುದರಿಂದ I ನಾನಧಿಕ ವಿವೇಕಿ ಗುರುಹಿರಿಯರಿಗಿಂತ II


ವಿವೇಕಿಯಾದೆನು ನಿನ್ನ ನಿಯಮಗಳ ಮೂಲಕ I ದ್ವೇಷಿಸುತಿಹೆನು ಪ್ರತಿಯೊಂದು ಮಿಥ್ಯಾ ಮಾರ್ಗ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು