Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 31:8 - ಕನ್ನಡ ಸತ್ಯವೇದವು C.L. Bible (BSI)

8 ನಾನು ಬಿತ್ತಿದ್ದನ್ನು ಮತ್ತೊಬ್ಬ ಉಣ್ಣಲಿ ನನ್ನ ಬೆಳೆಯು ಬುಡಮೇಲಾಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ನಾನು ಬಿತ್ತಿದ್ದನ್ನು ಮತ್ತೊಬ್ಬನು ಉಣ್ಣಲಿ, ನನ್ನ ಬೆಳೆಯು ನಿರ್ಮೂಲವಾಗಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ನಾನು ಬಿತ್ತಿದ್ದನ್ನು ಮತ್ತೊಬ್ಬನು ಉಣ್ಣಲಿ, ನನ್ನ ಬೆಳೆಯು ನಿರ್ಮೂಲವಾಗಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನಾನು ಬಿತ್ತಿ ಬೆಳೆಸಿದ ಬೆಳೆಗಳನ್ನು ಬೇರೆಯವರು ತಿನ್ನಲಿ; ನಾನು ಬೆಳೆಸಿದ ಸಸಿಗಳು ಕೀಳಲ್ಪಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ನಾನು ಬಿತ್ತುವುದನ್ನು ಬೇರೊಬ್ಬನು ಉಣ್ಣಲಿ; ನನ್ನ ಬೆಳೆಯು ಬುಡಮೇಲಾಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 31:8
15 ತಿಳಿವುಗಳ ಹೋಲಿಕೆ  

ನೀವು ಈ ದಂಡನೆಗಳಿಗೆ ಗುರಿಯಾಗುವಿರಿ. ನಿಮಗೆ ಕ್ಷಯ ರೋಗ, ಚಳಿಜ್ವರ ಮುಂತಾದ ಭೀಕರ ವ್ಯಾಧಿಗಳು ಬರುವಂತೆ ಮಾಡುವೆನು. ಇವುಗಳ ನಿಮಿತ್ತ ನೀವು ಕಂಗೆಡುವಿರಿ, ಮನಗುಂದಿ ಹೋಗುವಿರಿ. ನಿಮ್ಮ ಬಿತ್ತನೆಯ ಫಲ ನಿಮಗೆ ಸಿಗದೆ ಹೋಗುವುದು. ಅದು ಶತ್ರುಗಳ ಪಾಲಾಗುವುದು.


ನೀವು ಬೀಜವನ್ನು ಬಿತ್ತಿದರೂ ಬೆಳೆಯನ್ನು ಕೊಯ್ಯಲಾರಿರಿ. ಕಾಳನ್ನು ಗಾಣಕ್ಕೆ ಸುರಿದರೂ ಎಣ್ಣೆಯನ್ನು ತೆಗೆಯಲಾರಿರಿ. ದ್ರಾಕ್ಷಿಯನ್ನು ಆಲೆಮನೆಗೆ ಹಾಕಿದರೂ ದ್ರಾಕ್ಷಾರಸವನ್ನು ಕುಡಿಯಲಾರಿರಿ.


“ಹೊಲದಲ್ಲಿ ನೀವು ಎಷ್ಟು ಬೀಜ ಬಿತ್ತಿದರೂ ಮಿಡತೆಯ ದಂಡುಬಂದು ಅದನ್ನು ತಿಂದುಬಿಡುವುದು; ನಿಮಗೆ ದೊರೆಯುವ ಬೆಳೆ ಅತ್ಯಲ್ಪವಾಗುವುದು;


ನಿರ್ಮೂಲವಾಗಲಿ ಅವನಾ ಪೀಳಿಗೆ I ನಿರ್ನಾಮವಾಗಲಿ ಮರುವಂಶದೊಳಗೆ II


ಹೊಟ್ಟೆಗಾಗಿ ಸೊಪ್ಪುಸದೆ ಕೊಯ್ದುಕೊಳ್ಳುತ್ತಾರೆ ಬಯಲಿನಲಿ ಹಕ್ಕಲನ್ನು ಆಯ್ದುಕೊಳ್ಳುತ್ತಾರೆ ದುಷ್ಟನ ದ್ರಾಕ್ಷಿತೋಟದಲಿ.


ತಾನು ದುಡಿದು ಗಳಿಸಿದ್ದನ್ನು ತಿಂದು ಅನುಭವಿಸಲಾರನು ಅದು ಪರರ ಪಾಲಾಗುವುದು ವ್ಯಾಪಾರದಿಂದ ಬಂದ ವರಮಾನ ಅವನಿಗೆ ಆನಂದ ತರದು.


ಅವನ ಮಗ, ಮೊಮ್ಮಗರಾರೂ ಇರರು ಸ್ವಜನರಲಿ ಯಾರೂ ಉಳಿಯರು ಅವನು ವಾಸಿಸಿದ ಸ್ಥಳದಲಿ.


ಕತ್ತಲೊಳಗಿಂದ ಪಾರಾಗನವನು ಸುಡುವುದು ಕಿಚ್ಚು ಅವನ ಕೊಂಬೆಯನು ಬಡಿದೊಯ್ಯುವುದು ಗಾಳಿ ಅದರ ಫಲವನು.


ಅವರು ನಿಮ್ಮ ದನಗಳನ್ನೂ ಬೆಳೆಗಳನ್ನೂ ತಿಂದುಬಿಡುವರು. ನಿಮಗೆ ಧಾನ್ಯವನ್ನಾಗಲಿ, ದ್ರಾಕ್ಷಾರಸವನ್ನಾಗಲಿ, ಎಣ್ಣೆಯನ್ನಾಗಲಿ, ದನಕುರಿಗಳ ಸಂತಾನವನ್ನಾಗಲಿ, ಉಳಿಸದೆ ನಿಮ್ಮನ್ನು ಸಂಪೂರ್ಣವಾಗಿ ನಾಶಮಾಡುವರು.


ಬಿತ್ತುವವನೊಬ್ಬ, ಕೊಯ್ಯುವವನಿನ್ನೊಬ್ಬ,’ ಎಂಬ ನಾಣ್ನುಡಿ ನಿಜವಾದುದು.


ನರಕ ಕೂಪದವರೆಗೆ ಬೆಂಕಿಯಾಗುತ್ತಿತ್ತು ನನ್ನ ಆದಾಯವನ್ನೆಲ್ಲ ನಿರ್ಮೂಲಮಾಡುತ್ತಿತ್ತು.


“ದೇವಾಧಿದೇವರಾದ ಸರ್ವೇಶ್ವರ ಇದಕ್ಕೆ ಸಾಕ್ಷಿ; ಆ ದೇವಾಧಿದೇವ ಸರ್ವೇಶ್ವರಸ್ವಾಮಿಗೆ ಇದು ಗೊತ್ತಿದೆ. ಇಸ್ರಯೇಲರಿಗೂ ಗೊತ್ತಾಗುವುದು. ನಾವು ದ್ರೋಹಿಗಳು, ಸರ್ವೇಶ್ವರನಿಗೆ ವಿರುದ್ಧ ಪಾಪಮಾಡಿದವರು ಆಗಿದ್ದರೆ ಆ ಸ್ವಾಮಿ ನಮ್ಮನ್ನು ಇಂದೇ ಜೀವದಿಂದುಳಿಸದಿರಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು