Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 31:39 - ಕನ್ನಡ ಸತ್ಯವೇದವು C.L. Bible (BSI)

39 ಕೂಲಿಕೊಡದೆ ಆ ಭೂಮಿಯ ಫಲವನು ನಾನು ಸವಿದಿದ್ದರೆ ಅದರ ದಣಿಗಳ ಪ್ರಾಣಹಾನಿಗೆ ನಾನು ಕಾರಣನಾಗಿದ್ದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

39 ನಾನು ಹಣಕೊಡದೆ ಅದರ ಸಾರವನ್ನು ಅನುಭವಿಸಿ, ಅದರ ದಣಿಗಳ ಪ್ರಾಣ ಹಾನಿಗೆ ಕಾರಣನಾಗಿದ್ದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

39 ನಾನು ಹಣಕೊಡದೆ ಅದರ ಸಾರವನ್ನನುಭವಿಸಿ ಅದರ ದಣಿಗಳ ಪ್ರಾಣ ಹೋದದ್ದಕ್ಕೆ ಕಾರಣನಾಗಿದ್ದರೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

39 ನಾನು ರೈತರಿಗೆ ಬೆಳೆಯಲ್ಲಿ ಪಾಲು ಕೊಟ್ಟೆನು; ಯಾರೂ ಹಸಿವೆಯಿಂದ ಇರಲು ಬಿಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

39 ಕೂಲಿಕೊಡದೆ ಭೂಮಿಯ ಫಲವನ್ನು ನಾನು ತಿಂದಿದ್ದರೆ, ಅದರ ಯಜಮಾನರ ಪ್ರಾಣಹಾನಿಗೆ ಕಾರಣನಾಗಿದ್ದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 31:39
11 ತಿಳಿವುಗಳ ಹೋಲಿಕೆ  

ಅವನಿಗೆ, “ನೀನು ಕೊಲೆಮಾಡಿ, ಸೊತ್ತನ್ನು ಸಂಪಾದಿಸಿಕೊಂಡೆಯಲ್ಲವೇ? ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನೂ ನೆಕ್ಕುವುವು, ಎನ್ನುತ್ತಾರೆ ಸರ್ವೇಶ್ವರ’ ಎಂದು ಹೇಳು.”


ನಿಮ್ಮ ಹೊಲಗಳಲ್ಲಿ ದುಡಿದ ಆಳುಗಳ ಕೂಲಿಯನ್ನು ಮೋಸದಿಂದ ಹಿಡಿದಿಟ್ಟುಕೊಂಡಿದ್ದೀರಿ. ನೀವು ಕೊಡದ ಕೂಲಿಯೇ ನಿಮಗೆ ವಿರುದ್ಧವಾಗಿ ಕೂಗಿಕೊಳ್ಳುತ್ತಿದೆ. ಕೂಲಿಯಾಳುಗಳ ಗೋಳಾಟ ಸ್ವರ್ಗಸೇನಾಧೀಶ್ವರನಾದ ಪ್ರಭುವಿನ ಕಿವಿಗೂ ಬಿದ್ದಿದೆ.


ಇಗೋ, ಇಸ್ರಯೇಲಿನ ಅರಸರು ತಮ್ಮ ತಮ್ಮ ಶಕ್ತ್ಯಾನುಸಾರ ನಿನ್ನಲ್ಲಿ ರಕ್ತ ಸುರಿಸುತ್ತಲೇ ಇದ್ದಾರೆ.


ಇಗೋ, ಸರ್ವೇಶ್ವರ ಜಗದ ಜನಕ್ಕೆ ಅವರವರ ಪಾಪದ ಫಲವನ್ನು ಉಣಿಸಲು ತಮ್ಮ ನಿವಾಸದಿಂದ ಹೊರಟಿರುವರು. ಭೂಮಿ ತನ್ನಲ್ಲಿ ಇಂಗಿದ ರಕ್ತವನ್ನು ಬೆಳಕಿಗೆ ತರುವುದು; ಭೂನಿವಾಸಿಗಳಲ್ಲಿ ಹತರಾದವರನ್ನು ಇನ್ನು ಮರೆಮಾಚದು.


ಸೂರೆ ಮಾಡುವವರೆಲ್ಲರ ಪಾಡು ಇದುವೆ; ಕೊಳ್ಳೆಯು, ಕೊಳ್ಳೆಗಾರರ ಪ್ರಾಣವನ್ನೇ ಕೊಳ್ಳೆಮಾಡುತ್ತದೆ.


ಇದನ್ನು ನೀನು ವ್ಯವಸಾಯ ಮಾಡಿದರೂ ಇನ್ನು ಮುಂದೆ ಇದು ಫಲಕೊಡುವುದಿಲ್ಲ. ನೆಲೆಯಿಲ್ಲದೆ ನೀನು ಲೋಕದಲ್ಲಿ ಅಲೆಮಾರಿಯಾಗಿರಬೇಕು,” ಎಂದರು.


ಹೊಟ್ಟೆಗಾಗಿ ಸೊಪ್ಪುಸದೆ ಕೊಯ್ದುಕೊಳ್ಳುತ್ತಾರೆ ಬಯಲಿನಲಿ ಹಕ್ಕಲನ್ನು ಆಯ್ದುಕೊಳ್ಳುತ್ತಾರೆ ದುಷ್ಟನ ದ್ರಾಕ್ಷಿತೋಟದಲಿ.


ಬಡವರೋ ಬಟ್ಟೆಯಿಲ್ಲದೆ ಅಲೆಯುತ್ತಾರೆ ಬೆತ್ತಲೆಯಾಗಿ ಸಿವುಡುಗಳನ್ನು ಹೊರುತ್ತಾರೆ ಹಸಿದವರಾಗಿ.


“ನೆರೆಯವನಿಗೆ ಕೂಲಿಕೊಡದೆ ಬಿಟ್ಟಿಕೆಲಸ ಮಾಡಿಸಿಕೊಂಡು ಅರಮನೆಯನ್ನು ಕಟ್ಟಿಸಿಕೊಳ್ಳುವವನಿಗೆ ಧಿಕ್ಕಾರ ! ಅವನು ಅರಮನೆಯನ್ನು ಕಟ್ಟಿಸಿಕೊಳ್ಳುವುದು ಅನೀತಿಯಿಂದ ಮಹಡಿಗಳನ್ನು ನಿರ್ಮಿಸಿಕೊಳ್ಳುವುದು ಅನ್ಯಾಯದಿಂದ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು