Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 31:28 - ಕನ್ನಡ ಸತ್ಯವೇದವು C.L. Bible (BSI)

28 ಇದು ಕೂಡ ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾಗುತ್ತಿತ್ತು ಮೇಲಣ ಲೋಕದ ದೇವರಿಗೆ ದ್ರೋಹವೆಸಗಿದಂತಾಗುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಇದು ಸಹ ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾದದ್ದು, ಮೇಲಣ ಲೋಕದ ದೇವರಿಗೆ ದ್ರೋಹಿಯಾದಂತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಇದು ಸಹ ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾದದ್ದು, ಮೇಲಣ ಲೋಕದ ದೇವರಿಗೆ ದ್ರೋಹಿಯಾದಂತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ನಾನು ಅವುಗಳಲ್ಲಿ ಯಾವುದನ್ನೇ ಮಾಡಿದ್ದರೂ ನನಗೆ ಶಿಕ್ಷೆಯಾಗುತ್ತಿತ್ತು. ಯಾಕೆಂದರೆ ಆಗ ನಾನು ಸರ್ವಶಕ್ತನಾದ ದೇವರಿಗೆ ಅಪನಂಬಿಗಸ್ತನಾಗುತ್ತಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಇದು ಸಹ ನ್ಯಾಯಾಧಿಪತಿಯ ದಂಡನೆಗೆ ಯೋಗ್ಯವಾಗುತ್ತಿತ್ತು; ಏಕೆಂದರೆ, ಆಗ ನಾನು ಉನ್ನತದಲ್ಲಿರುವ ದೇವರಿಗೆ ದ್ರೋಹಿಯಾಗುತ್ತಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 31:28
19 ತಿಳಿವುಗಳ ಹೋಲಿಕೆ  

ಏಕೆಂದರೆ ಅಂಥ ನಡತೆ ಕಾಮುಕತನವಾಗುತ್ತಿತ್ತು ನ್ಯಾಯಾಧಿಪತಿಗಳ ದಂಡನೆಗೆ ತಕ್ಕ ಅಪರಾಧವಾಗುತ್ತಿತ್ತು.


ದೇವನೇ ಸತ್ಯಸ್ವರೂಪಿ, ನ್ಯಾಯಾಧಿಪತಿ I ಇದನು ಸಾರಿ ಹೇಳಲಿ ಆಕಾಶ ಪ್ರಕೃತಿ II


ಅಲ್ಲಿ ಸಜ್ಜನನಿಗೆ ಮಾತ್ರ ವಾದಿಸಲು ಸಾಧ್ಯ. ನಿತ್ಯವಾದ ಬಿಡುಗಡೆ ಆ ನ್ಯಾಯಾಧೀಶನಿಂದ ನನಗೆ ಲಭ್ಯ.


ನಾನು ಸತ್ಯವಂತನಾಗಿದ್ದರೂ ವಾದಿಸಲಾರೆನು ನನ್ನ ನ್ಯಾಯಾಧೀಶನಲ್ಲಿ ದಯೆಯನು ಕೋರುವೆನು.


ನಾನು ನಿನಗೆ ಯಾವ ಅನ್ಯಾಯವನ್ನೂ ಮಾಡಲಿಲ್ಲ. ನೀನು ಈಗ ನನಗೆ ವಿರೋಧವಾಗಿ ಯುದ್ಧಕ್ಕೆ ಬಂದದ್ದರಿಂದ ನೀನೇ ಅನ್ಯಾಯಮಾಡಿದ ಹಾಗಾಯಿತು. ನ್ಯಾಯಸ್ಥಾಪಕರಾದ ಸರ್ವೇಶ್ವರಸ್ವಾಮಿಯೇ ಈ ಹೊತ್ತು ಇಸ್ರಯೇಲರಿಗೂ ಅಮ್ಮೋನಿಯರಿಗೂ ಮಧ್ಯೆ ನ್ಯಾಯ ತೀರಿಸಲಿ,” ಎಂದು ಹೇಳಿಸಿದನು.


ಬಳಿಕ ಎಲ್ಲಾ ಜನರಿಗೆ, “ಇಗೋ, ನೋಡಿ ಈ ಕಲ್ಲು! ಇದು ನಿಮ್ಮ ವಿಷಯದಲ್ಲಿ ಸಾಕ್ಷಿ ಹೇಳುವುದು. ಸರ್ವೇಶ್ವರ ನಮಗೆ ಹೇಳಿದ ಎಲ್ಲ ಮಾತುಗಳನ್ನು ಇದು ಕೇಳಿದೆ.


ಆಗ ಯೆಹೋಶುವ, “ಹಾಗಾದರೆ ನಿಮ್ಮಲ್ಲಿರುವ ಅನ್ಯದೇವತೆಗಳನ್ನು ತೊರೆದುಬಿಟ್ಟು ಇಸ್ರಯೇಲಿನ ದೇವರಾದ ಸರ್ವೇಶ್ವರನ ಕಡೆಗೆ ನಿಮ್ಮ ಹೃನ್ಮನಗಳನ್ನು ತಿರುಗಿಸಿಕೊಳ್ಳಿ,” ಎಂದನು.


ಯಾಜಕಸೇವೆಮಾಡುವ ಲೇವಿಯರ ಮತ್ತು ಆ ಕಾಲದ ನ್ಯಾಯಾಧಿಪತಿಯ ಬಳಿಗೆ ಹೋಗಿ ವಿಚಾರಿಸಬೇಕು. ನೀವು ಕೊಡಬೇಕಾದ ತೀರ್ಪನ್ನು ಅವರು ತಿಳಿಸುವರು.


ಹೀಗೆ ದುಷ್ಟರಿಗೂ ಶಿಷ್ಟರಿಗೂ ಭೇದಮಾಡದೆ ದುಷ್ಟರ ಸಂಗಡ ಸಜ್ಜನರನ್ನೂ ಸಂಹರಿಸುವುದು ನಿಮ್ಮಿಂದ ಎಂದಿಗೂ ಆಗಬಾರದು. ಇಡೀ ಜಗತ್ತಿನ ನ್ಯಾಯಾಧಿಪತಿ ಸರಿಯಾಗಿ ನ್ಯಾಯತೀರಿಸಬೇಕಲ್ಲವೇ?" ಎಂದನು.


ಏಕೆಂದರೆ, ಕೆಲವರು ಕಳ್ಳತನದಿಂದ ನಿಮ್ಮ ಸಭೆಯೊಳಗೆ ಸೇರಿಕೊಂಡಿದ್ದಾರೆ. ಇವರು ಭಕ್ತಿಹೀನರು; ನಮ್ಮ ದೇವರ ಅನುಗ್ರಹದ ನೆವದಲ್ಲಿ ತಮ್ಮ ಕಾಮಾಭಿಲಾಷೆಗಳನ್ನು ಸಮರ್ಥಿಸಿಕೊಳ್ಳುತ್ತಿರುವವರು; ನಮ್ಮ ಏಕೈಕ ಒಡೆಯರೂ ಪ್ರಭುವೂ ಆದ ಯೇಸುಕ್ರಿಸ್ತರನ್ನು ನಿರಾಕರಿಸುವವರು. ಇಂಥವರಿಗೆ ದಂಡನೆಯಾಗಬೇಕೆಂದು ಬಹಳ ಹಿಂದೆಯೇ ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ.


ಪುತ್ರನನ್ನು ತಿರಸ್ಕರಿಸುವವನು ಪಿತನನ್ನೂ ತಿರಸ್ಕರಿಸುತ್ತಾನೆ. ಪುತ್ರನನ್ನು ಅಂಗೀಕರಿಸುವವನು ಪಿತನನ್ನೂ ಅಂಗೀಕರಿಸುತ್ತಾನೆ.


ಇಸ್ರಯೇಲ್ ಜನರಲ್ಲೇ ಕಪಟ ಪ್ರವಾದಿಗಳು ಕಾಣಿಸಿಕೊಂಡರು. ಅಂತೆಯೇ, ನಿಮ್ಮಲ್ಲೂ ಸುಳ್ಳುಬೋಧಕರು ಕಾಣಿಸಿಕೊಳ್ಳುವರು. ಹಾನಿಕರವಾದ ದುರ್ಬೋಧನೆಗಳನ್ನು ಗೋಪ್ಯವಾಗಿ ಪ್ರಸರಿಸುವರು. ಒತ್ತೆಯಿಟ್ಟು ತಮ್ಮನ್ನು ರಕ್ಷಿಸಿದ ಒಡೆಯನನ್ನೇ ಅರಿಯೆವೆಂದು ನಿರಾಕರಿಸುವರು. ಹೀಗೆ ತಮ್ಮ ವಿನಾಶವನ್ನು ತಾವೇ ಬೇಗನೆ ಬರಮಾಡಿಕೊಳ್ಳುವರು.


ಸ್ವರ್ಗದಲ್ಲಿ ದಾಖಲೆಯಾಗಿರುವ ಜೇಷ್ಠಪುತ್ರನ ಸಭೆಗೆ; ನೀವು ಬಂದಿರುವುದು ಸಕಲ ಮಾನವರ ನ್ಯಾಯಮೂರ್ತಿಯಾದ ದೇವರ ಸನ್ನಿಧಿಗೆ; ಸಿದ್ಧಿಗೆ ಬಂದ ಸತ್ಪುರುಷರ ಆತ್ಮಗಳ ಸಮೂಹಕ್ಕೆ;


ತಾವು ದೇವರನ್ನು ಬಲ್ಲವರೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ನಡತೆ ತದ್ವಿರುದ್ಧವಾಗಿರುತ್ತದೆ. ಇಂಥವರು ಅವಿಧೇಯರೂ ಅಸಹ್ಯರೂ ಆಗಿರುವುದರಿಂದ ಯಾವುದೇ ಸತ್ಕಾರ್ಯವನ್ನು ಮಾಡಲು ಅಯೋಗ್ಯರಾಗಿದ್ದಾರೆ.


ಎಲ್ಲವೂ ಇದ್ದರೆ “ಸರ್ವೇಶ್ವರನು ಯಾರು?” ಎಂದು ನಿನ್ನನ್ನೆ ನಾನು ತಿರಸ್ಕರಿಸೇನು. ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರಿಗೆ ಅಪಕೀರ್ತಿ ತಂದೇನು.


ಅಬ್ನೇರನ ಶವವನ್ನು ಹೆಬ್ರೋನಿನಲ್ಲಿ ಸಮಾಧಿಮಾಡಿದರು. ಅರಸನು ಅವನ ಸಮಾಧಿಯ ಹತ್ತಿರ ನಿಂತು ಗಟ್ಟಿಯಾಗಿ ಅತ್ತನು; ಜನರೆಲ್ಲರೂ ಅತ್ತರು.


ನನ್ನ ಹೃದಯ ಅವಕ್ಕೆ ಮಾರುಹೋಗಿದ್ದರೆ ಬಾಯ್ಮೇಲೆ ಕೈಯಿಟ್ಟು ಅವನ್ನು ಆರಾಧಿಸಿದ್ದರೆ,


ಹೌದು, ನಿಮಗೆ ತಪ್ಪುಮಾಡಿ ನಿಮ್ಮನ್ನು ಅಲ್ಲಗಳೆದಿದ್ದೇವೆ. ನಮ್ಮ ದೇವರಾದ ನಿಮ್ಮನ್ನು ಹಿಂಬಾಲಿಸದೆ ಹಿಂದಿರುಗಿದ್ದೇವೆ; ಹಿಂಸಾಚಾರವನ್ನೂ ದಂಗೆ ಏಳುವುದನ್ನೂ ಪ್ರಚೋದಿಸಿದ್ದೇವೆ. ನಮ್ಮ ಅಂತರಾಲೋಚನೆಗಳು ಹುಸಿ; ನಮ್ಮ ಬಾಯಿಮಾತು ಸುಳ್ಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು