Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 31:2 - ಕನ್ನಡ ಸತ್ಯವೇದವು C.L. Bible (BSI)

2 ಎಂಥ ಪಾಲನ್ನು ವಿಧಿಸಬಲ್ಲನು ದೇವರು ಮೇಲಣಲೋಕದಿಂದ? ಎಂಥ ಬಾಧ್ಯತೆಯನು ನೀಡಬಲ್ಲನು ಸರ್ವಶಕ್ತನು ಮಹೋನ್ನತದಿಂದ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ದೇವರು ಮೇಲಣ ಲೋಕದಿಂದ ಯಾವ ಪಾಲನ್ನು ವಿಧಿಸುವನು, ಸರ್ವಶಕ್ತನಾದ ದೇವರು ಉನ್ನತಾಕಾಶದಿಂದ ಕೊಡುವ ಬಾಧ್ಯತೆ ಯಾವುದು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ದೇವರು ಮೇಲಣ ಲೋಕದಿಂದ ಯಾವ ಪಾಲನ್ನು ವಿಧಿಸುವನು, ಸರ್ವಶಕ್ತನು ಉನ್ನತಾಕಾಶದಿಂದ ಕೊಡುವ ಬಾಧ್ಯತೆ ಯಾವದು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಸರ್ವಶಕ್ತನಾದ ದೇವರು ಜನರಿಗೆ ಏನು ಮಾಡುವನು? ದೇವರು ತನ್ನ ಉನ್ನತವಾದ ಪರಲೋಕದಿಂದ ಜನರಿಗೆ ಹೇಗೆ ಪ್ರತಿಫಲವನ್ನು ಕೊಡುವನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ದೇವರು ಮೇಲಣ ಲೋಕದಿಂದ ಯಾವ ಪಾಲನ್ನು ವಿಧಿಸುವರು? ಸರ್ವಶಕ್ತರು ಉನ್ನತಾಕಾಶದಿಂದ ಕೊಡುವ ಬಾಧ್ಯತೆ ಯಾವುದು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 31:2
7 ತಿಳಿವುಗಳ ಹೋಲಿಕೆ  

ಇದುವೆ ದುರುಳನಿಗೆ ದೇವರು ವಿಧಿಸುವ ಭಾಗ್ಯ ದೇವರಿಂದ ಅವನಿಗೆ ನೇಮಿಸಲಾಗಿರುವ ಸ್ವಾಸ್ತ್ಯ.”


ವಿವಾಹಬಂಧನವನ್ನು ಎಲ್ಲರೂ ಗೌರವಿಸಲಿ; ದಂಪತಿಗಳ ಸಂಬಂಧವು ನಿಷ್ಕಳಂಕವಾಗಿರಲಿ. ಕಾಮುಕರೂ ವ್ಯಭಿಚಾರಿಗಳೂ ದೇವರ ನ್ಯಾಯತೀರ್ಪಿಗೆ ಗುರಿಯಾಗುತ್ತಾರೆ.


“ಹೀಗಿರುತ್ತವೆ ದುಷ್ಟನಿಗೆ ದೇವರಿಂದ ದೊರಕುವ ಪಾಲು ಹಿಂಸಾಚಾರಿಗೆ ಸರ್ವಶಕ್ತನಿಂದ ಸಿಗುವ ಸೊತ್ತು:


ಬದಲಿಗೆ ಸರ್ವೇಶ್ವರ ಇವರಿಗಾಗಿ ಆಶ್ಚರ್ಯಕರವಾದ ಶಿಕ್ಷೆಯನ್ನು ಕಲ್ಪಿಸಿ ಅಂದರೆ ಭೂಮಿ ಬಾಯ್ದೆರೆದು ಇವರನ್ನು ಹಾಗೂ ಇವರಿಗಿರುವ ಸರ್ವಸ್ವವನ್ನು ನುಂಗಿಬಿಟ್ಟರೆ, ಇವರೆಲ್ಲರು ಸಜೀವಿಗಳಾಗಿ ಪಾತಾಳಕ್ಕೆ ಹೋಗಿಬಿಟ್ಟರೆ, ಇವರು ಸರ್ವೇಶ್ವರನನ್ನು ಉಲ್ಲಂಘಿಸಿದವರೆಂದು ನೀವು ತಿಳಿದುಕೊಳ್ಳಬೇಕು,” ಎಂದು ಹೇಳಿದನು.


ಇಗೋ, ನನ್ನ ಕಡೆಯ ಸಾಕ್ಷಿ ಸ್ವರ್ಗದಲ್ಲಿರುವನು ನನ್ನ ಪರವಾದಿ ಮೇಲಣ ಲೋಕದಲ್ಲಿರುವನು.


ಆ ದುರುಳರ ದೀಪ ಆರಿಹೋದದ್ದು ಎಷ್ಟುಸಾರಿ? ಅವರಿಗೆ ವಿಪತ್ತು ಸಂಭವಿಸಿದ್ದು ಎಷ್ಟುಸಾರಿ? ಅವರ ಕೋಪ ಅವರಿಗೆ ಸಂಕಟ ತಂದದ್ದು ಎಷ್ಟುಬಾರಿ?


“ದೇವರು ಮಹೋನ್ನತ ಪ್ರಭು; ಭಯಭಕ್ತಿಗೆ ಪಾತ್ರನು ಉನ್ನತಲೋಕದಲ್ಲಿ ಶಾಂತಿಸಮಾಧಾನವನು ಸ್ಥಾಪಿಸಿಹನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು