Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 3:9 - ಕನ್ನಡ ಸತ್ಯವೇದವು C.L. Bible (BSI)

9 ಮುಂಜಾನೆಯ ತಾರೆಗಳು ಆ ದಿನದೊಳು ಮಿಣುಕದಿರಲಿ ಇದಿರುನೋಡಿದರೂ ಬೆಳಕನು ಕಾಣದಿರಲಿ ಅರುಣೋದಯ ಕಣ್ದೆರೆವುದನು ಅದು ನೋಡದಿರಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಆ ದಿನದಲ್ಲಿ ಮುಂಜಾನೆಯ ನಕ್ಷತ್ರಗಳೂ ಮಿಣುಕದೆ ಹೋಗಲಿ. ಅದು ಬೆಳಕನ್ನು ಎದುರುನೋಡಿದರೂ ಹೊಂದದಿರಲಿ. ಅರುಣೋದಯವೆಂಬ ರೆಪ್ಪೆ ತೆರೆಯುವುದನ್ನು ಅದು ಕಾಣದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಆ ದಿನದಲ್ಲಿ ಮುಂಜಾನೆಯ ನಕ್ಷತ್ರಗಳೂ ವಿುಣುಕದೆ ಹೋಗಲಿ, ಅದು ಬೆಳಕನ್ನು ಎದುರುನೋಡಿದರೂ ಹೊಂದದಿರಲಿ, ಅರುಣೋದಯವೆಂಬ ರೆಪ್ಪೆ ತೆರೆಯುವದನ್ನು ಅದು ಕಾಣದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಆ ದಿನದ ಮುಂಜಾನೆಯ ನಕ್ಷತ್ರಗಳು ಕತ್ತಲಾಗಲಿ. ಅದು ಮುಂಜಾನೆಯ ಬೆಳಕಿಗಾಗಿ ಎದುರುನೋಡಿದರೂ ಹೊಂದದಿರಲಿ. ಅದು ಸೂರ್ಯೋದಯದ ಕಿರಣಗಳನ್ನು ನೋಡದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಅದರ ಮುಂಜಾನೆಯ ನಕ್ಷತ್ರಗಳು ಕಪ್ಪಾಗಲಿ; ಅದು ಬೆಳಕಿಗೋಸ್ಕರ ಕಾದುಕೊಂಡರೂ ಬಾರದಿರಲಿ ಅರುಣೋದಯವು ಆ ದಿನವನ್ನು ನೋಡದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 3:9
7 ತಿಳಿವುಗಳ ಹೋಲಿಕೆ  

ಅದರ ಸೀನಿನ ತುಂತುರುಗಳು ಥಳಥಳಿಸುತ್ತವೆ ಅದರ ಕಣ್ಣುಗಳು ಅರುಣನೇತ್ರಕ್ಕೆ ಸಮಾನವಾಗಿವೆ.


ನಿಮ್ಮ ದೇವರಾದ ಸರ್ವೇಶ್ವರನಿಗೆ ಸಲ್ಲಿಸಿ ಗೌರವವನ್ನು ಇಲ್ಲವಾದರೆ ಆತ ಬರಮಾಡುವನು ಸ್ವಲ್ಪಕಾಲದಲ್ಲೇ ಕತ್ತಲನ್ನು. ನಿಮ್ಮ ಕಾಲುಗಳು ಮುಗ್ಗರಿಸುವುವು ಮಬ್ಬಿನ ಗುಡ್ಡಗಳ ನಡುವೆ.


ಸುಖಶಾಂತಿಯನ್ನು ನಿರೀಕ್ಷಿಸಿದೆವು, ಯಾವ ಒಳಿತೂ ಸಿಗಲಿಲ್ಲ. ಸುಕ್ಷೇಮ ಕಾಲವನ್ನು ಎದುರುನೋಡಿದೆವು. ನಮಗೆ ಗಿಟ್ಟಿದ್ದು ಭಯಭ್ರಾಂತಿ ಮಾತ್ರ.


ನಾನು ಒಳಿತನು ನಿರೀಕ್ಷಿಸಿದಾಗ ಕೇಡು ಬಂದೊದಗಿತು ಬೆಳಕನು ಎದುರು ನೋಡುವಾಗ ಕತ್ತಲು ಕವಿಯಿತು.


ಮಾಟಮಂತ್ರಗಾರರು ಅದಕ್ಕೆ ಶಾಪಹಾಕಲಿ ಘಟಸರ್ಪವೆಬ್ಬಿಸಬಲ್ಲ ಗಾರುಡಿಗರು ಅದನು ಧಿಕ್ಕರಿಸಲಿ!


ಏಕೆಂದರೆ ಅದು ನನ್ನ ತಾಯಿಯ ಗರ್ಭದ್ವಾರವನು ನನಗೆ ಮುಚ್ಚಲಿಲ್ಲ ನನ್ನ ಕಣ್ಗಳಿಂದ ದುಃಖದುಗುಡವನು ಮರೆಮಾಡಲಿಲ್ಲ.


ಅದನು ಕೆಣಕಲು ಧೈರ್ಯಗೊಂಡಾಗ ಅದು ಉಗ್ರವಾಗುತ್ತದೆ ‘ನನ್ನ ಮುಂದೆ ನಿಲ್ಲಬಲ್ಲವರಾರು?’ ಎನ್ನುತ್ತದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು