Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 28:26 - ಕನ್ನಡ ಸತ್ಯವೇದವು C.L. Bible (BSI)

26 ಮಳೆಗೆ ಕಟ್ಟಳೆಯನು ವಿಧಿಸಿದಾಗ ಗುಡುಗು ಮಿಂಚಿಗೆ ಮಾರ್ಗವನ್ನೇರ್ಪಡಿಸಿದಾಗ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಮಳೆಗೆ ಕಟ್ಟಳೆಯನ್ನೂ, ಗರ್ಜಿಸುವ ಸಿಡಿಲಿಗೆ ದಾರಿಯನ್ನೂ ಏರ್ಪಡಿಸಿದಾಗಲೇ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಮಳೆಗೆ ಕಟ್ಟಳೆಯನ್ನೂ ಗರ್ಜಿಸುವ ಸಿಡಿಲಿಗೆ ದಾರಿಯನ್ನೂ ಏರ್ಪಡಿಸಿದಾಗಲೇ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಮಳೆಯನ್ನೂ ಗುಡುಗುಸಿಡಿಲುಗಳ ಮಳೆಯನ್ನೂ ಎಲ್ಲಿಗೆ ಕಳುಹಿಸಬೇಕೆಂದು ನಿರ್ಧರಿಸಿದಾಗಲೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಮಳೆಗೆ ಕಟ್ಟಳೆಯನ್ನೂ, ಗರ್ಜಿಸುವ ಸಿಡಿಲಿಗೆ ದಾರಿಯನ್ನೂ ಏರ್ಪಡಿಸಿದಾಗಲೇ

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 28:26
20 ತಿಳಿವುಗಳ ಹೋಲಿಕೆ  

ಮನುಜರಿಲ್ಲದ ಕಾಡಿನಲ್ಲೂ ನಿರ್ಜನಪ್ರದೇಶದಲ್ಲೂ ಮಳೆಯನು ಹೊಯ್ದು,


ಅದನ್ನು ಗಗನಮಂಡಲದೊಳು ಹರಡುತ್ತಾನೆ ಜಗದ ಅಂಚಿನ ತನಕ ಮಿಂಚು ಹೊಳೆಯುವಂತೆ ಮಾಡುತ್ತಾನೆ.


ವಸಂತಕಾಲದಲ್ಲಿ ಮಳೆಗಾಗಿ ಸರ್ವೇಶ್ವರಸ್ವಾಮಿಗೆ ಪ್ರಾರ್ಥನೆ ಮಾಡಿರಿ. ಮೋಡ ಮಿಂಚುಗಳನ್ನು ಗಾಳಿಮಳೆಯನ್ನು ಉಂಟುಮಾಡುವವರು ಅವರೇ. ಸರ್ವರಿಗೂ ಹೊಲಗದ್ದೆಗಳಲ್ಲಿ ಪೈರುಪಚ್ಚೆಗಳನ್ನು ನೀಡುವವರು ಅವರೇ.


“ಸುಗ್ಗಿಗೆ ಮೂರು ತಿಂಗಳಿರುವಾಗಲೂ ಮಳೆಯನ್ನು ತಡೆದವನು ನಾನೇ. ಒಂದೂರಿಗೆ ಮಳೆಯಾಗುವಂತೆಯೂ ಮತ್ತೊಂದೂರಿಗೆ ಮಳೆಯಾಗದಂತೆಯೂ ಮಾಡಿದವನು ನಾನೇ. ಒಂದು ಹೊಲಕ್ಕೆ ಮಳೆಯಾಗುವಂತೆ, ಮತ್ತೊಂದು ಹೊಲ ಮಳೆಯಿಲ್ಲದೆ ಬಾಡಿಹೋಗುವಂತೆ ಮಾಡಿದವನು ನಾನೇ.


ಅನ್ಯಜನಾಂಗಗಳ ಶೂನ್ಯದೇವತೆಗಳಲ್ಲಿ ಮಳೆಸುರಿಸಬಲ್ಲವರುಂಟೆ? ಆಕಾಶವು ತಾನಾಗಿ ಹದಮಳೆಯನ್ನು ಬರಮಾಡಬಲ್ಲುದೆ? ನಮ್ಮ ದೇವರಾದ ಸರ್ವೇಶ್ವರಾ, ವೃಷ್ಟಿದಾತರು ನೀವೇ ನಾವು ನಿರೀಕ್ಷಿಸುತ್ತಿರುವುದು ನಿಮ್ಮನ್ನೇ ಹೌದು, ಇವುಗಳನ್ನೆಲ್ಲ ನಡೆಸುವವರು ನೀವೇ.


ಕಿಚ್ಚು, ಕಲ್ಮಳೆ, ಹಿಮ, ಹಬೆ ಇವುಗಳೆಲ್ಲವೂ I ಆತ ಹೇಳಿದಂತೆ ಕೇಳುವ ಬಿರುಗಾಳಿಯೂ, II


ವೃಷ್ಟಿಯ ಪ್ರವಾಹಕ್ಕೆ ಕಾಲುವೆಯನು ಕಡಿದವರಾರು? ಗರ್ಜಿಸುವ ಸಿಡಿಲಿಗೆ ದಾರಿಯನು ಮಾಡಿದವರಾರು?


ಮೋಡಗಳ ಮೇಲೆ ಮಂಜನು ಹೇರುತ್ತಾನೆ ಮೇಘಮಂಡಲವು ಆತನ ಮಿಂಚನು ಹರಡುತ್ತದೆ.


ಸಿಡಿಲನ್ನೇ ಕೈತುಂಬ ಹಿಡಿದು ಗುರಿಮುಟ್ಟಲೆಂದು ಆಜ್ಞೆಯಿಡುತ್ತಾನೆ.


ದೇವರೆನಿತೋ ಮಹೋನ್ನತನು ನಮ್ಮ ಅರಿವಿಗಾತನು ಎಟುಕನು ಅಸಂಖ್ಯಾತ ಆತನ ವರುಷಗಳು.


ದೇವರು ಆ ಜ್ಞಾನವನು ಕಂಡು ಪರಿಗಣಿಸಿದನು ಅದನು ಪರಿಶೋಧಿಸಿ ಪ್ರತಿಷ್ಠಾಪಿಸಿದನು.


ಹಿಮಕ್ಕೆ, ‘ಹದವಾಗಿ ಭೂಮಿಗೆ ಬೀಳು’ ಎನ್ನುತ್ತಾನೆ ಭಾರಿಮಳೆಗೆ, ‘ರಭಸದಿಂದ ಸುರಿ’ ಎನ್ನುತ್ತಾನೆ.


ಹಾಳುಬೀಳಾದ ಭೂಮಿಯನು ತೋಯಿಸಲೆಂದು ಪಚ್ಚೆಪಸಿರಾದ ಹುಲ್ಲನು ಬೆಳೆಯಿಸಲೆಂದು,


ಏಳಮಾಡುವನು ದಿಗಂತದೊಳು ಮೋಡವನು I ಹೊಳೆಯಮಾಡುವನು ಮಳೆಗೋಸ್ಕರ ಮಿಂಚನು I ಬೀಸಮಾಡುವನು ಉಗ್ರಾಣದಿಂದ ಗಾಳಿಯನು II


ತನ್ನ ಸೃಷ್ಟಿಕ್ರಮದಲ್ಲಿ ಸರ್ವೇಶ್ವರ ನಿರ್ಮಿಸಿದ ನನ್ನನ್ನು ಮೊತ್ತಮೊದಲು ಆತನ ಪುರಾತನ ಕಾರ್ಯಕ್ರಮಗಳಲ್ಲಿ ನಾನೇ ಪ್ರಥಮಳು.


ನೀರಿನ ಹನಿಗಳನು ಹೀರಿಕೊಳ್ಳುತ್ತಾನೆ ಮಂಜಿನಿಂದ ತಿಳಿಮಳೆಯನು ಸುರಿಸುತ್ತಾನೆ.


ಗ್ರಹಿಸುವವರಾರು ಮೇಘಗಳ ಹಬ್ಬುಗೆಯನು? ದೇವರ ಗುಡಾರದಲ್ಲಿನಾ ಗರ್ಜನೆಯನು?


ದೇವರ ಧ್ವನಿಯ ಗರ್ಜನೆಯನು ಕಿವಿಗೊಟ್ಟು ಕೇಳು ಆತನ ಬಾಯಿಂದ ಹೊರಡುವ ಮಾತನು ಆಲಿಸು.


ಮಿಂಚಿನ ಬಳಿಕ ಕೇಳಿಬರುವುದು ಗರ್ಜನೆಯ ಶಬ್ದ ಗುಡುಗಿನಂಥ ಗಂಭೀರವಾದ ಆತನ ಕಂಠನಾದ ಆತನ ಸ್ವರ ಕೇಳುವಾಗ ನಿಲ್ಲದು ಮಿಂಚಿನ ಹೊಳೆತ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು