Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 27:6 - ಕನ್ನಡ ಸತ್ಯವೇದವು C.L. Bible (BSI)

6 ನ್ಯಾಯನೀತಿಯನ್ನು ಬಿಡದೆ ಹಿಡಿವೆನು ಭದ್ರವಾಗಿ ನನ್ನ ಬಾಳಿನ ಯಾವ ದಿನದಂದೂ ನಿಂದಿಸಿದ್ದಿಲ್ಲ ನನ್ನ ಮನಸ್ಸಾಕ್ಷಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ನನ್ನ ನೀತಿಯನ್ನು ಎಂದಿಗೂ ಬಿಡದೆ ಭದ್ರವಾಗಿ ಹಿಡಿದುಕೊಳ್ಳುವೆನು. ನನ್ನ ಜೀವಮಾನದ ಯಾವ ದಿನಚರಿಯಲ್ಲಿಯೂ, ಮನಸ್ಸಾಕ್ಷಿಯು ತಪ್ಪು ತೋರಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ನನ್ನ ನೀತಿಯನ್ನು ಎಂದಿಗೂ ಬಿಡದೆ ಭದ್ರವಾಗಿ ಹಿಡಿದುಕೊಳ್ಳುವೆನು. ನನ್ನ ಜೀವಮಾನದ ಯಾವ ದಿನಚರ್ಯದಲ್ಲಿಯೂ ಮನಸ್ಸಾಕ್ಷಿಯು ತಪ್ಪು ತೋರಿಸುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ನನ್ನ ನೀತಿಯನ್ನು ಬಲವಾಗಿ ಹಿಡಿದುಕೊಳ್ಳುವೆನು; ಅದನ್ನೆಂದಿಗೂ ಬಿಟ್ಟುಕೊಡೆನು. ನಾನು ಜೀವದಿಂದಿರುವತನಕ ನನ್ನ ಮನಸ್ಸಾಕ್ಷಿಯು ನನ್ನನ್ನು ಕಾಡಿಸುವುದೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ನನ್ನ ನಿಷ್ಕಪಟತೆಯನ್ನು ದೃಢವಾಗಿ ಹಿಡುಕೊಂಡಿದ್ದೇನೆ; ಅದನ್ನು ಎಂದಿಗೂ ನಾನು ಹೋಗಗೊಡಿಸುವುದಿಲ್ಲ; ನಾನು ಜೀವಂತವಾಗಿ ಇರುವವರೆಗೂ ನನ್ನ ಮನಸ್ಸಾಕ್ಷಿಯು ನನ್ನನ್ನು ನಿಂದಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 27:6
16 ತಿಳಿವುಗಳ ಹೋಲಿಕೆ  

ಆಗ ಸರ್ವೇಶ್ವರ ಅವನಿಗೆ, “ನನ್ನ ದಾಸ ಯೋಬನನ್ನು ಗಮನಿಸಿದೆಯಾ? ಆತನು ದೋಷರಹಿತ, ಸತ್ಯವಂತ, ದೇವರಲ್ಲಿ ಭಯಭಕ್ತಿಯುಳ್ಳವನು, ಕೆಟ್ಟದ್ದನ್ನು ತೊರೆದು ಬಾಳುವವನು. ನಿಷ್ಕಾರಣವಾಗಿ ಆತನನ್ನು ನಾಶಮಾಡಲು ಬಿಡಬೇಕೆಂದು ನೀನು ನನ್ನನ್ನು ಪೀಡಿಸಿದೆ. ಆದರೂ ಆತನು ತನ್ನ ಸತ್ಯಸಂಧತೆಯನ್ನು ಬಿಡದೆ ಇದ್ದಾನೆ ನೋಡು,” ಎಂದರು.


ಅಂತೆಯೇ, ದೇವರ ಹಾಗೂ ಮಾನವರ ಮುಂದೆ ಶುದ್ಧ ಮನಸ್ಸಾಕ್ಷಿಯುಳ್ಳವನಾಗಿ ಬಾಳಲು ಪ್ರಯತ್ನಿಸುತ್ತಿದ್ದೇನೆ.


ಹೀಗೆ ಹೊಗಳಿಕೊಳ್ಳುವ ನಾನು ಹುಚ್ಚನೇ ಸರಿ. ಆದರೆ ಇದಕ್ಕೆ ಒತ್ತಾಯಪಡಿಸಿದವರು ನೀವೇ. ನೀವೇ ನನ್ನನ್ನು ಹೊಗಳಬೇಕಾಗಿತ್ತು. ಏಕೆಂದರೆ, ನಾನು ಶೂನ್ಯಸಮಾನನಾದರೂ ಆ “ಮಹಾಪ್ರೇಷಿತರು” ಎಂದು ಹೇಳಿಕೊಳ್ಳುವವರಿಗಿಂತ ಕೀಳಾದವನಲ್ಲ.


ಸದುಪದೇಶವನ್ನು ಬಿಗಿಹಿಡಿದುಕೊ; ಅದೇ ನಿನ್ನ ಜೀವ, ಅದನ್ನು ಕಾಪಾಡಿಕೊ.


ದಯಮಾಡಿ ಮತ್ತೆ ಆಲೋಚಿಸಿರಿ ಅನ್ಯಾಯವಾಗದಂತೆ ಮರಳಿ ವಿಮರ್ಶಿಸಿರಿ ನನ್ನ ಸತ್ಯತೆ ತಿಳಿಯುವಂತೆ.


ಇಗೋ ನನ್ನ ಮೊಕದ್ದಮೆಯನ್ನು ಸಿದ್ಧಗೊಳಿಸಲಾಗಿದೆ ನಾನು ನಿರ್ದೋಷಿಯೆಂಬ ನಿರ್ಣಯ ನನಗೆ ಗೊತ್ತೇ ಇದೆ.


ನನ್ನ ಹಗೆಗೆ ದುಷ್ಟತನ ಗತಿಯಾಗಲಿ ಅನೀತಿವಂತನ ಪಾಡು ನನ್ನ ವಿರೋಧಿಗೆ ಒದಗಲಿ.


ಧರ್ಮವನ್ನು ನಾನು ಧರಿಸಿಕೊಂಡೆ; ಅದು ನನಗೆ ಅಂಬರವಾಗಿತ್ತು ನ್ಯಾಯನೀತಿ ನನಗೆ ನಿಲುವಂಗಿಯೂ ಪೇಟವೂ ಆಗಿತ್ತು.


ತೂಗಿನೋಡಲಿ ನನ್ನನು ನ್ಯಾಯದ ತಕ್ಕಡಿಯಲಿ ಹೀಗೆ ನನ್ನ ಸತ್ಯತೆಯನು ದೇವರು ತಿಳಿದುಕೊಳ್ಳಲಿ.


ಯೋಬನು ತಾನು ಸತ್ಯವಂತನೆಂದು ಸಾಧಿಸಿದ್ದನು. ಇದನ್ನು ಕೇಳಿದ ಅವನ ಮೂವರು ಮಿತ್ರರು ವಾದಿಸುವುದನ್ನು ನಿಲ್ಲಿಸಿಬಿಟ್ಟರು.


ಆಗ ಬೂಜ್‍ನವನಾದ ಬರಕೇಲನ ಮಗ ಎಲೀಹುವನಿಗೆ ಸಿಟ್ಟೇರಿತು. ಇವನು ರಾಮ್‍ಗೋತ್ರಕ್ಕೆ ಸೇರಿದವನು. ಯೋಬನು ತಾನು ದೇವರಿಗಿಂತ ನ್ಯಾಯವಂತನೆಂದು ಎಣಿಸಿಕೊಂಡ ಕಾರಣ ಎಲೀಹುವನಿಗೆ ಸಿಟ್ಟುಹತ್ತಿತ್ತು.


ಏನು, ನನ್ನ ನಿರ್ಣಯವನ್ನು ನೀನು ಖಂಡಿಸುತ್ತೀಯೋ? ನೀನು ನಿರ್ದೋಷಿಯೆನಿಸಿಕೊಳ್ಳಲು ನನ್ನನ್ನು ದೋಷಿಯನ್ನಾಗಿಸುತ್ತೀಯೋ?


ಸನ್ಮಾರ್ಗದಲ್ಲಿ ಮುಂದುವರೆವವನು ಸಜ್ಜನನು ಬಲಗೊಳ್ಳುತ್ತಲೇ ಇರುವನು ಶುದ್ಧಹಸ್ತನು.


ದಾರಿತಪ್ಪಿ ನಾನು ನಡೆದಿದ್ದರೆ ನನ್ನ ಹೃದಯ, ಕಣ್ಗಳನ್ನು ಹಿಂಬಾಲಿಸಿದ್ದರೆ ಕಲ್ಮಷ ನನ್ನ ಕೈಗೆ ಅಂಟಿಕೊಂಡಿದ್ದರೆ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು