Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 22:4 - ಕನ್ನಡ ಸತ್ಯವೇದವು C.L. Bible (BSI)

4 ನಿನ್ನ ಭಯಭಕ್ತಿಗಾಗಿ ಆತ ನಿನ್ನನ್ನು ಶಿಕ್ಷಿಸುತ್ತಾನೆಯೇ? ಅದಕ್ಕಾಗಿ ನಿನ್ನನು ನ್ಯಾಯತೀರ್ಪಿಗೆ ಗುರಿಪಡಿಸುತ್ತಾನೆಯೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನಿನ್ನ ಭಯಭಕ್ತಿಗಾಗಿಯೇ ಆತನು ನಿನ್ನನ್ನು ಶಿಕ್ಷಿಸಿ ನ್ಯಾಯತೀರ್ಪಿಗೆ ಗುರಿಮಾಡುತ್ತಾನೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಿನ್ನ ಭಯಭಕ್ತಿಗಾಗಿಯೇ ಆತನು ನಿನ್ನನ್ನು ಶಿಕ್ಷಿಸಿ ನ್ಯಾಯತೀರ್ಪಿಗೆ ಗುರಿಮಾಡುತ್ತಾನೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನಿನ್ನ ಆರಾಧನೆಯ ದೆಸೆಯಿಂದ ದೇವರು ನಿನ್ನ ಮೇಲೆ ಆರೋಪ ಹೊರಿಸಿ ದಂಡಿಸುವನೇ? ಇಲ್ಲ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 “ನಿನ್ನ ಭಕ್ತಿಗಾಗಿ ದೇವರು ನಿನ್ನನ್ನು ಗದರಿಸುತ್ತಾರೋ? ನಿನ್ನ ಭಕ್ತಿಗಾಗಿ ದೇವರು ನ್ಯಾಯತೀರ್ಪಿಗೆ ಗುರಿಪಡಿಸುತ್ತಾರೆಯೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 22:4
17 ತಿಳಿವುಗಳ ಹೋಲಿಕೆ  

ಇಂಥವನಾದ ನನ್ನ ಮೇಲೆ ಕಣ್ಣಿಟ್ಟು ಬರಮಾಡುವೆಯಾ ನನ್ನನು ನಿನ್ನ ನ್ಯಾಯಸ್ಥಾನಕ್ಕೆ?


ಗುರಿಮಾಡಬೇಡ ನಿನ್ನ ದಾಸನನು ನ್ಯಾಯ ವಿಚಾರಣೆಗೆ I ಯಾವ ಜೀವಾತ್ಮನೂ ನಿರ್ದೋಷಿಯಲ್ಲ ನಿನ್ನ ಲೆಕ್ಕಕೆ II


ನನ್ನ ಪ್ರೀತಿಪಾತ್ರರನ್ನು ನಾನು ಖಂಡಿಸುತ್ತೇನೆ ಮತ್ತು ದಂಡಿಸುತ್ತೇನೆ. ಆದುದರಿಂದ ಉತ್ಸಾಹದಿಂದಿರು, ದೇವರಿಗೆ ಅಭಿಮುಖನಾಗಿರು.


ಅದನು ಬೆರಣಿಯಂತೆ ಸುಟ್ಟುಹಾಕಿದವರಾದರೋ I ನಿನ್ನ ಕೋಪದೃಷ್ಟಿಯಿಂದಲೆ ನಾಶವಾಗುವರು II


ನಿನ್ನ ಒಂದು ಗದರಿಕೆಗೆ, ಯಕೋಬನ ದೇವನೆ I ರಥಾಶ್ವಬಲಗಳೆಲ್ಲಾ ಬಿದ್ದಿವೆ ಬಿಮ್ಮನೆ II


ಪಾಪದ ಪ್ರಯುಕ್ತ ಮಾನವನು ಶಿಕ್ಷಿಸುವಾಗ I ನುಸಿಹತ್ತಿದಂತೆ ನಾಶಪಡಿಸುವೆ ಅವನಾಸ್ಥೆಯನಾಗ I ಮಾನವ ಜೀವನ ಕೇವಲ ಉಸಿರಿಗೆ ಸರಿಸಮಾನ II


ದೇವರು ಮನುಷ್ಯನ ಮೇಲೆ ಹೆಚ್ಚು ಗಮನ ಇಡಬೇಕಾಗಿಲ್ಲ ಅವನನ್ನು ನ್ಯಾಯವಿಚಾರಣೆಗೆ ಕರೆಯುವ ಅವಶ್ಯಕತೆ ಇಲ್ಲ.


ಭಯಪಡಿ ನೀವು ಕತ್ತಿಗೆ ಪಾಪದ ಮೇಲೆ ದೇವರ ಕೋಪ ಬರಮಾಡುವಾ ಕತ್ತಿಗೆ ನ್ಯಾಯತೀರ್ಪು ಉಂಟೆಂದು ಆಗ ತಿಳಿವುದು ನಿಮಗೆ.”


ಇದು ನನಗೆ ನ್ಯಾಯ ದೊರಕಿಸಲಿ, ದೇವರ ಮುಂದೆ ತನ್ನ ಮಿತ್ರನಿಗಾಗಿ ಒಬ್ಬನು ವಾದಿಸುವಂತೆ.


ದೇವರು ನನ್ನಂಥ ನರನಲ್ಲ, ನಾನಾತನಿಗೆ ಉತ್ತರಿಸಲು ನಾವಿಬ್ಬರೂ ನ್ಯಾಯಾಲಯದಲ್ಲಿ ಕೂಡಿ ವಾದಿಸಲು.


ಶಕ್ತಿಪ್ರಯೋಗದ ಮಾತೆತ್ತಿದರೆ, ‘ಇಗೋ, ನಾನೇ ಶಕ್ತಿಸ್ವರೂಪ’ ಎನ್ನುತ್ತಾನೆ. ನ್ಯಾಯವಿಚಾರಣೆ ಆಗಲಿಯೆಂದರೆ, ‘ನನ್ನನ್ನು ಕರೆಯಿಸುವವನಾರು?’ ಎನ್ನುತ್ತಾನೆ.


ನಾನೇನು ಕಡಲೋ? ಕಡಲಿನ ಘಟಸರ್ಪವೋ? ನೀವು ನನ್ನ ಮೇಲೆ ಕಾವಲಿಡುವುದು ಸರಿಯೋ?


ದೇವರು ಎಲ್ಲ ಕಾರ್ಯಗಳನ್ನು, ರಹಸ್ಯವಾದುವುಗಳನ್ನು ಕೂಡ, ಅವು ಒಳ್ಳೆಯದಾಗಿರಲಿ, ಕೆಟ್ಟದಾಗಿರಲಿ, ನ್ಯಾಯವಿಚಾರಣೆಗೆ ಗುರಿಮಾಡುವರು.


ನೀನು ಸಜ್ಜನನಾಗಿದ್ದರೆ ಅದರಿಂದ ಸರ್ವಶಕ್ತನಿಗೆ ಸುಖವೇ? ನಿನ್ನ ನಿರ್ದೋಷ ನಡತೆಯಿಂದ ಆತನಿಗೆ ಲಾಭವೇ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು