Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 2:5 - ಕನ್ನಡ ಸತ್ಯವೇದವು C.L. Bible (BSI)

5 ನೀವೀಗ ಕೈಚಾಚಿ ಯೋಬನ ಮೂಳೆಮಾಂಸಗಳನ್ನು ಮುಟ್ಟಿನೋಡಿ; ಅವನು ನಿಮ್ಮ ಮುಖದೆದುರಿಗೇ ನಿಮ್ಮನ್ನು ದೂಷಿಸುತ್ತಾನೋ ಇಲ್ಲವೋ ನೀವೇ ನೋಡುವಿರಂತೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಆದರೆ ನಿನ್ನ ಕೈಚಾಚಿ ಅವನ ಅಸ್ತಿಮಾಂಸಗಳನ್ನು ಹೊಡೆ. ಆಗ ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸದೆ ಬಿಡುವುದಿಲ್ಲ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಆದರೆ ನಿನ್ನ ಕೈಚಾಚಿ ಅವನ ಅಸ್ತಿಮಾಂಸಗಳನ್ನು ಹೊಡೆ; ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆದರೆ ನೀನು ಕೈಚಾಚಿ ಅವನ ಮಾಂಸವನ್ನೂ ಮೂಳೆಗಳನ್ನೂ ಹೊಡೆ. ಅವನು ನಿನ್ನ ಮುಖದೆದುರಿಗೆ ನಿನ್ನನ್ನು ಖಂಡಿತವಾಗಿ ದೂಷಿಸುವನು” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಆದರೆ ಈಗ ನಿಮ್ಮ ಕೈಚಾಚಿ, ಅವನ ಎಲುಬನ್ನೂ ಅವನ ಮಾಂಸವನ್ನೂ ಹೊಡೆದರೆ, ಅವನು ನಿಮ್ಮ ಮುಖದೆದುರಿಗೇ ನಿಮ್ಮನ್ನು ಶಪಿಸುವನು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 2:5
16 ತಿಳಿವುಗಳ ಹೋಲಿಕೆ  

ಆದರೆ ನೀವು ಕೈಹಾಕಿ ಆತನ ಸೊತ್ತನ್ನೆಲ್ಲಾ ಅಳಿಸಿಬಿಡಿ. ಆಗ ಆತನು ನಿಮ್ಮನ್ನು ಮುಖಾಮುಖಿಯಾಗಿ ನಿಂದಿಸುತ್ತಾನೋ ಇಲ್ಲವೋ ಎಂದು ನೋಡುವಿರಂತೆ!” ಎಂದನು.


ಔತಣದ ಸರದಿ ತೀರಿದ ಬಳಿಕ, ಯೋಬನು ತನ್ನ ಮಕ್ಕಳು ಒಂದು ವೇಳೆ ಪಾಪಮಾಡಿ ಮನದಲ್ಲೇ ದೇವರನ್ನು ದೂಷಿಸಿರಬಹುದೆಂದುಕೊಂಡು, ಅವರನ್ನು ಕರೆಸಿ ಶುದ್ಧೀಕರಣ ಮಾಡಿಸುತ್ತಿದ್ದನು. ಬೆಳಿಗ್ಗೆ ಎದ್ದು ಅವರೊಬ್ಬೊಬ್ಬರಿಗಾಗಿ ದಹನಬಲಿಗಳನ್ನು ಅರ್ಪಿಸುತ್ತಿದ್ದನು; ಇದು ಯೋಬನ ದೈನಂದಿನ ವಾಡಿಕೆಯಾಗಿತ್ತು.


ಮತ್ತು ಇಸ್ರಯೇಲರಿಗೆ ನೀನು ಹೀಗೆ ಹೇಳಬೇಕು: ತನ್ನ ದೇವರನ್ನು ದೂಷಿಸಿದವನು ಆ ದೋಷದ ಫಲವನ್ನು ಅನುಭವಿಸಬೇಕು.


ಜನರು ಘೋರ ಕಷ್ಟಗಳಿಗೆ ಒಳಗಾಗುವರು. ಹಸಿದು ದೇಶದಲ್ಲೆಲ್ಲ ಅಲೆದಾಡುವರು. ಹಸಿವಿನಿಂದ ರೋಷಗೊಂಡು ಅರಸನನ್ನೂ ದೇವರನ್ನೂ ಹಳಿಯುವರು.


ಸಾಕು ಮಾಡು ನಿನ್ನ ಕೈ ಹೊಡೆತವನು I ಅದರಿಂದ ನಾ ಸಾಯುತ್ತಿರುವೆನು II


ಆತನ ಹೆಂಡತಿ, “ನಿನ್ನ ಸತ್ಯಸಂಧತೆಯನ್ನು ಇನ್ನೂ ಬಿಡಲಿಲ್ಲವೇ? ದೇವರನ್ನು ದೂಷಿಸಿ ಸಾಯಬಾರದೇ?” ಎಂದು ಹೀಗಳೆದಳು.


ದಾವೀದನು ದೇವರಿಗೆ, “ಜನರನ್ನು ಲೆಕ್ಕಿಸಬೇಕೆಂದು ಆಜ್ಞಾಪಿಸಿದವನು ನಾನಲ್ಲವೇ; ಮಹಾಪಾಪ ಮಾಡಿದವನು ನಾನೇ; ಕುರಿಗಳಂತಿರುವ ಈ ಜನರು ಏನು ಮಾಡಿದ್ದಾರೆ? ಸರ್ವೇಶ್ವರಾ, ನನ್ನ ದೇವರೇ, ನಿಮ್ಮ ಕತ್ತಿ ನಿಮ್ಮ ಜನರನ್ನು ಬಾಧಿಸದೆ, ಅವರಿಗೆ ವಿರೋಧವಾಗಿ ಇರದೆ, ನನಗೂ ನನ್ನ ಮನೆಯವರಿಗೂ ವಿರೋಧ ಆಗಿರಲಿ,” ಎಂದು ಬೇಡಿಕೊಂಡನು.


ಸ್ವರ್ಗದಿಂದ ಬಂದ ಮಹಾಶಬ್ದವನ್ನು ನಾನು ಕೇಳಿಸಿಕೊಂಡೆ. ಅದು ಇಂತೆಂದಿತು : “ಇಗೋ, ನಮ್ಮ ದೇವನಿತ್ತ ಜೀವೋದ್ಧಾರ ಸಿದ್ಧಿಸಿದೆ ಆತನ ಶಕ್ತಿ, ಸಾಮ್ರಾಜ್ಯಗಳು ಕಂಗೊಳಿಸುತ್ತಿವೆ. ಆತನ ಕ್ರಿಸ್ತಾಧಿಪತ್ಯ ಸ್ಥಾಪಿತವಾಗಿದೆ. ನಮ್ಮ ಸೋದರರನು ದೂರಿದವನನ್ನು ದಬ್ಬಲಾಗಿದೆ. ಹಗಲಿರುಳು ನಮ್ಮ ದೇವರೆದುರು ದೂರಿತ್ತಿದ್ದವನನ್ನು ತಳ್ಳಲಾಗಿದೆ.


ಅವನನ್ನು ಮೋಶೆಯ ಬಳಿಗೆ ಹಿಡಿದು ತಂದರು. ಆ ವ್ಯಕ್ತಿಯ ತಾಯಿ ದಾನ್ ಕುಲದ ದಿಬ್ರೀಯ ಮಗಳು ‘ಶೆಲೋಮೀತ್’ ಎಂದು ಅವಳ ಹೆಸರು.


ಅದಕ್ಕೆ ಸೈತಾನನು, “ಚರ್ಮಕ್ಕೆ ಚರ್ಮ, ಎಂದ ಹಾಗೆ ಒಬ್ಬ ಮನುಷ್ಯ ಪ್ರಾಣ ಉಳಿಸಿಕೊಳ್ಳಲು ತನ್ನ ಸರ್ವಸ್ವವನ್ನೂ ತೊರೆದುಬಿಡುತ್ತಾನೆ.


ಆಗ ಸರ್ವೇಶ್ವರ ಸೈತಾನನಿಗೆ, “ಸರಿ, ಆತನನ್ನು ನಿನ್ನ ಕೈಗೆ ಬಿಟ್ಟಿದ್ದೇನೆ. ಆದರೆ ಆತನ ಪ್ರಾಣವನ್ನು ಮಾತ್ರ ಮುಟ್ಟಕೂಡದು,” ಎಂದು ಆಜ್ಞಾಪಿಸಿದರು.


ಈ ಜನರು ತೋಪುಗಳಲ್ಲಿ ಬಲಿಕೊಡುತ್ತಾರೆ. ಇಟ್ಟಿಗೆಯ ಪೀಠಗಳ ಮೇಲೆ ಧೂಪಾರತಿ ಎತ್ತುತ್ತಾರೆ.


ಸರ್ವೇಶ್ವರ ಸೈತಾನನಿಗೆ, “ನೋಡು, ಆತನ ಆಸ್ತಿಪಾಸ್ತಿಯೆಲ್ಲ ನಿನ್ನ ಕೈವಶಕ್ಕೆ ಬಿಟ್ಟಿದ್ದೇನೆ. ಆತನ ಮೈಮೇಲೆ ಮಾತ್ರ ಕೈಹಾಕಬೇಡ,” ಎಂದು ಅಪ್ಪಣೆಕೊಟ್ಟರು. ಕೂಡಲೆ ಸೈತಾನನು ಸರ್ವೇಶ್ವರರ ಸನ್ನಿಧಾನದಿಂದ ಹೊರಟುಹೋದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು