Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 2:12 - ಕನ್ನಡ ಸತ್ಯವೇದವು C.L. Bible (BSI)

12 ದೂರದಿಂದ ನೋಡಿದಾಗ ಆತನ ಗುರುತುಹಚ್ಚಲು ಕೂಡ ಅವರಿಂದಾ ಆಗಲಿಲ್ಲ. ಎಂದೇ ಅವರು ಗಟ್ಟಿಯಾಗಿ ಅತ್ತರು. ದುಃಖ ತಾಳಲಾರದೆ ತಂತಮ್ಮ ಮೇಲಂಗಿಯನ್ನು ಸೀಳಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಅವರು ದೂರದಿಂದ ಕಣ್ಣೆತ್ತಿ ನೋಡಿ ಯೋಬನ ಗುರುತನ್ನು ಹಿಡಿಯಲಾರದೆ ಹೋದ ಕಾರಣ ಗಟ್ಟಿಯಾಗಿ ಅತ್ತು ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು, ಮಣ್ಣನ್ನು ಮೇಲಕ್ಕೆ ತೂರಿ ತಮ್ಮ ತಲೆಯ ಮೇಲೆ ಸುರಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಅವರು ದೂರದಿಂದ ಕಣ್ಣೆತ್ತಿ ನೋಡಿ ಯೋಬನ ಗುರುತನ್ನು ಹಿಡಿಯಲಾರದೆ ಹೋದ ಕಾರಣ ಗಟ್ಟಿಯಾಗಿ ಅತ್ತು ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು ಮಣ್ಣನ್ನು ಮೇಲಕ್ಕೆ ತೂರಿ ತಮ್ಮ ತಲೆಯ ಮೇಲೆ ಸುರಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಆದರೆ ಆ ಮೂವರು ಸ್ನೇಹಿತರು ಬಹು ದೂರದಿಂದ ಯೋಬನನ್ನು ಕಂಡಾಗ ಅವನ ಗುರುತೇ ಹಿಡಿಯಲಾರದೆ ಗಟ್ಟಿಯಾಗಿ ಅಳತೊಡಗಿದರು; ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು ಮಣ್ಣನ್ನು ಮೇಲಕ್ಕೆ ತೂರಿ ತಮ್ಮ ತಲೆಗಳ ಮೇಲೆ ಸುರಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಅವರು ಯೋಬನನ್ನು ದೂರದಿಂದ ನೋಡಿದಾಗ, ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಅವರು ಗಟ್ಟಿಯಾಗಿ ಅಳಲು ಪ್ರಾರಂಭಿಸಿದರು. ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು, ಧೂಳನ್ನು ತಮ್ಮ ತಲೆಯ ಮೇಲೆ ಸುರಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 2:12
17 ತಿಳಿವುಗಳ ಹೋಲಿಕೆ  

ತಮ್ಮ ತಮ್ಮ ಹಡಗುಗಳಿಂದಿಳಿದು, ನೆಲದ ಮೇಲೆ ನಿಂತು. ತಲೆಗೆ ದೂಳೆರಚಿಕೊಂಡು, ಬೂದಿಯಲ್ಲಿ ಹೊರಳಾಡಿಕೊಂಡು,


ತಲೆಯ ಮೇಲೆ ಧೂಳನ್ನು ತೂರಿಕೊಂಡು ಗೋಣಿತಟ್ಟನ್ನು ಸೊಂಟಕ್ಕೆ ಸುತ್ತಿಕೊಂಡು ಕುಕ್ಕರಿಸಿಹರು ಸಿಯೋನ್ ನಗರಿಯ ಪ್ರಮುಖರು ತಲೆ ತಗ್ಗಿಸಿಹರು ಜೆರುಸಲೇಮಿನ ಯುವತಿಯರು.


ಅದೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿನ, ಇಸ್ರಯೇಲರು ಉಪವಾಸವಾಗಿದ್ದು ಗೋಣೀ ತಟ್ಟನ್ನು ಕಟ್ಟಿಕೊಂಡು, ತಲೆಯ ಮೇಲೆ ಮಣ್ಣುಸುರಿದುಕೊಂಡು, ನೆರೆದುಬಂದರು.


ಆಗ ಯೋಬನು ಎದ್ದು ನಿಂತು, ದುಃಖವನ್ನು ತಾಳಲಾರದೆ ತನ್ನ ಮೇಲಂಗಿಯನ್ನು ಹರಿದುಬಿಟ್ಟ, ತಲೆಯನ್ನು ಬೋಳಿಸಿಕೊಂಡ, ನೆಲದ ಮೇಲೆ ಬಿದ್ದು, ದೇವರಿಗೆ ಸಾಷ್ಟಾಂಗವೆರಗಿ:


ಆಗ ಯೆಹೋಶುವನು ಮತ್ತು ಇಸ್ರಯೇಲರ ಹಿರಿಯರು ದುಃಖ ತಾಳಲಾರದೆ ತಮ್ಮ ಬಟ್ಟೆಗಳನ್ನು ಹರಿದುಕೊಂಡು, ತಲೆಯ ಮೇಲೆ ಬೂದಿಯನ್ನು ಸುರಿದುಕೊಂಡು ಸಾಯಂಕಾಲದವರೆಗೆ ಸರ್ವೇಶ್ವರನ ಮಂಜೂಷದ ಮುಂದೆ ಅಧೋಮುಖರಾಗಿ ಬಿದ್ದಿದ್ದರು.


ಅವರು ತಮ್ಮ ತಲೆಗಳ ಮೇಲೆ ಮಣ್ಣನ್ನು ಸುರಿದುಕೊಂಡು ಆರ್ತಧ್ವನಿಯಿಂದ : “ನಿನಗೆಂಥಾ ದುರ್ಗತಿ, ಓ ಮಹಾನಗರಿ ! ಕಡಲಲಿ ಸಾಗುವ ಹಡಗಿನವರನ್ನೆಲ್ಲಾ ಧನಿಕರನ್ನಾಗಿಸಿದೆ ನಿನ್ನ ಐಸಿರಿಯಿಂದ ತಾಸೊಂದರಲೇ, ಅಯ್ಯೋ ನೀ ನಾಶ ಆದೆಯಲ್ಲಾ !” ಎಂದು ಪರಿತಪಿಸಿದರು.


ನನ್ನನು ಬಂಧುಬಳಗದವರು ಕೈಬಿಟ್ಟಿದ್ದಾರೆ ಆಪ್ತಮಿತ್ರರೂ ನನ್ನನು ಮರೆತುಬಿಟ್ಟಿದ್ದಾರೆ.


ನಡೆದ ಸಂಗತಿಯನ್ನೆಲ್ಲಾ ಕೇಳಿದಾಗ, ಮೊರ್ದೆಕೈ ತನ್ನ ಬಟ್ಟೆಗಳನ್ನು ಹರಿದು ಗೋಣಿತಟ್ಟನ್ನು ಉಟ್ಟು, ಬೂದಿಯನ್ನು ಸುರಿದುಕೊಂಡು ನಗರದ ಮಧ್ಯೆ ಹೋಗುತ್ತಾ ಅಪಾರ ದುಃಖದಿಂದ ಗೋಳಾಡಿದನು.


ರಾಜಕುಮಾರರು ಬಂದು ಗಟ್ಟಿಯಾಗಿ ಅಳತೊಡಗಿದರು. ಅರಸನೂ ಅವನ ಸೇವಕರೂ ಬಹಳವಾಗಿ ಗೋಳಾಡಿದರು.


ದುಃಖ ತಾಳಲಾಗದೆ ದೀರ್ಘಕಾಲ ಅತ್ತು ಗೋಳಾಡಿದರು.


ದೂತರು ಸೌಲನು ವಾಸವಾಗಿದ್ದ ಗಿಬೆಯಕ್ಕೆ ಬಂದು ಅಲ್ಲಿನವರಿಗೆ ಈ ವರ್ತಮಾನವನ್ನು ತಿಳಿಸಿದರು. ಎಲ್ಲರೂ ಗಟ್ಟಿಯಾಗಿ ಅಳತೊಡಗಿದರು.


ಸರ್ವೇಶ್ವರನ ದೂತನು ಹೇಳಿದ ಈ ಮಾತುಗಳನ್ನು ಕೇಳಿ ಇಸ್ರಯೇಲರೆಲ್ಲರು ಗಟ್ಟಿಯಾಗಿ ಅತ್ತರು.


ತಂದೆಯ ಈ ಮಾತುಗಳನ್ನು ಕೇಳಿ ಏಸಾವನು ದುಃಖಕ್ರಾಂತನಾದನು. ಬಹಳವಾಗಿ ಅತ್ತನು. “ಅಪ್ಪಾ, ತಂದೆಯೇ ನನ್ನನ್ನು, ನನ್ನನ್ನು ಕೂಡ ಆಶೀರ್ವದಿಸು,” ಎಂದು ಬೇಡಿಕೊಂಡನು.


ಅದೇ ದಿನ ಒಬ್ಬ ಬೆನ್ಯಾಮೀನ್ಯನು ರಣರಂಗದಿಂದ ತಪ್ಪಿಸಿಕೊಂಡು, ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು, ತಲೆಯ ಮೇಲೆ ಮಣ್ಣು ಹಾಕಿಕೊಂಡು,


ಈ ಸಮಾಚಾರವನ್ನು ಕೇಳಿದೊಡನೆ ನಾನು ಸಿಟ್ಟಿನಿಂದ ಬಟ್ಟೆಗಳನ್ನೂ ಮೇಲಂಗಿಯನ್ನೂ ಹರಿದುಕೊಂಡು, ಸ್ತಬ್ಧನಾಗಿ ಕುಳಿತುಕೊಂಡೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು