Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 19:5 - ಕನ್ನಡ ಸತ್ಯವೇದವು C.L. Bible (BSI)

5 ನನಗಿಂತ ನೀವೇ ಮೇಲೆಂದು ಭಾವಿಸುತ್ತೀರೋ? ನನ್ನ ದೀನ ಸ್ಥಿತಿಗೆ ನನ್ನ ದೋಷವೇ ಕಾರಣವೆನ್ನುತ್ತೀರೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ನನ್ನ ವಿರುದ್ಧವಾಗಿ ನಿಮ್ಮನ್ನು ನೀವೇ ಹೆಚ್ಚಿಸಿಕೊಂಡು ನನಗಾದ ಅವಮಾನವನ್ನು ನ್ಯಾಯವೆಂದು ಸ್ಥಾಪಿಸುವುದಕ್ಕೆ ನಿಜವಾಗಿ ಇಷ್ಟಪಡುವಿರೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ನನಗೆ ವಿರುದ್ಧವಾಗಿ ನಿಮ್ಮನ್ನು ನೀವೇ ಹೆಚ್ಚಿಸಿಕೊಂಡು ನನಗಾದ ಅವಮಾನವನ್ನು ನ್ಯಾಯವೆಂದು ಸ್ಥಾಪಿಸುವದಕ್ಕೆ ನಿಜವಾಗಿ ಇಷ್ಟಪಡುವಿರೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ನಿಮ್ಮನ್ನು ನನಗಿಂತಲೂ ಉತ್ತಮರೆಂದು ತೋರಿಸಿಕೊಳ್ಳಬೇಕೆಂದಿದ್ದೀರಿ; ನನ್ನ ತೊಂದರೆಗಳೇ ನನ್ನನ್ನು ದೋಷಿಯೆಂದು ನಿರೂಪಿಸುತ್ತವೆಯೆಂದು ಭಾವಿಸಿಕೊಂಡಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ನೀವು ನನಗಿಂತ ಉತ್ತಮರು ಎಂದು ಭಾವಿಸುತ್ತಿದ್ದೀರಿ; ನನಗಾದ ಹೀನಸ್ಥಿತಿಯನ್ನು ನನಗೆ ವಿರೋಧವಾಗಿ ಉಪಯೋಗಿಸುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 19:5
16 ತಿಳಿವುಗಳ ಹೋಲಿಕೆ  

ನಾ ಸಹಿಸಿಕೊಳ್ಳುತ್ತಿದ್ದೆ ದೂಷಿಸುವವನು ಶತ್ರುವಾಗಿದ್ದರೆ I ನಾನವಿತುಕೊಳ್ಳುತ್ತಿದ್ದೆ ದ್ವೇಷಿಸುವವನು ವೈರಿಯಾಗಿದ್ದರೆ II


ಶತ್ರುಗಳು ಹರ್ಷಿಸಬಾರದು ನನ್ನ ವಿಷಯದಲಿ I ಹಿಗ್ಗಬಾರದವರು ನಾ ಜಾರಿ ಬಿದ್ದಲ್ಲಿ II


ನನಗಾದ ಕೇಡನು ನೋಡಿ ಹಿಗ್ಗುವವರಿಗಾಗಲಿ ಸಿಗ್ಗು I ನನ್ನನು ಕುಗ್ಗಿಸಿ ಮೆರೆವವರನು ಮುಚ್ಚಲಿ ಲಜ್ಜೆಯ ಮುಸುಕು II


ಆಗ ಫರಿಸಾಯರು, “ಪಾಪದಲ್ಲೇ ಹುಟ್ಟಿ ಬೆಳೆದವನು ನೀನು, ನಮಗೇ ಬುದ್ಧಿಹೇಳಹೊರಟೆಯಾ?” ಎಂದು ಹೇಳಿ ಅವನನ್ನು ತಳ್ಳಿಬಿಟ್ಟರು.


ಶಿಷ್ಯರು, “ಗುರುದೇವಾ, ಇವನು ಕುರುಡನಾಗಿ ಹುಟ್ಟಬೇಕಾದರೆ ಅದಕ್ಕೆ ಯಾರ ಪಾಪ ಕಾರಣ? ಇವನದೋ ಅಥವಾ ಇವನನ್ನು ಹೆತ್ತವರದೋ?” ಎಂದು ಕೇಳಿದರು.


“ಸರ್ವೇಶ್ವರನಾದ ನಾನು ಜುದೇಯದ ಸೈನ್ಯಗಳು ಮೊದಲು ಜಯಗಳಿಸುವಂತೆ ಮಾಡುವೆನು. ಆಗ ದಾವೀದ ವಂಶದವರ ಹಾಗೂ ಜೆರುಸಲೇಮಿನವರ ಘನತೆ ಗೌರವ ಜುದೇಯದವರ ಘನತೆ ಗೌರವವನ್ನು ಮೀರದು.


ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ಜನರನ್ನು ದೂಷಿಸಿ ದರ್ಪದ ಮಾತುಗಳನ್ನು ಆಡಿದ್ದರಿಂದಲೆ ಈ ಪ್ರಾಂತ್ಯಗಳ ಗರ್ವಿಷ್ಠ ಜನರಿಗೆ ಶಿಕ್ಷೆಯಾಗುವುದು.


ನನ್ನ ಶತ್ರುಗಳೇ, ನನ್ನನ್ನು ನೋಡಿ ಹಿಗ್ಗಬೇಡಿ. ನಾನು ಬಿದ್ದುಹೋದರೂ, ಎದ್ದೇಳುವೆನು; ಕತ್ತಲೆಯಲ್ಲಿ ಕುಳಿತಿದ್ದರೂ ಸರ್ವೇಶ್ವರ ನನಗೆ ಬೆಳಕಾಗುವರು.


ಆ ಕಾಲ ಬಂದಾಗ ಏಳುಮಂದಿ ಅವಿವಾಹಿತ ಮಹಿಳೆಯರು ಒಬ್ಬ ಪುರುಷನನ್ನು ಹಿಡಿದುಕೊಂಡು: “ನಾವು ಸ್ವಂತವಾಗಿ ದುಡಿದು ಊಟಮಾಡುತ್ತೇವೆ, ಸ್ವಂತವಾಗಿ ಸಂಪಾದನೆಮಾಡಿ ಬಟ್ಟೆ ಉಡುತ್ತೇವೆ. ನೀನು ನಮ್ಮ ಯಜಮಾನನೆನಿಸಿಕೊಂಡು ನಮ್ಮ ಮಾನವನ್ನು ಕಾಪಾಡಿದರೆ ಸಾಕು,” ಎಂದು ಕೋರುವರು.


ವಿರೋಧಿಗಳೆನ್ನ ಮೇಲೆ ಜಯಗೊಳ್ಳದಂದು I ಅರಿತುಕೊಳ್ವೆನು ನಿನ್ನೊಲುಮೆ ನನಗಿದೆಯೆಂದು II


ಅವರು ನನಗೆ, “ಸೆರೆಯಿಂದ ತಪ್ಪಿಸಿಕೊಂಡು ಈಗ ಆ ನಾಡಿನಲ್ಲಿ ವಾಸಿಸುತ್ತಿರುವವರು ಮಹಾಕಷ್ಟನಿಂದೆಗಳಿಗೆ ಒಳಗಾಗಿದ್ದಾರೆ. ಜೆರುಸಲೇಮಿನ ಪೌಳಿಗೋಡೆಯನ್ನು ಕೆಡವಲಾಗಿದೆ. ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ,” ಎಂದು ಹೇಳಿದರು.


ಇದಲ್ಲದೆ, “ಸರ್ವೇಶ್ವರ ನಿನ್ನನ್ನು ಬಂಜೆಯಾಗಿ ಮಾಡಿದ್ದಾರೆ,” ಎಂಬ ಚುಚ್ಚು ಮಾತುಗಳಿಂದ ನೋಯಿಸುತ್ತಿದ್ದಳು ಅವಳ ಸವತಿಯಾದ ಪೆನಿನ್ನಳು.


ನಿಶ್ಚಯವಾಗಿ ನಾನು ತಪ್ಪುಳ್ಳವನಾದರೆ ಅದರಿಂದ ನಿಮಗೇನು? ಆ ತಪ್ಪು ನನ್ನದೆ.


ಆದರೆ ಇದನ್ನೆಲ್ಲಾ ನನಗೆ ಮಾಡಿದವನು ನೀನು I ನನಗೆ ಸರಿಯಾದವನು, ಗೆಳೆಯನು, ನನ್ನಾಪ್ತಮಿತ್ರನು II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು